Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ತುಲಾರಾಶಿಯ ವ್ಯಕ್ತಿಗಳಿಗೆ ಮೇ 2018 ಹೀಗಿರಲಿದೆ
ತುಲಾ ರಾಶಿಯ ವ್ಯಕ್ತಿಗಳು ಸಮಚಿತ್ತವನ್ನು ಕಾಪಾಡಿಕೊಳ್ಳುವ ವ್ಯಕ್ತಿಗಳಾಗಿರುತ್ತಾರೆ. ಇವರು ದಯಾಪರರೂ ಸದಭಿರುಚಿಯುಳ್ಳವರೂ ಆಗಿರುತ್ತಾರೆ. ಅಲ್ಲದೇ ಸಭ್ಯ ನಡವಳಿಕೆ ಹಾಗೂ ಆಕರ್ಷಕ ವ್ಯಕ್ತಿತ್ವದವರೂ ಆಗಿರುತ್ತಾರೆ.
ಸಾಮಾನ್ಯವಾಗಿ ಈ ವ್ಯಕ್ತಿಗಳು ಮೃದುಮಾತಿನವರಾಗಿದ್ದು ಎದುರಿನವರಿಗೆ ಹೆಚ್ಚು ಗೌರವ ನೀಡುವವರಾಗಿರುತ್ತಾರೆ. ಇವರಲ್ಲಿ ಸಹಾಯಗುಣ ಮತ್ತು ಎಂದಿಗೂ ಜಗಳಕ್ಕೆ ಇಷ್ಟಪಡದ ಅಥವಾ ವಾಗ್ಯುದ್ದಕ್ಕೆ ಮುಂದಾಗದ ಗುಣಗಳಿರುತ್ತವೆ.
ಆದರೆ ಈ ರಾಶಿಯ ವ್ಯಕ್ತಿಗಳು ಕೆಲವು ವಿಷಯಗಳ ಬಗ್ಗೆ ಎಚ್ಚರವಹಿಸಬೇಕಾಗುತ್ತದೆ ಹಾಗೂ ಈ ಲೇಖನದಲ್ಲಿ ಒದಗಿಸಿರುವ ಮುನ್ಸೂಚನೆಗಳು ಇದರಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.

ಇಂದಿನ ಲೇಖನದಲ್ಲಿ ನಮ್ಮ ಜ್ಯೋತಿಷ್ಯಾಸ್ತ್ರಜ್ಞರು ಒದಗಿರುವ ಅಮೂಲ್ಯ ಮಾಹಿತಿಯನ್ನು ಒದಗಿಸಲಾಗಿದ್ದು ಮೇ ತಿಂಗಳಲ್ಲಿ ತುಲಾ ರಾಶಿಯವವರು ಇವುಗಳನ್ನು ಅನುಸರಿಸುವ ಮೂಲಕ ಹೆಚ್ಚಿನ ಪ್ರಯೋಜನ ಪಡೆದುಕೊಳ್ಳಬಹುದು.
ಆರೋಗ್ಯ ಭಾಗ್ಯ
ಈ ತಿಂಗಳಲ್ಲಿ ತುಲಾರಾಶಿಯ ವ್ಯಕ್ತಿಗಳು ಅತ್ಯುತ್ತಮ ಆರೋಗ್ಯ ಹೊಂದಿರುತ್ತಾರೆ. ಆದರೆ ನಿಮ್ಮ ಸಂಗಾತಿಯ ಆರೋಗ್ಯದ ಬಗ್ಗೆ ನೀವು ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ, ಏಕೆಂದರೆ ನಿಮ್ಮ ಗಮನದ ಅಗತ್ಯವಿರುವಂತಹ ಸನ್ನಿವೇಶ ನಿಮ್ಮ ಸಂಗಾತಿಗೆ ಎದುರಾಗಬಹುದು.
ವೃತ್ತಿಜೀವನದ ಬಗ್ಗೆ:
ಈ ತಿಂಗಳು ತುಲಾರಾಶಿಯವರಿಗೆ ವೃತ್ತಿಯಲ್ಲಿ ಹೆಚ್ಚು ಪ್ರಯೋಜನಕಾರಿಯಾಗಲಿದೆ. ಈ ತಿಂಗಳಲ್ಲಿ ದೂರಪ್ರಯಾಣ ಹಾಗೂ ಈ ಮೂಲಕ ಹೆಚ್ಚಿನ ಲಾಭವನ್ನು ನೀವು ನಿರೀಕ್ಷಿಸಬಹುದು ಹಾಗೂ ಜ್ಯೋತಿಷ್ಯಾಸ್ತ್ರಜ್ಞರ ಪ್ರಕಾರ ಈ ಪ್ರಯಾಣ ಪಶ್ಚಿಮಾಭಿಮುಖವಾಗಿದ್ದರೆ ಗರಿಷ್ಟ ಲಾಭವಾಗಲಿದೆ. ಒಟ್ಟಾರೆಯಾಗಿ ಈ ತಿಂಗಳು ನಿಮ್ಮ ವೃತ್ತಿಯಲ್ಲಿ ಹೆಚ್ಚಿನ ಏಳ್ಗೆ ಹಾಗೂ ಗಣನೀಯ ಸಾಧನೆಯನ್ನು ಸಾಧಿಸಲು ಸಾಧ್ಯವಾಗುತ್ತದೆ.
ಹಣಕಾಸಿನ ವ್ಯವಸ್ಥೆ:
ಹಣಕಾಸಿನ ಬಗ್ಗೆ ಹೇಳುವುದಾದರೆ ಈ ತಿಂಗಳಲ್ಲಿ ಯಾವುದೂ ನಿಮ್ಮ ಅನುಕೂಲಕ್ಕೆ ತಕ್ಕಂತೆ ಇರದು. ನಿಮ್ಮ ವೃತ್ತಿ ಅಥವಾ ಉದ್ಯೋಗ ನಿಮಿತ್ತ ಪ್ರಯಾಣವೇನೋ ಇರಲಿದೆ ಆದರೆ ಇದರಿಂದ ಹಣಕಾಸಿನ ವಿಷಯದಲ್ಲಿ ಹೆಚ್ಚಿನ ಲಾಭವಿರದು! ಆಮದು ಮತ್ತು ರಫ್ತು ವಹಿವಾಟನ್ನು ಹೊಂದಿರುವ ವ್ಯಕ್ತಿಗಳು ಈ ತಿಂಗಳಲ್ಲಿ ತಮ್ಮ ವಹಿವಾಟನ್ನು ಕೊಂಚ ತಗ್ಗಿಸುವುದು ಒಳ್ಳೆಯದು, ಏಕೆಂದರೆ ಈ ತಿಂಗಳಲ್ಲಿ ಒಟ್ಟು ವಹಿವಾಟು ಕುಸಿಯುವ ಸಾಧ್ಯತೆ ಇದೆ. ಈ ತಿಂಗಳಲ್ಲಿ ಆದಷ್ಟೂ ಸರಳ ಜೀವನ ನಡೆಸಬೇಕು ಹಾಗೂ ಪರಿಸ್ಥಿತಿ ಉತ್ತಮಗೊಳ್ಳುವವರೆಗೂ ಮುಂದುವರೆಸಬೇಕು.
ಪ್ರೀತಿಯ ಜೀವನದ ಬಗ್ಗೆ:
ಈ ತಿಂಗಳಲ್ಲಿ ನಿಮ್ಮ ಸಂಗಾತಿಯಿಂದ ಅನಿರೀಕ್ಷಿತ ಉಡುಗೊರೆಯೊಂದು ಲಭಿಸಲಿದೆ. ಮನೆಗೊಬ್ಬ ಹೊಸ ಸದಸ್ಯನ ಆಗಮನದ ಸುದ್ದಿ ಈ ತಿಂಗಳ ಮೂರರಿಂದ ಆರನೆಯ ತಾರೀಖಿನಲ್ಲಿ ಲಭಿಸುವ ಸಾಧ್ಯತೆ ಇದೆ. ತಮ್ಮ ಸ್ನೇಹವನ್ನು ಸಂಬಂಧಕ್ಕೆ ಪರಿವರ್ತಿಸಲು ಯತ್ನಿಸುತ್ತಿರುವ ವ್ಯಕ್ತಿಗಳಿಗೆ ಈ ತಿಂಗಳ ಎರಡನೆಯ ವಾರ ಅತಿ ಸೂಕ್ತವಾಗಿದೆ. ಇನ್ನೊಂದು ಕಡೆಯಿಂದ ಈ ತಿಂಗಳ ಕೊನೆಯ ವಾರದಲ್ಲಿ ಸಂಗಾತಿಯೊಂದಿಗೆ ಜಗಳವಾಗುವ ಸಾಧ್ಯತೆಯೂ ಇದೆ!
ಅದೃಷ್ಟಶಾಲಿ ದಿನಾಂಕ ಮತ್ತು ಬಣ್ಣಗಳು:
ಈ ತಿಂಗಳಲ್ಲಿ ನಿಮಗೆ ಅದೃಷ್ಟಶಾಲಿಯಾಗಿರುವ ಸಂಖ್ಯೆಗಳೆಂದರೆ: 7, 20, 55, 77 ಮತ್ತು 86.
ಅದೃಷ್ಟಶಾಲಿ ದಿನಾಂಕಗಳು: 7, 8, 17, 18, 25, 26.
ಅದೃಷ್ಟಶಾಲಿ ಬಣ್ಣಗಳೆಂದರೆ: ಬಿಳಿ, ಹಸಿರು ಮತ್ತು ನೀಲಿ.



Click it and Unblock the Notifications
