Latest Updates
-
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ! -
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ? -
ವಿಶ್ವ ಸಂಗೀತ ದಿನ: ಸಂಗಾತಿಯೊಂದಿಗೆ ಮರೆಯಲಾಗದ ಕ್ಷಣ ಕಳೆಯಲು ಇಲ್ಲಿದೆ ಸಿಂಪಲ್ ಪ್ಲಾನ್! -
ಮುಂಬೈನಲ್ಲಿ ತೀವ್ರ ನೀರಿನ ಅಭಾವ: ಬಿಎಂಸಿ ಕಠಿಣ ನಿಯಮಗಳ ನಡುವೆ ನೀರು ಉಳಿಸಲು ಈ ಟಿಪ್ಸ್ ಪಾಲಿಸಿ -
ಮಳೆಗಾಲದಲ್ಲಿ ಸಿಕಲ್ ಸೆಲ್ ಸಮಸ್ಯೆ: ಆರೋಗ್ಯ ಕಾಪಾಡಲು ಈ ಆಹಾರ ಕ್ರಮ ಪಾಲಿಸಿ, ನೋವು ದೂರವಿಡಿ! -
ಟೆಲಿಗ್ರಾಂ ಬ್ಯಾನ್: ಜೂನ್ 22ರವರೆಗೆ ಈ ಆಪ್ಗಳನ್ನು ಬಳಸಿ, ಇಲ್ಲದಿದ್ದರೆ ತೊಂದರೆ ಕಟ್ಟಿಟ್ಟ ಬುತ್ತಿ! -
ಮಳೆಗಾಲದಲ್ಲಿ 'ರನ್ ಫಾರ್ ಯೋಗ': ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ಓಡಲು ಈ ಟಿಪ್ಸ್ ಪಾಲಿಸಿ
ನಿದ್ದೆಯಲ್ಲೂ ಸೆಕ್ಸ್ ಬಗ್ಗೆ ಕನಸ್ಸು ಬೀಳುತ್ತದೆಯೇ? ಇದೇ ಕಾರಣವಿರಬಹುದು
ಜೀವನದಲ್ಲಿ ಆಗದೇ ಹೋದ ಹಲವಾರು ಬಯಕೆಗಳು ಸ್ವಪ್ನದಲ್ಲಿ ಪೂರೈಸುತ್ತವಂತೆ. ನಿತ್ಯವೂ ನಾವು ನಿದ್ದೆಯಲ್ಲಿ ಸ್ವಪ್ನವನ್ನು ನೋಡುತ್ತೇವಾದರೂ ಇವುಗಳಲ್ಲಿ ಹೆಚ್ಚಿನವುಗಳನ್ನು ಎಚ್ಚರಾದ ಕೆಲವೇ ಹೊತ್ತಿನಲ್ಲಿ ಮರೆತುಬಿಡುತ್ತೇವೆ. ಆದರೆ ಕೆಲವು ಮಾತ್ರ ಬಹುಕಾಲ ನೆನಪಿನಲ್ಲಿರುತ್ತದೆ. ಈ ಸ್ವಪ್ನಗಳಲ್ಲಿ ಭವಿಷ್ಯದ ಮುನ್ಸೂಚನೆ, ಎದುರಾಗುವ ದೌರ್ಭಾಗ್ಯ, ಸಮಸ್ಯೆಗಳಿಗೆ ಉತ್ತರ, ಕ್ಲಿಷ್ಟತೆಗೆ ಪರಿಹಾರ, ಹಿಂದಿನ ಜನ್ಮದ ನೆನಪು (ಹೌದು, ಕೆಲವರಲ್ಲಿ ಇದೂ ಕಂಡುಬಂದಿರುವುದು ಇಂದಿಗೂ ಬಿಡಿಸಲಾಗದ ಒಗಟು),
ಅಗಲಿದ ಬಂಧುಗಳ ಭೇಟಿ, ಇಷ್ಟದೈವದ ಸಾಕ್ಷಾತ್ಕಾರ ಮೊದಲಾದವು ಕಾಣಿಸಿಕೊಳ್ಳುತ್ತವೆ. ಇದರಲ್ಲಿ ಪ್ರಮುಖವಾಗಿರುವ ಇನ್ನೊಂದು ವಿಷಯವೆಂದರೆ ಲೈಂಗಿಕತೆಗೆ ಸಂಬಂಧಿಸಿದ್ದಾಗಿದ್ದು ಹೆಚ್ಚಿನ ಸಂದರ್ಭಗಳಲ್ಲಿ ನೀಡುವ ಎಚ್ಚರಿಕೆಯೂ ಆಗಿದೆ. ಬನ್ನಿ ಈ ವಿಷಯದ ಅರ್ಥವೇನು ಎಂಬುದನ್ನು ನೋಡೋಣ...

ನಿಮ್ಮ ಸಂಗಾತಿ ಮೂರನೆಯ ವ್ಯಕ್ತಿಯೊಂದಿಗೆ ನಿಕಟ ಸಂಬಂಧ ಹೊಂದಿದ್ದಾರೆ
ಈ ಸ್ವಪ್ನದ ಅರ್ಥವೇನೆಂದರೆ ನಿಮ್ಮ ಸಂಗಾತಿಯ ಕುರಿತು ನೀವು ಹೆಚ್ಚಿನ ಕಾಳಜಿ ವಹಿಸಬೇಕೆಂದೂ ತಪ್ಪಿದರೆ ಶೀಘ್ರವೇ ಈ ಸಂಬಂಧದಿಂದ ಬೇರ್ಪಟ್ಟು ಏಕಾಂಗಿತನ ಅನುಭವಿಸಬೇಕಾಗಬಹುದು ಎಂಬ ಎಚ್ಚರಿಕೆಯಾಗಿದೆ.

ನೀವೇ ಮೂರನೆಯ ವ್ಯಕ್ತಿಯೊಂದಿಗೆ ನಿಕಟ ಸಂಬಂಧ ಹೊಂದಿದ್ದೀರಿ
ಈ ಸ್ವಪ್ನದ ಅರ್ಥವೇನೆಂದರೆ ನೀವು ನಿಮ್ಮ ಸಂಗಾತಿಯಲ್ಲಿ ಯಾವುದೋ ವಿಷಯವನ್ನು ವಿಷದಪಡಿಸಲು ಇಚ್ಛಿಸುತ್ತಿದ್ದೀರಿ. ಇನ್ನೊಂದು ಅರ್ಥದಲ್ಲಿ ನೀವು ಈಗ ದೈಹಿಕವಾಗಿ ಹಾಗೂ ಮಾನಸಿಕವಾಗಿ ನಿಮ್ಮ ಸಂಗಾತಿಯನ್ನು ಇನ್ನೂ ಹೆಚ್ಚಾಗಿ ಅರ್ಥಮಾಡಿಕೊಳ್ಳಬೇಕಾಗಿದೆ.

ಇನ್ನೊಬ್ಬರ ಸಂಗಾತಿಯೊಂದಿಗೆ ನಿಕಟ ಸಂಬಂಧ ಹೊಂದಿದ್ದೀರಿ
ಈ ಸ್ವಪ್ನದ ಅರ್ಥವೇನೆಂದರೆ ನೀವು ಆರೋಗ್ಯಕರ ಹಾಗೂ ಬದ್ದತೆಯುಳ್ಳ ಸಂಬಂಧವನ್ನು ಹೊಂದಲು ಹಾತೊರೆಯುತ್ತಿದ್ದೀರಿ.

ನಿಮ್ಮ ಸಂಗಾತಿಯೊಂದಿಗೆ ಹೆಚ್ಚು ಭಾವುಕರಾಗುತ್ತಿದ್ದೀರಿ
ಈ ಸ್ವಪ್ನದ ಅರ್ಥವೇನೆಂದರೆ ನೀವು ಆರೋಗ್ಯವಂತ ದಂಪತಿಗಳಾಗಿದ್ದು ಪರಸ್ಪರಸ ಸಾಂಗತ್ಯವನ್ನು ಹೆಚ್ಚು ಇಷ್ಟಪಡುವವರಾಗಿದ್ದೀರಿ. ಆದರೂ, ದೈಹಿಕವಾಗಿ ನೀವು ಈ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಲು ಪ್ರಯತ್ನ ನಡೆಸಬೇಕಾಗುತ್ತದೆ.

ನಿಮ್ಮ ಸಂಗಾತಿಯೊಂದಿಗೆ ಹೆಚ್ಚು ಭಾವುಕರಾಗುತ್ತಿದ್ದೀರಿನಿಮ್ಮ ಹಿಂದಿನ ಸಂಬಂಧದ ವ್ಯಕ್ತಿಯೊಂದಿಗೆ ನಿಕಟ ಸಂಬಂಧ ಹೊಂದಿದ್ದೀರಿ
ಈ ಸ್ವಪ್ನದ ಅರ್ಥವೇನೆಂದರೆ ಹಿಂದಿನ ಸಂಬಂಧದಲ್ಲಿದ್ದಾಗ ನೀವು ಕಳೆದ ಸುಂದರ ಕ್ಷಣಗಳನ್ನು ಇಂದಿಗೂ ನೀವು ನೆನಪಿಸಿಕೊಳ್ಳುತ್ತಿದ್ದೀರಿ. ಇದರ ಇನ್ನೊಂದು ಅರ್ಥವೆಂದರೆ ನಿಮ್ಮ ಪ್ರಸ್ತುತ ಸಂಬಂಧ ಶೀಘ್ರವೇ ಪ್ರಮುಖ ತಿರುವೊಂದನ್ನು ಪಡೆಯಲಿದೆ.

ಸ್ನೇಹಿತರೊಬ್ಬರೊಂದಿಗೆ ನಿಕಟ ಸಂಬಂಧ ಹೊಂದಿದ್ದೀರಿ
ಸರಳವಾಗಿ ಹೇಳಬಹುದೆಂದರೆ ನೀವು ಈ ಸ್ನೇಹಿತರನ್ನು ಅಪಾರವಾಗಿ ಪ್ರೀತಿಸುತ್ತಿದ್ದೀರಿ ಹಾಗೂ ಗೌರವಿಸುತ್ತಿದ್ದೀರಿ. ಈ ಸ್ವಪ್ನಕ್ಕೂ ಲೈಂಗಿಕತೆಗೂ ನೇರವಾದ ಸಂಬಂಧವಿಲ್ಲ.

ಅಪರಿಚಿತರೊಬ್ಬರೊಂದಿಗೆ ನಿಕಟ ಸಂಬಂಧ ಹೊಂದಿದ್ದೀರಿ
ಈ ಸ್ವಪ್ನದ ಅರ್ಥವೇನೆಂದರೆ ನೀವು ನಿಮ್ಮ ಬಗ್ಗೆ ಸ್ವವಿಮರ್ಶಿಸಲು ತೊಡಗಿದ್ದೀರಿ ಹಾಗೂ ನೀವು ನಿಮ್ಮ ಆದ್ಯತೆಗಳ ಬಗ್ಗೆ ಮರುಚಿಂತನೆ ನಡೆಸಬೇಕಾಗಬಹುದು.

ಖ್ಯಾತನಾಮರೊಬ್ಬರೊಂದಿಗೆ ನಿಕಟ ಸಂಬಂಧ ಹೊಂದಿದ್ದೀರಿ
ಈ ಸ್ವಪ್ನದ ಅರ್ಥವೇನೆಂದರೆ ನೀವು ಯಶಸ್ವಿ ವ್ಯಕ್ತಿಯಾಗಲು ಹಾಗೂ ಆ ವ್ಯಕ್ತಿಯಂತೆಯೇ ಯಶಸ್ಸು ಪಡೆಯಬಯಸುತ್ತಿದ್ದೀರಿ.

ನೀವು ದ್ವೇಷಿಸುವ ವ್ಯಕ್ತಿಯೊಂದಿಗೆ ನಿಕಟ ಸಂಬಂಧ ಹೊಂದಿದ್ದೀರಿ
ಈ ಸ್ವಪ್ನದ ಅರ್ಥವೇನೆಂದರೆ ನೀವು ಈ ವ್ಯಕ್ತಿಯೊಂದಿಗೆ ಎಲ್ಲಾ ಸಂಬಂಧಗಳನ್ನು ಕಡಿದುಕೊಂಡು ಹಿಂದಿನ ಎಲ್ಲಾ ಆಗುಹೋಗುಗಳನ್ನು ಮರೆತುಬಿಡಲು ಬಯಸುತ್ತೀರಿ. ಇವರೊಂದಿಗೆ ಶಾಶ್ವತವಾಗಿ ಸಂಬಂಧವನ್ನು ಕಡಿದುಕೊಳ್ಳಲು ಇದೇ ಸರಿಯಾದ ಸಮಯ.

ಬೇರೊಂದು ದಂಪತಿಗಳ ಮಿಲನವನ್ನು ಕಾಣುವುದು
ಈ ಸ್ವಪ್ನದ ಅರ್ಥವೇನೆಂದರೆ ನೀವು ಬೇರೊಬ್ಬರ ಜೀವನದಲ್ಲಿ ಅಗತ್ಯಕ್ಕೂ ಹೆಚ್ಚು ದಾಖಲಾಗುತ್ತಿದ್ದೀರಿ. ನೀವು ಅವರಿಗೆ ಅವರ ಖಾಸಗಿತನವನ್ನು ಬಿಟ್ಟುಕೊಡಬೇಕಾಗಿದೆ ಎಂಬ ಎಚ್ಚರಿಕೆಯಾಗಿದೆ.

ನೀವೇ ನಿಮ್ಮೊಂದಿಗೆ ನಿಕಟ ಸಂಬಂಧ ಹೊಂದಿದ್ದೀರಿ
ಒಂದು ವೇಳೆ ನೀವೇ ನಿಮ್ಮನ್ನು ಮುದ್ದಿಸುತ್ತಿರುವಂತಹ ಸ್ವಪ್ನ ಕಂಡರೆ ಇದು ಒಳ್ಳೆಯ ಸೂಚನೆಯಾಗಿದೆ. ಇದರ ಅರ್ಥವೇನೆಂದರೆ ನೀವು ಜೀವನದಲ್ಲಿ ಸುಖಿಯಾಗಿದ್ದು ಈಗ ಇರುವಂತೆಯೇ ನೆಮ್ಮದಿಯನ್ನು ಕಾಣುತ್ತಿದ್ದೀರಿ.

ನಿಮ್ಮನ್ನು ನೀವೇ ಬೆತ್ತಲೆಯಾಗಿ ಕಂಡರೆ
ಒಂದು ವೇಳೆ ಸ್ವಪ್ನದಲ್ಲಿ ಸ್ವತಃ ಬೆತ್ತಲಾಗಿರುವ ರೂಪದಲ್ಲಿ ಕಂಡರೆ ನೀವು ನಿಮ್ಮ ಜೀವನದಲ್ಲಿ ಯಾವುದೋ ವಿಷಯದ ಕುರಿತು ಹೆಚ್ಚು ಹೆದರಿದ್ದೀರಿ ಹಾಗೂ ಸುಲಭವಾಗಿ ಮೋಸಕ್ಕೊಳಗಾಗುವ ಹಂತದಲ್ಲಿದ್ದೀರಿ. ನೀವು ತಕ್ಷಣವೇ ಹೆಚ್ಚು ಗಂಭೀರರಾಗಿ ಪರಿಸ್ಥಿತಿಯನ್ನು ಎದುರಿಸಿ ಕಷ್ಟವನ್ನು ಪರಿಹರಿಸಿಕೊಳ್ಳಬೇಕಾದುದು ಅಗತ್ಯ.

ಇನ್ನೊಬ್ಬರು ತಮ್ಮತನವನ್ನು ನಿಮ್ಮ ಮೇಲೆ ಹೇರಲು ಯತ್ನಿಸುತ್ತಿದ್ದಂತೆ ಕಂಡರೆ
ಈ ಸ್ವಪ್ನದ ಆರ್ಥವೇನೆಂದರೆ ನಿಮ್ಮ ಖಾಸಗಿತನವನ್ನು ಇನ್ನೊಬ್ಬರು ಆಕ್ರಮಿಸಿ ತಮ್ಮದೇ ಭಾವನೆಗಳನ್ನು ನಿಮ್ಮಲ್ಲಿ ಬೇರೂರಲು ಯತ್ನಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ನೀವು ದೃಢನಿಲುವು ತಾಳುವುದು ಅಗತ್ಯ.

ಹಿಂದಿನ ಸಂಬಂಧದ ವ್ಯಕ್ತಿಯೊಂದಿಗೆ ಜಗಳ
ಒಂದು ವೇಳೆ ಹಿಂದಿನ ಸಂಬಂಧದ ವ್ಯಕ್ತಿಯೊಂದಿಗೆ ಜಗಳ ಕಾದಂತೆ ಸ್ವಪ್ನ ಬಿದ್ದಿದ್ದರೆ ಇದು ನೀವು ಈಗ ಜೀವನದ ಕವಲುದಾರಿಯಲ್ಲಿ ನಿಂತಿದ್ದು ಯಾವ ದಿಕ್ಕಿನಲ್ಲಿ ಮುಂದುವರೆಯಬೇಕು ಎಂಬುದನ್ನು ನಿರ್ಧರಿಸಲಾರರಾಗಿದ್ದೀರಿ.

ಈ ಸ್ವಪ್ನ ಕಂಡರೆ ಏನು ಮಾಡಬೇಕು?
ಒಂದು ವೇಳೆ ನಿಮ್ಮ ಹಿಂದಿನ ಸಂಬಂಧದ ವ್ಯಕ್ತಿ ಅತಿ ಹೆಚ್ಚಾಗಿ ನಿಮ್ಮ ಸ್ವಪ್ನದಲ್ಲಿ ಕಾಣಿಸಿಕೊಂಡರೆ ಇದರ ಅರ್ಥ ನೀವು ಹಿಂದಿನ ಎಲ್ಲಾ ನೆನಪುಗಳನ್ನು ಶಾಶ್ವತವಾಗಿ ಮರೆತುಬಿಡಲು ನೀಡುವ ಎಚ್ಚರಿಕೆಯಾಗಿದೆ. ಹಾಗೇ ಮಾಡಿ.

ಶಾಶ್ವತ ಪರಿಹಾರ
ಈ ಸ್ವಪ್ನಗಳು ಶಾಶ್ವತವಾಗಿ ಕೊನೆಗೊಳ್ಳಬೇಕು ಎಂದಿದ್ದರೆ ಇದಕ್ಕೊಂದು ವಿಧಾನವಿದೆ. ಒಂದು ಪತ್ರದಲ್ಲಿ ನಿಮ್ಮ ಹಿಂದಿನ ಸಂಬಂಧದ ವ್ಯಕ್ತಿಯನ್ನು ಉಲ್ಲೇಖಿಸಿ ನಿಮ್ಮ ಸಂಬಂಧವೇಕೆ ಗಟ್ಟಿಯಾಗಿ ಉಳಿಯಲಿಲ್ಲ ಎಂಬ ವಿಷಯವನ್ನು ಪ್ರಸ್ತಾಪಿಸಿ ನಿಮ್ಮ ನೆನಪಿನಲ್ಲಿರುವ ಎಲ್ಲಾ ವಿಷಯಗಳನ್ನು ಪತ್ರದಲ್ಲಿ ಬರೆದು ನಿಮ್ಮ ನಿಲುವನ್ನು ಸ್ಪಷ್ಟಪಡಿಸಿ ಸಹಿ ಮಾಡಿ. ಬಳಿಕ ಈ ಪತ್ರವನ್ನು ಅಪರಿಚಿತ ಸ್ಥಳವೊಂದರಲ್ಲಿ ಗುಂಡಿ ತೋಡಿ ಹೂತುಬಿಡಿ. ಬಳಿಕ ಹಿಂದಿರುಗಿ ನೋಡದೇ ಮನೆಗೆ ಹಿಂದಿರುಗಿ. ಈ ಬಗೆಯ ಸ್ವಪ್ನಗಳು ನಿಂತುಹೋಗುತ್ತವೆ.

ಮುಖಾಮುಖಿ ಮಾತನಾಡಿ
ಇದು ಸಾಧ್ಯವಾಗದು ಎಂದಿದ್ದರೆ ಆ ವ್ಯಕ್ತಿಯನ್ನು ಭೇಟಿಯಾಗಿ ನಿಮ್ಮ ಸಂಬಂಧ ಏಕೆ ಗಟ್ಟಿಗೊಳ್ಳಲಿಲ್ಲ ಎಂಬ ವಿಷಯದಲ್ಲಿ ಇದುವರೆಗೆ ಹೇಳಿರದೇ ಇದ್ದ ವಿಷಯಗಳನ್ನು ತಿಳಿಸಿ ಮನಸ್ಸನ್ನು ಹಗುರಾಗಿಸಿಕೊಳ್ಳಿ.

ಹೆಚ್ಚಿನ ಸ್ವಪ್ನಗಳು
ಲೈಂಗಿಕವಲ್ಲದೇ ಹೋದರೂ ನೀವು ನಿಮ್ಮ ಸಂಗಾತಿಯ ಹೊರತಾಗಿ ಇತರ ವ್ಯಕ್ತಿಗಳನ್ನು ನಿಮ್ಮ ಸ್ವಪ್ನದಲ್ಲಿ ಕಂಡರೆ ಹಾಗೂ ಎಚ್ಚರಾದ ಬಳಿಕವೂ ಈ ಸ್ವಪ್ನ ಸ್ಪಷ್ಟವಾಗಿ ನೆನಪಿದ್ದರೆ ನೀವು ಈ ಬಗ್ಗೆ ಚಿಂತನೆ ನಡೆಸಬೇಕಾಗಿರುವುದು ಅಗತ್ಯ ಹಾಗೂ ಇದಕ್ಕೆ ಕಾರಣ ಮತ್ತು ಪರಿಹಾರಗಳನ್ನೂ ನೀವೇ ಕಂಡುಕೊಳ್ಳಬೇಕು.

ಹೆಚ್ಚು ಯೋಚಿಸದಿರಿ
ಎಷ್ಟೇ ಆದರೂ, ಸ್ವಪ್ನಗಳೆಂದೂ ಸ್ವಪ್ನಗಳೇ ಹೊರತು ಇವುಗಳನ್ನು ಗಂಭೀರವಾಗಿ ಪರಿಗಣಿಸಬೇಕೆಂದೇನೂ ಇಲ್ಲ. ಹಾಗಾಗಿ ಮನಸ್ಸು ಕ್ಷೋಭೆಗೊಳ್ಳುವಷ್ಟು ಯಾವುದೇ ಸ್ವಪ್ನವನ್ನು ಗಂಭೀರವಾಗಿ ಪರಿಗಣಿಸದಿರಿ. ನಿಮ್ಮ ಜೀವನವನ್ನು ಈ ಸ್ವಪ್ನಗಳು ಸುಂದರವಾಗಿಸಬೇಕೇ ಹೊರತು ಇವೇ ದಿನದ ಯೋಚನೆಯನ್ನು ವ್ಯಾಪಿಸಿಕೊಳ್ಳಲು ಅವಕಾಶ ಮಾಡಿಕೊಡದಿರಿ.



Click it and Unblock the Notifications