Latest Updates
-
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ
ತೀರಿ ಹೋದ ಸಹೋದರ, ಈಗ ಮಾತನಾಡುತ್ತಿದ್ದಾನೆ!! ಹುಡುಗಿಯೊಬ್ಬಳ ಮೈ ನಡುಗಿಸುವಂತಹ ವಿಡಿಯೋ !
ಈ ವಿಡಿಯೋವನ್ನು ದುರ್ಬಲ ಹೃದಯದ ಜನರು ನೋಡದೇ ಇರುವುದು ಒಳ್ಳೆಯದು! , ಏಕೆಂದರೆ ಇದು ಹದಿಹರೆಯದ ಹುಡುಗಿಯೊಬ್ಬಳು ಕೊಲೆಗೀಡಾದ ತನ್ನ ಸಹೋದರನ ಆತ್ಮ ತನ್ನೊಂದಿಗೆ ಮಾತನಾಡುತ್ತಿದೆ ಎಂದು ಹೇಳಿದ ಮೈನಡುಗುವ ಸಂಗತಿಯೊಂದನ್ನು ಹೊಂದಿದೆ.
16 ವರ್ಷದ ಹದಿಹರೆಯದ ಅಬಿಗೈಲ್ ಮ್ಯಾಗ್ಲಾಸ್ಯಾಸ್ ಇದ್ದಕ್ಕಿದ್ದಂತೆ ಒಂದು ಸಂಜೆ ನಡುಗಲು ಆರಂಭಿಸುತ್ತಾಳೆ.ಇದಕ್ಕೆ ಕಾರಣ ಮೂರು ತಿಂಗಳ ಹಿಂದೆ ಫಿಲಿಪೈನ್ಸ್ನ ನುವಾ ಎಜಿಜಾದಲ್ಲಿ ನಡೆದಿದ್ದ 19 ವರ್ಷದ ತನ್ನ ಸಹೋದರ ಮಾರ್ವಿನ್ನ ಕೊಲೆ..
ವಿಡಿಯೋದಲ್ಲಿ ಆ ಹುಡುಗಿ,ಸತ್ತು ಹೋದ ತನ್ನ ಸಹೋದರ ತನ್ನ ಮೂಲಕ ಮಾತನಾಡುತ್ತಿದ್ದಾನೆ ಎಂದು ಸ್ಪಷ್ಟವಾಗಿ ಹೇಳಿದ್ದಾಳೆ.ಅವಳು ತನ್ನ ಸಹೋದರ ಭೀಕರವಾಗಿ ಸಾಯುವ ಮುನ್ನ ಅವನನ್ನು ಹೇಗೆಲ್ಲಾ ಹಿಂಸಿಸಿದ್ದಾರೆ ಎಂಬುದನ್ನು ಕೂಡ ಹೇಳಿದ್ದಾಳೆ. ತನ್ನ ಸಹೋದರ ಆತನ ಮರಣದ ಬಗ್ಗೆ ಯಾರಿಗೂ ಗೊತ್ತಿರದ ವಿವರಗಳನ್ನು ಬಹಿರಂಗಪಡಿಸ ಬೇಕೆಂದು ತನಗೆ ಹೇಳಿದ್ದಾನೆ ಎಂದಿದ್ದಾಳೆ.

ಅನ್ನಾಬೆಲ್ಲೆ: ಇದರ ಬಗ್ಗೆ ಭಯಾನಕ ಸತ್ಯ ಸಂಗತಿಗಳು
ವಿಡಿಯೋದಲ್ಲಿ ಕ್ಲಿಪ್‌ನಲ್ಲಿ ಅಬಿಗೈಲ್ ಬಹಿರಂಗಗೊಳಿಸಿದ ವಿಷಯ : "ಅವರು ನನ್ನನ್ನು ಹಿಂಸಿಸಿದರು, ಅವರು ನನ್ನನ್ನು ಹೊಡೆದರು ಮತ್ತು ಏಳು ಬಾರಿ ನನಗೆ ಗುಂಡಿಕ್ಕಿ ಕೊಂದರು. ಅವರು ದರೋಡೆಕೋರರು.ನನ್ನ ಮಾತನ್ನು ಕೇಳಿ,ಅವರು ನನ್ನನ್ನು ಕೊಂದೇಬಿಟ್ಟರು"
ಅಬಿಗೈಲ್ ಈ ವೀಡಿಯೊದಲ್ಲಿ ಅನಿಯಂತ್ರಿತವಾಗಿ ಅಳುತ್ತಲೇ ಇರುವುದು ಕಂಡುಬಂದಿದೆ, ಅವಳು ಹಾಸಿಗೆಯಲ್ಲಿ ಮಲಗಿಕೊಂಡು ಎಷ್ಟು ಬಾರಿ ಗುಂಡಿಕ್ಕಿ ಕೊಂಡರು ಎಂದು ಲೆಕ್ಕಹಾಕುತ್ತ ಇರುವುದನ್ನು ಕಾಣಬಹುದಾಗಿದೆ.
ಅವಳ ಸಹೋದರ ತನ್ನನ್ನು ಬಂಧಿಸಿದವರಲ್ಲಿ ತಾನು ಬದುಕಬೇಕು ,ಬಿಟ್ಟುಬಿಡಿ ಎಂದು ಹೇಗೆ ಬೇಡಿಕೊಂಡಿದ್ದಾನೆ ಎಂಬುದನ್ನು ಅವಳು ವಿವರಿಸಿದ್ದಾಳೆ.
ನಿಮ್ಮ ಬೆನ್ನು ಹುರಿಯನ್ನು ನಡುಗಿಸುವಂತಹ ಆತ್ಮದ ಸೇವಕಿಯಾದ ಹುಡುಗಿಯ ಈ ವಿಡಿಯೋ ನಿಮಗೆ ಖಂಡಿತವಾಗಿ ಜೀವ ಭಯವನ್ನು ಉಂಟು ಮಾಡುತ್ತದೆ. ವಿಡಿಯೋ ಕ್ಲಿಪ್‌ನಲ್ಲಿ, '' ನನ್ನನ್ನು ಕೊಲ್ಲಬೇಡಿ ಎಂದು ನಾನು ಅವರನ್ನು ಬೇಡಿಕೊಂಡಿದ್ದೆ. ನನ್ನನ್ನು ಜೈಲಿನಲ್ಲಿ ಹಾಕಿ ಎಂದು ಹೇಳಿದ್ದೆ ",ಎಂದು ಅವಳು ಹೇಳಿಕೊಂಡಿದ್ದಾಳೆ. ಆದರೆ ಅಧಿಕಾರಿಗಳು, ಮಾರ್ವಿನ್ ಇಬ್ಬರು ಆಪಾದಿತ ಮಾದಕವಸ್ತು ವಿತರಕರೊಂದಿಗೆ ಇದ್ದಾಗ ಮಾದಕವಸ್ತು ವಿರೋಧಿಗಳೊಂದಿಗೆ ನಡೆಸಿದ ಬಂದೂಕಿನ ದಾಳಿಯಲ್ಲಿ ಮೃತಪಟ್ಟಿದ್ದಾನೆ ಎಂದು ಹೇಳುತ್ತಿದ್ದಾರೆ.
ಈ ಹುಡುಗಿ ನಿಜವಾಗಿಯೂ ಆತ್ಮದ ಸ್ವಾಧೀನಕ್ಕೆ ಒಳಗಾಗಿದ್ದಳೋ ಇಲ್ಲವೋ ಎಂಬುದರ ಬಗ್ಗೆ ಸತ್ಯದ ವಿಶ್ವಾಸಾರ್ಹತೆ ಯನ್ನು ಸ್ಪಷ್ಟಪಡಿಸಲಾಗುವುದಿಲ್ಲ , ಏಕೆಂದರೆ ಆಕೆಯು ತನ್ನ ಸಹೋದರನಿಗೆ ಅತ್ಯಂತ ಹತ್ತಿರವಾಗಿದ್ದಳು ಮತ್ತು ಅವಳು ಕೆಲವು ಮಿಶ್ರ ಭಾವನೆಗಳನ್ನು ಹೊಂದಿರುವಾಗ ಭಾವನಾತ್ಮಕವಾಗಿ ಕುಸಿದುಹೋಗಿ ಹೀಗೆ ಆಡುತ್ತಿದ್ದಾಳೆ ಎಂದು ಕೆಲವರು ಹೇಳುತ್ತಿದ್ದಾರೆ. ಆದ್ದರಿಂದ ಅವಳಿಗೆ ನಿಜವಾಗಿಯೂ ಏನಾಯಿತು ಎಂದು ಯೋಚಿಸುವ ನಿರ್ಧಾರವನ್ನು ನೀವೇ ಮಾಡಿ.. ಕೆಳಗಿನ ಕಾಮೆಂಟ್ಸ್ ವಿಭಾಗದಲ್ಲಿ ನಿಮ್ಮ ಆಲೋಚನೆಗಳನ್ನು ಹಂಚಿಕೊಳ್ಳಿ.



Click it and Unblock the Notifications
