Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಮಕರರಾಶಿಯವರ 2018ರ ಮೇ ತಿಂಗಳ ರಾಶಿಫಲ ತಿಳಿಯಿರಿ
2018 ರ ಮೇ ತಿಂಗಳಿನ ಮಕರ ರಾಶಿಯ ಮಾಸಿಕ ಭವಿಷ್ಯವಾಣಿಯು ಇಲ್ಲಿದೆ. ಇದನ್ನು ಓದಿ ಮತ್ತು ನಿಮ್ಮ ಇಡೀ ತಿಂಗಳ ಭವಿಷ್ಯವಾಣಿಯ ಕುರಿತು ತಿಳಿದುಕೊಳ್ಳಿ.
ಮಾಸಿಕ ಭವಿಷ್ಯವನ್ನು ಓದಿ, ಮೇ ತಿಂಗಳನ್ನು ಚೆನ್ನಾಗಿ, ಯೋಜಿತ ರೀತಿಯಲ್ಲಿ ಪ್ರಾರಂಭಿಸಬಹುದು.
ಮಾಸಿಕ ಭವಿಷ್ಯವನ್ನು ತಿಳಿದುಕೊಳ್ಳುವುದರಿಂದ ನಕಾರಾತ್ಮಕ ಸಂದರ್ಭಗಳನ್ನು ದೂರವಿಡಬಹುದು ಮತ್ತು ಭವಿಷ್ಯದ ದಿನಗಳಲ್ಲಿ ಇಂತಹ ಸಂದರ್ಭ ಬಂದಾಗ ಅದರಿಂದ ಉತ್ತಮ ರೀತಿಯಲ್ಲಿ ಹೊರಬರಲು ಸಹಾಯ ಮಾಡುತ್ತದೆ. ಆದ್ದರಿಂದ ನಿಮ್ಮ ರಾಶಿಯ ಮಾಸಿಕ ಭವಿಷ್ಯದ ಬಗ್ಗೆ ತಿಳಿಯುವುದು ಮುಖ್ಯವಾಗಿದೆ.

ಮಕರ ರಾಶಿಯಲ್ಲಿ ಜನಿಸಿದವರು ಸಾಂಪ್ರದಾಯಿಕ ಮೌಲ್ಯಗಳನ್ನು ಹೊಂದಿರುವ ಅತ್ಯಂತ ಜವಾಬ್ದಾರಿಯುತ ನಾಗರಿಕರು ಮತ್ತು ಸಾಮಾನ್ಯವಾಗಿ ಸ್ವಭಾವತಃ ಗಂಭೀರವಾಗಿರುತ್ತಾರೆ ಎಂದು ತಿಳಿದುಬಂದಿದೆ. ಈ ವ್ಯಕ್ತಿಗಳು ಸ್ವತಂತ್ರರಾಗಿರುತ್ತಾರೆ.
ಮತ್ತು ತಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ಗಮನಾರ್ಹ ಪ್ರಗತಿಯನ್ನು ಹೊಂದುತ್ತಾರೆ.
ಇವರು ಉತ್ತಮ ಸ್ವಯಂ ನಿಯಂತ್ರಣಕಾರರು ಹಾಗೂ ಯಾವ ಸಮಯದಲ್ಲಾದರೂ, ಇವರು ಯಾವುದೇ ಸಂದರ್ಭದಲ್ಲಿ ತಮ್ಮೊಂದಿಗೆ ಕೆಲಸ ಮಾಡುವ ಅನೇಕ ಜನರನ್ನು ನಿರ್ವಹಿಸಬಲ್ಲರು.
ಈ ರಾಶಿಯಲ್ಲಿ ಜನಿಸಿದ ವ್ಯಕ್ತಿಗಳು ಘನ ಮತ್ತು ವಾಸ್ತವಿಕ ಯೋಜನೆಗಳನ್ನು ಮಾಡುತ್ತಾರೆ, ತಮ್ಮ ತಪ್ಪುಗಳಿಂದ ಕಲಿಯುತ್ತಾರೆ ಮತ್ತು ತಮ್ಮ ಅನುಭವ ಮತ್ತು ಪರಿಣತಿಯನ್ನು ಆಧರಿಸಿ ಉನ್ನತ ಮಟ್ಟಕ್ಕೆ ಹೋಗುತ್ತಾರೆ.
ಇವರಿಗೆ ಇತರರ ಭಿನ್ನತೆಗಳನ್ನು ಒಪ್ಪಿಕೊಳ್ಳುವುದು ಕಷ್ಟ. ವೃತ್ತಿಪರ ವ್ಯಕ್ತಿಗಳು ತಮ್ಮ ವೈಯಕ್ತಿಕ ಮಹತ್ವಾಕಾಂಕ್ಷೆಗಳಿಗಿಂತ ಹೆಚ್ಚು ಮುಖ್ಯವಾಗಿ ಈ ವ್ಯಕ್ತಿಗಳು ಕುಟುಂಬದ ಕರ್ತವ್ಯಗಳನ್ನು ಮತ್ತು ಮಾನಸಿಕ ಆರೋಗ್ಯವನ್ನು ಈ ತಿಂಗಳು ಕಾಪಾಡಬೇಕು.
ಮೇ 2018 ತಿಂಗಳಲ್ಲಿ ನೀವು ಈ ರಾಶಿಯ ಬಗ್ಗೆ ತಿಳಿದುಕೊಳ್ಳಬೇಕಾದ ಮಾಸಿಕ ಭವಿಷ್ಯವಾಣಿಗಳು ಇಲ್ಲಿವೆ. ಇಡೀ ತಿಂಗಳ ಭವಿಷ್ಯವಾಣಿಗಳನ್ನು ತಿಳಿಯಲು ಮುಂದೆ ಓದಿ.
ಆರೋಗ್ಯ ಭಾಗ್ಯ
ಕಳೆದ ತಿಂಗಳಿನೊಂದಿಗೆ ಹೋಲಿಸಿದರೆ ನಿಮ್ಮ ಆರೋಗ್ಯದಲ್ಲಿ ಈ ತಿಂಗಳು ಮಹತ್ವದ ಸುಧಾರಣೆ ಇದೆ ಎಂದು ಆರೋಗ್ಯದ ಬಗೆಗಿನ ಭವಿಷ್ಯಗಳು ಸೂಚಿಸುತ್ತವೆ. ಹುರುಪು ಹೆಚ್ಚಾಗುತ್ತದೆ. ಮತ್ತೊಂದೆಡೆ, ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ನಿರ್ವಿಶೀಕರಣ
(detoxification) ಮತ್ತು ಮಸಾಜ್ ನಿಮಗೆ ಉತ್ತಮ ಆರೋಗ್ಯಕ್ಕಾಗಿ ಸಹಾಯ ಮಾಡುತ್ತದೆ. ನೀವು ಸರಿಯಾದ ಆಹಾರ ಕ್ರಮವನ್ನು ಹೊಂದಿರುವುದು ಉತ್ತಮ.
ವೃತ್ತಿಜೀವನದ ಬಗ್ಗೆ
ಈ ತಿಂಗಳು ನೀವು ಕೆಲಸ ವಿಷಯದಲ್ಲಿ ಕಷ್ಟದ ಸಂದರ್ಭಗಳನ್ನು ಎದುರಿಸಬೇಕಾಗುತ್ತದೆ. ನೀವು ಮಾಡುವ ಎಲ್ಲಾ ಕೆಲಸಗಳಲ್ಲಿ ಹೆಚ್ಚಿನ ಪ್ರಯತ್ನವನ್ನು ಮಾಡಬೇಕು ಮತ್ತು ಏಕೀಕರಣ ಹೊಂದುವುದನ್ನು ಖಚಿತಪಡಿಸಿಕೊಳ್ಳಬೇಕು. ಇದಲ್ಲದೆ, ನೀವು ತೊಂದರೆ ಎದುರಿಸಲು ಮತ್ತು ಪರಿಹಾರ ಕ್ರಮ ತೆಗೆದುಕೊಳ್ಳುವುದರ ಬಗ್ಗೆ ನಿರೀಕ್ಷಿಸಬಹುದು. ನೀವು ತಿಂಗಳು ಪರ್ಯಂತ ನಿಮ್ಮ ಸ್ವಂತ ಕೌಶಲ ಮತ್ತು ಪ್ರಯತ್ನವನ್ನು ಅವಲಂಬಿಸಿರಬೇಕು.
ತಿಂಗಳ ಹಣಕಾಸಿನ ಬಗ್ಗೆ
ನಿಮ್ಮ ಆರ್ಥಿಕ ಭವಿಷ್ಯವು ಈ ತಿಂಗಳು ಅನುಕೂಲಕರವಾಗಿಲ್ಲ ಎಂದು ತಜ್ಞರು ಬಹಿರಂಗಪಡಿಸಿದ್ದಾರೆ. ಸರ್ಕಾರಿ ಕ್ಷೇತ್ರಗಳಲ್ಲಿ ಕೆಲಸ ಮಾಡುವ ವ್ಯಕ್ತಿಗಳು ಅತ್ಯಂತ ಕಠಿಣ ಸಮಯವನ್ನು ಹೊಂದಿರುತ್ತಾರೆ ಮತ್ತು ನಷ್ಟವನ್ನು ಎದುರಿಸುತ್ತಾರೆ. ಯೋಜಿತ ಲಾಭಗಳನ್ನು ನೀವು ಅರ್ಥಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ನೀವು ತಿಂಗಳಾದ್ಯಂತ ನೀವು ಲೋ ಪ್ರೊಫೈಲ್ ಅನ್ನು ಇಟ್ಟುಕೊಳ್ಳಬೇಕು.
ಪ್ರೀತಿ ಹಾಗೂ ಪ್ರಣಯದ ಬಗ್ಗೆ
ಇದು ಪ್ರೇಮದ ತಿಂಗಳು. ತಿಂಗಳ ಮೊದಲ ವಾರದಲ್ಲಿ ನಿಮ್ಮ ಸಂಗಾತಿಗೆ ವಿಶೇಷ ಭಾವನೆಯನ್ನು ಉಂಟುಮಾಡಲು ನೀವು ಚಿಕ್ಕ ಚಿಕ್ಕ ವಿಷಯಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡಬೇಕು. ಕೆಲಸದ ವಿಷಯವಾಗಿ ನೀವು ಪ್ರಯಾಣಿಸುತ್ತಿದ್ದರೆ, ನಿಮ್ಮ ಸಂಗಾತಿಯೊಂದಿಗೆ ಕಳೆಯಲು ಇದು ಉತ್ತಮ. ತಿಂಗಳ 21 ರವರೆಗೆ ಸಾಕಷ್ಟು ರೋಮ್ಯಾಂಟಿಕ್ ಸಂಗತಿಗಳು, ವಿನೋದ, ಮನೋರಂಜನೆ ಮತ್ತು ಗಾಸಿಪ್ ಇರುತ್ತದೆ ಎಂದು ನಮ್ಮ ತಜ್ಞರು ಬಹಿರಂಗಪಡಿಸಿದ್ದಾರೆ.
ಅದೃಷ್ಟ ದಿನಾಂಕಗಳು ಮತ್ತು ಬಣ್ಣಗಳು
ಈ ತಿಂಗಳಿನಲ್ಲಿ ಮಕರ ರಾಶಿಯ ಅದೃಷ್ಟ ಸಂಖ್ಯೆಗಳು - 3, 21, 66, 83, ಮತ್ತು 84.
ಅದೃಷ್ಟದ ದಿನಾಂಕಗಳು: 4, 5, 6, 14, 15, 23, 24, 31.
ಅದೃಷ್ಟದ ಬಣ್ಣಗಳು ನೀಲಿ, ಪೈನ್ ಬಣ್ಣ ಮತ್ತು ಹಸಿರು.



Click it and Unblock the Notifications
