Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಕೆನ್ನೇರಳೆ ಬಣ್ಣದ ಸೀರೆಯಲ್ಲಿ ಕಣ್ಮನ ಸೆಳೆದ ವಿದ್ಯಾ ಬಾಲನ್
ನವದೆಯಲಿಯಲ್ಲಿ ಇತ್ತೀಚೆಗೆ ನಡೆದ ಪ್ರದರ್ಶನವೊಂದರಲ್ಲಿ ನಟಿ ವಿದ್ಯಾ ಬಾಲನ್ ಅವರು ವಿಶಿಷ್ಟವಾದ ಹಳದಿ ಮೈ ಮತ್ತು ಕೆನ್ನೇರಳೆ ಅಂಚಿನ ಸೀರೆಯನ್ನು ತೊಟ್ಟು ಆಗಮಿಸಿದ್ದರು. ನೆರೆದಿದ್ದ ಎಲ್ಲರ ಕಣ್ಣುಗಳೂ ಈ ಪ್ರಖರ ಬಣ್ಣದ ದಿರಿಸಿನ ಮೇಲೆಯೇ ಇತ್ತು. ಈ ಸಮಯ ಮತ್ತು ಬೇಸಿಗೆ ಮುಗಿಯುತ್ತಿರುವ ಈ ಕಾಲದಲ್ಲಿ ಸಂದರ್ಭೋಚಿತವಾಗಿತ್ತು.

ಸಾಮಾನ್ಯವಾಗಿ ದಕ್ಷಿಣಭಾರತದ ತಿಳಿಹಳದಿ ಬಣ್ಣದ ಮತ್ತು ಜರಿಯಂಚಿನ ಸಾಂಪ್ರದಾಯಿಕ ಸೀರೆಯ ಸೊಬಗನ್ನೇ ಹೋಲುತ್ತಿದ್ದ ಈ ಸೀರೆಯ ಹಳದಿ ಬಣ್ಣ ಮತ್ತು ಕೆನ್ನೇರಳೆ ಬಣ್ಣದ ಅಗಲವಾದ ಅಂಚು ಅವರನ್ನು ಕಾರ್ಯಕ್ರಮದ ಆಕರ್ಷಣಾಕೇಂದ್ರವಾಗಿಸಿತ್ತು. ಇದಕ್ಕೆ ಪೂರಕವಾಗಿ ಕೆನ್ನೇರಳೆ ಬಣ್ಣದ ಮುಕ್ಕಾಲು ತೋಳಿನ ರವಿಕೆ ಅವರ ಮೈಮಾಟಕ್ಕೆ ಒಪ್ಪುವಂತಿದ್ದು ಅವರ ಸಹಜ ಮೈಕಾಂತಿಯನ್ನು ಪ್ರಚುರಗೊಳಿಸಿತ್ತು.
ಈ ಉಡುಗೆಗೆ ಪೂರಕವಾಗಿ ಅವರು ಸಡಿಲವಾಗಿ ಬಿಟ್ಟಿದ್ದ ತಲೆಗೂದಲು ಜಲಪಾತದಂತೆ ಭುಜದ ಮೂಲಕ ಎದೆಯ ಬಲಭಾಗವನ್ನು ಅಲಂಕರಿಸಿದ್ದು ಸೌಂದರ್ಯವನ್ನು ಇಮ್ಮಡಿಗೊಳಿಸಿತ್ತು. ಇದಕ್ಕೆ ಅವರು ನವಿರಾದ ಗುಂಗುರಿರುವಂತೆ ಮಾಡಿಸಿಕೊಂಡಿದ್ದು ಸಾಂಪ್ರಾದಾಯಿಕ ಶೈಲಿಗೆ ಪೂರಕವಾಗಿತ್ತು.
ಜೊತೆಗೇ ಕೊಂಚ ದೊಡ್ಡವೇ ಅನ್ನಿಸುತ್ತಿದ್ದ ಅರ್ಧಚಂದ್ರಾಕೃತಿಯ ಕಿವಿಯೋಲೆಗಳೂ ಆಕರ್ಷಕವಾಗಿದ್ದವು. ತುಸುವೇ ಅನ್ನಿಸುವಷ್ಟು ಮಾತ್ರ ಸೌಂದರ್ಯ ಪ್ರಸಾದನಗಳನ್ನು ಉಪಯೋಗಿಸಿದ್ದುದರಿಂದ ಮತ್ತು ದಟ್ಟವಾದ ಕಾಡಿಗೆ ಮತ್ತು ಪೀಚ್ ಹಣ್ಣಿನ ಬಣ್ಣದ ತುಟಿಗಳ ಬಣ್ಣದ ಮೂಲಕ ಅವರ ಸಹಜ ಸೌಂದರ್ಯ ಕಟ್ಟೆಯೊಡೆದಿತ್ತು.



Click it and Unblock the Notifications


