Latest Updates
-
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ? -
ಬೇಸಿಗೆ ಬಿಸಿಲಿಗೆ ಮನೆ ತಂಪಾಗಿಡಲು ಈ ಟಿಪ್ಸ್ ಫಾಲೋ ಮಾಡಿ -
ಹೀಟ್ವೇವ್ ಎಚ್ಚರಿಕೆ: ಸುಡುವ ಬಿಸಿಲಿಗೆ ನಿಮ್ಮ ದೇಹ ತಂಪಾಗಿಸುವುದು ಹೇಗೆ? -
ಬಿಸಿಲ ಬೇಗೆಯಿಂದ ಪಾರಾಗಲು ಈ ಸ್ಮಾರ್ಟ್ ಟಿಪ್ಸ್ ಮಿಸ್ ಮಾಡ್ಬೇಡಿ -
ತೀವ್ರ ಶಾಖದ ಅಲೆ: ಬಿಸಿಲಿನಲ್ಲಿ ವ್ಯಾಯಾಮ ಮಾಡುವ ಮುನ್ನ ಎಚ್ಚರ!
ಸ್ಟಾರ್ ಗಿಲ್ಡ್ ಪ್ರಶಸ್ತಿ 2015: ಸಮಾರಂಭದಲ್ಲಿ ಮಿಂಚಿದ ತಾರೆಯರು
ಇತ್ತೀಚೆಗೆ ನಡೆದ ಸ್ಟಾರ್ ಗಿಲ್ಡ್ ಪ್ರಶಸ್ತಿ 2015 ಸಮಾರಂಭದಲ್ಲಿ ಪ್ರಶಸ್ತಿಗಳಿಗಿಂತಲೂ ಆಗಮಿಸಿದ ತಾರೆಯರ ಉಡುಪುಗಳೇ ಹೆಚ್ಚು ಮಿಂಚಿದವು. ಹೊಳೆಹೊಳೆಯುವ ಬಟ್ಟೆ, ಜಗಮಗಿಸುವ ಮುಖದ ಮೇಕಪ್, ಪಾದದಿಂದ ಮೊಣಕಾಲಿಗೂ ಮೇಲೆ ಬಂದಿದ್ದ ಕೆಂಪು ರತ್ನಗಂಬಳಿಯಂತಿದ್ದ ನಿಲುವಂಗಿ ಮೊದಲಾದವು ಸಮಾರಂಭದ ಕಳೆಯಾಗಿದ್ದವು. ಒಟ್ಟಾರೆ ಬಾಲಿವುಡ್ ತಾರೆಯರ ಕಲರವದಿಂದ ಸಮಾರಂಭ ಇಡಿಯ ರಾತ್ರಿ ಕಳೆಯಿಂದ ಕೂಡಿತ್ತು.
ಈ ಸಮಾರಂಭದಲ್ಲಿ ಆಗಮಿಸಿದ್ದ ಸುಂದರಿ ಪ್ರಿಯಾಂಕಾ ಛೋಪ್ರಾರವರು ನಮ್ಮ ಕಣ್ಣಿಗೆ ಮೊದಲಾಗಿ ಕಾಣಿಸಿಕೊಂಡರು. ಮೊದಲ ನೋಟದಲ್ಲಿಯೇ ಈಕೆಯೇ ಸಮಾರಂಭದ ಅತ್ಯುತ್ತಮವಾಗಿ ಉಡುಪು ತೊಟ್ಟುಕೊಂಡ ವ್ಯಕ್ತಿ ಎನ್ನಿಸಿದರು. ಇದಕ್ಕೆ ಕಾರಣ ಅವರು ತೊಟ್ಟಿದ್ದ ಪ್ರಖರವಾದ ಕಿತ್ತಳೆ ಬಣ್ಣದ ಹೊಳಪಿನ ಮೇಲುಡುಪು. ವೇದಿಕೆಯಲ್ಲಿ ಅವರ ಪ್ರದರ್ಶನಕ್ಕೆ ಉಪಯೋಗಿಸಿದ್ದ ಬೆಕ್ಕಿನ ಆಕಾರದ ಉಡುಗೆ ಅವರಿಗೆ ಅಷ್ಟೊಂದು ಸೂಕ್ತವಲ್ಲ ಎನ್ನಿಸಿತ್ತು. ಆದರೆ ಈ ಉಡುಪು ಮಾತ್ರ ಅತ್ಯಂತ ಮನಮೋಹಕವಾಗಿತ್ತು. ಈ ಕಾರ್ಯಕ್ರಮದಲ್ಲಿ ಆಗಮಿಸಿದ್ದ ಇತರ ತಾರೆಯರ ಬಗ್ಗೆ ಒ೦ದು ಇಣುಕುನೋಟ ನೋಡೋಣ ಬನ್ನಿ... ಸ್ಟಾರ್ ಗಿಲ್ಡ್ ಅವಾರ್ಡ್ಸ್: ಮಿಂಚಿದ ಸೋನಾಕ್ಷಿ
ಆಲಿಯಾ ಭಟ್

ಪ್ರಬಲ್ ಗುರಾಂಗ್ ರಿಂದ ವಿನ್ಯಾಸಗೊಳಿಸಲ್ಪಟ್ಟ ನೀಲಿ ಗೌನ್, ಲವ್ ಬೌಂಟಿನ್ಸ್ ನ ಕಪ್ಪು ಪಾದರಕ್ಷೆ ಮತ್ತು ಇಶಾರ್ಯರವರು ವಿನ್ಯಾಸಗೊಳಿಸಿದ್ದ ಉಂಗುರ ಧರಿಸಿದ್ದ ಅವರು ಕಾರ್ಯಕ್ರಮದಲ್ಲಿ ಮಿಂಚಿದರು. ಅವರ ನೀಲಿ ಗೌನ್ ನಲ್ಲಿನ ಒಂದು ಸೀಳು ಮೊಣಕಾಲಿಗೂ ಮೇಲಿನವರೆಗೆ ಮುಂದುವರೆದಿದ್ದು ವಿಶೇಷ ಆಕರ್ಷಣೆ ನೀಡಿತ್ತು.
ದೀಪಿಕಾ ಪಡುಕೋಣೆ
ಅಮಿತ್ ಜಿಟಿಯವರಿಂದ ವಿನ್ಯಾಸಗೊಳಿಸಲ್ಪಟ್ಟಿದ್ದ ಬಿಳಿಯ ಗೌನ್ ಧರಿಸಿದ್ದ ದೀಪಿಕಾ ನಿಜವಾಗಿಯೂ ಅಪ್ಸರೆಯಂತೆ ಕಂಡುಬಂದರು. ಇದಕ್ಕೆ ಪೂರಕವಾಗಿ ಮಹೇಶ್ ನೋಟನ್ ದಾಸ್ ರವರ ಆಭರಣಗಳು ಅವನ್ನು ಇನ್ನಷ್ಟು ಕಂಗೊಳಿಸಿದ್ದವು.
ಜಾಕ್ವೆಲಿನ್ ಫೆರ್ನಾಂಡಿಸ್
ಈ ಕಾರ್ಯಕ್ರಮದಲ್ಲಿ ಹಲವು ತಾರೆಯರು ಬಿಳಿಯ ಉಡುಪನ್ನು ಧರಿಸಿದ್ದುದು ವಿಶೇಷವಾಗಿತ್ತು. ಜಾಕ್ವೆಲಿನ್ ರವರು ಧರಿಸಿದ್ದ ಗೌರವ್ ಗುಪ್ತಾರವರ ಬಿಳಿಯ ಮೇಲುಡುಪು ಮೊಣಕಾಲಿನ ಬಳಿ ಸುಮಾರು ಒಂದು ಅಡಿ ಅರೆಪಾರದರ್ಶಕವಾಗಿದ್ದು ವಿಶೇಷ ಆಕರ್ಷಣೆ ನೀಡಿತ್ತು. ಇದರೊಂದಿಗೇ ಗೆಹ್ನಾ ದವರ ಆಭರಣಗಳು ಅವರ ಸೌಂದರ್ಯವನ್ನು ವೃದ್ಧಿಸಿತ್ತು.
ಕೃತಿ ಸಾನನ್
ಇಂದಿನ ಕಾರ್ಯಕ್ರಮಕ್ಕೆ ಗೌರವ್ ಗುಪ್ತಾರವರು ವಿನ್ಯಾಸಗೊಳಿಸಿದ್ದ ಕಪ್ಪು ದಿರಿಸನ್ನು ತೊಟ್ಟು ಬಂದಿದ್ದ ಕೃತಿ ವಿಶೇಷ ಆಕರ್ಷಣೆಯನ್ನು ಬೀರುತ್ತಿದ್ದರು. ಇದರೊಂದಿಗೆ ಈನ ಅಹ್ಲುವಾಲಿಯಾರವರು ವಿನ್ಯಾಸಗೊಳಿಸಿದ್ದ ಉಂಗುರವನ್ನು ಧರಿಸಿದ್ದರು.
ಲೀಸಾ ಹೇಡನ್
ಕೇವಲ ಒಂದು ಭುಜವನ್ನು ಮಾತ್ರ ಆವರಿಸಿದ್ದ, ಗೌರಿ ಮತ್ತು ನೈನಿಕಾರವರ ವಿನ್ಯಾಸದ ನೀಲಿ ಬಣ್ಣದ ಮೇಲುಡುಪು ಧರಿಸಿದ್ದ ಲೀಸಾ ಸ್ವರ್ಗಲೋಕದಿಂದ ಈಗತಾನೇ ಬಂದಿಳಿದ ದೇವಕನ್ಯೆಯಂತೆ ಕಂಡುಬಂದರು. ಕೆಳಭಾಗದಲ್ಲಿ ಮೂವು ಮಡಿಕೆಗಳ ಅಡಿಭಾಗದ ಕಪ್ಪು ಪಟ್ಟಿ ಅತ್ಯದ್ಭುತವಾಗಿ ಕಂಡುಬಂದಿತ್ತು. ಕಪ್ಪು ಕೈಚೀಲ ಮತ್ತು ಕೆಂಪು ತುಟಿಗಳ ಬಣ್ಣದ ಅಲಂಕಾರದಿಂದ ಅವರು ಇನ್ನಷ್ಟು ಕಂಗೊಳಿಸಿದರು.



Click it and Unblock the Notifications















