Latest Updates
-
ಪ್ರಧಾನಿ ಮೋದಿ ಭೇಟಿಯ ನಂತರ ಟ್ರೆಂಡಿಂಗ್: ಕೇವಲ 15 ನಿಮಿಷದಲ್ಲಿ ನಿಮ್ಮ ದಿನವನ್ನು ಬದಲಾಯಿಸುವ ಮ್ಯಾಜಿಕ್ ಯೋಗ ಟಿಪ್ಸ್! -
ಮದರ್ಸ್ ಡೇ 2026: ಅಮ್ಮ ಮತ್ತು ಅತ್ತೆಯ ನಡುವೆ ಸಿಲುಕಿದ್ದೀರಾ? ಈ ಟ್ರಿಕ್ಸ್ ಫಾಲೋ ಮಾಡಿ! -
ಬಿರುಗಾಳಿ ಅಪ್ಪಳಿಸುವ ಮುನ್ನ ಎಚ್ಚರ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈ ಕೆಲಸಗಳನ್ನು ಇಂದೇ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಮದರ್ಸ್ ಡೇ 2026: ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರೋ ಈ ವಿಶೇಷ ಟ್ರೆಂಡ್ಸ್ ನೀವು ಮಿಸ್ ಮಾಡ್ಬೇಡಿ! -
ಬಿಸಿಲ ಝಳದಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಹೀಟ್ವೇವ್ನಿಂದ ಪಾರಾಗಲು ಈ ಸಣ್ಣ ಬದಲಾವಣೆ ಸಾಕು! -
ತಾಯಂದಿರ ದಿನದ ಗೊಂದಲವೇ? ಅಮ್ಮ ಮತ್ತು ಅತ್ತೆ ಇಬ್ಬರನ್ನೂ ಖುಷಿಪಡಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಅಮೆಜಾನ್ ಸೇಲ್ ಶುರು: ನಿಮ್ಮ ಬಾಲ್ಕನಿಯನ್ನು ಸುಂದರ ತೋಟವನ್ನಾಗಿಸಲು ಮಿಸ್ ಮಾಡ್ಬೇಡಿ ಈ ಬೆಸ್ಟ್ ಡೀಲ್ಸ್! -
ಬಿಸಿಲ ಧಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಪಾನೀಯಗಳೇ ಮದ್ದು! -
ಅಮ್ಮನಿಗೆ ಕೊನೆಯ ನಿಮಿಷದಲ್ಲಿ ಗಿಫ್ಟ್ ಕೊಡಬೇಕಾ? ಈ ಟ್ರಿಕ್ಸ್ ಫಾಲೋ ಮಾಡಿ, ಅಮ್ಮನ ಮುಖದಲ್ಲಿ ನಗು ಮೂಡಿಸಿ!
ಫ್ಲಾರೆನ್ಸ್‌ನಲ್ಲಿ ಮನಸೂರೆಗೊಂಡ ಸೋನಮ್ ಸೌಂದರ್ಯ
ಸೌಂದರ್ಯದ ವಿಷಯ ಬಂದಾಗ ಭಾರತೀಯ ಸುಂದರಿಯರನ್ನು ಪರಿಗಣಿಸದಿರಲು ಸಾಧ್ಯವೇ ಇಲ್ಲ. ವಿಶ್ವಸುಂದರಿ ಪಟ್ಟ ಬಳಿಕವಂತೂ ವಿಶ್ವದ ನೋಟ ಭಾರತದೆಡೆಗೆ ಸೆಳೆದಿತ್ತು. ಐಶ್ವರ್ಯಾ ರೈ, ಮಲ್ಲಿಕಾ ಶೆರಾವತ್, ಸುಶ್ಮಿತಾ ಸೇನ್, ಸೋನಮ್ ಕಪೂರ್ ಮೊದಲಾದವರು ತಮ್ಮ ಸೌಂದರ್ಯ ಮತ್ತು ಚುರುಕುಬುದ್ಧಿಯಿಂದ ಜಗತ್ತಿನ ಗಮನ ಸೆಳೆದಿದ್ದಾರೆ. ವಿದೇಶಗಳಲ್ಲಿ ನಡೆಯುವ ಬೃಹತ್ ಮೇಳಗಳಲ್ಲಿ ಭಾರತೀಯ ಸೌಂದರ್ಯ ಕಣ್ಣುಕುಕ್ಕಿಸುತ್ತಾ ಬಂದಿದೆ.
ವಿಶ್ವದ ಕೋಟ್ಯಂತರ ಜನರ ಗಮನವನ್ನು ಕೆಲವೇ ವ್ಯಕ್ತಿಗಳು ತಮ್ಮೆಡೆಗೆ ಸೆಳೆಯುವುದು ತಮ್ಮ ಸಹಜ ಸೌಂದರ್ಯದಿಂದ ಮಾತ್ರವಲ್ಲ, ತಮ್ಮ ವ್ಯಕ್ತಿತ್ವ ಮತ್ತು ಮುಖ್ಯವಾಗಿ ಆ ಸಂದರ್ಭಕ್ಕೆ ಸೂಕ್ತವಾಗಿ ತಮ್ಮನ್ನು ಪ್ರದರ್ಶಿಸಲ್ಪಡುವುದೇ ಮುಖ್ಯ. ಇತ್ತೀಚೆಗೆ ಫ್ಲಾರೆನ್ಸ್ ನಗರದಲ್ಲಿ ನಡೆದ ರಾಷ್ಟ್ರಮಟ್ಟದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ಸೋನಮ್ ಕಪೂರ್ ತಮ್ಮ ಉಡುಗೆ ಮತ್ತು ಸೌಂದರ್ಯದಿಂದ ವಿಶ್ವದ ಗಮನ ಸೆಳೆದರು.

ವಿಶ್ವಮಟ್ಟದ ಫ್ಯಾಷನ್ ಸಂಸ್ಥೆಯಾದ ಜಿಯಾರ್ಡಿನಿ ಇಟಾಲಿಯಾನಿಯ ನೂತನ ಘಟಕದ ಪ್ರಾರಂಭೋತ್ಸವದಲ್ಲಿ ವಿಶ್ವದ ಎಲ್ಲೆಡೆಯಿಂದ ಖ್ಯಾತನಾಮರು ಆಗಮಿಸಿದ್ದು ಅವರ ನಡುವೆ ಗಮನ ಸೆಳೆಯುವಂತೆ ಕಾಣುವುದು ಅಷ್ಟು ಸುಲಭವಲ್ಲ. ರಾತ್ರಿಯ ಕಾರ್ಯಕ್ರಮದಲ್ಲಿ ಸಾಮಾನ್ಯವಾಗಿ ಬಿಳಿಯ ಅಥವಾ ತಿಳಿಬಣ್ಣದ ಉಡುಗೆಗಳನ್ನೇ ಹೆಚ್ಚಾಗಿ ತೊಡಲಾಗುತ್ತದೆ.
ಆದರೆ ಈ ಕಾರ್ಯಕ್ರಮದಲ್ಲಿ ಕಪ್ಪು ಉಡುಪನ್ನು ತೊಟ್ಟು ಬಂದ ಅವರನ್ನು ಇಡಿಯ ಸಮೂಹ ನಿಟ್ಟಿಸಿ ನೋಡಿದ್ದು ಮಾತ್ರ ಸುಳ್ಳಲ್ಲ. ಅವರ ಉಡುಪು ಸಾಂಪ್ರಾದಾಯಿಕ ಪಾಶ್ಚಾತ್ಯ ಶೈಲಿಯಲ್ಲಿದ್ದು ಭುಜವನ್ನು ಪೂರ್ಣವಾಗಿ ಆವರಿಸುವ ಪೋಂಛೋ ಮೇಲ್ವಸ್ತ್ರ ತೊಟ್ಟು ಬಂದಿದ್ದರು.
ಕಪ್ಪು ಬಣ್ಣದ ಈ ಪೊಂಛೋ ಅಂಚುಗಳಲ್ಲಿ ಬಿಳಿಯ ಬಣ್ಣದ ಹೂವುಗಳ ವಿನ್ಯಾಸ ಹೊಂದಿದ್ದು ಕಾರ್ಯಕ್ರಮದ ಆಕರ್ಷಣಾ ಕೇಂದ್ರವಾಗಿತ್ತು. ಅವರ ಸೊಂಟವನ್ನು ಅಪ್ಪಿ ಹಿಡಿದಿದ್ದ ಬೆಲ್ಟ್ ಬರೆಯ ಒಂದು ಬೆರಳಿನಷ್ಟು ಅಗಲವಿದ್ದು ಅವರ ಮೈಮಾಟವನ್ನು ಪೂರ್ಣವಾಗಿ ಪ್ರಕಟಿಸಲು ನೆರವಾಗಿತ್ತು.
ಕೆಳಭಾಗದಲ್ಲಿ ಕಡಿಮೆ ಅಗಲವಾಗಿದ್ದು ಪೆನ್ಸಿಲ್ ಆಕಾರವನ್ನು ಪಡೆದ ಅವರ ಕೆಳವಸ್ತ್ರ ಅವರ ಕಾಲುಗಳನ್ನು ಪೂರ್ಣವಾಗಿ ಮರೆಮಾಚದೇ ದಂತದ ಕೊರಡುಗಳಂತಿರುವ ಅವರ ಸುಂದರ ಕಾಲುಗಳನ್ನು ಪ್ರಕಟಿಸುತ್ತಿತ್ತು. ಇದಕ್ಕೆ ಅವರು ಧರಿಸಿದ್ದ ಎರಡೇ ಅಡ್ಡಪಟ್ಟಿಗಳಿರುವ ಕಪ್ಪು ಪಾದರಕ್ಷೆ ಪೂರ್ಣವಾಗಿ ಸಹಕರಿಸುತ್ತಿತ್ತು. ಕುತ್ತಿಗೆಗೆ ದುಬಾರಿಯಾದ ಒಂದೇ ಒಂದು ನಕ್ಲೇಸ್ ಧರಿಸಿದ್ದು, ಇದೂ ಸಹಾ ಕಪ್ಪು ಬಣ್ಣದ ಅಂಚುಗಳನ್ನು ಹೊಂದಿತ್ತು, ಅಲ್ಲದೆ ಅವರು ಛಾಯಾಚಿತ್ರಕಾರರಿಗೆ ಚಿತ್ರ ತೆಗೆಯಲು ನೀಡಿದ ಭಂಗಿಯೇ ಅತಿ ಮನಮೋಹಕವಾಗಿದ್ದು ಭಾರತದ ಹೆಸರನ್ನು ವಿಶ್ವಮಟ್ಟದಲ್ಲಿ ಮಿಂಚಿಸಿತು.



Click it and Unblock the Notifications