Latest Updates
-
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು?
ಇಂಡಿಯನ್ ಐಡಲ್ ಜ್ಯೂನಿಯರ್ ಸೆಟ್: ಕಣ್ಮನ ಸೆಳೆದ ಸೋನಾಕ್ಷಿ
ಬಾಲಗಾಯಕರಲ್ಲಿ ಅತ್ಯುತ್ತಮ ತಾರೆಯರನ್ನು ಗುರುತಿಸುವ ಇಂಡಿಯನ್ ಐಡಲ್ ಜ್ಯೂನಿಯರ್ ಸ್ಪರ್ಧೆಯ ಇದು ಮೂರನೆಯ ವರ್ಷವಾಗಿದ್ದು ಪ್ರಾಥಮಿಕ ಆಯ್ಕೆಯ ಹಂತಗಳು ಮುಗಿದು ಈಗ ಅಂತಿಮ ಹಂತದತ್ತ ಸಾಗುತ್ತಿದೆ. ಇದುವರೆಗೆ ವೆಬ್ ಚಾಟಿಂಗ್ ಮೂಲಕ ಮಕ್ಕಳೊಂದಿಗೆ ಒಡನಾಟದಲ್ಲಿದ್ದ ಹಿಂದಿಯ ಖ್ಯಾತ್ರ ನಟಿ ಸೋನಾಕ್ಷಿ ಸಿನ್ಹಾ ಈ ವಾರ ಮಕ್ಕಳೊಂದಿಗೆ ಸ್ವತಃ ಭೇಟಿಯಾಗಿ ಸಂತೋಷದ ಕ್ಷಣಗಳನ್ನು ಕಳೆದರು.
ಈ ಸಂದರ್ಭದಲ್ಲಿ ಅವರು ಧರಿಸಿದ ಎರಡು ದಿರಿಸುಗಳು ಗಮನ ಸೆಳೆದವು. ಮೊದಲು ಭೇಟಿಯಲ್ಲಿ ನಿಖಿಲ್ ಥಾಂಪಿಯವರ ವಿನ್ಯಾಸದ ಬಿಗಿಯಾದ ಗಾಢ ಹಸಿರು ಬಣ್ಣದ ಪೆನ್ಸಿಲ್ ಟಾಪ್ ಸ್ಕರ್ಟ್ ಮತ್ತು ಗಿಡ್ಡವಾದ ಜಾಕೆಟ್ ಮೂಲಕ ಗಮನ ಸೆಳೆದರೆ ಎರಡನೆಯ ಭೇಟಿಯಲ್ಲಿ ಅಪ್ಪಟ ಭಾರತೀಯ ಉಡುಗೆ ಧರಿಸಿ ಮನಸೂರೆಗೊಂಡರು.

ಈ ಬಾರಿ ಅವರು ಮಕ್ಕಳೊಂದಿಗೆ ಕೇವಲ ಮಾತುಕತೆಯಾಡುವಲ್ಲಿ ತಮ್ಮ ಭೇಟಿಯನ್ನು ಮೊಟಕುಗೊಳಿಸದೇ ಅವರೊಂದಿಗೆ ಹಾಡಿ, ಕುಣಿದು ಕುಪ್ಪಳಿಸಿ ಸಂತಸ ಹಂಚಿಕೊಂಡರು. ಈ ಸಂದರ್ಭದಲ್ಲಿ ಅವರು ಧರಿಸಿದ್ದ ದಿರಿಸು ಮನೀಷ್ ಮಲ್ಹೋತ್ರಾರವರು ವಿನ್ಯಾಸಗೊಳಿಸಿದ್ದ ಅಪ್ಪಟ ಹಳದಿ ಬಣ್ಣದ ಲೆಹೆಂಗಾ.
ವಾಸ್ತವವಾಗಿ ಇದು ಬಿಳಿ ಮತ್ತು ಹಳದಿ ಬಣ್ಣಗಳನ್ನು ಕರ್ಣರೇಖೆಯಲ್ಲಿ ವಿಂಗಡಿಸಿದ್ದ ಇಬ್ಬಣ್ಣದ ಪೋಷಾಕು ಆಗಿದ್ದು ವಿಂಗಡಿಸಿದ ರೇಖೆ ಫಳಫಳ ಹೊಳೆಯುವ ಬೆಳ್ಳಿಯ ಬಣ್ಣದ ಪಟ್ಟಿಯಾಗಿದ್ದು ವಿಶಿಷ್ಟ ಆಕರ್ಷಣೆ ನೀಡಿತ್ತು. ಇದಕ್ಕೆ ಪೂರಕವಾಗಿ ಹಳದಿ ಬಣ್ಣದ್ದೇ ಆದ ಅರ್ಧತೋಳಿನ ಸಾದಾ ರವಿಕೆಯಲ್ಲಿ ಯಾವುದೇ ಕುಸುರಿ ಅಥವಾ ವಿಶೇಷ ವಿನ್ಯಾಸವಿರಲಿಲ್ಲ. ಇದಕ್ಕೆ ಕಾರಣ ಅವರು ತೊಟ್ಟಿದ್ದ ಪಾರದರ್ಶಕ ದಾವಣಿ. ಈ ದಾವಣಿಯ ಅಷ್ಟೂ ಅಗಲಕ್ಕೆ ಹೊಳೆಯುವ ಬೆಳ್ಳಿಯಬಣ್ಣದ ದುಪ್ಪಟ್ಟಾ ರವಿಕೆಯಲ್ಲಿ ವಿನ್ಯಾಸವಿಲ್ಲದ ಕೊರತೆಯನ್ನು ನೀಗಿಸಿತ್ತು.
ಅವರು ಧರಿಸಿದ ದುಪ್ಪಟ್ಟಾ ಅವರ ಪೋಷಾಕಿನ ಅಂಚು ಮತ್ತು ನಡುವಿನ ಕರ್ಣಭಾಗದಲ್ಲಿ ಬಳಸಲಾಗಿದ್ದ ಬೆಳ್ಳಿಬಣ್ಣದ ಪಟ್ಟಿಗಳ ಬಣ್ಣಕ್ಕೆ ಸರಿಹೊಂದುವಂತಿದ್ದು ಹಳದಿ ಮತ್ತು ಬೆಳ್ಳಿಯ ಸಂಗಮ ಸೂರ್ಯಾಸ್ತವನ್ನು ನೆನೆಸುವಂತಿತ್ತು. ಅವರ ದಾವಣಿಯಲ್ಲಿಯೇ ಹೊಳೆಯುವ ಬೆಳ್ಳಿಗಳಿದ್ದುದರಿಂದ ಅವರು ದೇಹದ ಮೇಲೆ ಇನ್ನಾವುದೇ ಆಭರಣಗಳನ್ನು ತೊಡದೇ ಕೇವಲ ಕೈಗೊಂದು ಚಿನ್ನದ ಬಣ್ಣದ ಕಡಗ ಮತ್ತು ಕಿವಿಗೆ ಕೊಂಚ ದೊಡ್ಡದೇ ಆದ ಕಿವಿಯೋಲೆಗಳನ್ನು ಧರಿಸಿದ್ದರು. ಇದಕ್ಕೆ ಪೂರಕವಾಗಿ ಅವರ ಕಣ್ಣಿಗೂ ಬೆಳ್ಳಿಯ ಲೇಪನದ ಅಲಂಕಾರ ಮಾಡಲಾಗಿದ್ದು ಅವರೇ ರೂಪದರ್ಶಿಯಾಗಿರುವ ಡೋ ಕಣ್ಣಿನ ಮೇಕಪ್ ಅನ್ನೂ ಬಳಸಲಾಗಿತ್ತು. ಅಪ್ಪಟ ದೇಸಿ ಉಡುಗೆಯಲ್ಲಿ ಅವರ ಸೌಂದರ್ಯ ಅಪ್ರತಿಮವಾಗಿತ್ತು.



Click it and Unblock the Notifications

