Latest Updates
-
ಬಿಸಿಲ ಬೇಗೆಯಲ್ಲಿ ಡೇಟಿಂಗ್ ಪ್ಲಾನ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಬೇಡಿ! -
ಬಿಸಿಗಾಳಿಯ ಅಬ್ಬರ: ಮನೆಯನ್ನು ತಂಪಾಗಿಡಲು ಮತ್ತು ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿವೆ ಸರಳ ಉಪಾಯಗಳು -
ಬಿಸಿಲಿನ ತಾಪಕ್ಕೆ ಸುಸ್ತಾಗಿದ್ದೀರಾ? ಹೀಟ್ವೇವ್ನಿಂದ ಪಾರಾಗಲು ಈ ಆಹಾರ ಕ್ರಮ ಪಾಲಿಸಿ -
ಫ್ಯಾಶನ್ ರೆವಲ್ಯೂಷನ್ ಡೇ: ಬಟ್ಟೆಯನ್ನು ಉಲ್ಟಾ ಧರಿಸಿ ಫೋಟೋ ಹಾಕುತ್ತಿರುವುದೇಕೆ? ಈ ಟ್ರೆಂಡ್ ಹಿಂದಿದೆ ದೊಡ್ಡ ಕಥೆ! -
ಬಿಸಿಲ ಅಲೆ: ಸುಡುವ ಬಿಸಿಲಿನಲ್ಲಿ ವ್ಯಾಯಾಮ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಉತ್ತರ ಭಾರತದ ಬಿಸಿಲ ಬೇಗೆ: ಮದುವೆ ಶಾಸ್ತ್ರಗಳೆಲ್ಲಾ ಈಗ ಸೂರ್ಯ ಮುಳುಗಿದ ಮೇಲೆ! -
ಬಿಸಿಗಾಳಿಯ ಆರ್ಭಟ: ನಿಮ್ಮ ಮನೆಯನ್ನು ಫ್ರಿಡ್ಜ್ನಂತೆ ತಂಪಾಗಿಡಲು ಇಲ್ಲಿವೆ ಅದ್ಭುತ ದೇಸಿ ಟಿಪ್ಸ್! -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ಹೊಡೆತದಿಂದ ಪಾರಾಗಲು ಮನೆಯಲ್ಲೇ ತಯಾರಿಸಿ ಈ ಜೀವ ರಕ್ಷಕ ಪಾನೀಯ! -
ಬಿಸಿಗಾಳಿಯ ಆರ್ಭಟ: ಸುಡುವ ಬಿಸಿಲಿನಿಂದ ಪಾರಾಗಲು ನೀವು ಮಾಡಲೇಬೇಕಾದ ಬದಲಾವಣೆಗಳೇನು? -
ಬಿಸಿಗಾಳಿಯ ಆರ್ಭಟ: ನಿಮ್ಮ ಬೆಳಗಿನ ವ್ಯಾಯಾಮದ ದಿನಚರಿಯಲ್ಲಿ ಈ ಬದಲಾವಣೆ ಮಾಡಿಕೊಳ್ಳಿ
ಚಿತ್ತಾರದ ಉಡುಗೆಯಲ್ಲಿ ಬಿಟ್ಟ ಕಣ್ಣು ಬಿಟ್ಟಂತೆ ಮಾಡಿದ ಸೋನಾಕ್ಷಿ!
ಇತ್ತೀಚೆಗೆ ದೆಹಲಿಯಲ್ಲಿ ತಮ್ಮ ಚಿತ್ರ 'ತೇವರ್' ನ ಪ್ರಚಾರಕ್ಕಾಗಿ ಆಗಮಿಸಿದ್ದ ನಟಿ ಸೋನಾಕ್ಷಿ ಸಿನ್ಹಾ ತಮ್ಮ ವಿಶೇಷ ಉಡುಗೆಯೊಡನೆ ನೆರದವರ ಗಮನ ಸೆಳೆದರು. ರಾತ್ರಿ ನಡೆದ ಈ ಕಾರ್ಯಕ್ರಮಕ್ಕೆ ಜಗಮಗಿಸದ ದಟ್ಟ ವರ್ಣದ ಉಡುಗೆ ಅವರ ಮೈಕಟ್ಟಿಗೆ ಹೆಚ್ಚಿನ ಮೆರುಗು ನೀಡಿತ್ತು.
ಇದಕ್ಕೂ ಮೊದಲು ರಾತ್ರಿ ನಡೆಯುವ ಹಲವು ಕಾರ್ಯಕ್ರಮಗಳಿಗೆ ಅವರು ಗಾಢವರ್ಣದ ಉಡುಗೆಗಳನ್ನೇ ತೊಟ್ಟಿದ್ದರೂ ಇಂದಿನ ಉಡುಗೆ ಮಾತ್ರ ಅದಕ್ಕಿಂತಲೂ ಹೆಚ್ಚು ಆಕರ್ಷಕವಾಗಿತ್ತು. ಅವರ ದೇಹವನ್ನು ಅಪ್ಪಿ ಹಿಡಿದಿದ್ದ ಮೇಲ್ವಸ್ತ್ರ ಸಪಾಟಾಗಿದ್ದ ಹೊಟ್ಟೆಯನ್ನು ಪ್ರದರ್ಶಿಸುವಂತೆ ಮಾಡಿ ಅವರ ಮೈಮಾಟವನ್ನು ಇನ್ನಷ್ಟು ಆಕರ್ಷಕವಾಗಿಸಿತ್ತು.

ಈ ಉಡುಗೆಯಲ್ಲಿ ಅತ್ಯಂತ ಆತ್ಮವಿಶ್ವಾಸದಲ್ಲಿ ಜನರೊಂದಿಗೆ ಬೆರೆಯುತ್ತಿದ್ದ ಅವರು ಕ್ಯಾಮರಾ ಕಣ್ಣಿಗೆ ಹಲವು ಕೋನಗಳಲ್ಲಿ ಭಿನ್ನವಾದ ಭಂಗಿಗಳಲ್ಲಿ ಕಂಡುಬಂದರು. ಅಗತ್ಯವಿದ್ದಷ್ಟೇ ಮುಖದ ಮೇಕಪ್ ಬಳಸಿದ ಅವರು ತಮ್ಮ ಸಹಜ ಸೌಂದರ್ಯದೊಂದಿಗೆ ನೆರೆದವರ ಗಮನ ಸೆಳೆಯಲು ಸಮರ್ಥರಾದರು.
ಕಂದು ಮತ್ತು ಕಪ್ಪು ಚೌಕುಳಿ ವಿನ್ಯಾಸದ ಕೆಳಉಡುಪನ್ನು ಕರ್ಣರೇಖೆಗಳ ಮಾದರಿಯಲ್ಲಿ ಹೊಲಿಯಲಾಗಿದ್ದು ವಿಶೇಷ ಕಳೆ ನೀಡಿತ್ತು. ಇದಕ್ಕೆ ಪೂರಕವಾಗಿ ಅವರು ಧರಿಸಿದ್ದ ಅರ್ಧ ಪಾದಗಳನ್ನು ಆವರಿಸಿದ ಡಿ.ಆರ್ಸೆಯವರು ವಿನ್ಯಾಸಗೊಳಿಸಿದ್ದ ಚಪ್ಪಟೆಯಾದ ಕಪ್ಪು ಪಾದರಕ್ಷೆಗಳೂ ಮನಸೆಳೆಯುತ್ತಿತ್ತು. ಗಾಢಗುಲಾಬಿ ಬಣ್ಣದ ಉಡುಪಿನಲ್ಲಿ ಕಣ್ಮನ ಸೆಳೆದ ನೇಹಾ ಧೂಪಿಯಾ
ಅವರ ಕೆಳಉಡುಪು ಪಾದಗಳ ಬಳಿ ಹಲವು ನೆರಿಗೆಗಳನ್ನು ಹೊಂದಿದ್ದು ವಿಶೇಷ ಆಕರ್ಷಣೆ ಹೊಂದಿತ್ತು. ಮೇಲುಡುಪಿನ ಮೇಲೆ ಧರಿಸಿದ್ದ ಪೂರ್ಣತೋಳುಗಳ ಚರ್ಮದ ಹೊರ ಜ್ಯಾಕೆಟ್ ಸಹಾ ರಾತ್ರಿಯ ಕಾರ್ಯಕ್ರಮಕ್ಕೆ ಪೂರಕವಾಗಿತ್ತು. ರಾತ್ರಿಯ ಹೊತ್ತಿನಲ್ಲಿ ಬಿಸಿಲಿನ ಕನ್ನಡಕವನ್ನು ಧರಿಸುವುದು ಕೊಂಚ ಆಭಾಸ ಎನಿಸಿದರೂ ಅವರು ತಮ್ಮ ಕುತ್ತಿಗೆಯ ಆಭರಣಕ್ಕೆ ಅದನ್ನು ನೇತುಹಾಕಿ ನಿಶ್ಚಿಂತರಾಗಿದ್ದರು.
ತಮ್ಮ ಕೂದಲಿಗೆ ಕಂದು ಬಣ್ಣದ ಮೆರುಗು ನೀಡಿದ್ದ ಅವರು ಉಗುರುಗಳಿಗೆ ಮಾತ್ರ ಅಪ್ಪಟ ಬಿಳಿಯ ಉಗುರುಬಣ್ಣ ಹಚ್ಚಿದ್ದರು. ಒಂದು ಸರಳವಾದ ಆದರೆ ಒಂದು ಬೆರಳಿಗೆ ಕೊಂಚ ದೊಡ್ಡದೇ ಅನ್ನಿಸುವ ಉಂಗುರ ಮತ್ತು ಕುತ್ತಿಗೆಯ ಸರವನ್ನು ಬಿಟ್ಟರೆ ಬೇರೆ ಯಾವುದೇ ಹೆಚ್ಚಿನ ಆಭರಣಗಳನ್ನು ಧರಿಸದ ಅವರು ತಮ್ಮ ಸಹಜ ಸೌಂದರ್ಯದಿಂದಲೇ ಎಲ್ಲರ ಮನಸೆಳೆದರು. ತಮ್ಮ ಚಿತ್ರದ ಬಗ್ಗೆ ಕೆಲ ಮಾತನ್ನಾಡಿದ ಅವರು ಚಿತ್ರವನ್ನು ವೀಕ್ಷಿಸಲು ಕರೆನೀಡಿದರು.



Click it and Unblock the Notifications

