Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಗಂಧರ್ವ ಲೋಕದಲ್ಲಿ ತೇಲುವಂತೆ ಮಾಡಿದ ತ್ರಿಶಾ ಕೃಷ್ಣನ್!
ತಾರಾ ಮೇಳವೇ ನಡೆದ ಸೈಮಾ ಅವಾರ್ಡ್ಸ್ (SIIMA Awards) ಸಮಾರಂಭ, ಎರಡು ದಿನಗಳ ಕಾಲ ನಡೆಯಿತು. ಇದು ಮುಗಿದ ಮೇಲೆ ಬಹುಮಾನ ವಿಜೇತರು ಮತ್ತು ಆಗಮಿಸಿದ ಅತಿಥಿಗಳ ಸಲುವಾಗಿ ಒಂದು ಸಂತೋಷಕೂಟವನ್ನು ಆಯೋಜಿಸಲಾಗಿತ್ತು. ದಕ್ಷಿಣ ಭಾರತದ ಅಗ್ರ ಗಣ್ಯ ತಾರೆಯರು ಈ ಸಮಾರಂಭದಲ್ಲಿ ಪಾಲ್ಗೊಂಡು ಸೈಮಾ ಅವಾರ್ಡ್ಸ್ 2015 ಅನ್ನು ರಸಮಯ ಘಳಿಗೆಗಳಾಗಿ ಪರಿವರ್ತಿಸಿದರು.
ಉದ್ಯಮದಲ್ಲಿರುವ ತಮ್ಮ ಸ್ನೇಹಿತರ ಜೊತೆಗೆ ಒಟ್ಟಿಗೆ ಬೆರೆಯುವ ಕ್ಷಣಗಳನ್ನು ಇದು ಒದಗಿಸಿಕೊಟ್ಟಿತು ಎಂದರೆ ತಪ್ಪಾಗಲಾರದು. ಈ ಸಮಾರಂಭದ ನಂತರದಲ್ಲಿ ನಡೆದ ಕೂಟದಲ್ಲಿ ನಮಗೆ ತ್ರಿಶಾ ಕೃಷ್ಣನ್ ಕಂಡು ಬಂದರು. ಈ ನಟಿಯನ್ನು ನೋಡಿದ ಕೂಡಲೆ ನಮ್ಮ ಗಮನ ಸೆಳೆದಿದ್ದು, ಆಕೆ ಧರಿಸಿದ್ದ ಫ್ಲೋರಲ್ ಪ್ರಿಂಟ್ ಫ್ಲೇರಡ್ ಫೇರಿ ಟೇಲ್ ಸ್ಕರ್ಟ್. ತ್ರಿಷಾರವರು ಮ್ಯಾಡಿಸನ್‌ರವರು ವಿನ್ಯಾಸ ಮಾಡಿದ್ದ ವೈಟ್ ಅಂಡ್ ಪಿಂಕ್ ಫ್ಲೋರಲ್ ಪ್ರಿಂಟ್ ಕ್ನೀ ಲೆಂತ್ ಫ್ಲೇರಡ್ ಸ್ಕರ್ಟ್ ಮತ್ತು ಸುಂದರವಾದ ಡಾರ್ಕ್ ಪಿಂಕ್ ಕ್ರಾಪ್ ಟಾಪ್ ಧರಿಸಿದ್ದರು.
ನೋಡಲು ಸುಂದರವಾದ ಈ ಫೇರಿ ಟೇಲ್ ಸ್ಕರ್ಟ್ ಮೇಲೆ ಗುಲಾಬಿಗಳ ಪ್ರಿಂಟ್ ತುಂಬಾ ಚೆನ್ನಾಗಿತ್ತು. ತ್ರಿಷಾರವರು ಮ್ಯಾಡಿಸನ್‌ರವರ ರೋಸ್ ಪ್ರಿಂಟ್ ಸ್ಕರ್ಟ್ ಧರಿಸಿ, ನೋಡುಗರ ಆಕರ್ಷಣೆಯ ಕೇಂದ್ರಬಿಂದುವಾಗಿದ್ದರು. ಆಕೆ ತನ್ನ ಚಿಕ್ ಲುಕ್‌ಗೆ ಮೆರಗು ನೀಡುವಂತಹ ಆಕ್ಸೆಸರಿಗಳನ್ನು ಧರಿಸಿದ್ದಳು. ಅವುಗಳಲ್ಲಿ ಪರ್ಲ್ ಡ್ರಾಪ್ ನೆಕ್ಲೇಸ್, ಪರ್ಲ್ ಸ್ಟಡ್ಡೆಡ್ ಈವ್‌ನಿಂಗ್ ಇಯರ್ ರಿಂಗ್‌ಗಳು ಮತ್ತು ಚಿನ್ನದ ಬ್ರೇಸ್ ಲೇಟ್ ಇತ್ತು.

ಈ ಪಾರ್ಟಿ ಲುಕ್ ಅನ್ನು ತ್ರಿಷಾರವರು ಪಂಪ್‌ಗಳು, ಸೈಡ್ ಸ್ವೆಫ್ಟ್ ಪಫ್ಫ್‌ಡ್ ಹೇರ್‌ಡೋ ಮತ್ತು ಸ್ಮೋಕಿ ಐ ಮೇಕಪ್ ಜೊತೆಗೆ ಪೂರ್ಣಗೊಳಿಸಿದ್ದರು. ಈ ನಟಿಯು ಎರಡೂ ದಿನ ಸಮಾರಂಭದಲ್ಲಿ ಕಾಣಿಸಿಕೊಳ್ಳಲಿಲ್ಲವಾದರೂ, ಎರಡನೇ ದಿನ ನೋಡುಗರ ಪ್ರಧಾನ ಆಕರ್ಷಣೆಯಾಗಿ ಎರಡು ಲುಕ್‌ಗಳಲ್ಲಿ ಕಾಣಿಸಿಕೊಂಡರು. ಎರಡನೆ ದಿನ ಸೈಮಾ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಈಕೆ ಮನೀಷ್ ಮಲ್ಹೋತ್ರಾರವರು ವಿನ್ಯಾಸಗೊಳಿಸಿದ್ದ ಹೊಳೆಯುವ ಸುಂದರ ಉಡುಗೆಗಳನ್ನು ಧರಿಸಿ ಎಲ್ಲರನ್ನೂ ಆಕರ್ಷಿಸಿದಳು.
ಈ ನಟಿಯು ಲೇಸ್ ಎಂಬ್ರಾಯಿಡಿಂಗ್ ಮಾಡಲಾದ ಬಣ್ಣ ಬಣ್ಣದ ಲಾಂಗ್ ಫ್ಲೇರಡ್ ಸ್ಕರ್ಟ್ ಜೊತೆಗೆ ಮಿನುಗುವ ಹೊಂಬಣ್ಣದ ಕ್ರಾಪ್ ಟಾಪ್ ಸಹ ಧರಿಸಿದ್ದರು. ಈ ಟಾಪ್ ಕೆನೆ ಹಳದಿ ಫ್ಲೋರಲ್ ಮೋಟಿಫ್‌ಗಳನ್ನು ಹೊಂದಿತ್ತು. ಈಕೆಯು ಇದಕ್ಕೆ ಒಪ್ಪುವ ಎಡ್ಜಿಸೈನ್ ಕಾಕ್‌ಟೇಲ್ ರಿಂಗ್ ಮತ್ತು ಸ್ಟಡ್ಡೆಡ್ ಇಯರ್ ರಿಂಗ್‌ಗಳನ್ನು ಧರಿಸಿದ್ದಳು. ತ್ರಿಷಾರವರಿಗೆ ಸ್ಟೈಲ್ ಮಾಡಿದ ಸ್ಟೈಲಿಷ್ಟ್ ನೀರಜಾ ಕೋನಾರವರು, ಸೈಮಾ ಅವಾರ್ಡ್ಸ್ 2015, ರೆಡ್ ಕಾರ್ಪೆಟ್ ಮೇಲೆ ನಡೆದು ಬಂದ ಉತ್ತಮ ಡ್ರೆಸ್ ಆದವರಲ್ಲಿ ತ್ರಿಷಾ ಸಹ ಒಬ್ಬರಾಗಿದ್ದರು.



Click it and Unblock the Notifications

