Latest Updates
-
ಟೆಲಿಗ್ರಾಂ ಬಳಕೆದಾರರೇ ಗಮನಿಸಿ: ಸೇವೆ ಆರಂಭವಾದರೂ ಈ ಬದಲಾವಣೆ ಮರೆಯದಿರಿ! -
ಬಿಸಿಗಾಳಿಯ ಎಚ್ಚರಿಕೆ: ಅಡುಗೆ ಮಾಡದೆಯೇ ದೇಹಕ್ಕೆ ತಂಪು ನೀಡುವ ಪ್ರೋಟೀನ್ ಆಹಾರಗಳಿವು! -
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ
ಎಐಎಫ್‌ಡಬ್ಲ್ಯು: ಕಣ್ಮನ ಸೆಳೆದ ಸಂಚಿತಾರವರ ವಸ್ತ್ರ ವಿನ್ಯಾಸ
ಸಾಂಪ್ರಾದಾಯಿಕ ಉಡುಗೆಗೂ ಭಿನ್ನವಾದ ಮತ್ತು ವಿಚಿತ್ರವೆನಿಸುವ ಉಡುಗೆಗಳ ವಿನ್ಯಾಸದಿಂದ ಗಮನ ಸೆಳೆದಿರುವ ಸಂಚಿತಾ ಅಜ್ಜಂಪುರ ರವರ ವಿನ್ಯಾಸಗಳು ಈ ವರ್ಷದ ಅಮೆಜಾನ್ ಇಂಡಿಯಾ ಫ್ಯಾಷನ್ ವೀಕ್ 2015ರಲ್ಲಿ ಅಚ್ಚರಿಗಿಂತಲೂ ಹೆಚ್ಚಾಗಿ ಬೆರುಗು ಮೂಡಿಸುತ್ತವೆ. ಸಂಚಿತಾರವರು ಮುಂಬೈಯಲ್ಲಿ ಜನಿಸಿದ್ದರೂ ಮೂರು ವರ್ಷದವರಿದ್ದಾಗಲೇ ತಮ್ಮ ಪಾಲಕರ ಜೊತೆ ಯೂರೋಪ್ ದೇಶಕ್ಕೆ ವಲಸೆ ಹೋಗಿ ನೆಲೆಸಿದರು.
ನಂತರ ತಮ್ಮ ಜೀವನದ ಹೆಚ್ಚಿನ ಸಮಯವನ್ನು ಅಲ್ಲೇ ಕಳೆದರು. ಇಂಗ್ಲೆಂಡ್ ಮತ್ತು ವಿಯೆನ್ನಾದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಅವರು ಕಲಾ ವಿಷಯವನು ಆಯ್ದುಕೊಂಡು Chambre Syndicale de la Haute Couture Parisienne ಎಂಬ ಸಂಸ್ಥೆಯಲ್ಲಿ ಪದವಿ ಪಡೆದರು. ಬಳಿಕ ಇಟಲಿನ ಮಿಲಾನ್ ನಗರದ ಡೋಮಸ್ ಅಕ್ಯಾಡೆಮಿ ಯಲ್ಲಿ ಫ್ಯಾಷನ್ ಡಿಸೈನ್ ವಿಷಯದಲ್ಲಿ ಮಾಸ್ಟರ್ ಪದವಿಯನ್ನು ಪಡೆದರು.

ನಂತರ ಅವರು ಹಲವು ಖ್ಯಾತನಾಮರೊಂದಿಗೆ ಕಾರ್ಯನಿರ್ವಹಿಸಿ ಅನುಭವ ಪಡೆದರು. 2005ರಲ್ಲಿ ಬೆಂಗಳೂರಿನ ಲೀಲಾ ಗ್ಯಾಲೇರಿಯಾದಲ್ಲಿ ತಮ್ಮ ಸ್ವಂತದ್ದೇ ಆದ 'ಸಂಚಿತಾ' ಎಂಬ ಛಾಪನ್ನು ಹೊಂದಿರುವ ಸಂಸ್ಥೆಯನ್ನು ಸ್ಥಾಪಿಸಿದರು. ವಿದೇಶದಲ್ಲಿ ಬೆಳೆದರೂ ಭಾರತದ ಬಾಂಧವ್ಯವನ್ನು ಮರೆಯಲಾಗದ ಆಕೆ ತಮ್ಮ ವಿನ್ಯಾಸಗಳಲ್ಲಿ ವಿದೇಶೀ ಮತ್ತು ಭಾರತೀಯ ವಿನ್ಯಾಸಗಳ ಬೆಸುಗೆಯನ್ನು ವಿಶಿಷ್ಟವಾಗಿ ಬಳಸಿಕೊಂಡರು. ಅವರ ವಿನ್ಯಾಸಗಳು ವಿಶ್ವಪರ್ಯಟನೆ ಮಾಡುವ ದಾರ್ಶನಿಕನಿಗೆ ಸೂಕ್ತವಾಗಿರುವಂತಿವೆ. ಎಐಎಫ್‌ಡಬ್ಲ್ಯು: ನಶೆ ಏರಿಸಿದ ನಿಕಿತಾರವರ ವಸ್ತ್ರ ವಿನ್ಯಾಸ
ಅವರ ವಿನ್ಯಾಸಗಳು ಸುಲಭವಾಗಿ ಧರಿಸುವಂತಿದ್ದು ಆಧುನಿಕ ಪರ್ಯಟಕನಿಗೆ ಹೇಳಿ ಮಾಡುವಂತಿದ್ದು, ಜೊತೆಗೆ ವ್ಯಕ್ತಿಯ ವ್ಯಕ್ತಿತ್ವಕ್ಕೆ ವಿಶಿಷ್ಟ ಮೆರುಗು ನೀಡುವಂತಿತ್ತು. ಈ ವಾರದ ಅಮೆಜಾನ್ ಇಂಡಿಯಾ ಫ್ಯಾಷನ್ ವೀಕ್ 2015 ಪ್ರದರ್ಶನದಲ್ಲಿ ಪ್ರದರ್ಶಿತಗೊಂಡ ಸಂಚಿತಾರ ವಿನ್ಯಾಸಗಳು ಅಚ್ಚರಿಗಿಂತಲೂ ಹೆಚ್ಚಾಗಿ ಬೆರುಗು ಮೂಡಿಸಿದವು. ಇದರಲ್ಲಿ ಪ್ರಮುಖವಾದ ಕೆಲವನ್ನು ಆಯ್ದು ಇಲ್ಲಿ ನೀಡಲಾಗಿದೆ.
ಬೆರುಗು ಮೂಡಿಸಲು ಪ್ರಮುಖವಾದ ಕಾರಣ ಈ ರೂಪದರ್ಶಿ ಧರಿಸಿರುವ ವಿಶಾಲವಾದ ಟೊಪ್ಪಿ! ಇದು ರೂಪದರ್ಶಿಯ ದೇಹದ ಕೆಲಭಾಗವನ್ನು ಮರೆಮಾಚಿ ನಿಗೂಢತೆಯನ್ನು ಹೆಚ್ಚಿಸುತ್ತದೆ. ಹೊಟ್ಟೆಯ ಭಾಗದಲ್ಲಿರುವ ಅರ್ಧಚಂದ್ರಾಕೃತಿ ತಲೆಕೆಳಗಾಗಿರುವಷ್ಟೂ ಸ್ಥಳದಲ್ಲಿ ಪಾರದರ್ಶಕವಾಗಿದ್ದು ಕಂಡೂ ಕಾಣದಂತೆ ರೂಪದರ್ಶಿಯ ಅಂಗಗಳು ನಿಗೂಢತೆಯನ್ನು ಇನ್ನಷ್ಟು ಹೆಚ್ಚಿಸುತ್ತವೆ.
ಬಹುಭಾಗ ತೆರೆದಿರುವ ವಕ್ಷಸ್ಥಲ ಮತ್ತು ಸಂಪೂರ್ಣವಾಗಿ ಮರೆಯಾಗಿರುವ ಕೈ ಮತ್ತು ಹಸ್ತಗಳು, ಮೊಣಕಾಲ ಕೆಳಗೆ ತೋರುವ ಶರಾಯಿ ಸಂಚಿತಾರ ವಿನ್ಯಾಸದ ಬಗ್ಗೆ ಇದ್ದ ಬೆರಗನ್ನು ಇನ್ನಷ್ಟು ಹೆಚ್ಚಿಸುತ್ತದೆ.
ಭಾರತೀಯ ಸಂಸ್ಕೃತಿಯ ಪ್ರತೀಕವಾದ ಕರಕುಶಲ ಕಲೆಯ ಮೂಲಕ ಭಾರತೀಯ ಕಲಾವಿದರ ಕೈಚಳಕವನ್ನು ಹೊಂದಿರುವ ಬಟ್ಟೆಗಳ ಚಿಕ್ಕ ಚಿಕ್ಕ ತುಂಡುಗಳನ್ನು ಬಳಸಿ ಪಾಶ್ಚಾತ್ಯ ವಿನ್ಯಾಸದಲ್ಲಿ ಅಳವಡಿಸಿಕೊಂಡಿರುವ ಸಂಚಿತಾರ ಜಾಣ್ಮೆಗೆ ಮೆಚ್ಚಲೇ ಬೇಕು. ಎಐಎಫ್‌ಡಬ್ಲ್ಯು: ಸಂಜಯ್‌ರವರ ಕೈಚಳಕಕ್ಕೆ ಭೇಷ್ ಎನ್ನಲೇಬೇಕು
ಜ್ಯಾಮಿತಿಯ ಆಯತಗಳ ಮುದ್ರಣವಿರುವ ಈ ತೊಡುಗೆ ರೂಪದರ್ಶಿಯ ದೇಹಲಾವಣ್ಯಕ್ಕೆ ನಲುಗಿ ತನ್ನ ಆಯತಾಕಾರವನ್ನೇ ವಿಕಾರಗೊಳಿಸಿರುವ ಈ ವಿನ್ಯಾಸ ಬೆರುಗನ್ನು ಹೆಚ್ಚಿಸುತ್ತದೆ. ಭುಜಗಳು ಮತ್ತು ಎದೆಭಾಗವನ್ನು ತೆರೆದಿದ್ದು ಕರ್ಣರೂಪದಲ್ಲಿ ಒಂದು ಹೊಲಿಗೆಯಿದ್ದು ಕೆಳಭಾಗದಲ್ಲಿರುವ ಕಪ್ಪುಭಾಗದ ಬಟ್ಟೆ ವಿನ್ಯಾಸಕ್ಕೆ ವಿಶಿಷ್ಟ ಮೆರುಗು ನೀಡುತ್ತದೆ.



Click it and Unblock the Notifications

