Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಎಐಎಫ್‌ಡಬ್ಲ್ಯು: ನಶೆ ಏರಿಸಿದ ನಿಕಿತಾರವರ ವಸ್ತ್ರ ವಿನ್ಯಾಸ
ಭಾರತದ ಅತ್ಯಂತ ಪ್ರತಿಷ್ಟಾತ್ಮಕ ವಿನ್ಯಾಸಗಾರರಲ್ಲಿ ನಿಕಿತಾ ಟಂಡನ್ ಸಹ ಒಬ್ಬರು. ಆಕೆ ಸ್ವತಃ ವಿನ್ಯಾಸಗಾರ್ತಿಯಾದ ತಮ್ಮ ತಾಯಿ ರೇಯ್ನು ಟಂಡನ್‌ರವರಿಂದ ಸ್ಫೂರ್ತಿಯನ್ನು ಪಡೆದು ಫ್ಯಾಷನ್ ಲೋಕಕ್ಕೆ ಕಾಲಿರಿಸಿ, ತನ್ನ ಕೈಚಳಕದ ಮೂಲಕವೇ ಎಲ್ಲರನ್ನೂ ಚಕಿತಗೊಳಿಸಿದವರು.
ನಿಕಿತಾರ ವಿನ್ಯಾಸದ ವಿಶೇಷತೆ ಏನೆಂದರೆ, ಅವರ ವಿನ್ಯಾಸಗಳಲ್ಲಿ ಕಲೆಯು ಅತ್ಯಂತ ಸುಂದರವಾಗಿ ಹೊರ ಹೊಮ್ಮಿರುತ್ತದೆ. ಭಾರತದಲ್ಲಿ ಹೊರಬಂದಿರುವ ಅತ್ಯುತ್ತಮವಾದ ವಿನ್ಯಾಸಗಳಲ್ಲಿ ಈಕೆಯ ಶ್ರಮವು ಸಹ ಅಡಗಿದೆ ಎಂಬುದು ಹೆಮ್ಮೆಯ ವಿಚಾರ. ಆಕೆಯ ವಿನ್ಯಾಸಗಳ ಮತ್ತೊಂದು ವಿಶೇಷತೆ ಅಡಗಿದೆ ಅದೇನೆಂದರೆ, ಈಕೆ ತನ್ನ ವಿನ್ಯಾಸಗಳಲ್ಲಿ ಪ್ರಾಚೀನ ಮತ್ತು ಆಧುನಿಕತೆ ಎರಡರ ಮಿಶ್ರಣವನ್ನು ಚೆನ್ನಾಗಿ ಅಳವಡಿಸಿಕೊಳ್ಳುತ್ತಾರೆ.

ಇಂದಿನ ಫ್ಯಾಷನ್‌ಗೆ ತಕ್ಕಂತೆ ಹಳೆಯ ವಿನ್ಯಾಸಗಳನ್ನು ಮಾರ್ಪಾಡು ಮಾಡುವ ಕಲೆಗಾರಿಕೆ ಇವರಿಗೆ ಸಿದ್ಧಿಸಿದೆ. ಈಕೆ ಹೆಂಗಳೆಯರ ಸ್ತ್ರೀ ಸಹಜ ಸ್ಫೂರ್ತಿಯನ್ನು ಉನ್ನತ ಮಟ್ಟಕ್ಕೆ ಏರಿಸುವ ಸಾಮರ್ಥ್ಯವನ್ನು ತಮ್ಮ ವಿನ್ಯಾಸಗಳ ಮೂಲಕಾ ಒದಗಿಸುತ್ತಾರೆ ಎಂಬುದು ಅವರ ಕುರಿತು ಇರುವ ಮೆಚ್ಚುಗೆ.
ಇಂತಹ ಸಾಮರ್ಥ್ಯವನ್ನು ಹೊಂದಿರುವ ನಿಕಿತಾ ಟಂಡನ್‌ರವರು ಅಮೆಜಾನ್ ಇಂಡಿಯಾ ಫ್ಯಾಷನ್ ವೀಕ್ ರಲ್ಲಿ ತಮ್ಮ ಅದ್ಭುತವಾದ ವಾಸ್ತುಶೈಲಿ ಮತ್ತು ಫ್ಯೂಚುರಿಸ್ಟಿಕ್ ವಿನ್ಯಾಸವನ್ನು ಪ್ರಸ್ತುತಪಡಿಸಿದ್ದರು. ಈ ವಿನ್ಯಾಸಗಳಲ್ಲಿ ಆಂತರಿಕವಾಗಿ ಅಡಗಿದ್ದ ಫ್ಲೋಯಿಂಗ್ ಫ್ಯಾಬ್ರಿಕ್ ಸ್ತ್ರೀ ಸಹಜ ಉಲ್ಲಾಸದ ಅಲೆಯನ್ನು ತೊಟ್ಟವರಲ್ಲಿ ಹೊಮ್ಮಿಸುವುದು ಅಕ್ಷರಶಃ ಸತ್ಯವಾಗಿತ್ತು. ಎಐಎಫ್‌ಡಬ್ಲ್ಯು: ಸಂಜಯ್‌ರವರ ಕೈಚಳಕಕ್ಕೆ ಭೇಷ್ ಎನ್ನಲೇಬೇಕು
ಇಂದು ನಾವು ಚರ್ಚಿಸುತ್ತಿರುವ ಮೊದಲ ವಿನ್ಯಾಸವು ಸುಂದರವಾದ ಹಾಲ್ಟರ್ ನೆಕ್ ಮ್ಯಾಕ್ಸಿ ಗೌನ್. ಇದನ್ನು ಮಾಮೂಲಿ ಮ್ಯಾಕ್ಸಿ ಗೌನ್ ಎಂದು ಪರಿಗಣಿಸಬಹುದಾಗಿತ್ತಾದರೂ, ಅದರ ಬಾಡಿಸ್ ಈ ವಿನ್ಯಾಸವನ್ನು ಮತ್ತೊಂದು ಮಟ್ಟಕ್ಕೆ ತೆಗೆದುಕೊಂಡು ಹೋಗಿತ್ತು. ಇದರ ಮೇಲೆ ಓವರ್ ಲ್ಯಾಪ್ ಆಗುವ ಫ್ಯಾಬ್ರಿಕ್ ಈ ಉಡುಗೆಯನ್ನು ಒಂದು ಸುಂದರ ವಸ್ತ್ರವಾಗಿ ಮಾಡಿತ್ತು. ಇದನ್ನು ನೋಡಿದಾಗ ಇದು ಇಡೀ ಉಡುಗೆಗೆ ಹೇಗೆ ಹೊಂದಾಣಿಕೆಯಾಗುತ್ತಿತ್ತು ಎಂಬುದು ಅರ್ಥವಾಗುತ್ತಿತ್ತು.
ಎರಡನೆಯ ಔಟ್‌ಫಿಟ್ ಪೆಪ್ಲಮ್ ಟಾಪ್ ಮತ್ತು ಶಾರ್ಟ್‌ಗಳ ಕಾಂಬೋ ಆಗಿತ್ತು. ಇದು ಕೇವಲ ಪೆಪ್ಲಮ್ ಮಾತ್ರ ಆಗಿರಲಿಲ್ಲ. ಇದರ ಹಿಂದೆ ಇಳಿಬಿಟ್ಟ ಕ್ಯಾಸ್ಕೇಡಿಂಗ್ ಟೇಲ್‌ಗಳು ಹಿಂದೆ ಹಾರಾಡುತ್ತ ಈ ಉಡುಗೆಗೆ ಮತ್ತಷ್ಟು ಮೆರಗನ್ನು ನೀಡಿದ್ದವು. ಇದರ ಮೇಲೆ ಇದ್ದ ಪ್ರಿಂಟ್ ಕ್ಲಾಸ್ಸಿಯಾಗಿದ್ದವು, ಈ ಇಂಡಿಗೊ ಬಣ್ಣವು ನಮ್ಮನ್ನು ಸ್ವರ್ಗದ ಕಲ್ಪನೆಯನ್ನು ಸಾಕಾರಗೊಳಿಸಿದ್ದವು.
ಮೂರನೆ ಉಡುಗೆಯು ಬಿಳಿಯ ಹೈ-ಲೋ ಉಡುಗೆಯಾಗಿತ್ತು. ನಾವು ಯಾವಾಗಲು ಬಿಳಿಯ ಉಡುಗೆಗೆ ಒಂದು ಹೆಚ್ಚಿನ ಮಹತ್ವವನ್ನು ನೀಡುತ್ತೇವೆ. ಆದರೆ ಈ ಬಿಳಿ ಉಡುಗೆಯಲ್ಲಿ ಇದ್ದ ಫ್ಯಾಬ್ರಿಕ್ ನೋಡಲು ಅತ್ಯಂತ ಸುಮದುರವಾಗಿತ್ತು. ಹಾಗಾಗಿ ಇದು ಸಾಮಾನ್ಯ ಬಿಳಿ ಉಡುಗೆಗಳಿಗಿಂತ ಒಂದು ಪಟ್ಟು ಮೇಲೆ ಇತ್ತು. ಇದರ ಪ್ಲಂಗಿಂಗ್ ನೆಕ್‌ಲೈನ್, ಬೆಲ್ಟ್ ಮತ್ತು ರಫಲ್‌ಗಳು ಈ ಬಟ್ಟೆಗೆ ಒಂದು ನಾಟಕೀಯ ಸ್ಪರ್ಶವನ್ನು ನೀಡಿದ್ದವು.
ಒಟ್ಟಾರೆಯಾಗಿ ಈ ಉಡುಗೆಯು ಒಂದು ಕಲೆಯೋ, ಅಥವಾ ಕೇವಲ ವಸ್ತ್ರವೇ ಎಂಬಂತಹ ಅನುಮಾನವನ್ನು ಹುಟ್ಟುಹಾಕುವಂತಿತ್ತು. ಒಂದು ಸ್ವೀಟ್‌ಹಾರ್ಟ್ ನೆಕ್‌ಲೈನ್ ಅನ್ನು ಯಾರು ತಾನೇ ಇಷ್ಟಪಡುವುದಿಲ್ಲ? ನಾವು ಸಹ ಇದನ್ನೇ ಇಷ್ಟಪಡುತ್ತೇವೆ. ಸುಂದರವಾದ ಕಾಲುಗಳು ಮತ್ತು ಕೈಗಳನ್ನು ಮತ್ತಷ್ಟು ಸುಂದರವಾಗಿ ತೋರಿಸುತ್ತಿದ್ದ, ಈ ಉಡುಗೆಯು ಸೌಂದರ್ಯಕ್ಕೆ ಹೊಸ ಭಾಷ್ಯ ಬರೆದಿದ್ದವು.
ಇದರ ಥೈ ಹೈ ಸ್ಲಿಟ್ ಈ ಉಡುಗೆಗೆ ಮತ್ತಷ್ತು ಮಾಧಕತೆಯನ್ನು ನೀಡಿದ್ದವು. ಜೊತೆಗೆ ಇದು ಎದೆಯ ಭಾಗವನ್ನು ಸಹ ಮತ್ತಷ್ಟು ಸ್ಲಿಮ್ ಆಗಿ ತೋರಿಸುತ್ತಿತ್ತು. ಈ ಎಲ್ಲಾ ಅಂಶಗಳು ನಿಮ್ಮ ಮನಸ್ಸಿಗೆ ಇಷ್ಟವಾಗಿ ಮನಸೂರೆಗೊಂಡಿದೆ ಅಲ್ಲವೇ? ಅಮೆಜಾನ್ ಇಂಡಿಯಾ ಫ್ಯಾಷನ್ ವೀಕ್ ನಶೆ ಏರಿಸುತ್ತಿದ್ದ ನಿಕಿತಾ ಟಂಡನ್ ಉಡುಗೆಗಳ ಕುರಿತು ನಾವು ಸಹ ನಿಮ್ಮಿಂದ ಕೆಲವೊಂದು ವಿಚಾರಗಳನ್ನು ತಿಳಿಯಲು ಬಯಸುತ್ತೇವೆ.



Click it and Unblock the Notifications



