Latest Updates
-
ವೈಫ್ ಅಪ್ರಿಶಿಯೇಷನ್ ಡೇ: ನಿಮ್ಮ ಮಡದಿಗೆ ಈ ವಿಶೇಷ ದಿನದಂದು ನೀಡಬಹುದಾದ ಸರಳ ಮತ್ತು ಸುಂದರ ಸರ್ಪ್ರೈಸ್ಗಳು ಇಲ್ಲಿವೆ! -
ಮಳೆಗಾಲದ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸೋರಿಕೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮರೆವಿನ ಕಾಯಿಲೆಗೆ ವಿದಾಯ: ಮೆದುಳಿನ ಆರೋಗ್ಯಕ್ಕೆ ಭಾರತೀಯ ಶೈಲಿಯ 'ಮೈಂಡ್ ಡಯಟ್' ಹೀಗಿರಲಿ! -
2026ರ ಏಷ್ಯನ್ ಗೇಮ್ಸ್: ಮೊದಲ ದಿನವೇ ಭಾರತಕ್ಕೆ ಪದಕದ ಬೇಟೆ! ಪಂದ್ಯಗಳ ಸಂಪೂರ್ಣ ವೇಳಾಪಟ್ಟಿ ಮತ್ತು ಲೈವ್ ಅಪ್ಡೇಟ್ಸ್ ಇಲ್ಲಿದೆ -
ದೆಹಲಿ-ಎನ್ಸಿಆರ್ನಲ್ಲಿ ಕಲುಷಿತ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಬಾಂದ್ರಾ ಫೇರ್ ರಶ್: ಕಪಲ್ಸ್ ಹುಷಾರ್! ಟ್ರಾಫಿಕ್ ಜಾಮ್ನಲ್ಲಿ ಸಿಲುಕದಂತೆ ಡೇಟಿಂಗ್ ಪ್ಲಾನ್ ಮಾಡುವುದು ಹೇಗೆ? -
ಅಪಾರ್ಟ್ಮೆಂಟ್ನಲ್ಲಿ ಗಣೇಶ ವಿಸರ್ಜನೆ: ಪರಿಸರ ಸ್ನೇಹಿಯಾಗಿ ಆಚರಿಸಲು ಇಲ್ಲಿವೆ 5 ಸಿಂಪಲ್ ಟಿಪ್ಸ್ -
ಹಬ್ಬದ ಸೀಸನ್ನಲ್ಲಿ ಎಚ್ಚರ! ಮಾರುಕಟ್ಟೆಯಲ್ಲಿ ನಕಲಿ 'ಅನಲಾಗ್ ಪನೀರ್' ಹಾವಳಿ: ಅಸಲಿ ಪನೀರ್ ಗುರುತಿಸುವುದು ಹೇಗೆ? -
iPhone 18 ಪ್ರೀ-ಆರ್ಡರ್ ಆರಂಭ: ನಿಮ್ಮ ಫೋನ್ ಬುಕ್ ಮಾಡುವ ಮುನ್ನ ಈ 5 ವಿಷಯಗಳನ್ನು ಮಿಸ್ ಮಾಡ್ಬೇಡಿ! -
ಬೀಚ್ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಳ್ಳುತ್ತಿದ್ದೀರಾ? ಗಾಯಗಳಾಗದಂತೆ ಕೆಲಸ ಮಾಡಲು ಈ ಸುರಕ್ಷತಾ ಟಿಪ್ಸ್ ಮಿಸ್ ಮಾಡಬೇಡಿ!
ಗಾಢಗುಲಾಬಿ ಬಣ್ಣದ ಉಡುಪಿನಲ್ಲಿ ಕಣ್ಮನ ಸೆಳೆದ ನೇಹಾ ಧೂಪಿಯಾ
ಇತ್ತೀಚೆಗೆ ನೇಪಾಳದಲ್ಲಿ ನಡೆದ ಬಾಕಾರ್ಡಿ ಸಂಸ್ಥೆಯ ಪ್ರಾಯೋಜಿತ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಹಿಂದಿ ಚಿತ್ರನಟಿ ನೇಹಾ ಧೂಪಿಯಾ ತಾವು ತೊಟ್ಟಿದ್ದ ಗಾಢಗುಲಾಬಿ ಬಣ್ಣದ ಉಡುಗೆಯಲ್ಲಿ ಎಲ್ಲರ ಗಮನ ಸೆಳೆದರು. BCBG ವಿನ್ಯಾಸಗೊಡಿಸಿದ ಈ ಉಡುಪು ನೆರಿಗೆಗಳಿಂದ ಆವರಿಸಿದ್ದು ಅವರ ಅಂಗಸೌಷ್ಟವವನ್ನು ಹೆಚ್ಚಿಸಿತ್ತು.
ವಕ್ಷಸ್ಥಳದಿಂದ ಪ್ರಾರಂಭವಾಗಿ ಪಾದದವರೆಗೂ ಅಡ್ಡಲಾದ ಸಮಭಾಗದ ಮಡಿಕೆಗಳಿರುವ ಈ ಪ್ರಖರ ಉಡುಪು ಧರಿಸಿ ಅವರು ವೇದಿಕೆಯನ್ನು ಅಲಂಕರಿಸುತ್ತಿದ್ದಂತೆಯೇ ಇಡಿಯ ಪ್ರೇಕ್ಷಕವರ್ಗ ಮೂಕವಿಸ್ಮಿತವಾಯಿತು.

BCBG ಯ ವಿಶೇಷ ಪೆಪ್ಲಂ ರೂಪಿಕೆಯ ಈ ಉಡುಗೆ ವಕ್ಷಸ್ಥಲದ ನಡುಭಾಗದಿಂದ ಪ್ರಾರಂಭವಾಗುವ ಕಾರಣ ಅವರ ಅಂಗ ಸೌಷ್ಟವ ಇನ್ನಷ್ಟು ಸುಂದರವಾಗಿ ಕಾಣಿಸಿಕೊಂಡಿತ್ತು. ಇದಕ್ಕೆ ಪೂರಕವಾಗಿ ಅವರು ತಮ್ಮ ತಲೆಗೂದಲನ್ನು ತುರುಬು ಕಟ್ಟಿಕೊಂಡಿದ್ದು ಅವರ ವಿಶಾಲವಾದ ಭುಜಗಳನ್ನು ಅನಾವರಣಗೊಳಿಸಿ ಮೈಕಾಂತಿಯನ್ನು ಪ್ರಜ್ವಲಿಸಲು ಸಾಧ್ಯವಾಗಿತ್ತು.
ಅವರು ತುಟಿಗೆ ಹಚ್ಚಿಕೊಂಡಿದ್ದ ನಸುಗುಲಾಬಿ ಬಣ್ಣವೂ ಅವರ ಉಡುಪಿಗೆ ಹೊಂದಿಕೊಳ್ಳುವಂತಿದ್ದು ಅವರ ನಗು ಈ ಉಡುಪಿನ ಮೂಲಕ ಅವರ ಅಂದವನ್ನು ಹೆಚ್ಚಿಸಿತ್ತು. ಕಣ್ಣುಗಳಿಗೆ ಕೊಂಚ ಮಂದ್ರವಾದ ನೀಲಿ ಬಣ್ಣದ ಮೇಕಪ್ ಮಾಡಿಕೊಂಡಿದ್ದರು.
ಕಿವಿಗಳಿಗೆ ಈನಾ ಅಹ್ಲುವಾಲಿಯಾರವರು ಅತಿಸೂಕ್ಷ್ಮ ವಿನ್ಯಾಸಗಳೊಂದಿಗೆ ನಿರ್ಮಿಸಿದ್ದ ಕಿವಿಯೋಲೆಗಳನ್ನು ಧರಿಸಿದ್ದರು. ಇದಕ್ಕೆ ಪೂರಕವಾದ ಬಣ್ಣದ ಉಂಗುರಗಳನ್ನು ಧರಿಸಿದ್ದು ಕಾರ್ಯಕ್ರಮದ ಆಕರ್ಶಣೆಯ ಬಿಂದುವಾಗಿದ್ದರು. ಮದುವೆ ಆರತಕ್ಷತೆಯಲ್ಲಿ ಕಣ್ಮನ ಸೆಳೆದ ನಟೀಮಣಿಯರು
ನೇಹಾರವರು ಇದಕ್ಕೂ ಮೊದಲು ಹಲವು ಕಾರ್ಯಕ್ರಮಗಳಲ್ಲಿ BCBG ವಿನ್ಯಾಸಗೊಳಿಸಿದ್ದ ಇನ್ನೂ ಹಲವು ಉಡುಗೆಗಳನ್ನು ತೊಟ್ಟಿದ್ದರೂ ಇಂದಿನ ಈ ಉಡುಗೆ ಅವೆಲ್ಲಕ್ಕಿಂತಲೂ ಮಿಗಿಲಾಗಿದ್ದು ಅವರಿಗೆ ಅತ್ಯಂತ ಸಮರ್ಪಕವಾಗಿತ್ತು. ನಿಮಗೆ ಹೇಗೆನಿಸುತ್ತದೆ?



Click it and Unblock the Notifications


