Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಎಲ್‌ಎಫ್‌ಡಬ್ಲ್ಯೂ: ಶಾಹಿದ್-ಮೀರಾ ಜೋಡಿಯ ಝಲಕ್
ಸ್ನೇಹಿತರಿಗಾಗಿ ಯಾವುದೇ ಸಹಾಯ ನೀಡಲು ಹೆಚ್ಚಿನವರು ತಮ್ಮ ಸಮಯವನ್ನು ಮೀಸಲಿಡಲು ತಯಾರಾಗಿರುತ್ತಾರೆ. ಇದಕ್ಕೆ ತಾರಾದಂಪತಿಗಳೂ ಹೊರತಲ್ಲ. ತಮ್ಮ ವಸ್ತ್ರ ವಿನ್ಯಾಸಕ ಸ್ನೇಹಿತೆ ಮಸಾಬಾ ಗುಪ್ತಾರಿಗಾಗಿ ಮುಂಬೈಯಲ್ಲಿ ನಡೆಯುತ್ತಿರುವ ಲ್ಯಾಕ್ಮೆ ಫ್ಯಾಷನ್ ವೀಕ್-2015 ಪ್ರದರ್ಶನದಲ್ಲಿ ತಾರಾದಂಪತಿ ಶಾಹಿದ್ ಕಪೂರ್ ಮತ್ತು ಮೀರಾ ರಜಪೂತ್‌ರವರು ಭಾಗಿಯಾಗಿ ಹಲವು ವಸ್ತ್ರಗಳನ್ನು ಪ್ರದರ್ಶಿಸಿದರು.
ಶಾಹಿದ್ ಕಪೂರ್ ರವರು ಮುಂಭಾಗ ತೆರೆದ ಕಪ್ಪು ಶರ್ಟ್ ಮತ್ತು ಕಪ್ಪು ಪ್ಯಾಂಟ್ ಮತ್ತು ಇದರ ಮೇಲೆ ತೋಳಿಲ್ಲದ ಕಪ್ಪು ಬಣ್ಣದ ಜ್ಯಾಕೆಟ್ ಧರಿಸಿದ್ದರು. ಈ ಜ್ಯಾಕೆಟ್ ಮೇಲೆಯೂ ಕಪ್ಪುಬಣ್ಣದ ದಾರದಿಂದ ಅತಿ ಸೂಕ್ಷ್ಮವಾದ, ಅತಿ ನಾಜೂಕಿನ ಮತ್ತು ಇಡಿಯ ಜ್ಯಾಕೆಟ್ ಆವರಿಸಿರುವಂತೆ ಕಸೂತಿ ಮಾಡಲಾಗಿದ್ದು ಸುಂದರವಾಗಿ ಕಾಣುತ್ತಿತ್ತು.

ಇವರ ಪತ್ನಿ ಮೀರಾ ರಜಪೂತ್ ರವರ ಉಡುಗೆ ಭಿನ್ನವಾಗಿದ್ದು ಆಕರ್ಷಕವಾಗಿತ್ತು. ತೆರೆದ ಭುಜದ ಕಪ್ಪು ಬಣ್ಣದ ಟಾಪ್ ಮತ್ತು ಬಿಳಿಯ ಬಣ್ಣದ ಪ್ಯಾಂಟ್‌ನ ಕೆಳಭಾಗದಲ್ಲಿ ಅಗಲವಾದ ಹಳದಿ ಅಡ್ಡಪಟ್ಟಿ ಮತ್ತು ಒಂದು ಆಕರ್ಷಕ ಚಿತ್ರದ ಪ್ರಿಂಟ್ ಇವರ ಉಡುಗೆಯನ್ನು ವಿಶಿಷ್ಟವಾಗಿಸಿತ್ತು. ಚಿಕ್ಕ ಕಿವಿಯೋಲೆಗಳ ಹೊರತಾಗಿ ಯಾವುದೇ ಆಭರಣಗಳನ್ನು ಧರಿಸಿರದ ಮೀರಾರವರ ಉಡುಗೆ ಸರಳವಾಗಿದ್ದರೂ ಅತಿ ಆಕರ್ಷಕವಾಗಿತ್ತು.
ಸುಮಾರು ಆರು ವರ್ಷಗಳಿಂದ ತಮ್ಮ ವಿಭಿನ್ನ ಆದರೆ ಸರಳವಾದ ಪ್ರಿಂಟ್ ಗಳಿರುವ ಉಡುಗೆಗಳಿಂದ ಪ್ರಸಿದ್ಧಿ ಪಡೆದಿರುವ ಮಸಾಬಾ ಗುಪ್ತಾರವರು ಈ ವರ್ಷದ ವಿನ್ಯಾಸಗಳಲ್ಲಿಯೂ ತಮ್ಮ ಎಂದಿನ ಶೈಲಿಯನ್ನು ಮುಂದುವರೆಸಿದ್ದಾರೆ. ಇವರ ವಸ್ತ್ರಗಳಿಗೆ ವಿನ್ಯಾಸಗಳನ್ನು ಮುದ್ರಿಸುವಲ್ಲಿ ಅವರು ತೈಯಬ್ ಮೆಹ್ತಾ, ಎಸ್.ಹೆಚ್ ರಜಾ ಮತ್ತು ಎಂ ಎಫ್ ಹುಸೇನ್ ರಂತಹ ಖ್ಯಾತ ಚಿತ್ರಕಾರರ ಕಲೆಯನ್ನು ಪ್ರೇರಣೆಯಾಗಿ ಬಳಸಲಾಗಿದೆ.
ಮಸಾಬಾರಿಗಾಗಿ ತಾರಾದಂಪತಿಯ ಹೊರತಾಗಿ ಇನ್ನೂ ಹಲವು ಸ್ನೇಹಿತರು ವೇದಿಕೆಯಲ್ಲಿ ಅವರ ವಿನ್ಯಾಸಗಳನ್ನು ಪ್ರದರ್ಶಿಸಿ ಸ್ನೇಹವನ್ನು ಮೆರೆದಿದ್ದಾರೆ. ಇವರಲ್ಲಿ ಸೂರಜ್ ಪಂಚೋಲಿ ಸಹಾ ಒಬ್ಬರು. ಇವರು ಸಹಾ ಪ್ರಿಂಟ್ ಇರುವ ಜ್ಯಾಕೆಟ್ ಮತ್ತು ಮೂಲಂಗಿ ಪ್ಯಾಂಟ್ ಧರಿಸಿದ್ದರು.



Click it and Unblock the Notifications
