Latest Updates
-
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ? -
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್ -
ಬೆಂಗಳೂರಿನಲ್ಲಿ ನೀರಿನ ಉಳಿತಾಯ ಕಡ್ಡಾಯ: ಜುಲೈ 31ರೊಳಗೆ ನಿಮ್ಮ ಮನೆಯ ನಲ್ಲಿಗಳಿಗೆ ಏರೇಟರ್ ಅಳವಡಿಸಿ! -
ಅಂತರಾಷ್ಟ್ರೀಯ ಸ್ನೇಹ ದಿನ: ಗೆಳೆಯರೊಂದಿಗೆ 'ಬಡ್ಡಿ ವರ್ಕೌಟ್' ಮಾಡಿ ಆರೋಗ್ಯ ಮತ್ತು ಬಾಂಧವ್ಯ ಹೆಚ್ಚಿಸಿಕೊಳ್ಳಿ!
ಎಲ್‌ಎಫ್‌ಡಬ್ಲ್ಯೂ 2015:ಅಂಕುರ್‌ರವರ ಕೈಚಳಕಕ್ಕೆ ಹ್ಯಾಟ್ಸ್ ಆಫ್!
ಚಳಿಗಾಲದ ಉಡುಪುಗಳನ್ನು ಚಳಿಗಾಲ ಬರುವ ಮುನ್ನವೇ ಪ್ರದರ್ಶಿಸುವ ಲ್ಯಾಕ್ಮೆ ಫ್ಯಾಷನ್ ವೀಕ್ ವಿಂಟರ್/ಫೆಸ್ಟಿವ್ 2015, ಈಗಾಗಲೇ ಮುಂಬೈ ನಗರದಲ್ಲಿ ನಡೆಯುತ್ತಿದ್ದು ಸಾವಿರಾರು ಜನರನ್ನು ಆಕರ್ಷಿಸುತ್ತಿದೆ. ಖ್ಯಾತ ವಿನ್ಯಾಸಗಾರರರಿಂದ ಹಿಡಿದು, ಹಲವಾರು ಸೆಲೆಬ್ರಿಟಿಗಳು ಈ ಈವೆಂಟ್‌ಗೆ ಸಾಕ್ಷಿಯಾಗಿದ್ದಾರೆ
ಮೂರನೇ ದಿನದಂದು ನೂತನ ಶೈಲಿಗಳನ್ನು ಪ್ರದರ್ಶಿಸುವ ಖ್ಯಾತ ಉಡುಪು ವಿನ್ಯಾಸಗಾರ ಅಂಕುರ್ ಕುಮಾರ್‌ರವರು ತಮ್ಮ ಅತ್ಯಮೋಘ ವಸ್ತ್ರ ವಿನ್ಯಾಸಗಳನ್ನು ಪ್ರದರ್ಶಿಸಿ ನೆರೆದವರನ್ನು ಮತ್ತೊಮ್ಮೆ ದಂಗುಬಡಿಸಿದರು. ಹಿಂದಿನ ಪ್ರದರ್ಶನಗಳಲ್ಲಿ ಹಲವು ವಿನೂತನ ಪ್ರಯೋಗಗಳನ್ನು ಮಾಡಿ ಮನಸೆಳೆದಿದ್ದ ವಿನ್ಯಾಸಗಾರರಿಂದ ಈ ವರ್ಷ ಇನ್ನಷ್ಟು ಹೆಚ್ಚಿನ ಮನಮೋಹಕ ವಿನ್ಯಾಸಗಳನ್ನು ನಿರೀಕ್ಷಿಸಿ ಆಗಮಿಸಿದ್ದ ಸೌಂದರ್ಯೋಪಾಸಕರಿಗೆ ಅವರು ನಿರಾಶೆಗೊಳಿಸಲಿಲ್ಲ
ತಮ್ಮ ಎಂಬ್ರಾಯಿಡಿಂಗ್ ವಸ್ತ್ರ ವಿನ್ಯಾಸಗಳನ್ನು ವಿಶಿಷ್ಟವಾಗಿ ಪ್ರದರ್ಶಿಸುವ ಮೂಲಕ ಈಗಾಗಲೇ ಖ್ಯಾತಿ ಪಡೆದಿರುವ ಅಂಕುರ್ ಕುಮಾರ್‌ರವರು ಇದೇ ನಿಪುಣತೆಯನ್ನು ಉಪಯೋಗಿಸಿಕೊಂಡಿರುವುದು ಅವರ ಜಾಣ್ಮೆಗೆ ಹಿಡಿದ ಕೈಗನ್ನಡಿಯಾಗಿದೆ. ಅವರ ಕೈಚಳಕದಿಂದ ಮೂಡಿ ಬಂದ ಕಪ್ಪು ಮತ್ತು ನೀಲಿ ಬಣ್ಣದ ಅಧಿಕ ಎಂಬ್ರಾಯಿಡಿಂಗ್ ಮಾಡಲಾದ ಫ್ಲೇರ್ ಫ್ಲೇರಡ್ ಸ್ಕರ್ಟ್, ಧರಿಸಿ ಹೆಜ್ಜೆ ಹಾಕಿದ ನೇಹಾ ಶರ್ಮಾ ನೆರೆದವರನ್ನು ಮಂತ್ರ ಮುಗ್ಧಗೊಳಿಸಿದರು..!
ಅಷ್ಟೇ ಅಲ್ಲದೆ ಪದರಗಳನ್ನು ಹೊಂದಿದ್ದ ಹೆಮ್ ಡ್ರೆಸ್ ಅನ್ನು ಧರಿಸಿದ್ದ ಈಕೆ, ಅದರ ಮೇಲೆ ಅಧಿಕ ಎಂಬ್ರಾಯಿಡಿಂಗ್ ಮಾಡಲಾದ ಫ್ಲೋರಲ್ ಮೋಟಿಫ್‌ಗಲು, ಇನ್ನಷ್ಟು ಆಕರ್ಷಣೀಯವಾಗಿತ್ತು. ಅಲ್ಲದೆ ಅಪ್ಲಿಕ್ಯೂ ಅಲಂಕಾರವನ್ನು ಹೊಂದಿದ್ದ ಮತ್ತು ಸುಂದರವಾದ ವಿನ್ಯಾಸಗಳನ್ನು ಹೊಂದಿದ್ದ ಸ್ಕೇಟರ್ ಸ್ಕರ್ಟ್‌ಗಳು, ಡ್ರೆಸ್ ಮೇಲೆ ಇದ್ದ ಸ್ಲಿಪ್, ಸಿಗರೇಟ್ ಪ್ಯಾಂಟ್‌ಗಳು ಮತ್ತು ಕ್ರಾಪ್ ಮಾಡಲಾದ ಜಾಕೆಟ್‌ಗಳು ಸಂಗ್ರಹದಲ್ಲಿ ಪ್ರಧಾನ ಆಕರ್ಷಣೆಯಾಗಿದ್ದವು, ಬನ್ನಿ ಇನ್ನಷ್ಟು ಮಾಹಿತಿಯನ್ನು ಸ್ಲೈಡ್ ಶೋ ಮೂಕಲಕ ನೋಡೋಣ..

ಕಪ್ಪು ಮತ್ತು ನೀಲಿ
ಈ ಸಂಗ್ರಹದಲ್ಲಿ ಕಪ್ಪು ಮತ್ತು ನೀಲಿ ಬಣ್ಣಗಳು ಬಿಳಿಯ ಬಣ್ಣದ ಜೊತೆಗೆ ಎದ್ದು ಕಂಡವು. ಡ್ರೆಸ್‌ಗಳ ಮೇಲೆ ಸ್ಲಿಪ್ ಜೊತೆಗೆ ಸ್ಕೇಟರ್ ಸ್ಕರ್ಟ್‌ಗಳನ್ನು ಸಹ ನಾವು ನೋಡಿದೆವು!!!

ಎಂಬ್ರಾಯಿಡರಿ
ದಾರವನ್ನು ಹೊಂದಿರುವ ಸೂಕ್ಷ್ಮವಾದ ಎಂಬ್ರಾಯಿಡರಿಯ ದಿರಿಸು ಧರಿಸಿದ ರೂಪದರ್ಶಿಯರು, ರ‍್ಯಾಂಪ್ ಮೇಲೆ ಅತ್ಯದ್ಭುತವಾಗಿ ಕಂಡು ಬಂದಿತು.

ರೇಷ್ಮೆಯ ಸ್ಪರ್ಶ
ಕೆಲವೊಂದು ರಚನೆಗಳು ರೇಷ್ಮೆಯ ಅಂಚುಗಳನ್ನು ಸಹ ಒಳಗೊಂಡಿತ್ತು. ಇದನ್ನು ನೋಡಿದ ಮೇಲೆ ಅನಿಸಿತು, ಕ್ಯುಲೊಟ್‌ಗಳು ಖಂಡಿತ ಈ ಋತುವಿನಲ್ಲಿ ಉಳಿದುಕೊಳ್ಳುತ್ತವೆ ಎಂದು!!!

ನೇಹಾ ಶರ್ಮಾ
ನೇಹಾ ಪ್ರೇಮ್ ಕುಮಾರ್‌ರವರ ಖೇಮ್‌ನಲ್ಲಿ ರ‍್ಯಾಂಪ್ ಮೇಲೆ ನಡೆದು ಬರುವಾಗ ತುಂಬಾ ಮುದ್ದಾಗಿ ಕಂಡು ಬಂದಳು.

ನೇಹಾ ಶರ್ಮಾ
ಈ ನಟಿಯು ಪದರದಿಂದ ಕೂಡಿದ ಹೆಮ್ ವಸ್ತ್ರವನ್ನು ಧರಿಸಿದ್ದಳು. ಇದು ಕಪ್ಪು ಮತ್ತು ನೀಲಿ ದಾರದಿಂದ ಅಧಿಕ ಎಂಬ್ರಾಯಿಡಿಂಗ್ ಮಾಡಲಾದ ವಸ್ತ್ರವಾಗಿತ್ತು. ಜೊತೆಗೆ ಇದರ ಮೇಲೆ ಇದ್ದ ಮೋಟಿಫ್‌ಗಳು ನೋಡಲು ಆಕರ್ಷಕವಾಗಿದ್ದವು.



Click it and Unblock the Notifications