Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಎಲ್‌ಎಫ್‌ಡಬ್ಲ್ಯೂ 2015: ಮನಸೆಳೆದ ಸೌಮಿತ್ರಾರ ವಸ್ತ್ರ ವಿನ್ಯಾಸ
ಸೌಮಿತ್ರಾರ ಮಾರ್ಗ್ ನಿಜಕ್ಕು ಲ್ಯಾಕ್ಮೆ ಫ್ಯಾಷನ್ ವೀಕ್ ಸಮ್ಮರ್/ರೆಸಾರ್ಟ್ 2015ರ ರ‍್ಯಾಂಪ್ ಮೇಲೆ ನಯನ ಮನೋಹರವಾಗಿ, ನೆರೆದವರ ಮೂಗಿನ ಮೇಲೆ ಬೆರಳಿಡುವ ರೀತಿಯಲ್ಲಿ ಕಂಡು ಬಂದ ಸಂಗ್ರಹಗಳಲ್ಲಿ ಒಂದಾಗಿತ್ತು. ಬಿಳಿ, ಗುಲಾಬಿ ಬಣ್ಣಗಳಂತಹ ಸರಳವಾದ ಬಣ್ಣಗಳನ್ನು ಬಳಸಿಕೊಂಡು ಸೌಮಿತ್ರಾರು ಅತ್ಯದ್ಭುತವಾದ ಸಾಂಪ್ರದಾಯಿಕ ಶೈಲಿಯ ವಧುವಿನ ಉಡುಗೆಗಳನ್ನು ಈ ಋತುವಿಗಾಗಿ ನೀಡಿದ್ದಾರೆ. ಅದ್ಭುತವಾದ ವರ್ಕ್ ಮತ್ತು ಹೆಚ್ಚಿನ ಎಂಬ್ರಾಯಿಡರಿಯಿಂದ ಮಾಡಲ್ಪಟ್ಟ ಬಿಳಿಯ ಉಡುಗೆಗಳು ಕಣ್ಮನ ಸೂರೆಗೊಳ್ಳುತ್ತಿದ್ದವು. ಇದರ ಜೊತೆಗೆ ಎಂಬ್ರಾಯಿಡರಿ ಮಾಡಿದ ಹಾಫ್ ಜಾಕೆಟ್‌ಗಳು ಸಹ ಇದ್ದವು.
ಎಲ್‌ಎಫ್‌ಡಬ್ಲ್ಯೂ ರ‍್ಯಾಂಪ್ ಮೇಲೆ ಮಾರ್ಗ್ ನಿಂದ ಮೂಡಿಬಂದ ಬಂಧ್‌ಗಾಲಾ ಶೇರ್ವಾನಿಯಿಂದ ಆರಂಭಗೊಂಡು, ಕುರ್ತಿ ಮತ್ತು ಚೂರಿದಾರ್ ಪ್ಯಾಂಟ್‌ಗಳು, ಹಾಗು ಸೀರೆಗಳವರೆಗಿನ ಎಲ್ಲಾ ಉಡುಗೆಗಳು ನಮ್ಮ ಮನಸ್ಸನ್ನು ಸೂರೆಗೊಂಡವು.

ಚಿಟ್ಟೆಯ ಶೇಡ್ ಹೊಂದಿದ್ದ ಚಿನ್ನದ ಆಕ್ಸೆಸರಿಗಳು ಎಲ್ಲಾ ಬಿಳಿಯ ಎಂಬ್ರಾಯಿಡರಿ ಬಟ್ಟೆಗಳ ಜೊತೆಗೆ ಮಿಳಿತವಾಗಿ ಮನಮೋಹಕವಾಗಿ ಕಂಗೊಳಿಸಿದವು. ಅವುಗಳು ಈ ಉಡುಗೆಗಳ ಸೊಬಗನ್ನು ಇಮ್ಮಡಿಗೊಳಿಸಿದವು. ಕತ್ತಿನ ಸುತ್ತ ಅಲಂಕರಿಸಿದ ದುಪ್ಪಟ್ಟಾಗಳು ಎಂಬ್ರಾಯಿಡಿಂಗ್ ಮಾಡಿದ ಲೆಹೆಂಗಾಗಳ ಜೊತೆ ಸೇರಿ ನಮ್ಮ ಮನಸ್ಸನ್ನು ಕದ್ದು ಬಿಟ್ಟವು.
ಸೀರೆಗಳ ವಿಚಾರಕ್ಕೆ ಬಂದರೆ, ತಿಳಿ ಬಣ್ಣದ ಸೀರೆಗಳು ಅದರ ಅಂಚಿನಲ್ಲಿ ಮಾಡಲಾದ ವರ್ಣಮಯ ಚಿತ್ತಾರಗಳಿಂದ ನೋಡುಗರನ್ನು ಸೆಳೆಯುತ್ತಿದ್ದವು. ಗುಲಾಬಿ ಮತ್ತು ಬಿಳಿಯ ಬಣ್ಣದ ಹಿನ್ನಲೆಯಲ್ಲಿ ಈ ಚಿತ್ತಾರಗಳು ಎದ್ದು ಕಾಣುತ್ತಿದ್ದವು. ಸೌಮಿತ್ರಾ ಮಾರ್ಗ್ ಈ ಬೇಸಿಗೆಯಲ್ಲಿ ವಧುವಿಗೆ ಹೇಳಿ ಮಾಡಿಸಿದ ಉಡುಗೆಯಾಗಿ ಕಣ್ಮನ ಸೂರೆಗೊಂಡಿತು.



Click it and Unblock the Notifications

