Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಎಲ್‌ಎಫ್‌ಡಬ್ಲ್ಯೂ: ಮನಸೆಳೆದ ಮೋನಿಷಾರವರ ವಸ್ತ್ರ ವಿನ್ಯಾಸ
ಉಡುಪು ಪ್ರಿಯರ ಗಮನ ಸೆಳೆಯುತ್ತಿರುವ ಲ್ಯಾಕ್ಮೆ ಫ್ಯಾಷನ್ ವಾರದ ನಾಲ್ಕನೆಯ ದಿನ ಭವಿಷ್ಯದ ಪೀಳಿಗೆಯ ಆಯ್ಕೆಯ ಉಡುಗೆಗಳಿಗೆ ಪ್ರಖ್ಯಾತಿ ಪಡೆದ ಮೋನಿಷಾ ಜೈಸಿಂಗ್ ರವರ ರಿವಿಯೇರಾ ಸಂಗ್ರಹ ಪ್ರಮುಖವಾಗಿ ಗಮನ ಸೆಳೆಯಿತು. ರೂಪದರ್ಶಿ ಉಜ್ವಲಾ ರಾವುತ್ ರವರು ತೊಟ್ಟ ಆಧುನಿಕ ಉಡುಗೆಗಳು ದೇಹದ ಚಲನೆಗೆ ಅತಿ ಸೂಕ್ತ ಎಂದೆನ್ನಿಸುತ್ತಿತ್ತು. ಅತಿ ಆರಾಮವಾಗಿ ನಡೆದುಕೊಂಡು ಬಂದ ಅವರ ಮುಖದಲ್ಲಿದ್ದ ಆತ್ಮವಿಶ್ವಾಸ ಯುವಪೀಳಿಗೆಯ ನೆಚ್ಚಿನ ಸಂಗ್ರಹವಾಗುವಲ್ಲಿ ಯಾವುದೇ ಅನುಮಾನ ಉಳಿಸಲಿಲ್ಲ.
ಅರವತ್ತರ ದಶಕದಲ್ಲಿ ಅಪಾರ ಜನಪ್ರಿಯತೆಯನ್ನು ಗಳಿಸಿಕೊಂಡಿದ್ದ ಸಂಜೆಯ ಉಡುಗೆ ಈಗ ಮತ್ತೊಮ್ಮೆ ಪ್ರದರ್ಶನಗಳು ಕಂಡುಬಂದಿತು. ಅರವತ್ತರ ದಶಕದಲ್ಲಿ ಅಪಾರ ಜನಪ್ರಿಯತೆ ಗಳಿಸಿದ್ದ ನಟಿ ಮತ್ತು ರೂಪದರ್ಶಿ ಬ್ರಿಗೆಟ್ ಬಾರ್ಡೋಟ್ ರವರು ಸೌಂದರ್ಯವನ್ನು ಹೆಚ್ಚಿಸಿದ್ದ ಈ ಉಡುಗೆಗಳು ಈಗ ಮತ್ತೊಮ್ಮೆ ವೇದಿಕೆಯ ಮೂಲಕ ಯುವಜನತೆಗೆ ಕಚಗುಳಿಯಿಟ್ಟವು. ಎಲ್‌ಎಫ್‌ಡಬ್ಲ್ಯೂ: ಅಪ್ಸರೆಯಂತೆ ಕಂಗೊಳಿಸಿದ ಗೌಹಾರ್ ಖಾನ್
ಈ ಬಗ್ಗೆ ಮಾತನಾಡಿದ ಮೋನಿಷಾರವರು ಈ ವಿನ್ಯಾಸಗಳು ಪಾಶ್ಚಾತ್ಯ ಮತ್ತು ಭಾರತೀಯ ಸಂಸ್ಕೃತಿಗಳ ಸಂಗಮವಾಗಿದ್ದು ಎರಡೂ ಕಡೆಗಳ ಧನಾತ್ಮಕ ಅಂಶಗಳನ್ನು ಕಲೆಹಾಕಲಾಗಿದೆ, ಪ್ರತಿಯೊಂದು ವಿನ್ಯಾಸದಲ್ಲಿಯೂ ವಿಭಿನ್ನವಾದ ಸಾರ ಮತ್ತು ಲಾವಣ್ಯವನ್ನು ಕಾಣಬಹುದು ಎಂದು ಹೆಮ್ಮೆಯಿಂದ ತಿಳಿಸುತ್ತಾರೆ. ಅವರ ಮಾತುಗಳನ್ನು ಅವರ ವಿನ್ಯಾಸಗಳಲ್ಲಿ ಕೊಂಚ ಗಮನವಿಟ್ಟು ಹುಡುಕಿದರೆ ಈ ಮಾತಿನಲ್ಲಿನ ಸತ್ಯತೆ ಗೋಚರವಾಗುತ್ತದೆ. ಇದು ಯಾವಾಗ ಅರ್ಥವಾಯಿತೋ, ನಿಮ್ಮ ಮೈಯಲ್ಲಿ ರೋಮಾಂಚನ ಮೂಡಿಸುತ್ತದೆ. ಎಲ್‌ಎಫ್‌ಡಬ್ಲ್ಯೂ 2015:ಅಂಕುರ್‌ರವರ ಕೈಚಳಕಕ್ಕೆ ಹ್ಯಾಟ್ಸ್ ಆಫ್!

ಮನಸೆಳೆಯುವ ಗಿಡ್ಡ ಉಡುಗೆ
ತೋಳಿಲ್ಲದ, ಮೊಣಕಾಲ ಮೇಲಿನವರೆಗಿನ ತಿಳಿನೀಲಿ ಬಣ್ಣದ ಉಡುಗೆ ಹಲವು ಮಡಿಕೆಗಳನ್ನು ಹೊಂದಿದ್ದು ಕೇವಲ ಹೊರಮಡಿಕೆಯಲ್ಲಿ ಮಾತ್ರ ಸುಂದರವಾದ ಸರಳ ವಿನ್ಯಾಸಗಳನ್ನು ಮೂಡಿಸಿರುವುದು ಮೊನಿಷಾರವರ ಪ್ರತಿಭೆಗೆ ಹಿಡಿದ ಕೈಗನ್ನಡಿಯಾಗಿದೆ.

ಸೆಕ್ವೀನ್ಸ್‌ಗೆ ಹೆಲೋ ಹೇಳಿ
ಮೈಪೂರ್ತಿ ಮುಚ್ಚುವ ಅಚ್ಚಬಿಳಿಯ ಶರಾಯಿ ಮತ್ತು ಕೋಟು ಈ ಚಳಿಗಾಲಕ್ಕೆ ಅತ್ಯಂತ ಸೂಕ್ತವಾದ ಉಡುಗೆಯಾಗಿದೆ. ಸುಂದರ, ಸರಳವಾದ ಹೊಳೆಯುವ ವಿನ್ಯಾಸ ಸಕಲರನ್ನೂ ನಿಮ್ಮೆಡೆಗೆ ಆಕರ್ಷಿಸುವುದು ಖಂಡಿತ. ಈ ಉಡುಗೆಯಲ್ಲಿ ಸೋನಮ್ ಕಪೂರ್ ಆಭರಣಗಳಿಲ್ಲದೆಯೂ ಸುಂದರವಾಗಿ ಕಾಣುತ್ತಿಲ್ಲವೇ?

ಸೂರ್ಯೋದಯದ ಹಳದಿ ಮನಸೆಳೆಯಿತೇ
ಸೂರ್ಯೋದಯದ ಅಪ್ಪಟ ಹಳದಿ ಬಣ್ಣದ ಈ ಉಡುಗೆ ಮೊಣಕಾಲವರೆಗಿದ್ದರೂ ಸೊಂಟದಲ್ಲಿದ್ದ ಎರಡು ಚಿಕ್ಕ ತ್ರಿಕೋಣಾಕಾರದ ಖಾಲಿಜಾಗ ವಿಭಿನ್ನವಾದ ಆಕರ್ಷಣೆ ನೀಡುತ್ತದೆ.

ತೊಡೆಯವರೆಗೆ ಬದಿತೆರೆದಿರುವ ಸಂಜೆಯುಡುಪು
ಮೂಲತಃ ಫ್ರಾನ್ಸ್ ನ ಈ ವಿನ್ಯಾಸ ಮುಂಭಾಗದಲ್ಲಿ ಹೆಚ್ಚಿನ ವಿನ್ಯಾಸಗಳಿದ್ದರೂ ಬದಿಯಲ್ಲಿ ತೊಡೆಯವರೆಗೆ ತೆರೆದಿದ್ದು ನಡೆಯುವಾಗ ಬಳುಕುವ ಮುಂಭಾಗದ ನೀಳ ಮತ್ತು ಕೊಂಚ ಭಾರವಾದ ಉಡುಗೆಯ ಅಲಗುವಿಕೆ ಗಮನ ಸೆಳೆಯುತ್ತದೆ. ಇದಕ್ಕೆ ಪೂರಕವಾಗಿ ಉಬ್ಬಿದ ಬಾಹುಗಳ ಅಚ್ಚಬಿಳಿಯ ಕೋಟು ಚಳಿಗಾಲದ ಚಳಿಯನ್ನು ಹೊರಗಿಡಲು ನೆರವಾಗುತ್ತದೆ.

ಪಾರದರ್ಶಕ ಮಿಂಚು
ಸರಿಸುಮಾರು ಪಾರದರ್ಶಕವಾದ ಈ ಉಡುಗೆಯ ಮೇಲೆ ಸಾವಿರಾರು ಮಿಂಚಿನ ಮಿಣುಕುಗಳಿದ್ದು ರೂಪದರ್ಶಿಯ ದೇಹದ ರೂಪುರೇಖೆಗಳನ್ನು ಸ್ಪಷ್ಟವಾಗಿ ತೋರುವ ಪರಿ ನೆರೆದವರನ್ನು ಬಾಯಿ ಬಿಟ್ಟು ನೋಡುವಂತೆ ಮಾಡಿತು.



Click it and Unblock the Notifications
