Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಎಲ್‌ಎಫ್‌ಡಬ್ಲ್ಯೂ: ಅಪ್ಸರೆಯಂತೆ ಕಂಗೊಳಿಸಿದ ಗೌಹಾರ್ ಖಾನ್
ಚಳಿಗಾಲದ ಉಡುಪುಗಳನ್ನು ಪ್ರದರ್ಶಿಸುವ ಲ್ಯಾಕ್ಮೆ ಫ್ಯಾಷನ್ ವೀಕ್-2015, ಈಗ ಮೂರನೆಯ ದಿನದ ಭರ್ಜರಿ ಪ್ರದರ್ಶನವನ್ನು ನೀಡುತ್ತಿದೆ. ಇಂದಿನ ವಿಶೇಷವಾಗಿ ಕೈಮಗ್ಗ ಮತ್ತು ಕುಶಲಕರ್ಮಿಗಳಿಂದ ಹೊರಬಂದ ಬಟ್ಟೆಗಳನ್ನು ಪ್ರದರ್ಶಿಸಲಾಯಿತು. ಕೈಮಗ್ಗ ಅಥವಾ ಹ್ಯಾಂಡ್ಲೂಮ್ ಬಟ್ಟೆಗಳ ವಿಷಯ ಬಂದಾಗ ವಿನ್ಯಾಸಗಾರ್ತಿ ರಿಂಕು ಸೋಬ್ತಿಯವರ ಹೆಸರು ಪ್ರಮುಖವಾಗಿ ಕೇಳಿಬರುತ್ತದೆ.
ಏಕೆಂದರೆ ಕಳೆದ ಹದಿನೈದು ವರ್ಷಗಳಿಂದ ಸತತವಾಗಿ ಕೈಮಗ್ಗದ ಬಟ್ಟೆಗಳ ಮೇಲೆ ಅವರು ನಡೆಸಿದ ಪ್ರಯೋಗ ಮತ್ತು ವಹಿಸಿದ ಕಾಳಜಿ ಶ್ಲಾಘನೀನಯವಾಗಿದ್ದು ಇಂದಿನ ಪ್ರದರ್ಶನದಲ್ಲಿ ಅವರ ಲೂಮ್ 1905 ಎಂಬ ಹಣೆಪಟ್ಟಿ ಹೊತ್ತ ವಿನ್ಯಾಸಗಳು ವೇದಿಕೆಯಲ್ಲಿ ಬಾಲಿವುಡ್‌ನ ಪ್ರಮುಖ ನಟಿ ಗೌಹಾರ್ ಖಾನ್ ಮೂಲಕ ಪ್ರದರ್ಶಿಸಲ್ಪಟ್ಟಿತು.

ಇಂದಿನ ಪ್ರದರ್ಶನದಲ್ಲಿ ಎಲ್ಲರ ಗಮನ ಸೆಳೆದ ಗೌಹಾರ್ ಖಾನ್ ಚಿನ್ನದ ಬಣ್ಣದ ತೊಡುಗೆಗಳಲ್ಲಿ ಅಪ್ಸರೆಯಂತೆ ಕಂಗೊಳಿಸುತ್ತಿದ್ದರು. ವೇದಿಕೆಯಲ್ಲಿ ಅವರು ಈ ಉಡುಪುಗಳನ್ನು ಪ್ರದರ್ಶಿಸುವಾಗ ಅವರಿಂದ ವ್ಯಕ್ತವಾಗುತ್ತಿದ್ದ ಆತ್ಮವಿಶ್ವಾಸ ಎಲ್ಲರ ಮನತಟ್ಟಿತು.
ರಿಂಕು ಸೋಬ್ತಿಯವರ ಲೂಮ್ 1905 ಸರಣಿಯಲ್ಲಿ ಪ್ರದರ್ಶಿತಗೊಂಡಿರುವ ಬಟ್ಟೆಗಳು ಭಾರತೀಯ ಸಂಸ್ಕೃತಿಯ ಅನಾವರಣವಾಗಿದ್ದು ಅವರ ವಿನ್ಯಾಸಗಳಲ್ಲಿ ಹಲವಾರು ಕುಶಲಕರ್ಮಿಗಳ ಕೈಕೆಲಸದ ನಾಜೂಕು ಕಂಡುಬರುತ್ತಿತ್ತು. ಬರ್ಜಾದ್ಯ ಬುಡಕಟ್ಟಿನವರ ಅತಿ ನಾಜೂಕಿನ ಕೈ ಕೆಲಸವನ್ನು ಅವರು ತಮ್ಮ 'ಟಸಲ್ಸ್' ಎಂಬ ಸರಣಿಯ ವಿನ್ಯಾಸಗಳಲ್ಲಿ ಅತ್ಯಂತ ಕೌಶಲದಿಂದ ಬಳಸಿಕೊಂಡಿದ್ದು ಉಡುಪುಗಳ ವಿನ್ಯಾಸದೊಡನೆ ಕರಕುಶಲದ ಕಲೆಯ ಸಂಗಮವಾದರೆ ವೇದ್ಯವಾಗುವ ಪ್ರತಿಭೆ ಅಪರಿಮಿತವಾದುದಾಗಿದೆ. ಲಾಕ್ಮೆ ಫ್ಯಾಷನ್ ವೀಕ್-ದಂಗುಬಡಿಸಿದ ನಿಖಿಲ್‌ರವರ ರಸವಿದ್ಯೆ
ಈ ವಿನ್ಯಾಸಗಳಲ್ಲಿ ಗಮನ ಸೆಳೆದ ಅಂಶವೆಂದರೆ ವಿವಿಧ ಬಣ್ಣಗಳ ಒಂದು ಸಮತೋಲನದಲ್ಲಿ ಮಾಡಲಾದ ಮಿಶ್ರಣ. ವಾರಣಾಸಿಯ ಈ ಶೈಲಿಯನ್ನು ಅನುಸರಿಸಿರುವ ರಿಂಕು ರವರು ಭಾರತೀಯ ಸಂಸ್ಕೃತಿಗೆ ಧಕ್ಕೆ ಬಾರದಂತೆ, ವಿನ್ಯಾಸಗಳ ಪ್ರದರ್ಶನಕ್ಕೆ ಕುಂದು ಬರದಂತೆ, ನುರಿತ ಕೆಲಸಗಾರರ ಪ್ರತಿಬೆ ಎಲ್ಲೂ ಪೋಲಾಗದಂತೆ ಈ ವಿನ್ಯಾಸಗಳನ್ನು ರಚಿಸಿದ್ದು ಎಲ್ಲರ ಮನಸೆಳೆಯಿತು.
ಈ ವಿನ್ಯಾಸಗಳನ್ನು ಕೊಂಚ ಗಮನವಿರಿಸಿ ನೋಡಿದರೆ ಈ ಉಡುಗೆಗಳಲ್ಲಿ ಅವರು ಅಪ್ಪಟ ಚಿನ್ನದ ಬಣ್ಣದ ಚೌಕಾಕಾರದ ನೇಯ್ಗೆ ಇಡಿಯ ಶರೀರವನ್ನು ವ್ಯಾಪಿಸಿರುವುದು ಮತ್ತು ಪ್ರತಿ ಪಟ್ಟಿಯ ಮೇಲೆ ಸೂಕ್ಷ್ಮವಾದ ಕುಸುರಿಯನ್ನು ನೇಯ್ದಿರುವುದು ಕಂಡುಬರುತ್ತದೆ. ನಡುನಡುವೆ ಚಿಕ್ಕದಾದ, ಅತಿಸೂಕ್ಷ್ಮವಾಗಿ ಅಳವಡಿಸಿರುವ ಆಭರಣಗಳು ಈ ಉಡುಪಿಗೆ ಹೆಚ್ಚಿನ ಮೆರುಗು ನೀಡುತ್ತದೆ.
ಎದೆಯ ಮುಂಭಾಗದ ಪ್ರಮುಖ ವಸ್ತದಲ್ಲಿಯೂ ಚೌಕಾಕಾರದ ವಿನ್ಯಾಸವಿದ್ದು ಸೂಕ್ಷ್ಮ ನೇಯ್ಗೆಯ ಕುಸುರಿ ಕೆಲಸವನ್ನು ಇಲ್ಲಿಯೂ ಸಹಾ ನೋಡಬಹುದು. ಇದರ ಹಿಂದೆ ರೇಶ್ಮೆಯ ತೆಳುವಾದ ಬಲೆಯಂತಹ ವಸ್ತ್ರ ಈ ಚೌಕುಳಿಗೆ ಸೂಕ್ತವಾದ ಹಿನ್ನೆಲೆಯನ್ನು ನೀಡಿ ಈ ವಿನ್ಯಾಸಕ್ಕೆ ಮೆರುಗು ನೀಡುತ್ತದೆ. ನಟಿ ಗೌಹಾರ್ ಖಾನ್ ರವರ ಆತ್ಮವಿಶ್ವಾಸದ ನಡಿಗೆ ಈ ವಸ್ತ್ರಗಳು ಯಾವುದೇ ಅಂತಾರಾಷ್ಟ್ರೀಯ ಉಡುಪಿಗೆ ಕಡಿಮೆಯಿಲ್ಲವೆನ್ನುವಂತಿತ್ತು. ಎಲ್‌ಎಫ್‌ಡಬ್ಲ್ಯೂ:ಪಾಯಲ್‌ರವರ ಕೈಚಳಕಕ್ಕೆ ಭೇಷ್ ಎನ್ನಲೇಬೇಕು!
ಇವರೊಂದಿಗೆ ವೇದಿಕೆಯಲ್ಲಿ ಹೆಜ್ಜೆ ಹಾಕಿದ ರಿಂಕುರವರ ಮುಖದಲ್ಲಿಯೂ ಆತ್ಮವಿಶ್ವಾಸ ತುಂಬಿತುಳುಕುತ್ತಿತ್ತು. ಶೀಘ್ರವೇ ಕೈಮಗ್ಗದ ಉಡುಪುಗಳಿಗೆ ಬೇಡಿಕೆ ಕುದುರುವುದರಲ್ಲಿ ಅನುಮಾನವಿಲ್ಲ ಎಂಬಂತೆ ಪ್ರದರ್ಶಿಸಲ್ಪಟ್ಟ ಈ ವಸ್ತ್ರ ಭಾರತದ ಸಂಸ್ಕೃತಿಯನ್ನು ಮೆರೆಯಲು ಯಶಸ್ವಿಯಾಯಿತು.



Click it and Unblock the Notifications


