Latest Updates
-
ಸ್ವಾತಂತ್ರ್ಯ ದಿನಾಚರಣೆಯ ಲಾಂಗ್ ವೀಕೆಂಡ್: ₹3,000 ಬಜೆಟ್ನಲ್ಲಿ ಸುರಕ್ಷಿತ ಪ್ರವಾಸಕ್ಕೆ ಬೆಸ್ಟ್ ತಾಣಗಳು! -
ಸ್ವಾತಂತ್ರ್ಯ ದಿನಾಚರಣೆ: ಮಳೆಗಾಲದಲ್ಲೂ ಸ್ಟೈಲಿಶ್ ಆಗಿ ಕಾಣಲು ₹999 ರೊಳಗೆ ಬೆಸ್ಟ್ ಟಿಪ್ಸ್! -
ಹಾಸ್ಟೆಲ್ನಲ್ಲಿದ್ದೀರಾ? ಜಿಮ್ ಇಲ್ಲದೆ ಫಿಟ್ ಆಗಿರಲು ಈ ಸಿಂಪಲ್ 'ಕ್ಯಾಂಪಸ್ ಫಿಟ್' ಟಿಪ್ಸ್ ಫಾಲೋ ಮಾಡಿ! -
ಸಾವಿನ ನಂತರವೂ ಜೀವದಾನ: ದಂಪತಿಗಳೇ, ಈ ಒಂದು ನಿರ್ಧಾರ 8 ಜನರ ಪ್ರಾಣ ಉಳಿಸಬಹುದು! -
ಹರ್ ಘರ್ ತಿರಂಗಾ: ಅಪಾರ್ಟ್ಮೆಂಟ್ ಬಾಲ್ಕನಿಯಲ್ಲಿ ಧ್ವಜ ಹಾರಿಸುವಾಗ ಈ ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಬೆಲೆ ಏರಿಕೆಯ ಬಿಸಿ: ಕೇವಲ ₹99 ಬಜೆಟ್ನಲ್ಲಿ ಸಿಗುವ ಪೌಷ್ಟಿಕಾಂಶಯುಕ್ತ ಹೈ-ಪ್ರೊಟೀನ್ ಊಟದ ಪ್ಲಾನ್! -
ಆಕಾಶದಲ್ಲಿ ಅದ್ಭುತ ಕೌತುಕ: ನಾಳೆ ರಾತ್ರಿ ಪರ್ಸೀಡ್ ಉಲ್ಕಾಪಾತ ವೀಕ್ಷಿಸಲು ಮಿಸ್ ಮಾಡ್ಬೇಡಿ! -
ಕಾಡಿನ ಅಂಚಿನಲ್ಲಿ ವಾಕಿಂಗ್ ಹೋಗ್ತೀರಾ? ಆನೆಗಳ ಕಾಟ ತಪ್ಪಿಸಲು ಮತ್ತು ಫಿಟ್ ಆಗಿರಲು ಈ ಸುರಕ್ಷತಾ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ತೇವಾಂಶಕ್ಕೆ ಗುಡ್ ಬೈ: ₹1,499 ರೊಳಗೆ ಸಿಗುವ ಬೆಸ್ಟ್ ಡಿಹ್ಯೂಮಿಡಿಫೈಯರ್ ಮತ್ತು ಟಿಪ್ಸ್! -
ಶ್ರಾವಣ ಸೋಮವಾರದ ಉಪವಾಸ: ಆಫೀಸ್ ಕೆಲಸದ ನಡುವೆ 120 ರೂಪಾಯಿಯಲ್ಲಿ ಆರೋಗ್ಯಕರ ಲಂಚ್ಬಾಕ್ಸ್ ಸಿದ್ಧಪಡಿಸುವುದು ಹೇಗೆ?
ಎಲ್‌ಎಫ್‌ಡಬ್ಲ್ಯೂ:ಪಾಯಲ್‌ರವರ ಕೈಚಳಕಕ್ಕೆ ಭೇಷ್ ಎನ್ನಲೇಬೇಕು!
ಚಳಿಗಾಲದ ಉಡುಪುಗಳನ್ನು ಚಳಿಗಾಲ ಬರುವ ಮುನ್ನವೇ ಪ್ರದರ್ಶಿಸುವ ಲ್ಯಾಕ್ಮೆ ಫ್ಯಾಷನ್ ವೀಕ್ ಈಗಾಗಲೇ ಮುಂಬೈ ನಗರದಲ್ಲಿ ನಡೆಯುತ್ತಿದ್ದು ಸಾವಿರಾರು ಜನರನ್ನು ಆಕರ್ಷಿಸುತ್ತಿದೆ. ಖ್ಯಾತ ವಿನ್ಯಾಸಗಾರ್ತಿ ಪಾಯಲ್ ಸಿಂಗ್ ಸಹಾ ತಮ್ಮ ಹಲವು ಸುಂದರ ಮತ್ತು ವಿನೂತನ ವಿನ್ಯಾಸಗಳನ್ನು ಈ ಪ್ರದರ್ಶನದಲ್ಲಿ ಪ್ರಸ್ತುತಪಡಿಸಿದ್ದು ಖ್ಯಾತ ರೂಪದರ್ಶಿ ನಿಮ್ರತ್ ಕೌರ್ ವೇದಿಕೆಯನ್ನು ಈ ಉಡುಪುಗಳನ್ನು ಪ್ರಸ್ತುತ ಪಡಿಸಿದರು.

ಹೆಚ್ಚಿನ ವಿನ್ಯಾಸಗಳು ಮೈತುಂಬಾ ಉಡುವಂತಿರುವ ಉಡುಗೆಗಳಾಗಿದ್ದು ವಧುವಿನ ಸಾಂಪ್ರಾದಾಯಿಕ ಶೋಭೆಯನ್ನು ಹೆಚ್ಚಿಸಲು ನೆರವಾಗುತ್ತದೆ. ಚೌಕಾಕಾರದಲ್ಲಿರುವ ಪ್ರಖರ ಬಣ್ಣದ ರವಿಕೆ, ಎರಡಕ್ಕಿಂತ ಹೆಚ್ಚು ಪದರಗಳಿರುವ ಶರಾಯಿ, ಮಡಚಿ ಪದರವಾಗಿಸಿದ ಅಂಚುಗಳ ಕುರ್ತಾ ವಧುವಿನ ನೂತನ ಅಲಂಕಾರವನ್ನು ಪ್ರದರ್ಶಿಸಿತು.
ಇವರ ಈ ವಿನೂತನ ವಿನ್ಯಾಸ ಸುಮೇರಿಯನ್ ಮತ್ತು ಮೆಸೊಪೊಟೇಮಿಯನ್ ನಾಗರಿಕತೆಯ ಉಡುಪುಗಳು ಪ್ರೇರಣೆ ನೀಡಿದೆ, ಪರಿಣಾಮವಾಗಿ ಒಂದೇ ಪ್ರಖರ ಬಣ್ಣದ ರವಿಕೆ ಮತ್ತು ಅದೇ ವಿನ್ಯಾಸದ ಮೈತುಂಬಾ ಹೊದ್ದಿರುವ ಸೆರಗು ವಧುವಿಗೆ ಪ್ರಾಚೀನ ಪರಂಪರೆಯ ಅಂದವನ್ನು ನೀಡುತ್ತದೆ. ಲಾಕ್ಮೆ ಫ್ಯಾಷನ್ ವೀಕ್-ದಂಗುಬಡಿಸಿದ ನಿಖಿಲ್‌ರವರ ರಸವಿದ್ಯೆ
ಆಶ್ಚರ್ಯವೆಂದರೆ ಇವರು ತನ್ನ ವಿನ್ಯಾಸಗಳಲ್ಲಿ ಸಾಮಾನ್ಯ ಪ್ರಮಾಣದಲ್ಲಿ ಜರಿನೂಲಿನ ಕುಸುರಿ ಕೆಲಸವನ್ನೂ ಮಾಡಿದ್ದು ಈ ಉಡುಪುಗಳು ವಧು ವಿವಿಧ ಕಾರ್ಯಕ್ರಮಗಳಿಗೆ ತೊಡಲು ಸಾಧ್ಯವಾಗುವಂತಿದೆ. ಈ ಉಡುಪುಗಳನ್ನು ಖ್ಯಾತ ರೂಪದರ್ಶಿ ನಿಮ್ರತ್ ಕೌರ್ ರವರು ಉಟ್ಟು ವೇದಿಕೆಯಲ್ಲಿ ಪ್ರದರ್ಶಿಸಿದರು.
ಅವರ ವಯ್ಯಾರ ಮತ್ತು ಮೈಮಾಟ ಈ ಉಡುಪುಗಳಲ್ಲಿ ವಿಜೃಂಬಿಸಿತು. ತಮ್ಮ ಸ್ನೇಹಿತೆ ಪಾಯಲ್ ಸಿಂಗ್ ರಿಗಾಗಿ ಚೌಕಾಕಾರದ ರವಿಕೆ ಮತ್ತು ಲೆಹೆಂಗಾ ಸ್ಕಟ್ ತೊಟ್ಟ ನಿಮ್ರತ್ ಕೌರ್ ಅಪ್ಪಟ ಅಪ್ಸರೆಯಂತೆ ಕಂಗೊಳಿಸಿದರು.
ಕಡೆಯ ಸುತ್ತುಗಳಲ್ಲಿ ಆಗಮಿಸಿದ ನಿಮ್ರತ್ ಪಾಯಲ್ ರವರ ಮಹತ್ವಾಕಾಂಕ್ಷೆಯ ಉಡುಪಿನ ವಿನ್ಯಾಸವಾದ ಕೆಂಪು ಲೆಹೆಂಗಾವನ್ನು ಪ್ರದರ್ಶಿಸಿದರು. ವಧುವಿನ ಅತ್ಯಂತ ಸಂತೋಷಕರ ಕ್ಷಣದಲ್ಲಿ ತೊಡಬೇಕಾದ ಈ ಉಡುಗೆಯಲ್ಲಿ ಭಾರೀ ಪ್ರಮಾಣದಲ್ಲಿ ಅತಿ ಸೂಕ್ಷ್ಮ ಜರಿನೂಲಿನ ಕುಸುರಿ ಕೆಲಸವನ್ನು ನಿರ್ವಹಿಸಲಾಗಿದ್ದು ನೆರೆದವರನ್ನು ದಂಗುಬಡಿಸಿತು.
ಈ ಉಡುಪಿಗೆ ಹೆಚ್ಚಿನ ಮಹತ್ವ ನೀಡಲು ಸರ, ಬಳೆ, ಮೂಗುತಿ ಒಂದನ್ನೂ ಧರಿಸದೇ ಕೇವಲ ಬೈತಲೆಬೊಟ್ಟೆಯೊಂದನ್ನು ಮಾತ್ರ ತೊಟ್ಟು, ಸರಳವಾದ ಕೇಶವಿನ್ಯಾಸಗೊಳಿಸಿದುದು ಸೂಕ್ಷ್ಮವಾಗಿ ಗಮನಿಸಿದರೆ ಕಂಡುಬರುವಂತಿತ್ತು.
ದಾವಣಿಯಿಲ್ಲದ ಭುಜವನ್ನು ಅವರ ತಲೆಗೂದಲು ಮರೆಮಾಚಿದ್ದು ಹೊಕ್ಕುಳಿನ ಮೇಲೆ ಬರುವಂತೆ ತೊಟ್ಟಿದ್ದ ಲೆಹೆಂಗಾ ವಧುವಿನ ಸೌಂದರ್ಯವನ್ನು ನೂರ್ಮಡಿಗೊಳಿಸಿತ್ತು.



Click it and Unblock the Notifications


