ಆಭರಣ ಪ್ರದರ್ಶನದ ಬಿನ್ನಾಣ ಹೆಚ್ಚಿಸಿದ ರೂಪದರ್ಶಿಯರು

By manu

ಈ ವಾರ ದೆಹಲಿಯಲ್ಲಿ ಆಭರಣಗಳ ಪ್ರದರ್ಶನವಾದ IIGJ Show (Indian Institute of Gems & Jewellery Show) ಕಾರ್ಯಕ್ರಮ ಅತ್ಯಂತ ಭವ್ಯಯುತವಾಗಿ ನಡೆಯುತ್ತಿದೆ. ಎರಡನೆಯ ದಿನದಲ್ಲಿ ವೇದಿಕೆಯನ್ನು ನಿಧಿ ಸುಬ್ಬಯ್ಯ ಮತ್ತು ಅನುಜ್ ಸಚ್ದೇವ್ ಎಂಬ ಇಬ್ಬರು ಅಪ್ರತಿಮ ಸುಂದರಿಯರು ತಮ್ಮ ತೆಕ್ಕೆಗೆ ತೆಗೆದುಕೊಂಡಿದ್ದರು. ದೂರದರ್ಶನದಲ್ಲಿ ಈಗಾಗಲೇ ಹೆಸರುವಾಸಿಯಾಗಿರುವ ಅನುಜ್ ವಿಶಿಷ್ಟ ಆಭರಣಗಳನ್ನು ತೊಟ್ಟು

ವೈಯಾರದಿಂದ ವೇದಿಕೆಯ ಉದ್ದಗಲಕ್ಕೆ ನಡೆದಾಗ ಸಭೆಯಲ್ಲಿ ಆಗಾಧವಾದ ಸಂಚಲನ ಉಂಟಾಗಿತ್ತು. ಇನ್ನೋರ್ವ ಸುಂದರಿ ನಿಧಿಯವರು ತೊಟ್ಟ ಆಭರಣಗಳೂ ಅವರ ಸೌಂದರ್ಯವನ್ನು ನೂರ್ಮಡಿಗೊಳಿಸಿತ್ತು.

ವೇದಿಕೆಯಲ್ಲಿ ಇನ್ನೂ ಹಲವಾರು ಖ್ಯಾತ ರೂಪದರ್ಶಿಗಳು ಆಗಮಿಸಿ ತಮ್ಮ ಮೂಲಕ ಇನ್ನೂ ಹಲವು ಆಭರಣಗಳನ್ನು ಪ್ರದರ್ಶಿಸಿದರು. ಅವರಲ್ಲಿ ಭಾರತ ಸುಂದರಿ ಆಧಿತಿ ಆರ್ಯ ಪ್ರಮುಖರು. ಐಐಡಿಜೆ ಸಂಸ್ಥೆಯ ಮಹತ್ವಾಕಾಂಕ್ಷೆಯ ನವನವೀನ ಮಾದರಿಯ ಮತ್ತು ವಿನ್ಯಾಸದ ಆಭರಣಗಳನ್ನು ಪ್ರದರ್ಶಿಸಲಾಯಿತು.

ಈ ವಿನ್ಯಾಸಗಳ ಪ್ರಮುಖ ರೂವಾರಿಗಳಾದ ಚೆರ್ರಿ ಸಾಹ್ನಿ, ರಾಹುಲ್ ಲೂಥ್ರಾ, ರಚನಾ ಗುಪ್ತಾ ಮತ್ತು ಅನೂಕ್ಷಾ ಸಿಂಘಲ್ ರನ್ನು ಬಹುವಾಗಿ ಶ್ಲಾಘಿಸಲಾಯಿತು. ಈ ವಿನ್ಯಾಸಗಳು ಹೇಗೆ ಮನಸೆಳೆಯುತ್ತವೆ ಎಂಬುದನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೀವೇ ಖುದ್ದಾಗಿ ನೋಡಿ, ವಿಸ್ಮಪಡುವಿರಿ.

ಮಿಸ್ ಇಂಡಿಯಾ : ಆದಿತಿ ಆರ್ಯ

ಮಿಸ್ ಇಂಡಿಯಾ : ಆದಿತಿ ಆರ್ಯ

ಐಐಜೆಡಬ್ಲ್ಯೂ (IIJW 2015) ಪ್ರದರ್ಶನದ ಎರಡನೆಯ ದಿನದಲ್ಲಿ ವೇದಿಕೆಯನ್ನಲಂಕರಿಸಿದವರಲ್ಲಿ ಮಿಸ್ ಇಂಡಿಯಾ ಪಟ್ಟ ಪಡೆದಿರುವ ಆದಿತಿ ಆರ್ಯ ಪ್ರಮುಖರು.ಇವರು ತೊಟ್ಟಿದ್ದ ಬಿಗಿಯುಪುಡುಪಿನ ಮೇಲೆ ಧರಿಸಿದ್ದ ವಜ್ರದ ಸರ (ಡೈಮಂಡ್ ರಾಣಿ ಹಾರ್), ಮುತ್ತಿನ ಕಿವಿಯೋಲೆ ಮತ್ತು ತಲೆಗೆ ಕಿರೀಟದಂತೆ ಧರಿಸಿದ್ದ ಆಭರಣ, ಅದರಿಂದ ನೇತಾಡುತ್ತಿದ್ದ ಲೋಲಾಕು ಹಣೆಯ ಬಿಂದಿಯಂತೆ ತೋರುತ್ತಾ ಅದ್ಭುತವಾದ ನೋಟವನ್ನು ಸೃಷ್ಟಿಸಿತ್ತು.

ಬೆಳ್ಳಿಯ, ಸೂರ್ಯನಂತಹ ಲೋಲಾಕಿನ ಸರ

ಬೆಳ್ಳಿಯ, ಸೂರ್ಯನಂತಹ ಲೋಲಾಕಿನ ಸರ

ಬಣ್ಣಬಣ್ಣದ ಮಣಿಗಳ ಸರದ ತುದಿಯಲ್ಲಿ ನೇತಾಡುತ್ತಿದ್ದ ಬೆಳ್ಳಿಯ ಸೂರ್ಯನ ಕಿರಣಗಳು ಹೊಮ್ಮುತ್ತಿರುವಂತಹ ಲೋಲಾಕು ರೂಪದರ್ಶಿಯನ್ನು ರಾಜಮನೆತನಕ್ಕೆ ಸೇರಿರುವ ಭಾವನೆ ಮೂಡಿಸಿತ್ತು. ಅದರೊಂದಿಗೆ ಮೂರು ಪದಕಗಳ ಸರಳವಾದ ಸರ ಗಮನ ಸೆಳೆದಿತ್ತು.

ಕಂಕುಳ ಕೆಳಗಿನ ಸರ

ಕಂಕುಳ ಕೆಳಗಿನ ಸರ

ಇತ್ತೀಚೆಗೆ ತುಂಬಾ ಉದ್ದವಿರುವ, ಆದರೆ ಮೇಲ್ಭಾಗದಲ್ಲಿ ಭಾರೀ ಪದಕವಿರುವ ಸರವನ್ನು ಕಂಕುಳ ಕೆಳಗಿನಿಂದ ಬರುವಂತೆ ಧರಿಸುವುದು ಫ್ಯಾಷನ್ ಆಗಿದ್ದು ಈ ಪ್ರದರ್ಶನದಲ್ಲಿಯೂ ರೂಪದರ್ಶಿಯೊಬ್ಬರು ಎರಡು ಪದಕಗಳೊಂದಿಗೆ ಸಾವಿರಾರು ಮಣಿಗಳಿಂದ ಹೆಣೆದ ಸರವೊಂದನ್ನು ಧರಿಸಿ ಗಮನ ಸೆಳೆದರು. ಇದಕ್ಕೆ ಪೂರಕವಾಗಿ ಒಂದೇ ಕೈಯಲ್ಲಿ ಬಳೆ ಮತ್ತು ಭುಜದದರೆಗೆ ನೇತಾಡುತ್ತಿದ್ದ ಕಿವಿಯ ಆಭರಣಗಳು ಮನಸೆಳೆದವು.

 ಉಡುಪಿನ ವಿನ್ಯಾಸಕ್ಕೆ ತಕ್ಕ ಸರ

ಉಡುಪಿನ ವಿನ್ಯಾಸಕ್ಕೆ ತಕ್ಕ ಸರ

ರೂಪದರ್ಶಿಯರು ತೊಟ್ಟಿದ್ದ ಉಡುಗೆಯಲ್ಲಿದ್ದ ವಿನ್ಯಾಸವನ್ನೇ ಹೋಲುವ ಆಭರಣಗಳು ಒಂದು ವಿಶಿಷ್ಟ ಆಕರ್ಷಣೆಯನ್ನು ಉಂಟುಮಾಡಿತ್ತು. ಸರಳವಾದ ಸರ, ಸರಳವಾದ ಉಡುಗೆ, ಆದರೆ ಇವೆರಡರ ಹೊಂದಾಣಿಕೆ-ಅದ್ಭುತ

ಇತರ ಹರಳುಗಳ ಆಭರಣಗಳು

ಇತರ ಹರಳುಗಳ ಆಭರಣಗಳು

ಆಭರಣವೆಂದರೆ ಕೇವಲ ಚಿನ್ನ, ಬೆಳ್ಳಿ, ಪ್ಲಾಟಿನಂ, ವಜ್ರಗಳೇ ಆಗಬೇಕೆಂದೇನಿಲ್ಲ. ಚಿಕ್ಕಪುಟ್ಟ ಬಣ್ಣದ ಹರಳು, ಮೂಳೆ, ಚಿಪ್ಪು, ಮರದ ತುಂಡುಗಳೂ ಕೊಂಚ ಕಲಾವಂತಿಕೆಯಿಂದ ಉತ್ತಮವಾದ ಆಭರಣಗಳಾಗುತ್ತವೆ.ಈ ಚಿತ್ರದಲ್ಲಿ ಹೊಟ್ಟೆಯವರೆಗೂ ನೇತಾಡುತ್ತಿರುವ ಈ ಸರ ಒಂದು ಕಲಾವಂತಿಕೆಯ ಸೊಬಗಾಗಿದೆ. ಮಾಂಗ್ತಿಕಾ (mangtikka) ಎಂಬ ಶ್ರೇಣಿಯಲ್ಲಿ ಹೊರಬಂದಿರುವ ಈ ಆಭರಣಗಳಲ್ಲಿ ಹಲವು ವಿವಿಧ ಹರಳು ಮತ್ತು ಕಲ್ಲುಗಳನ್ನು ಕಲಾತ್ಮಕವಾಗಿ ಉಪಯೋಗಿಸಲಾಗಿದ್ದು ಅದ್ಭುತವಾದ ಅನುಭವವನ್ನು ನೀಡುತ್ತಿದೆ.

Story first published: Wednesday, August 5, 2015, 10:09 [IST]
X
Desktop Bottom Promotion