Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಲ್ಯಾವೆಂಡರ್ ಬಣ್ಣದ ದಿರಿಸಿನಲ್ಲಿ ಜೆನಿಲಿಯಾ ಫುಲ್ ಮಿಂಚಿಂಗ್
ಇತ್ತೀಚೆಗೆ ನಡೆದ ಐಐಎಫ್‌ಎ 2015 (IIFA 2015) ಸಮಾರ೦ಭದಲ್ಲಿ ಬಾಲಿವುಡ್ ತಾರೆಯರ ದೊಡ್ಡ ಸ೦ಖ್ಯೆಯಲ್ಲಿಯೇ ಅಲ್ಲಿ ಕಂಡುಬಂದಿತ್ತು, ಸೋನಾಕ್ಷಿ ಸಿನ್ಹಾಳಿ೦ದ ಆರ೦ಭಿಸಿ ಬಿಪಾಶಾ ಬಸುವರೆಗೂ, ಜೋಡಿಗಳಾದ ದಿಯಾ ಮಿರ್ಜಾ ಹಾಗೂ ಜೆನಿಲಿಯಾ ಮತ್ತು ರಿತೇಶ್ ದೇಶ್ ಮುಖ್‌ರನ್ನೂ ಒಳಗೊ೦ಡ೦ತೆ ಹಲವಾರು ಬಾಲಿವುಡ್ ಸೆಲೆಬ್ರಿಟಿಗಳು ಗ್ರೀನ್ ಕಾರ್ಪೆಟ್‌ನಲ್ಲಿ ಕಣ್ಮನ ಸೆಳೆದರು.

ಆದರೆ ಇವರೆಲ್ಲಕ್ಕಿಂತಲೂ ತಾನು ಒಂದು ಹೆಜ್ಜೆ ಮುಂದೆ ಎನ್ನುವಂತೆ ಲ್ಯಾವೆಂಡರ್ ಬಣ್ಣದ ದಿರಿಸಿನಲ್ಲಿ ಜೆನಿಲಿಯಾ ಎಲ್ಲರನ್ನೂ ಬಿಟ್ಟ ಕಣ್ಣು ಬಿಟ್ಟಂತೆ ಮಾಡಿದಂತೂ ಮಾತ್ರ ಸುಳ್ಳಲ್ಲ!. ಹೌದು ಜತಿನ್ ವರ್ಮಾ ದಾಸ್ ವಿನ್ಯಾಸ್ ಮಾಡಿದ್ದ ಉಡುಗೆಯಲ್ಲಿ ಜೆನಿಲಿಯಾ ಗ್ರೀನ್ ಕಾರ್ಪೆಟ್ ಮೇಲೆ ಎಲ್ಲರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದ್ದಳು. ಈ ಸರಳವಾದ ಸ್ಲೀವ್‍ಲೆಸ್ ಲ್ಯಾವೆಂಡರ್ ಡ್ರೆಸ್‌ನಲ್ಲಿ, ಸೌಂದರ್ಯದ ಖನಿಯಾಗಿ ಎಲ್ಲರನ್ನೂ ಒಂದು ಬಾರಿ ಮೂಕವಿಸ್ಮಿತಗೊಳಿಸಿದರು.
ಇಡೀ ಡ್ರೆಸ್ ಮಿಡ್ ಕಟ್ ವಿನ್ಯಾಸವನ್ನು ಹೊಂದಿತ್ತು, ಮತ್ತು ಇದು ಆಕೆಯ ಅಂದ ಚೆಂದಕ್ಕೆ ಪೂರಕವಾಗಿತ್ತು. ವೇಸ್ಟ್‌ಲೈನ್ ಮೇಲೆ ಇದ್ದ ಟೇಪರ್ ಮತ್ತು ಪೆಟೈಟ್ ಮಿಡ್ ರಿಫ್ ಈ ದಕ್ಷಿಣ ಭಾರತದ ಬೆಡಗಿಗೆ ಬಿಂಕು ಬಿನ್ನಾಣವನ್ನು ಎತ್ತಿ ತೋರುವಂತಿತ್ತು. ಇದರ ಹೆಮ್‌ಲೈನ್ ಒಂದೇ ಅನುಪಾತದಲ್ಲಿರಲಿಲ್ಲ ಮತ್ತು ಬ್ಯಾಕ್ ಡ್ರೆಸ್ ನೆಲಕ್ಕೆ ತಾಗುವಂತಿತ್ತು. ಈ ಮುದ್ದಾದ ಮುಖದ ಸುಂದರಿ ಇದನ್ನು ಧರಿಸಿ, ರಾಣಿಯಂತೆ ನಡೆದು ಬಂದಳು.
ಈಕೆಯ ಹೇರ್ ಸ್ಟೈಲ್ ಸ್ಲೀಕ್ ಲೋ ಬನ್ ಆಗಿದ್ದು, ಮುಂದೆ ಸಣ್ಣದಾಗಿ ಮುಂಗುರುಳು ಸಹ ಆಕೆ ಬಿಡದೆ ಮಿತಿಗೊಳಿಸಿದ್ದಳು. ಜತಿನ್ ವರ್ಮಾ ಡ್ರೆಸ್ ಜೊತೆಗೆ ಆಕೆ ಒಂದು ಜೊತೆ ಸುಂದರವಾದ ಜಿಮ್ಮಿ ಶೂಗಳನ್ನು ಮತ್ತು ವರ್ಸಾಸ್ ಕ್ಲಚ್ ಜೊತೆಗೆ ಕಂಗೊಳಿಸುತ್ತಿದ್ದಳು.
ಈಕೆ ತನ್ನ ಲುಕ್ ಅನ್ನು ಒಂದು ಜೊತೆ ರಜ್‌ವಾಡಾ ಇಯರ್ ರಿಂಗ್‌ನೊಂದಿಗೆ ಪೂರ್ಣಗೊಳಿಸಿದ್ದಳು. ಈಕೆ ಕನಿಷ್ಠ ಮೇಕಪ್‌ನೊಂದಿಗೆ ಸ್ಮೋಕೀ ಐ ಫಿನಿಷ್ ಹೊಂದಿದ್ದಳು. ಈಕೆ ತನ್ನ ಗಂಡ ರಿತೇಶ್ ದೇಶ್‌ಮುಖ್ ಜೊತೆಗೆ ಬಂದಿದ್ದಳು. ಇಬ್ಬರೂ ಗ್ರೀನ್ ಕಾರ್ಪೆಟ್ ಮೇಲೆ ಕಿಚ್ಚು ಹಚ್ಚುವಂತಹ ಲುಕ್‌ನಲ್ಲಿ ಕಾಣಿಸಿಕೊಂಡರು.



Click it and Unblock the Notifications


