Latest Updates
-
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ! -
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ!
ಐಐಜೆಡಬ್ಲ್ಯೂ: ಬಿಟ್ಟ ಕಣ್ಣು ಬಿಟ್ಟಂತೆ ಮಾಡಿದ ಆಭರಣಗಳ ಪ್ರದರ್ಶನ
ತಾರಾಮೇಳವೇ ನಡೆಯಿತು ಎಂಬಂತೆ ಜರುಗಿದ ಇಂಡಿಯಾ ಕೌಚರ್ ವೀಕ್ 2015 ಮುಗಿದ ಮೇಲೆ, ನಂತರದ ಸರದಿ ಆರಂಭವಾಗಿರುವುದು ಜ್ಯುವೆಲ್ಲರಿ ಕ್ಷೇತ್ರದಲ್ಲಿ. ಹಿಂದಿನ ವಾರ ಅಂತ್ಯಗೊಂಡ ಅಮೆಜಾನ್ ಇಂಡಿಯಾ ಕೌಚರ್ ವೀಕ್ 2015ರ ರ‍್ಯಾಂಪ್ ಮೇಲೆ ನಾವು ಹಲವಾರು ವಧುವಿನ ವಸ್ತ್ರಗಳ ವಿನ್ಯಾಸ್ವನ್ನು ನೋಡಿ ಕಣ್ತುಂಬಿಕೊಂಡೆವು. ಈ ಶೋ ಮನೀಶ್ ಮಲ್ಹೋತ್ರಾರವರ ಫಿನಾಲೆ ಶೋ ಮೂಲಕ ಅಂತ್ಯಗೊಂಡಿತು.
ವಸ್ತ್ರಗಳ ಫ್ಯಾಷನ್ ಮುಗಿದ ನಂತರ ಎಲ್ಲರ ಕಣ್ಣು ಹೋಗುವುದು ಈಗ ಒಡವೆಗಳ ಮೇಲೆ,ಅದಕ್ಕಾಗಿಯೇ ಬಂದಿದೆ IIJW (ಇಂಡಿಯಾ ಇಂಟರ್‌ನ್ಯಾಷನಲ್ ಜ್ಯುವೆಲ್ಲರಿ ವೀಕ್) 2015,ಬನ್ನಿ ನಿಮ್ಮ ಕಣ್ಣು ಕೋರೈಸುವ ಹೊಳೆಯುವ ಆಭರಣಗಳನ್ನು ನಿಮ್ಮದಾಗಿಸಿಕೊಳ್ಳಿ! ಇಲ್ಲಿ ಎಲ್ಲಾ ಸಮಾರಂಭಗಳಿಗೆ ಒಪ್ಪುವಂತಹ ಆಭರಣಗಳು ನಿಮಗೆ ದೊರೆಯುತ್ತವೆ. ಈ ಶೋನಲ್ಲಿ ತಾನಿಷ್ಕ್, ಗೀತಾಂಜಲಿ, ನಜ್ರಾನಾ, ಫಾರೇವರ್ ಮಾರ್ಕ್, ಗಿಯಾ, ಜ್ಯೂವೆಲ್ ಟ್ರೇಂಡ್ಜ್, ಶೋಭಾ ಶೃಂಗಾರ್ ಇತ್ಯಾದಿಗಳಂತಹ ದೊಡ್ಡ ದೊಡ್ದ ಬ್ರ್ಯಾಂಡ್‌ಗಳು ಪಾಲ್ಗೊಳ್ಳುತ್ತಿವೆ. ಐಐಜೆಡಬ್ಲ್ಯೂ: ಕಣ್ಮನ ಸೆಳೆದ ಮೂಗುತಿ ಸುಂದರಿ ಸಾನಿಯಾ
IIJW 2015 ಗೀತಾಂಜಲಿ ಜ್ಯೂವೆಲ್ಸ್‌ರವರಿಂದ ಆರಂಭಗೊಂಡಿತು. ಗೀತಾಂಜಲಿ ಜ್ಯೂವೆಲ್ಸ್‌ರವರು ವಿಶ್ವದ ಅತ್ಯಂತ ದೊಡ್ಡ ಸಮಗ್ರ ಆಭರಣಗಳ ಉತ್ಪಾದಕರಾಗಿದ್ದಾರೆ. ಗೀತಾಂಜಲಿಯಲ್ಲಿ ವಿವಿಧ ಉತ್ಪನ್ನಗಳ ಶ್ರೇಣಿಯಿದೆ. ಸೂಕ್ಷ್ಮ ವಜ್ರದ ಆಭರಣಗಳು, ಪರಿಕಲ್ಪನೆ ಆಧಾರಿತ ಜ್ಯುವೆಲ್ಲರಿಗಳು, ಅಮೂಲ್ಯ ಲೋಹಗಳಿಂದ ಕೂಡಿದ ವಜ್ರಗಳು ಮತ್ತು ಅಮೂಲ್ಯ ಹರಳುಗಳು, ಫ್ಯಾಷನ್ ಜ್ಯುವೆಲ್ಲರಿ-ಬೆಳ್ಳಿ ಮತ್ತು ಬದಲಿ ಲೋಹಗಳ ಜೊತೆಗೆ ಆರೆ-ಅಮೂಲ್ಯ ಹರಳುಗಳಿಂದ (ಸೆಮಿ ಪ್ರೀಶಿಯಸ್ ಸ್ಟೋನ್ಸ್) ಮಾಡಿದ ಆಭರಣಗಳು, ಮುತ್ತುಗಳು ಮತ್ತು ಉತ್ತಮ ಗುಣಮಟ್ಟದ CZ ಹಾಗು ಜೊತೆಗೆ ಬೆಳ್ಳಿ ವಸ್ತುಗಳು ಮತ್ತು ವಾಚ್‌ಗಳನ್ನು ತಮ್ಮ ಸಂಗ್ರಹದಲ್ಲಿ ಇವರು ಹೊಂದಿದ್ದಾರೆ.
ಗೀತಾಂಜಲಿಯವರು IIJW 2015 ಅನ್ನು ಫೌಂಡೇಶನ್ ಮೂಲಕ ಹೆಣ್ಣು ಮಕ್ಕಳಿಗೆ ಬೆಂಬಲಿಸುವ ಒಂದು ಧ್ಯೇಯದೊಂದಿಗೆ ತಮ್ಮ ಅದ್ಭುತ ಸಂಗ್ರಹಗಳನ್ನು ಪ್ರದರ್ಶಿಸಿದರು. ಊರ್ವಶಿ ಶರ್ಮಾ ಮತ್ತು ಅನು ಮಲ್ಲಿಕ್‌ರಂತಹ ತಾರೆಗಳು IIJW 2015 ರ ರ‍್ಯಾಂಪ್ ಮೇಲೆ ತಮ್ಮ ಹೆಣ್ಣು ಮಕ್ಕಳ ಜೊತೆಗೆ ನಡೆದು ಬಂದು ಸ್ತ್ರೀತನಕ್ಕೆ ಗೌರವ ಸೂಚಿಸಿದರು. ಆಭರಣಗಳ ಪ್ರದರ್ಶನದ ಜೊತೆಗೆ ಹೆಣ್ಣು ಮಕ್ಕಳಿಗೂ ಗೌರವ ಸಲ್ಲಿಸಿದ್ದು, ನೋಡುಗರ ಮನಸ್ಸನ್ನು ಸೆಳೆಯಿತು...

ಕ್ಲಾಡಿಯಾ ಸಿಯೆಸ್ಲ
ಕ್ಲಾಡಿಯಾ ಸಿಯೆಸ್ಲರವರು ಗೀತಾಂಜಲಿ ಜೆಮ್ಸ್ ಜೊತೆಗೆ IIJW 2015 ರ ರ‍್ಯಾಂಪ್ ಮೇಲೆ ನಡೆದು ಬಂದಾಗ ತಾರೆಗಳ ತುಣುಕೇ ರ‍್ಯಾಂಪ್ ಮೇಲೆ ಬಂದಂತೆ ಭಾಸವಾಯಿತು. ಆಕೆಯ ಮೋಹಕ ನಗು ಆಭರಣಗಳ ಜೊತೆಗೆ ಪೈಪೋಟಿಗೆ ನಿಂತಂತಿತ್ತು.

ಊರ್ವಶಿ ಶರ್ಮಾ
IIJW 2015 ರ ರ‍್ಯಾಂಪ್ ಮೇಲೆ ತನ್ನ ಮಗಳು ಸಮೈರಾ ಜೋಶಿ ಜೊತೆಗೆ ನಡೆದು ಬರುವ ಮೂಲಕ ಮೂಲ ಧ್ಯೇಯ ವಾಕ್ಯಕ್ಕೆ ಗೌರವ ತಂದು ಕೊಟ್ಟವರು ಊರ್ವಶಿ ಶರ್ಮಾ

ಅನು ಮಲ್ಲಿಕ್
ಬಾಲಿವುಡ್‌ನ ಈ ಸಂಗೀತ ನಿರ್ದೇಶಕ ಸಹ ಬೇಟಿ ಫೌಂಡೇಶನ್ ಅನ್ನು ಬೆಂಬಲಿಸಲು ತಮ್ಮ ಹೆಣ್ಣು ಮಕ್ಕಳಾದ ಅನ್‌ಮೋಲ್ ಮತ್ತು ಅದಾ ಮಲ್ಲೀಕ್‌ರವರ ಜೊತೆಗೆ ನಡೆದು ಬಂದು ಸಮಾರಂಭಕ್ಕೆ ಇನ್ನಷ್ಟು ಕಲೆ ನೀಡಿದರು.

ಕುಂದನ್
ಕುಂದನ್ ಪದರದ ನೆಕ್ಲೇಸ್ ಜೊತೆಗೆ ಮಾಣಿಕ್ಯವು ಸೇರಿ ರ‍್ಯಾಂಪ್ ಮೇಲೆ ಕಿಚ್ಚು ಹಚ್ಚುವ ನೋಟವನ್ನು ಒದಗಿಸಿತು.

ಮಂಗ್ಟಿಕ್ಕಾಗಳು
ಚಿನ್ನ ಮತ್ತು ಮುತ್ತಗಳ ಮಿಶ್ರಣವಾದ ಮಂಗ್ಟಿಕ್ಕಾಗಳು, ಕತ್ತಿನಲ್ಲಿದ್ದ ದೇಸಿ ಶೈಲಿಯ ನೆಕ್‌ಲೆಸ್‌ಗೆ ಹೊಂದಿಕೊಳ್ಳುತ್ತಿದ್ದವು.



Click it and Unblock the Notifications