Latest Updates
-
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ! -
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ! -
ಯುಸಿಸಿ ಸಮಿತಿಯಲ್ಲಿ ಭಿನ್ನಮತ: ನಿಮ್ಮ ಮದುವೆ, ಆಸ್ತಿ ಹಕ್ಕಿನ ಮೇಲೆ ಪರಿಣಾಮವೇನು? -
15 ನಿಮಿಷದ ಡೆಂಗ್ಯೂ ಹೋಮ್ ಆಡಿಟ್: ನಿಮ್ಮ ಮನೆಯೇ ಸೊಳ್ಳೆಗಳ ತಾಣವಾಗದಿರಲಿ, ಈ ಸರಳ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ನಕಲಿ ಪ್ರೋಟೀನ್ ಸಪ್ಲಿಮೆಂಟ್ಸ್ ಎಚ್ಚರಿಕೆ: ನಿಮ್ಮ ಆರೋಗ್ಯಕ್ಕೆ ಕಂಟಕವಾಗುವ ಮುನ್ನ ಈ ಲೇಬಲ್ ಚೆಕ್ ಮಾಡಿ! -
ಒಡಿಶಾ-ಆಂಧ್ರ ಕರಾವಳಿಗೆ ಅಪ್ಪಳಿಸಲಿದೆ 'ಡೀಪ್ ಡಿಪ್ರೆಷನ್': ನಿಮ್ಮ ಸುರಕ್ಷತೆಗಾಗಿ ಈ 15 ನಿಮಿಷಗಳ ಮುನ್ನೆಚ್ಚರಿಕೆ ಮರೆಯದಿರಿ! -
ದೆಹಲಿ-ಎನ್ಸಿಆರ್ನಲ್ಲಿ ಕಳಪೆ AQI: ಶ್ವಾಸಕೋಶದ ಆರೋಗ್ಯಕ್ಕಾಗಿ ಮನೆಯಲ್ಲೇ ಮಾಡಿ ಈ 10 ನಿಮಿಷದ ಸರಳ ವ್ಯಾಯಾಮ
ತಿಳಿಹಳದಿ ಬಣ್ಣದ ಚಳಿ ಉಡುಗೆಯಲ್ಲಿ ಕಣ್ಮನ ಸೆಳೆದ ದೀಪಿಕಾ
ಹಿಂದಿನ ದಿನಗಳಲ್ಲಿ ಪ್ರಯಾಣದ ಅವಧಿಯಲ್ಲಿ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದ ತಾರೆಯರು ಧರಿಸುತ್ತಿದ್ದ ಉಡುಗೆಗಳೆಂದರೆ ಮಾಸಲು ಜೀನ್ಸ್ ಮತ್ತು ಹಳೆಯದಾದ ದೊರಗು ಹೊರ ಉಡುಪು. ಆದರೆ ಮುಂಬೈ ವಿಮಾನ ನಿಲ್ದಾಣಕ್ಕೆ ತಮ್ಮ ಮುಂದಿನ ಪ್ರಯಾಣಕ್ಕಾಗಿ ಆಗಮಿಸಿದ ಚಿತ್ರನಟಿ ದೀಪಿಕಾ ಪಡುಕೋಣೆ ತಮ್ಮ ವಿಭಿನ್ನ ಉಡುಗೆಯಿಂದ ವಿಶಿಷ್ಟವಾಗಿ ಕಂಡುಬಂದರು.
ಅವರು ಧರಿಸಿದ್ದ ಮೊಣಕಾಲೆತ್ತರದ ಕಂದು ಪಾದರಕ್ಷೆಗಳು ಮತ್ತು ಪೂರ್ತಿತೋಳಿನ Burberry cape ಚಳಿಯುಡುಗೆ ಥಟ್ಟನೇ ಎಲ್ಲರ ಚಿತ್ತ ಸೆಳೆಯುತ್ತಿತ್ತು. ಇದಕ್ಕೂ ಮಿಗಿಲಾಗಿ ಅವರ ಕೇಶವಿನ್ಯಾಸ ಮನಸೆಳೆಯುವಂತಿತ್ತು.

ಅವರ ದೇಹವನ್ನು ಬಿಗಿಯಾಗಿ ಅಪ್ಪಿದ್ದ ಅಪ್ಪಟ ನೀಲಿ ಡೆನಿಮ್ ಜೀನ್ಸ್, ಮೂರು ಬಣ್ಣಗಳ ಶಾಲು, ಮತ್ತು ತಿಳಿಹಳದಿ ಬಣ್ಣದ ಚಳಿಯುಡುಗೆ ವಿಶಿಷ್ಟವಾದ ಶೈಲಿಯಲ್ಲಿತ್ತು. ಜೊತೆಗೆ ಅವರು ಧರಿಸಿದ್ದ ಇಡಿಯ ಮುಖವನ್ನ ಆವರಿಸಿದ್ದ ಕನ್ನಡಕ ಮತ್ತು ಮೆಲುವಾದ ಮೇಕಪ್ ಹಾಗೂ ಎಂದಿನ ಅವರ ಮುಗುಳ್ನಗೆ ವಾತಾವರಣವನ್ನು ತಿಳಿಗೊಳಿಸಿತ್ತು! ಇನ್ನೂ ನಿಗೂಢವಾಗಿ ಉಳಿದ ಸೆಲೆಬ್ರಿಟಿಗಳ ಸಾವಿನ ರಹಸ್ಯ!
ತಮ್ಮ ಕಪ್ಪು ಕೈಚೀಲದೊಂದಿಗೆ ಆಗಮಿಸಿದ ಅವರು ಜೊತೆಗೆ ಚಳಿಯಿಂದ ಕಾಪಾಡಲು ರಗ್ಗೊಂದನ್ನೂ ಇನ್ನೊಂದು ಕೈಯಲ್ಲಿ ಹಿಡಿದಿದ್ದರು. ಈ ಪರಿಯ ಉಡುಗೆ ಅತ್ಯಂತ ಅಪರೂಪವಾಗಿದ್ದು ಅವರು ವಿನೂತನವಾಗಿ ಕಂಡುಬಂದರು.
ಯಾವುದೇ ಪರಿಸ್ಥಿತಿಯಲ್ಲಿ ಅತ್ಯುತ್ತಮವಾಗಿ ಕಾಣಿಸಿಕೊಳ್ಳುವ ಅವರ ವಸ್ತ್ರ ಕಾಳಜಿ ಇಲ್ಲಿಯೂ ಕಂಡುಬಂದಿದ್ದು ಎಲ್ಲರ ಮೆಚ್ಚುಗೆಗೆ ಕಾರಣವಾಯಿತು. ನಿಮಗೂ ಇಷ್ಟವಾಯಿತೇ?



Click it and Unblock the Notifications


