Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಕೇನ್ಸ್ 2015: ನವನವೀನ ನೆಕ್‌ಲೈನ್ ದಿರಿಸಿನಲ್ಲಿ ಲಲನೆಯರು
ಕೇನ್ಸ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಅದ್ದೂರಿ ಚಾಲನೆ ದೊರೆತಿದೆ. ವರ್ಷದ ಈ ಸಮಯದಲ್ಲಿ ನಾವು ಬಹುತೇಕ ಸೆಲೆಬ್ರಿಟಿಗಳನ್ನು ಒಟ್ಟಿಗೆ ಕಣ್ತುಂಬಿಕೊಳ್ಳಬಹುದು. ಅವರ ವಿಭಿನ್ನ ಉಡುಗೆ-ತೊಡುಗೆ, ಅದ್ಭುತವಾದ ಕೇಶ ವಿನ್ಯಾಸಗಳು ಮತ್ತು ಫ್ಯಾಷನ್ ಅನಾಹುತಗಳು ಎಲ್ಲವನ್ನು ಏಕಕಾಲಕ್ಕೆ ನೋಡುವ ಅವಕಾಶ ಈಗ ಸಿಗುತ್ತದೆ.
ಹೌದು ನಾವು ಮಾತನಾಡುತ್ತಿರುವುದು ಕೇನ್ಸ್ ಚಲನಚಿತ್ರೋತ್ಸವದ ಕುರಿತಾಗಿಯೇ, ಎಲ್ಲಾ ಸೆಲೆಬ್ರಿಟಿಗಳು ತಮ್ಮ ಫ್ಯಾಷನ್ ಪ್ರಜ್ಞೆಯ ವಿಶ್ವರೂಪ ದರ್ಶನವನ್ನು ತೋರಿಸುವ ಈ ಉತ್ಸವ ಮತ್ತೆ ಬಂದಿದೆ.
ಇಲ್ಲಿ ನಾವು ಯಾರನ್ನು ವಿಮರ್ಶಿಸುತ್ತಿಲ್ಲ, ಆದರೆ ನಿಮಗೆ ಯಾವ ಸೆಲೆಬ್ರಿಟಿಗಳು ಎಂತಹ ಉಡುಗೆ ಧರಿಸಿಕೊಂಡು ಬಂದಿದ್ದರು, ಮತ್ತು ಅವುಗಳಲ್ಲಿ ಯಾವುದು ಚೆನ್ನಾಗಿ ಒಪ್ಪುತ್ತಿದ್ದವು ಎಂದು ತಿಳಿಸುತ್ತಿದ್ದೇವೆ. 68ನೇ ಕೇನ್ಸ್ ಚಲನಚಿತ್ರೋತ್ಸವವು ಸಿನಿಮಾಗಳ ಮತ್ತು ಫ್ಯಾಷನ್‌ನ ಉತ್ಸವವಾಗಿ ತೋರುತ್ತಿದೆ. ಕೇನ್ಸ್ ನಲ್ಲಿ ಭಾಗವಹಿಸುವ ಭಾರತದ ಸೆಲೆಬ್ರಿಟಿಗಳು
ಇಲ್ಲಿನ ಕೆಂಪು ಹಾಸು ಜಗತ್ತಿನ ಎಲ್ಲಾ ಫ್ಯಾಷನ್ ಸೆಲೆಬ್ರಿಟಿಗಳಿಂದ ತುಂಬಿ ತುಳುಕುತ್ತಿದೆ. ಕೇನ್ಸ್ ಚಲನಚಿತ್ರೋತ್ಸವವು ಈ ವರ್ಷ ಆಕಾಶದಿಂದ ಇಳಿದುಬಂದ ತಾರೆಗಳ ರೀತಿ ಕಂಗೊಳಿಸುತ್ತಿದೆ. ಬನ್ನಿ ಅದರಲ್ಲಿ ಸುಂದರವಾಗಿ ತೋರುತ್ತಿದ್ದ ಕೆಲವೊಂದು ಸೆಲೆಬ್ರಿಟಿಗಳ ಕುರಿತು ತಿಳಿದುಕೊಳ್ಳೋಣ...

ವರ್ಸಾಕ್ ಪವರ್
ಡೌಟ್‍ಜೆನ್ ಕ್ರೊಸ್ ಮನಮೋಹಕವಾದ ಒನ್ ಶೋಲ್ಡರ್ ಗೌನ್‌ನಲ್ಲಿ ಆಕರ್ಷಕವಾಗಿ ಕಂಡು ಬರುತ್ತಿದ್ದಳು. ಈಕೆ ವರ್ಸಾಕ್ ವಿನ್ಯಾಸ ಮಾಡಿದ್ದ ಒಂದು ತೋಳಿನ ಥಿಗ್ ಹೈ ಸ್ಲಿಟ್ ಗೌನ್ ಧರಿಸಿದ್ದಳು. ಈ ಗೌನ್ ಸಂಪೂರ್ಣವಾಗಿ ಬಿಳುಪಿನಿಂದ ಕೂಡಿತ್ತು ಮತ್ತು ಡೌಟ್‌ಜೆನ್ ಸೌಂದರ್ಯಕ್ಕೆ ಮತ್ತಷ್ಟು ಮೆರಗನ್ನು ನೀಡಿತ್ತು.

ಲುಪಿಟ ನ್ಯೋಂಗ್’ಒ ಗುಸ್ಸಿಯಲ್ಲಿ
ಲುಪಿಟ ನ್ಯೋಂಗ್'ಒ ತನ್ನ ತಾಜಾ ಹಸಿರು ಗುಸ್ಸಿಯಿಂದ ಕ್ಯಾನೆಸ್ ಕೆಂಪು ಹಾಸನ್ನು ಮತ್ತಷ್ಟು ಆಕರ್ಷಣೀಯಗೊಳಿಸಿದ್ದಳು. ಗುಸ್ಸಿ ಗೌನ್ ಸೊಂಟ ಮತ್ತು ತೋಳಿನ ಮೇಲೆ ಹೆಚ್ಚು ಫ್ಲೋರಲ್ ವಿನ್ಯಾಸಗಳೊಂದಿಗೆ, ಡೀಪ್ ಪ್ಲಂಗಿಂಗ್ ನೆಕ್‌ಲೈನ್ ಹೊಂದಿತ್ತು. ಇದೊಂದು ಫುಲ್ ಪ್ಲೀಟೆಡ್ ಗುಸ್ಸಿ ಗೌನ್ ಆಗಿತ್ತು.

ಜೂಲಿಯನ್ ಮೂರ್ ಅರ್ಮಾನಿ ಪ್ರೈವ್‌ನಲ್ಲಿ
ಚಿರಸುಂದರಿ ನಟಿ ಜೂಲಿಯನ್ ಮೂರ್ ಅರ್ಮಾನಿ ಪ್ರೈವ್‌ನಲ್ಲಿ ಕಂಡು ಬಂದಳು. ಈಕೆ ಕ್ಯಾನೆಸ್‌ನ ಕೆಂಪು ಹಾಸಿನ ಮೇಲೆ ತನ್ನ ಕಪ್ಪು ಮತ್ತು ಕೆನೆ ಬಣ್ಣದ ಸಂಪೂರ್ಣ ಅಲಂಕೃತ ಗೌನ್ ಧರಿಸಿದ್ದಳು. ಇದು ಸೊಂಟದ ಮೇಲೆ ಫರ್ ಶ್ರಗ್ ಶೈಲಿಯನ್ನು ಹೊಂದಿತ್ತು.

ನವೊಮಿ ವ್ಯಾಟ್ಸ್ ಎಲಿ ಸಾಬ್ ಉಡುಗೆಯಲ್ಲಿ
ಮನಮೋಹಕವಾದ, ಮಂತ್ರ ಮುಗ್ಧಗೊಳಿಸುತ್ತಿದ್ದ, ಪ್ರತಿಭಾವಂತ ದಿವಾ ನವೊಮಿ ವ್ಯಾಟ್ಸ್ ಎಲಿ ಸಾಬ್ ಉಡುಗೆಯಲ್ಲಿ ಸುಂದರವಾಗಿ ಕಂಡು ಬಂದಳು. ಈ ಗೌನ್ ಡೀಪ್ ನೆಕ್‍ಲೈನ್ ಮತ್ತು ಸೊಂಟದ ಕೆಳಗೆ ಪೂರ್ಣ ಪ್ರಮಾಣದ ತುಪ್ಪಳವನ್ನು ಹೊಂದಿತ್ತು.

ಯಾರು ಸುಂದರವಾಗಿದ್ದರು?
ಕೇನ್ಸ್‌ನ ಮೊದಲ ದಿನದ ಚಿತ್ರೋತ್ಸವದಲ್ಲಿ ಮಂತ್ರ ಮುಗ್ಧಗೊಳಿಸುತ್ತಿದ್ದ ಹಲವಾರು ಸೆಲೆಬ್ರಿಟಿಗಳು ಕಂಡು ಬಂದರು. ಅವರೆಲ್ಲರು ತಮ್ಮ ಅಚ್ಚು ಮೆಚ್ಚಿನ ವಿನ್ಯಾಸಕಾರರ ಗೌನ್‌ಗಳನ್ನು ಧರಿಸಿದ್ದರು. ಆದರೂ ಇವರಲ್ಲಿ ಯಾರು ಸುಂದರವಾಗಿ ಕಾಣುತ್ತಿದ್ದರು ಎಂಬುದನ್ನು ನಾವು ತಿಳಿದುಕೊಳ್ಳಲು ಕುತೂಹಲದಿಂದ ಕಾಯುತ್ತಿದ್ದೇವೆ.



Click it and Unblock the Notifications
