Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಕೇನ್ಸ್ 2015: ನೋಡುಗರನ್ನು ಸೂಜಿಗಲ್ಲಿನಂತೆ ಸೆಳೆದ ಕತ್ರಿನಾ ಕೈಫ್
ಅತಿ ನಿರೀಕ್ಷಿತ 68ನೇ ಕೇನ್ಸ್ ಚಲನಚಿತ್ರೋತ್ಸವ 2015 ಕೊನೆಗೂ ಬಂದೇ ಬಿಟ್ಟಿತು. 2015 ನೇ ವರ್ಷದಲ್ಲಿ ಕೇನ್ಸ್‌ನ ಪ್ರತಿಷ್ಠಿತ ಕೆಂಪು ಹಾಸಿನ ಮೇಲೆ ನಡೆದ ಮೊದಲ ಬಾಲಿವುಡ್ ಸುಂದರಿ ಎಂದರೆ ಅದು ಕತ್ರಿನಾ ಕೈಫ್. ಈ ಸುಂದರಿಯು ಕೆಂಪು ಹಾಸಿನ ಮೇಲೆ ತನ್ನ ಕಪ್ಪು ಮತ್ತು ಬೂದು ಬಣ್ಣ ಮಿಶ್ರಿತ ಉಡುಗೆಯಿಂದ ಮತ್ತಷ್ಟು ಸುಂದರವಾಗಿ ಕಾಣುತ್ತಿದ್ದಳು.
ಕತ್ರಿನಾ ಧರಿಸಿದ್ದ ಮನಮೋಹಕ ಬಟ್ಟೆಯು ನೋಡುಗರ ಕಣ್ಮನ ಸೆಳೆಯುತ್ತಿತ್ತು. ಆಕೆ ನೋಡುಗರ ಕಣ್ಣನ್ನು ಸೂರೆಗೊಳ್ಳುವಂತೆ ಕಂಡು ಬಂದಳು. ತನ್ನದೇ ಆದ ಶೈಲಿಯಲ್ಲಿ ಕೇನ್ಸ್ ಚಲನಚಿತ್ರೋತ್ಸವ 2015 ರ ಕೆಂಪು ಹಾಸಿನ ಮೇಲೆ ನಡೆದ ಬಂದ ಈ ಬೆಡಗಿ, ಈ ಬಹು ನಿರೀಕ್ಷಿತ ಸಮಾರಂಭದಲ್ಲಿ ನೆರೆದವರ ಗಮನವೆಲ್ಲ ತನ್ನತ್ತಲೆ ಸೆಳೆದುಕೊಳ್ಳುತ್ತ ಬಂದಳು.

ಆಸ್ಕರ್ ಡಿ ಲಾ ರೆಂಟಾ ವಿನ್ಯಾಸ ಮಾಡಿದ ಬ್ಲಾಕ್ ರೆಡ್ ಕಾರ್ಪೆಟ್ ಗೌನ್‌ನಲ್ಲಿ ಆಕೆ ಮೋಡಿ ಮಾಡುತ್ತಿದ್ದಳು. ಆ ಕಪ್ಪು ಗೌನ್ ಆಫ್ ಶೌಲ್ಡರ್ ಹೊಂದಿತ್ತು, ಅದರ ಕೆಳಗೆ ಮೇಲೆ ಹೂವಿನ ಅಲಂಕಾರಗಳ ಚಿತ್ತಾರ ಬಿಡಿಸಲಾಗಿತ್ತು. ಇದು ಲಘುವಾದ ಜಲಕನ್ಯೆಯಂತಹ ಡೊಂಕನ್ನು ಹೊಂದಿದ್ದ ಉಡುಗೆಯಾಗಿದ್ದು, ಈಕೆ ಇದರೊಂದಿಗೆ ಒಂದು ಸಣ್ಣ ಟ್ರೈನ್ ಸಹ ಹೊಂದಿದ್ದಳು. ಅದನ್ನು ಆಕೆ ತುಂಬಾ ಹೊತ್ತು ಇರಿಸಿಕೊಂಡಿದ್ದಳು.
ಕತ್ರಿನಾ ಕೈಫ್ ಮುಖದಲ್ಲಿದ್ದ ಆತ್ಮವಿಶ್ವಾಸ ಆಕೆಯ ಲುಕ್‌ಗೆ ಮತ್ತಷ್ಟು ಮೆರಗನ್ನು ನೀಡಿತ್ತು. ಇದೆಲ್ಲಕ್ಕಿಂತ ಮಿಗಿಲಾಗಿ, ಆಕೆಯ ಗೌನ್ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿತ್ತು. ಆಸ್ಕರ್ ಡಿ ಲಾ ರೆಂಟಾವು ಕನಿಷ್ಠ ಮಟ್ಟದ ಆಕ್ಸೆಸರಿ ಮತ್ತು ಹೆಚ್ಚಿನ ಮೇಕಪ್ ಜೊತೆಗೆ ಕಂಗೊಳಿಸುತ್ತಿತ್ತು. ಕತ್ರಿನಾ ತನ್ನ ಬುರ್ಗಂಡಿ ಕೇಶ ಶೈಲಿಯನ್ನು ಹೊಂದಿದ್ದಳು. ಇದನ್ನು ಆಕೆ ಪಕ್ಕಕ್ಕೆ ಬಿಟ್ಟುಕೊಂಡಿದ್ದಳು, ಅದರಲ್ಲಿಯೂ ನವಿರಾದ ಆ ಮುಂಗುರಳುಗಳು ಈಕೆಯನ್ನು ಅಪ್ಸರೆಯೆ ಧರೆಗಿಳಿದು ಬಂದಂತೆ ತೋರುತ್ತಿದ್ದವು. ಕೇನ್ಸ್ 2015: ನವನವೀನ ನೆಕ್‌ಲೈನ್ ದಿರಿಸಿನಲ್ಲಿ ಲಲನೆಯರು
ಕತ್ರಿನಾ ತನ್ನ ಸೌಂದರ್ಯಕ್ಕೆ ಪುಟವಿಟ್ಟಂತೆ ಟಿಯರ್ ಡ್ರಾಪ್ ಡೈಮಂಡ್ ಇಯರ್ ರಿಂಗ್ ಧರಿಸಿದ್ದಳು ಮತ್ತು ಸಣ್ಣದಾದ ಡೈಮಂಡ್ ಬ್ರೇಸ್‍ಲೈಟ್ ಸಹ ಧರಿಸಿದ್ದಳು. ಹೀಗೆ ಈಕೆ ಭಾರತದ ಪ್ರತಿನಿಧಿಯಾಗಿ, ಹೆಮ್ಮೆಯಿಂದ ಮತ್ತು ಬಿಗುಮಾನದಿಂದ ಆ ಕಾರ್ಪೆಟ್ ಮೇಲೆ ನಡೆದು ಬಂದಳು. ಈಕೆಯನ್ನು ಕೇನ್ಸ್ ಚಲನಚಿತ್ರೋತ್ಸವ 2015 ರಲ್ಲಿ ನೋಡಿ ನಮ್ಮ ಕಣ್ಮಾನಗಳು ಸಹ ಖುಷಿಯಿಂದ ಕುಣಿದಾಡಿತು ಎಂದರೆ ತಪ್ಪಾಗಲಾರದು.
ಮತ್ತೊಂದು ಕಡೆ ಈಕೆ ಇದೇ ದಿನ ಮಿಲ್ಲಿ ವಿನ್ಯಾಸ ಮಾಡಿದ ಮೊನ್‌ಕ್ರೋಮ್ ನಂಬರ್ ಧರಿಸಿ ಕಂಡು ಬಂದಿದ್ದಳು. ಈ ಉಡುಗೆಯೊಂದಿಗೆ ಸಹ ಆಕೆ ಬುರ್ಗುಂಡಿ ಬೀಚ್ ಕರ್ಲ್‌ಗಳನ್ನು ಧರಿಸಿದ್ದಳು ಮತ್ತು ಇದು ಆಕೆಯ ಲುಕ್‌ಗೆ ಪರಿಪೂರ್ಣವಾಗಿ ಒಪ್ಪುತ್ತಿದ್ದವು.



Click it and Unblock the Notifications

