Latest Updates
-
ಸೈಫ್-ಕರೀನಾ ಪ್ರೇಮಪತ್ರದ ರಹಸ್ಯ: ನಿಮ್ಮ ಸಂಬಂಧವನ್ನೂ ಗಟ್ಟಿಗೊಳಿಸಲು ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ! -
ಈರುಳ್ಳಿ ಬೆಲೆ ಏರಿಕೆ: ಬಜೆಟ್ ಉಳಿಸಲು ಮತ್ತು ಈರುಳ್ಳಿ ದೀರ್ಘಕಾಲ ಸಂಗ್ರಹಿಸಲು ಸರಳ ಟಿಪ್ಸ್ -
ಏಕಾದಶಿ ಉಪವಾಸ: ಆರೋಗ್ಯಕರವಾಗಿರಲು ₹300ರಲ್ಲಿ ಪೌಷ್ಟಿಕ ಆಹಾರದ ಪ್ಲಾನ್ ಇಲ್ಲಿದೆ! -
ಸ್ಯಾಮ್ಸಂಗ್ One UI 9 ಅಪ್ಡೇಟ್: ನಿಮ್ಮ ಫೋನ್ಗೆ ಬಂದಿದೆಯೇ? ಸುರಕ್ಷಿತವಾಗಿ ಇನ್ಸ್ಟಾಲ್ ಮಾಡುವುದು ಹೇಗೆ? -
ಮಳೆಗಾಲದಲ್ಲಿ ಫಿಟ್ ಆಗಿರಲು 12 ನಿಮಿಷಗಳ ಇಂಡೋರ್ ವರ್ಕೌಟ್: ಜಿಮ್ ಇಲ್ಲದೆ ಮನೆಯಲ್ಲೇ ಮಾಡಿ! -
ವೈಫ್ ಅಪ್ರಿಶಿಯೇಷನ್ ಡೇ: ನಿಮ್ಮ ಮಡದಿಗೆ ಈ ವಿಶೇಷ ದಿನದಂದು ನೀಡಬಹುದಾದ ಸರಳ ಮತ್ತು ಸುಂದರ ಸರ್ಪ್ರೈಸ್ಗಳು ಇಲ್ಲಿವೆ! -
ಮಳೆಗಾಲದ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸೋರಿಕೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮರೆವಿನ ಕಾಯಿಲೆಗೆ ವಿದಾಯ: ಮೆದುಳಿನ ಆರೋಗ್ಯಕ್ಕೆ ಭಾರತೀಯ ಶೈಲಿಯ 'ಮೈಂಡ್ ಡಯಟ್' ಹೀಗಿರಲಿ! -
2026ರ ಏಷ್ಯನ್ ಗೇಮ್ಸ್: ಮೊದಲ ದಿನವೇ ಭಾರತಕ್ಕೆ ಪದಕದ ಬೇಟೆ! ಪಂದ್ಯಗಳ ಸಂಪೂರ್ಣ ವೇಳಾಪಟ್ಟಿ ಮತ್ತು ಲೈವ್ ಅಪ್ಡೇಟ್ಸ್ ಇಲ್ಲಿದೆ -
ದೆಹಲಿ-ಎನ್ಸಿಆರ್ನಲ್ಲಿ ಕಲುಷಿತ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ಕೇನ್ಸ್ ರೆಡ್ ಕಾರ್ಪೆಟ್‌ನಲ್ಲಿ ಮಿಂಚಿದ ಭಾರತೀಯ ನಟೀಮಣಿಯರು
ಕೇನ್ಸ್ 2015 ರಲ್ಲಿ ನಾವು ಹಲವಾರು ಸುಂದರ ಸೆಲೆಬ್ರಿಟಿಗಳು ರೆಡ್ ಕಾರ್ಪೆಟ್ ಮೇಲೆ ತಮ್ಮದೇ ಆದ ಶೈಲಿಯಲ್ಲಿ ನಡೆದು ಬಂದದ್ದನ್ನು ನೋಡಿದೆವು. ಇದರಲ್ಲಿ ಹಾಲಿವುಡ್ ಬೆಡಗಿಯರು ಗೌನ್ ಮತ್ತು ಜ್ಯುವೆಲ್ಲರಿಗಳಲ್ಲಿ ಕಂಗೊಳಿಸಿದರೆ, ಭಾರತೀಯ ಸುಂದರಿಯರು ತಮ್ಮ ಹೆಚ್ಚಾದ ಮೇಕಪ್‌ನಿಂದ ಗಮನ ಸೆಳೆದರು. ಇದು 68 ನೇಯ ಕೇನ್ಸ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಕಂಡು ಬಂದ ಅಂಶವಾಗಿತ್ತು.
ಅದರಲ್ಲೂ ಮೇಕಪ್ ವಿಚಾರಕ್ಕೆ ಬಂದರೆ ನಮ್ಮ ಭಾರತೀಯ ಸೆಲೆಬ್ರಿಟಿಗಳನ್ನು ಸೋಲಿಸಲು ಇಡೀ ವಿಶ್ವಕ್ಕೆ ಅಸಾಧ್ಯ ಎಂಬಂತಹ ಮಾತು ಕೇನ್ಸ್‌ನಲ್ಲಿ ಈ ಬಾರಿಯೂ ಖಚಿತವಾಯಿತು..! ಎಂದಿನಂತೆ ಈ ಬಾರಿಯೂ ಕೂಡ ಐಶ್ವರ್ಯಾ ರೈ ಭಾರತೀಯ ಸುಂದರಿಯರಲ್ಲಿ ಮುಂಚೂಣಿ ಸ್ಥಾನದಲ್ಲಿ ನಿಂತರು. ಈಕೆ ರೆಡ್ ಕಾರ್ಪೆಟ್ ಈವೆಂಟ್‌ಗಳಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವಂತೆ ಬ್ಲೀಡಿಂಗ್ ರೆಡ್ ಲಿಪ್ ಸ್ಟಿಕ್ ಲುಕ್‌ನಲ್ಲಿ ಕಾಣಿಸಿಕೊಂಡರು. ಕೇನ್ಸ್‌ನಲ್ಲಿ ಹೊರಗೆ ಕಾಣಿಸಿಕೊಂಡಾಗಲು ಸಹ ಆಕೆ ಹೊಳೆಯುವ ಉಡುಗೆಗಳ ಮೊರೆ ಹೋದಳು. ಕೇನ್ಸ್ 2015: ಹಸಿರು ದಿರಿಸಿನಲ್ಲಿ ಭುವಿಗಿಳಿದ ದೇವತೆ ಐಶ್ವರ್ಯ
ತಾನೂ ಕೂಡ ಯಾರಿಗೂ ಕಮ್ಮಿಲ್ಲ ಎನ್ನುವಂತೆ ಪೈಪೋಟಿ ನೀಡಿದ ಬಾಲಿವುಡ್ ಬೆಡಗಿ ಸೋನಮ್ ಕಪೂರ್ ತನ್ನ ಗುಲಾಬಿ ಬಣ್ಣದ ದಿರಿಸಿಗೆ ಒಪ್ಪುವಂತಹ ಮೇಕಪ್‌ನಲ್ಲಿ ಸಖತ್ ಹಾಟ್ ಆಗಿ ಕಂಡುಬಂದಿದ್ದರು. ಬನ್ನಿ ಕೇನ್ಸ್ 2015 ರಲ್ಲಿ ಯಾರು ಹೇಗೆಲ್ಲಾ ಮೇಕಪ್ ಧರಿಸಿದ್ದರು ಎಂದು ಒಮ್ಮೆ ನೋಡಿಕೊಂಡು ಬರೋಣ...

ಬೆರ್ರಿ ಲುಕ್
ಐಶ್ವರ್ಯ ರೈ ಆಸ್ಕರ್ ಡಿ ಲಾ ರೆಂಟಾ ವಿನ್ಯಾಸ ಮಾಡಿದ್ದ ಬೆರ್ರಿ ಗೌನ್ ಧರಿಸಿ ಕಂಗೊಳಿಸಿದರು. ಈಕೆ ಯಾವಾಗಲು ಈ ವೈನ್ ಲುಕ್‌ಗೆ ಒಪ್ಪುವಂತಹ ಅದೇ ಬಣ್ಣದ ಲಿಪ್ ಸ್ಟಿಕ್‌ನಲ್ಲಿ ಕಾಣಿಸಿಕೊಳ್ಳುತ್ತಾಳೆ. ಜೊತೆಗೆ ಪಿಂಕ್ ಟಿಯರ್ ಡ್ರಾಪ್ ಇಯರ್ ರಿಂಗ್‌ಗಳು ಮತ್ತು ಸ್ಮೋಕಿ ಐ ಮೇಕಪ್ ಆಕೆಯ ಉಡುಗೆಗೆ ಹೊಂದಾಣಿಕೆಯಾಗುತ್ತಿತ್ತು.

ಫ್ಲೋರಲ್ ಟ್ವಿಸ್ಟ್
ಆಕೆಯ ಫ್ಲೋರಲ್ ಸವ್ಯಸಾಚಿ ಗೌನ್ ತನ್ನ ರೆಡ್ ಬೆಲ್ಟ್‌ನೊಂದಿಗೆ ರೆಡ್ ಕಾರ್ಪೆಟ್ ಮೇಲೆ ಕಾಮನಬಿಲ್ಲನ್ನು ಕೆಳಗೆ ತಂದಂತಹ ಅನುಭವವನ್ನು ನೀಡಿತು. ಈ ಮನಮೋಹಕ ದಿರಿಸಿನಲ್ಲಿಯೂ ಆಕೆ ತನ್ನ ಕೆಂದುಟಿಗಳಿಂದ ಕಂಗೊಳಿಸಿದಳು. ಇಯರ್ ರಿಂಗ್‌ಗಳು ಬಟ್ಟೆಗೆ ಹೊಂದಿಕೊಳ್ಳುತ್ತಿತ್ತು ಎಂದು ವಿವರಿಸಿ ಹೇಳಬೇಕಾಗಿಲ್ಲ. ಎಂದಿನಂತೆ ಸ್ಮೋಕಿ ಐ ಮೇಕಪ್ ಆಕೆಯ ಉಡುಗೆಗೆ ಹೊಂದಾಣಿಕೆಯಾಗುತ್ತಿತ್ತು.

ಗುಲಾಗಿ ಗುಲಾಬಿ ಗುಲಾಮ ನಾ ನಿನ್ನ,,,,,
ನಮ್ಮ ಪ್ರಕಾರ ನಮ್ಮ ಭಾರತೀಯ ಸೆಲೆಬ್ರಿಟಿಗಳು ಗುಲಾಬಿ ಬಣ್ಣಕ್ಕೆ ಮನಸೋತಿದ್ದಾರೆ ಎಂದೆನಿಸುತ್ತದೆ. ಮಲ್ಲಿಕಾ ಸಹ ಈ ಬಾರಿ ಅಧಿಕ ಮೇಕಪ್ ಜೊತೆಗೆ ಕಾಣಿಸಿಕೊಂಡರು, ಆಕೆಯ ಗುಲಾಬಿ ಉಡುಗೆಯೇ ಎಲ್ಲರ ಕಣ್ಣನ್ನು ತನ್ನತ್ತ ಸೆಳೆದಿತ್ತು.

ಬೆಳ್ಳಿಯ ಕಣ್ಣುಗಳು
ರಿಚಾ ಕೇನ್ಸ್ 2015ರಲ್ಲಿ ನಡೆದ ಫೋಟೊ-ಕಾಲ್‌ನಲ್ಲಿ ಹೊಳೆಯುವ ಲುಕ್‌ನಲ್ಲಿ ಕಂಗೊಳಿಸಿದಳು. ಆಕೆ ಹೊಳಪಿನಿಂದ ಕೂಡಿದ ತುಟಿಗಳನ್ನು ಮಿಸ್ ಮಾಡಿಕೊಂಡರೂ, ತನ್ನ ಸಿಲ್ವರೀ ಐ ಶಾಡೋ ಮತ್ತು ಲೈನರ್‌ನಿಂದ ಕಂಗೊಳಿಸಿದಳು. ಆಕೆ ತನ್ನ ಅಧಿಕ ಮೇಕಪ್‌ನಿಂದ ತನ್ನ ಲುಕ್ ಹಾಳು ಮಾಡಿಕೊಂಡಳು ಎಂದು ಹೇಳಬಹುದು.

ಭಯಂಕರ ಮೇಕಪ್
ಸೋನಮ್ ತನ್ನ ಫೆದರಿ ಎಲಿ ಸಾಬ್ ಗೌನ್‌ಗೆ ಒಪ್ಪದಂತಹ ಭಯಂಕರ ಮೇಕಪ್ ಧರಿಸಿದ್ದಳು. ಇದರಿಂದಾಗಿ ಆಕೆ ಇತರರ ಕಣ್ಮನ ಸೆಳೆಯಲು ವಿಫಲವಾದಳು. ಇದು ನಿಜಕ್ಕೂ ದುರಂತ ಎಂದೇ ಹೇಳಬೇಕು. ಗುಲಾಬಿ ಬಣ್ಣದ ತುಟಿಗಳಿಗೆ ಹೊಂದುವುದಕ್ಕಾಗಿ, ಆಕೆ ಗುಲಾಬಿ ಇಯರ್ ರಿಂಗ್ ಧರಿಸಿದ್ದಳು.

ಬ್ಲೂ ಬ್ಯೂಟಿ
ಸೋನಮ್‌ನ ಗೌನ್‍ಗಳು ಸಹ ಮೇಕಪ್‌ನ ಕೆಟ್ಟ ವಿಚಾರದಲ್ಲಿ ಹಿಂದೆ ಬೀಳಲಿಲ್ಲ. ಆಕೆ ಕೇನ್ಸ್ 2015ರಲ್ಲಿ ಧರಿಸಿದ್ದ ಎಲ್ಲಾ ಉಡುಗೆಗಳು ಅಭಿಮಾನಿಗಳನ್ನು ಮತ್ತು ಫ್ಯಾಷನ್ ಪ್ರಿಯರನ್ನು ಸೆಳೆಯಲು ವಿಫಲಗೊಂಡವು.



Click it and Unblock the Notifications
