Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಲ್ಯಾವೆಂಡರ್ ದಿರಿಸಿನಲ್ಲಿ ಮೋಹಕ ಸುಂದರಿ ಐಶ್ವರ್ಯ ರೈ
ಐಶ್ವರ್ಯಾ ರೈ ಮತ್ತೊಮ್ಮೆ ಕಾನ್ 2015ರಲ್ಲಿ ಎಲಿ ಸಾಬ್ ಕೌಚರ್ ಗೌನ್‌ನಲ್ಲಿ ನಮ್ಮನ್ನೆಲ್ಲ ಮಂತ್ರ ಮುಗ್ಧಗೊಳಿಸುವಂತೆ ಕಂಡುಬಂದರು. ಇವರು ಇಲ್ಲಿ ನಡೆದ AmFar (ಅಮೆರಿಕನ್ ಫೌಂಡೇಶನ್ ಫಾರ್ ಏಡ್ಸ್ ರಿಸರ್ಚ್) ಸಮಾರಂಭದಲ್ಲಿ ಭಾಗವಹಿಸಿದಾಗ ಲ್ಯಾವೆಂಡರ್ ಬಣ್ಣದ ಈ ಗೌನಿನಲ್ಲಿ ಕ್ಯಾಮೆರಾ ಕಣ್ಣಿಗೆ ಕಾಣಿಸಿಕೊಂಡರು. ಆಕೆ ಈ ಸ್ಟ್ರ್ಯಾಪ್ ಲೆಸ್ ಗೌನ್‌ನಲ್ಲಿ ನಯನ ಮನೋಹರವಾಗಿ ಕಾಣಿಸಿಕೊಂಡಳು.
ಪ್ರತಿಯೊಮ್ಮೆ AmFar ಸಮಾರಂಭ ನಡೆದಾಗಲು ಈಕೆ ತನ್ನ ಪತಿ ಅಭಿಷೇಕ್ ಬಚ್ಚನ್ ಜೊತೆಗೆ ಕಾಣಿಸಿಕೊಳ್ಳುತ್ತಿದ್ದಳು. ಆದರೆ ಈ ವರ್ಷ ಈಕೆ ಏಕಾಂಗಿಯಾಗಿ ಪಾಲ್ಗೊಂಡು ಅಚ್ಚರಿ ಮೂಡಿಸಿದಳು.

ಐಶ್ವರ್ಯಾ ರೈ ಧರಿಸಿದ್ದ ಈ ಎಲಿ ಸಾಬ್ ಲ್ಯಾವೆಂಡರ್ ಗೌನ್ ಸಾಂಪ್ರದಾಯಿಕ ಬಾಲ್‍ರೂಮ್ ಗೌನ್ ಆಗಿತ್ತು. ಈ ಸ್ಟ್ರ್ಯಾಪ್ ಲೆಸ್ ಗೌನ್ ಟೆಪರ್ಡ್ ಸೊಂಟವನ್ನು ಹೊಂದಿತ್ತು. ಸೊಂಟದ ಕೆಳಗೆ ಇದು ಒಂದು ರೀತಿಯ ಪಫ್ಫ್‌ಡ್ ಲುಕ್ ನೀಡುತ್ತಿತ್ತು.
ಐಶ್ವರ್ಯಾ ರೈ ಈ ಎಲಿಸಾಬ್ ಗೌನ್‌ನಲ್ಲಿ ಎಲ್ಲರ ಕಣ್ಮನ ಸೆಳೆಯುತ್ತಿದ್ದರು. ಇದು ರೆಡ್ ಕಾರ್ಪೆಟ್ ಸಮಾರಂಭಗಳಿಗೆ ಹೇಳಿ ಮಾಡಿಸಿದಂತಹ ಲುಕ್ ಆಗಿತ್ತು. ವಿಶ್ವದ ಈ ಅತ್ಯಂತ ಸುಂದರ ಹೆಂಗಸು ಕೇವಲ ತನ್ನ ಸೌಂದರ್ಯದಿಂದಷ್ಟೇ ಅಲ್ಲದೆ ಹೃದಯ ಶ್ರೀಮಂತಿಕೆಯಿಂದ ಸಹ ಜನರನ್ನು ಮೋಡಿ ಮಾಡುವಲ್ಲಿ ಎಂದಿಗು ಹಿಂದೇಟು ಹಾಕುವುದಿಲ್ಲ. ಅದಕ್ಕೆ ಈ ಸಮಾರಂಭ ಮತ್ತೊಮ್ಮೆ ಸಾಕ್ಷಿಯಾಯಿತು.
ಹಲವಾರು ಬ್ರ್ಯಾಂಡ್‌ಗಳ ರಾಯಭಾರಿಯಾಗಿರುವ ಈಕೆ, ಮಾನವೀಯತೆಯಿಂದ ಹಲವಾರು ಒಳ್ಳೆಯ ಕಾರ್ಯಗಳಿಗೂ ಸಹ ಕೈಜೋಡಿಸುತ್ತಾ ಇರುತ್ತಾರೆ. ವಿಶ್ವದಾದ್ಯಂತ ಮನುಕುಲದ ಏಳಿಗೆಗಾಗಿ ದುಡಿಯುತ್ತಿರುವ ಹಲವಾರು ಫೌಂಡೇಶನ್‍ಗಳ ಜೊತೆಗೆ ಈಕೆ ಕೆಲಸ ಮಾಡುತ್ತಿದ್ದಾಳೆ. ಇದು ಆಕೆಯ ಪ್ರತಿಯೊಬ್ಬ ಅಭಿಮಾನಿಗೂ ತಿಳಿದಿರುವ ವಿಷಯವೇ.
ಈ ಲ್ಯಾವೆಂಡರ್ ಎಲಿ ಸಾಬ್ ಗೌನ್‍ಗೆ ಹೊಂದುವಂತೆ ಆಕೆ ಹಗುರವಾದ ವೇವ್ ಕೇಶ ವಿನ್ಯಾಸ ಮಾಡಿಕೊಂಡಿದ್ದಳು ಮತ್ತು ಲ್ಯಾವೆಂಡರ್ ಐಲೈನರ್ ಮತ್ತು ನ್ಯೂಡ್ ಲಿಪ್‍ಸ್ಟಿಕ್ ಧರಿಸಿದ್ದಳು. ಜೊತೆಗೆ ವಜ್ರದ ನೆಕ್ಲೇಸ್ ಮತ್ತು ಸ್ಟಡ್‌ಗಳ ಜೊತೆಗೆ ತನ್ನ ಲುಕ್ ಪೂರ್ಣಗೊಳಿಸಿದ್ದಳು.



Click it and Unblock the Notifications

