Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಗಂಧರ್ವ ಲೋಕದಲ್ಲಿ ತೇಲುವಂತೆ ಮಾಡಿದ ಐಶ್ವರ್ಯ ರೈ!
ಅಪ್ಸರೆಯರು ಭೂಮಿಯ ಮೇಲೆ ಕಾಣಿಸಿಕೊಳ್ಳುತ್ತಾರೆ ಎಂಬುದನ್ನು ನೀವು ನಂಬುವಿರಾ? ನಿಮಗೆ ನಂಬಿಕೆ ಬರಲಿಲ್ಲವಾದಲ್ಲಿ ಐಶ್ವರ್ಯ ರೈಯನ್ನು ಒಮ್ಮೆ ನೋಡಿ. ಆಗ ನಿಮಗೆ ಗೊತ್ತಾಗುತ್ತದೆ ಅಪ್ಸರೆ ಎಂದರೆ ಹೇಗೆ ಇರುತ್ತಾರೆ ಎಂದು!.
ಕೇನ್ಸ್ ನಲ್ಲಿ ಕಳೆದ ಎರಡು ದಿನಗಳಲ್ಲಿ ಆಕೆ ಒಮ್ಮೆ ಫ್ಲೋರಲ್ ಸವ್ಯಸಾಚಿ ಡ್ರೆಸ್ ಧರಿಸಿ ಕಾಣಿಸಿಕೊಂಡರೆ, ಮತ್ತೊಮ್ಮೆ ಎಮೆರಾಲ್ಡ್ ಎಲಿ ಸಾಬ್‌ನಲ್ಲಿ ಕಾಣಿಸಿಕೊಂಡಳು. ಈ ಬಾರಿ ಆಕೆ ತನ್ನ ಮುಗ್ಧ ಲುಕ್ ಜೊತೆಯಲ್ಲಿ ನಮ್ಮನ್ನು ಗಂಧರ್ವ ಲೋಕದಲ್ಲಿ ತೇಲುವಂತೆ ಮಾಡಿದಳು. ಅನುಪಮ ಚೋಪ್ರಾ ಜೊತೆಗೆ ಆಕೆ ತನ್ನ ಮೋಹಕ ನಗು ಬಿರುತ್ತ ನಮ್ಮ ದೃಷ್ಟಿಗೆ ಬಿದ್ದಳು.

ತನ್ನ ಎಂದಿನ ಅದೇ ಉಲ್ಲಾಸ ಮತ್ತು ಉತ್ಸಾಹದಿಂದ ಆಕೆ ಶ್ರೀಮತಿ ಚೋಪ್ರಾ ಜೊತೆಗೆ ಮಾತನಾಡುತ್ತ ಇದ್ದುದ್ದನ್ನು ನಮ್ಮ ಕ್ಯಾಮೆರಾಗಳು ಸೆರೆ ಹಿಡಿದವು. ಆಗ ಆಕೆ ಧರಿಸಿದ್ದ ಬಟ್ಟೆಯು ತಾಜಾತನದ ಹೊಸ ಫ್ಯಾಷನ್ ಅನ್ನು ಅನಾವರಣ ಮಾಡಿತು.
ಆಕೆ ಧರಿಸಿದ್ದು, ಸ್ಟೆಲ್ಲಾ ಮೆಕ್‌ಕಾರ್ಟ್ನಿ, ಆಕೆ ಧರಿಸಿದ್ದ ಪ್ರಿಂಟೆಡ್ ಪಲ್ಲಾಜ್ಜೊ ಪ್ಯಾಂಟ್‌ಗಳು ಆಕೆಯ ಉಬ್ಬು ತಗ್ಗುಗಳಿಗೆ ಚಂದವಾಗಿ ಒಪ್ಪುತ್ತಿತ್ತು. ಇದು ಆಕೆ ಧರಿಸಿದ್ದ ಬಣ್ಣದ ಬಟನ್ ಶರ್ಟ್‌ಗೆ ಕೂಡ ಹೊಂದಾಣಿಕೆಯಾಗುತ್ತಿತ್ತು. ಒಂದು ಜೊತೆ ಪಂಪ್‌ಗಳು ಇದಕ್ಕೆ ಸಾಥ್ ನೀಡುತ್ತಿದ್ದವು. ಆಕೆ ಕಡಿಮೆ ಆಕ್ಸೆಸರಿಗಳನ್ನು ಧರಿಸಿದ್ದಳು.
ಈ ಸಂದರ್ಭದಲ್ಲಿ ಆಕೆ ತನ್ನ ಟ್ರೇಡ್‌ಮಾರ್ಕ್ ಆದ ಬ್ಲಡ್ ರೆಡ್ ಲಿಪ್‍ಸ್ಟಿಕ್ ಹಚ್ಚಿಕೊಂಡಿದ್ದಳು. ಇದರ ಜೊತೆಗೆ ಆಕೆ ಬೀಚ್ ಕರ್ಲ್ ಮತ್ತು ಇಳಿ ಬಿಟ್ಟ ಕೇಶಶೈಲಿಯನ್ನು ಮಾಡಿಕೊಂಡಿದ್ದಳು. ಕೇನ್ಸ್ 2015: ಹಸಿರು ದಿರಿಸಿನಲ್ಲಿ ಭುವಿಗಿಳಿದ ದೇವತೆ ಐಶ್ವರ್ಯ
ಈ ಲುಕ್ ಆಕೆ ಕೇನ್ಸ್ 2015 ರ ರೆಡ್ ಕಾರ್ಪೆಟ್ ಮೇಲೆ ಕಾಣಿಸಿಕೊಂಡ ಲುಕ್‌ನಂತೆಯೇ ಇತ್ತು. ಇದರ ಜೊತೆಗೆ ಇದೇ ವಿನ್ಯಾಸಕಾರರು-ಸ್ಟೆಲ್ಲಾ ಮೆಕ್‌ಕಾರ್ಟ್ನಿ ವಿನ್ಯಾಸ ಮಾಡಿದ ಮತ್ತೊಂದು ಬಿಳಿ ಸೂಟ್ ಸಹ ಧರಿಸಿ ಐಶ್ವರ್ಯ ರೈ ಒಂದು ಫೋಟೊ-ಕಾಲ್‌ನಲ್ಲಿ ಭಾಗವಹಿಸಿದರು. ಆದರೂ ಬಿಳಿಯ ಉಡುಗೆಯಲ್ಲಿ ಐಶ್ವರ್ಯ ರೈ ಗಂಧರ್ವ ಲೋಕದಿಂದ ಭುಮಿಗಿಳಿದು ಬಂದ ಅಪ್ಸರೆಯಂತೆ ಕಾಣಿಸುತ್ತಿದ್ದಳು.
ಕೇನ್ಸ್ 2015 ರಲ್ಲಿ ಐಶ್ವರ್ಯ ರೈ ಕಾಣಿಸಿಕೊಂಡ ಈ ಎರಡೂ ಸ್ಟೆಲ್ಲಾ ಮೆಕ್‌ಕಾರ್ಟ್ನಿಗಳಲ್ಲಿ ಇದ್ದ ಒಂದೇ ಒಂದು ವ್ಯತ್ಯಾಸವೆಂದರೆ, ಅದು ಪ್ರಿಂಟೆಡ್ ಪಲ್ಲಾಜ್ಜೊ ಪ್ಯಾಂಟ್.
ಆದರೆ ಇದನ್ನು ಆಕೆ ಅಧಿಕ ಬಣ್ಣ್ಣದ ಶೈಲಿ ಮತ್ತು ಹೈ ನೀಟ್ ಪಂಪ್‌ಗಳು ಹಾಗು ಅದಕ್ಕೆ ಒಪ್ಪುವಂತಹ ಬೀಸೀಚಿಂಗ್ ಕೇಶ ಶೈಲಿಯ ಮೂಲಕ ಸೌಂದರ್ಯದ ತುತ್ತ ತುದಿಗೆ ಏರಿಸಿದ್ದಳು. ಐಶ್ವರ್ಯ ರೈ ಧರಿಸಿದ್ದ ಈ ಎರಡು ಸ್ಟೆಲ್ಲಾ ಮೆಕ್‌ಕಾರ್ಟ್ನಿಗಳಲ್ಲಿ ನಿಮಗೆ ಯಾವುದು ಇಷ್ಟವಾಯಿತು?



Click it and Unblock the Notifications



