Latest Updates
-
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್!
ಜಸ್ಬಾ ಚಿತ್ರದ ಫಸ್ಟ್ ಲುಕ್‌ನಲ್ಲಿ ಕರಾವಳಿ ಮಿಂಚು ಐಶ್ವರ್ಯ
ಕೇನ್ಸ್ 2015ರ ರೆಡ್ ಕಾರ್ಪೆಟ್ ಮೇಲೆ ಐಶ್ವರ್ಯ ರೈ ಮೊದಲ ಲುಕ್‌ನಲ್ಲೇ ನೋಡುಗರನ್ನು ಬಿಟ್ಟ ಕಣ್ಣು ಬಿಟ್ಟಂತೆ ಮಾಡುವಂತೆ ಮಾಡಿದು ಮಾತ್ರ ಸುಳ್ಳಲ್ಲ! ನೋಡಿದರೆ ಮತ್ತೆ, ಮತ್ತೆ ನೋಡಬೇಕೆನ್ನುವ, ಈಕೆಯ ಮನಸೂರೆಗೊಳ್ಳುವಂತಹ ಸೌಂದರ್ಯಕ್ಕೆ ಮರುಳಾಗದವರು ಯಾರು ಇದ್ದಾರೆ ಹೇಳಿ? ತನ್ನ ಸೌಂದರ್ಯವನ್ನು ಇನ್ನಷ್ಟು ಕಾಂತಿಯುಕ್ತಗೊಳಿಸುವ ಕಲೆ ಐಶ್‌ಗೆ ಕರಗತವಾಗಿರುವುದು ಒಂದು ವಿಶೇಷವೇ ಸರಿ..!
ಪ್ರತಿಯೊಂದು ಉಡುಗೆಯು ಅವರ ಧರಿಸುವ ಶೈಲಿಯಿಂದ ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ.. ಪ್ರತಿ ಬಾರಿಯೂ ಕೇನ್ಸ್ 2015ರ ರೆಡ್ ಕಾರ್ಪೆಟ್‌ನಲ್ಲಿ ಕಾಣಿಸಿಕೊಂಡಾಗಲೂ ಕೂಡ ತನ್ನ ವಿಭಿನ್ನ ಶೈಲಿಯ ಲುಕ್‌ನಲ್ಲಿ ಅಭಿಮಾನಿಗಳ ಪ್ರೀತಿಗೆ ಪಾತ್ರರಾಗುವುದು ಮಾತ್ರ ಸತ್ಯ. ಇತ್ತೀಚೆಗೆ ಇಲ್ಲಿ ನಡೆದ ಜಸ್ಬಾ ಚಿತ್ರದ ಫಸ್ಟ್ ಲುಕ್‌ನಲ್ಲಿ ಪಾಲ್ಗೊಂಡಾಗ ಕಂಡ ಆಕೆಯ ಲುಕ್ ಎಲ್ಲರನ್ನು ನಿಬ್ಬೆರಗಾಗಿಸಿತ್ತು. ಕೇನ್ಸ್ 2015: ಹಸಿರು ದಿರಿಸಿನಲ್ಲಿ ಭುವಿಗಿಳಿದ ದೇವತೆ ಐಶ್ವರ್ಯ
ಕೇನ್ಸ್ನಲ್ಲಿ ಪ್ರತಿ ದಿನ ಹಲವಾರು ಗೌನ್‌ಗಳನ್ನು ಮತ್ತು ಡ್ರೆಸ್‌ಗಳನ್ನು ನಾವು ನೋಡುತ್ತಾ ಇರುತ್ತೇವೆ. ಇದರ ಜೊತೆಗೆ ಫೋಟೋ-ಕಾಲ್‌ಗಳು ಮತ್ತು ಇಂಟರ್‌ವ್ಯೂಗಳು ಇವೆಲ್ಲವನ್ನು ನಾವು ನೋಡುತ್ತಾ ಇರುತ್ತೇವೆ. ಆದರೆ ಐಶ್ವರ್ಯಾ ರೈ ಧರಿಸಿದ್ದ ಈ ಆಕ್ಸಿ-ಬ್ಲಡ್ ಬಣ್ಣದ ಗೌನ್ ಇದ್ದುದ್ದರಲ್ಲಿಯೇ ಅತ್ಯುತ್ತಮ ಎಂದು ಹೇಳಬಹುದು. ಅದು ಹೇಗೆ ಎಂಬುದು ನಿಮ್ಮ ಪ್ರಶ್ನೆಯೇ? ಬನ್ನಿ ಮುಂದೆ ಓದಿ...

ಆಸ್ಕರ್ ಡಿ ಲಾ ರೆಂಟ
ವಿನ್ಯಾಸಕಾರ ಆಸ್ಕರ್ ಡಿ ಲಾ ರೆಂಟರು ಐಶ್ವರ್ಯಾ ರೈ ಮೈಗೆ ಒಪ್ಪುವಂತಹ ಬೆರ್ರಿ ಗೌನ್ ಅನ್ನು ವಿನ್ಯಾಸ ಮಾಡಿಕೊಟ್ಟಿದ್ದರು.ಈ ತೋಳು ಇಲ್ಲದ, ಉಡುಗೆಯು ಶ್ರೀಮತಿ ರೈಯ ಉಬ್ಬು ತಗ್ಗುಗಳಿಗೆ ಸರಿಯಾಗಿ ಹೊಂದಿಕೊಂಡಿತ್ತು.

ಪರ್ಫೆಕ್ಟ್ ಫಿಟ್!
ಐಶ್ವರ್ಯಾ ರೈತೊಟ್ಟಿದ್ದ ಈ ಬಟ್ಟೆಯು ಒಂದು ನಯನ ಮನೋಹರ ಗೌನ್ ಆಗಿದ್ದು, ಇದು ಮೇಲಿನಿಂದ ಕೆಳಗಿನವರೆಗೆ, ವ್ಯವಸ್ಥಿತವಾಗಿ ವಿನ್ಯಾಸಗೊಳಿಸಲ್ಪಟ್ಟಿತ್ತು.

ಸ್ವಲ್ಪ ತಳುಕು
ಆಕೆಯ ಬೆರ್ರಿ ಆಸ್ಕರ್ ಡಿ ಲಾ ರೆಂಟಾವು ವಜ್ರದ ಆಕ್ಸೆಸರಿಗಳು ಮತ್ತು ಹೊಳೆಯುವ ಕೈಬೆರಳಿನುಂಗುರಗಳಿಂದ ಅಲಂಕೃತಗೊಂಡಿದ್ದವು. ಪುಟ್ಟ ಸ್ಟಡ್‌ಗಳು ನಕ್ಷತ್ರಗಳಂತೆ, ಆಕೆಗೆ ಮೆರಗನ್ನು ನೀಡುತ್ತಿದ್ದವು. ಜೊತೆಗೆ ಆಕೆ ಸಾಂಪ್ರದಾಯಿಕ ಬಳೆಗಳನ್ನು ಸಹ ಧರಿಸಿದ್ದಳು.

ಮೇಕಪ್
ಆಕೆ ಬೆರ್ರಿ ಆಸ್ಕರ್ ಡಿ ಲಾ ರೆಂಟಾಗೆ ಒಪ್ಪುವಂತಹ ಮೇಕಪ್ ಮಾಡಿಕೊಂಡಿದ್ದಳು. ಇದು ಸ್ವಲ್ಪ ಹೆಚ್ಚಾಗಿತ್ತು, ಆಕೆಯ ರಕ್ತ ವರ್ಣದ ಲಿಪ್ ಸ್ಟಿಕ್ ಮತ್ತು ಕೆನ್ನೆಗಳು, ಸ್ವಲ್ಪ ಮಿನುಗುತ್ತಿದ್ದವು.

ಜಸ್ಬಾ ತಾರಾ ಬಳಗದೊಂದಿಗೆ
ಈ ಭಾರತೀಯ ಸೆಲೆಬ್ರಿಟಿ ಜಾಜ್‌ಬಾ ತಾರಾ ಬಳಗದೊಂದಿಗೆ ಮತ್ತಷ್ಟು ಹಾಟ್ ಆಗಿ ಕೇನ್ಸ್ 2015 ರಲ್ಲಿ ಕಾಣಿಸಿಕೊಂಡಳು.

ನಯನಮನೋಹರ ಗೌನ್!
ನಿಜಕ್ಕೂ ಇದನ್ನು ನಾವು ನೋಡಿದಾಗ ನಮಗೆ ಆಶ್ಚರ್ಯವಾಗುತ್ತದೆ. ಏಕೆಂದರೆ, ಇದನ್ನು ಆಕೆ ಕೇನ್ಸ್ ರೆಡ್ ಕಾರ್ಪೆಟ್ ಮೇಲೆ ಧರಿಸಿಕೊಂಡು ಕಾಣಿಸಿಕೊಂಡಿರಲಿಲ್ಲ. ಬದಲಿಗೆ ಆಕೆ ಚಿತ್ರದ ಫಸ್ಟ್ ಲುಕ್ ಲಾಂಚ್‌ನಲ್ಲಿ ಕಾಣಿಸಿಕೊಂಡಳು.

ಮತ್ತಷ್ಟು ನಿರೀಕ್ಷಿಸುತ್ತಿದ್ದೀವಿ!!!
ಮುಂದಿನ ಕೆಲವು ದಿನಗಳಲ್ಲಿ ಐಶ್ವರ್ಯಾ ರೈ ಕೇನ್ಸ್ ನಲ್ಲಿ ಯಾವ ಉಡುಗೆಗಳನ್ನು ಧರಿಸುತ್ತಾಳೆ ಎಂದು ನಿರೀಕ್ಷೆ ನಮ್ಮಲ್ಲಿ ಹೆಚ್ಚಾಗುತ್ತಿದೆ. ಬೆರ್ರಿ ಆಸ್ಕರ್ ಡಿ ಲಾ ರೆಂಟಾವು ಅಂತಹ ನಿರೀಕ್ಷೆಗಳನ್ನು ಮತ್ತಷ್ಟು ಹೆಚ್ಚಿಸಿದೆ.

ಒಳ್ಳೆಯ ಪೋಸರ್
ಆಕೆ ಕೇನ್ಸ್ 2015ರಲ್ಲಿ ಕ್ಯಾಮೆರಾಗಳಿಗೆ ಪಾಲಿಗೆ ಹಬ್ಬವಾಗಿದ್ದಾಳೆ. ನಾವು ಆಕೆ ನೀಡುವ ಒಂದೊಂದು ಭಂಗಿಯನ್ನು ಸಹ ಸೆರೆಹಿಡಿಯಲು ಖಾತರವಾಗಿದ್ದೇವೆ. ಏಕೆಂದರೆ ಆಕೆಯ ಒಂದೊಂದು ಭಂಗಿ ನಯನಮನೋಹರ.



Click it and Unblock the Notifications