Latest Updates
-
ಕ್ಯಾಂಪಸ್ ಪ್ರೇಮಿಗಳೇ ಎಚ್ಚರ! ರ್ಯಾಗಿಂಗ್ನಿಂದ ಪಾರಾಗಲು ಮತ್ತು ಸುರಕ್ಷಿತವಾಗಿರಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ಮುಂಬೈ ಭೂಕುಸಿತದ ಎಚ್ಚರಿಕೆ: ಮಳೆಗಾಲದಲ್ಲಿ ನಿಮ್ಮ ಅಪಾರ್ಟ್ಮೆಂಟ್ ಸುರಕ್ಷಿತವಾಗಿಡಲು ಈ ಕ್ರಮಗಳನ್ನು ಪಾಲಿಸಿ -
ಮುಂಬೈ ಮಳೆ ಎಚ್ಚರಿಕೆ: ನಿಮ್ಮ ಮನೆಯನ್ನು ಪ್ರವಾಹದಿಂದ ರಕ್ಷಿಸಲು ಇಂದೇ ಈ 30 ನಿಮಿಷಗಳ ಚೆಕ್ಲಿಸ್ಟ್ ಪಾಲಿಸಿ! -
ಸ್ವಾತಂತ್ರ್ಯ ದಿನದ ಸಂಭ್ರಮ: ಕಡಿಮೆ ಬಜೆಟ್ನಲ್ಲಿ ಆರೋಗ್ಯಕರ 'ತ್ರಿವರ್ಣ' ಉಪಾಹಾರ ತಯಾರಿಸುವುದು ಹೇಗೆ? -
ಸ್ವಾತಂತ್ರ್ಯ ದಿನಾಚರಣೆಯ ಲಾಂಗ್ ವೀಕೆಂಡ್: ₹3,000 ಬಜೆಟ್ನಲ್ಲಿ ಸುರಕ್ಷಿತ ಪ್ರವಾಸಕ್ಕೆ ಬೆಸ್ಟ್ ತಾಣಗಳು! -
ಸ್ವಾತಂತ್ರ್ಯ ದಿನಾಚರಣೆ: ಮಳೆಗಾಲದಲ್ಲೂ ಸ್ಟೈಲಿಶ್ ಆಗಿ ಕಾಣಲು ₹999 ರೊಳಗೆ ಬೆಸ್ಟ್ ಟಿಪ್ಸ್! -
ಹಾಸ್ಟೆಲ್ನಲ್ಲಿದ್ದೀರಾ? ಜಿಮ್ ಇಲ್ಲದೆ ಫಿಟ್ ಆಗಿರಲು ಈ ಸಿಂಪಲ್ 'ಕ್ಯಾಂಪಸ್ ಫಿಟ್' ಟಿಪ್ಸ್ ಫಾಲೋ ಮಾಡಿ! -
ಸಾವಿನ ನಂತರವೂ ಜೀವದಾನ: ದಂಪತಿಗಳೇ, ಈ ಒಂದು ನಿರ್ಧಾರ 8 ಜನರ ಪ್ರಾಣ ಉಳಿಸಬಹುದು! -
ಹರ್ ಘರ್ ತಿರಂಗಾ: ಅಪಾರ್ಟ್ಮೆಂಟ್ ಬಾಲ್ಕನಿಯಲ್ಲಿ ಧ್ವಜ ಹಾರಿಸುವಾಗ ಈ ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಬೆಲೆ ಏರಿಕೆಯ ಬಿಸಿ: ಕೇವಲ ₹99 ಬಜೆಟ್ನಲ್ಲಿ ಸಿಗುವ ಪೌಷ್ಟಿಕಾಂಶಯುಕ್ತ ಹೈ-ಪ್ರೊಟೀನ್ ಊಟದ ಪ್ಲಾನ್!
ಕೇನ್ಸ್ 2015: ಹಸಿರು ದಿರಿಸಿನಲ್ಲಿ ಭುವಿಗಿಳಿದ ದೇವತೆ ಐಶ್ವರ್ಯ
ನೋಡಿದರೆ ಮತ್ತೆ ನೋಡಬೇಕೆನ್ನುವ, ನೋಡಿದವರ ಮನಸೂರೆಗೊಳ್ಳುವಂತಹ ಚೆಲುವಿನ ರಾಣಿ ಐಶ್ವರ್ಯ ರೈ ಕೇನ್ಸ್ 2015 ರಲ್ಲಿ ಫ್ಯಾಷನ್ ಅನ್ನು ಮತ್ತೊಂದು ಮಟ್ಟಕ್ಕೆ ಕೊಂಡೊಯ್ದರು ಎಂದರೆ ತಪ್ಪಾಗಲಾರದು. ಕೇನ್ಸ್ 2015 ರಲ್ಲಿ ಆಕೆ ರೆಡ್ ಕಾರ್ಪೆಟ್ ಮೇಲೆ ಕಾಣಿಸಿಕೊಂಡ ಮೊದಲ ಲುಕ್ ಫ್ಲೋರಲ್ ಆಗಿದ್ದ ಸಬ್ಯಸಾಚಿ ಗೌನ್ ಆಗಿತ್ತು.
ಭಾರತೀಯ ವಿನ್ಯಾಸಕಾರರು ವಿನ್ಯಾಸ ಮಾಡಿದ್ದ ಆ ಗೌನ್‍ನಲ್ಲಿ ಆಕೆ ನಯನ ಮನೋಹರವಾಗಿ, ಕಣ್ಣುಗಳಿಗೆ ಹಬ್ಬವನ್ನುಂಟು ಮಾಡುವಂತೆ ಕಂಡು ಬಂದಳು. ರಾಯಲ್ ಆಗಿದ್ದ ಆ ಲುಕ್ ಜೊತೆಗೆ ಕೇನ್ಸ್ 2015ರ ನಾಲ್ಕನೇ ದಿನ ತನ್ನ ಎರಡನೆ ಲುಕ್‍ನಲ್ಲಿ ಆಕೆ ನೋಡುಗರ ಕಣ್ಮನಗಳಿಗೆ ಕಿಚ್ಚು ಹಚ್ಚುವಂತೆ ಕಂಡು ಬಂದಳು. ಕೇನ್ಸ್ 2015: ಬಿಟ್ಟ ಕಣ್ಣು ಬಿಟ್ಟಂತೆ ಮಾಡಿದ ಸೆಲೆಬ್ರಿಟಿಗಳು
ಈ ಲುಕ್‍ನಲ್ಲಿ ಐಶ್ವರ್ಯ ರೈ ಅಡಿಯಿಂದ ಮುಡಿಯವರೆಗೆ ಲೇಸ್ ಗೌನ್ ಧರಿಸಿದ್ದಳು. ಇದನ್ನು ವಿನ್ಯಾಸ ಮಾಡಿದ್ದು, ಖ್ಯಾತ ವಿನ್ಯಾಸಕಾರ ಎಲಿ ಸಾಬ್. ಆತ ಐಶ್ವರ್ಯ ರೈಯವರ ಮೈಗೆ ಒಪ್ಪುವಂತಹ ವಿನ್ಯಾಸವನ್ನು ಮಾಡಿದ್ದರು. ಇದಕ್ಕಾಗಿ ಅವರಿಗೆ ಶಹಭಾಷ್ ಹೇಳಲೇ ಬೇಕು. ಈ ಪಚ್ಚೆ ಬಣ್ಣದ ಗೌನ್ ರೆಡ್ ಕಾರ್ಪೆಟ್ ಮೇಲೆ ಮಿರಿ ಮಿರಿ ಎಂದು ಮಿರುಗುತ್ತಿತ್ತು. ಜೊತೆಗೆ ಐಶ್ವರ್ಯಾಳ ಮಾದಕ ಕಣ್ಣುಗಳು, ಅದಕ್ಕೆ ಮಾಡಿದ್ದ
ಸ್ಮೋಕಿ ಐಸ್ ಮೇಕಪ್, ಮತ್ತಷ್ಟು ರಂಗು ತುಂಬಿದ್ದವು. ಕೇನ್ಸ್ 2015 ರ ನಾಲ್ಕನೇ ದಿನದಲ್ಲಿ ಈ ಭಾರತೀಯ ಸೆಲೆಬ್ರಿಟಿ ತಾಜಾತನದ ಗಾಳಿ ಪಸರಿಸುವಂತೆ ಮಾಡಿದಳು. ಆಕೆಯ ಮೇಕಪನ್ನು ಈ ಸಂದರ್ಭದಲ್ಲಿ ಮರೆಯುವಂತೆಯೇ ಇರಲಿಲ್ಲ. ಬನ್ನಿ ಕೇನ್ಸ್ 2015 ರಲ್ಲಿ ಐಶ್ವರ್ಯ ರೈಯ ಎರಡನೆ ಲುಕ್ ಹೇಗಿತ್ತು ಎಂದು ನೋಡೋಣ ಬನ್ನಿ:

ಐಶ್ವರ್ಯಳ ಎಮೆರಾಲ್ಡ್ ಗೌನ್
ವಾರೆವ್ಹಾ!!!! ಐಶ್ವರ್ಯ ಅದ್ಭುತ ಎಂಬ ಪದಕ್ಕೆ ನಿದರ್ಶನವಾಗಿ, ಕೇನ್ಸ್ 2015 ರ ರೆಡ್ ಕಾರ್ಪೆಟ್ ಮೇಲೆ ಅದೇ ಬೋಲ್ಡ್, ಕ್ಲಾಸಿಕ್ ಮತ್ತು ಬೆಚ್ಚನೆಯ ಅನುಭವ ನೀಡುವ ಬಗೆಯಲ್ಲಿ ಕಾಣಿಸಿಕೊಂಡರು. ಈಕೆಯ ಉಡುಗೆ ಸುಂದರ ಎಂದರೆ ಸಾಲದು ಎಂಬಷ್ಟು ಸೊಗಸಾಗಿತ್ತು.

ತನಗೆ ಸರಿಸಮಾನ ಯಾರೂ ಇಲ್ಲ!
ರೆಡ್ ಕಾರ್ಪೆಟ್‌ನಲ್ಲಿ ತನಗೆ ಸರಿಸಮಾನ ಯಾರೂ ಇಲ್ಲ ಎಂಬ ರೀತಿ ಆಕೆ ಆತ್ಮವಿಶ್ವಾಸದಿಂದ ಕಾಣಿಸಿಕೊಂಡಳು. ಇದಕ್ಕೂ ಮೇಲಾಗಿ, ಆಕೆಯ ಎವರ್ ಗ್ರೀನ್ ಗೌನ್ ಉದ್ದಕ್ಕಿದ್ದು, ಆಕೆ ಒಪ್ಪುವಂತೆ ಇತ್ತು.

ರೆಡ್ ಕಾರ್ಪೆಟ್ ಮೇಲೆ
ಆಕೆಯ ಉಬ್ಬು ತಗ್ಗುಗಳ ಸೌಂದರ್ಯಕ್ಕೆ ಪುಟವಿಟ್ಟಂತಿದ್ದ ಮತ್ತು ಆಕೆಯ ತ್ವಚೆಯನ್ನು ಕೆಳಗೆ ಅಲ್ಪ ಸ್ವಲ್ಪ ಮಾತ್ರ ತೋರುತ್ತಿದ್ದ ಈ ಹೊಳೆಯುವ ಲೇಸ್ ಮೆಟಿರಿಯಲ್, ಕ್ರಿಸ್ ಕ್ರಾಸ್ ವಿನ್ಯಾಸದ ನೆಕ್‍ಲೈನ್ ಹೊಂದಿತ್ತು

ಐಶ್ವರ್ಯಳ ನೆಕ್‍ಲೈನ್
ಡಬಲ್ ಲೇಯರ್ ಹೊಂದಿದ್ದ ಗೌನ್‌ನ ಸ್ವೀಟ್ ಹಾರ್ಟ್ ನೆಕ್ ಲೈನ್ ಕೇನ್ಸ್ 2015ರಲ್ಲಿ ಆಕೆಯನ್ನು ದೇವಲೋಕದಿಂದ ಭುವಿಗಿಳಿದ ಅಪ್ಸರೆಯಂತೆ ತೋರುತ್ತಿತ್ತು.

ನಾಲ್ಕನೇ ದಿನ ಕೇನ್ಸ್ 2015
ಲೇಸ್ ಎಲಿ ಸಾಬ್ ಗೌನ್ ಎರಡು ಭಾಗಗಳಾಗಿ ವಿಭಾಗಿಸಲ್ಪಟ್ಟಿತ್ತು. ಅದರಲ್ಲಿ ಒಂದು ಸ್ಯಾಟಿನ್ ಆದರೆ ಇನ್ನೊಂದು ಫ್ಯಾಬ್ರಿಕ್ಸ್ ಆಗಿತ್ತು. ಲೇಸ್‍ಗೆ ಮಿರುಗುವ ಸ್ಪರ್ಶವನ್ನು ಒದಗಿಸಲಾಗಿತ್ತು. ಇದು ಆಕೆಯನ್ನು ನಾಲ್ಕನೇ ದಿನದಲ್ಲಿ ಜೀವ ಇರುವ ಹೊಳೆಯುವ ಶಿಲಾಬಾಲಿಕೆಯನ್ನಾಗಿಸಿತ್ತು.



Click it and Unblock the Notifications