Latest Updates
-
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ! -
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ!
ಕೇನ್ಸ್ 2015: ಬಿಟ್ಟ ಕಣ್ಣು ಬಿಟ್ಟಂತೆ ಮಾಡಿದ ಸೆಲೆಬ್ರಿಟಿಗಳು
68ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವು, ಕೇವಲ ಒಂದು ನೆಪವಷ್ಟೆ. ಕೇನ್ಸ್‌ನಲ್ಲಿ ನಡೆಯುತ್ತಿರುವ 2015 ರ ಚಿತ್ರೋತ್ಸವವು ಸೆಲೆಬ್ರಿಟಿಗಳ ಪಾಲಿಗೆ ತಮ್ಮ ಫ್ಯಾಷನ್ ಪ್ರಜ್ಞೆಯನ್ನು ತೋರಿಸುವ ಅಖಾಡವಾಗಿರುತ್ತದೆ. ಕೇನ್ಸ್‌ನ ಮೊದಲ ದಿನದಲ್ಲಿ ಕಂಡು ಬಂದ ಸೆಲೆಬ್ರಿಟಿಗಳು ಮತ್ತು ಅವರ ಗೌನ್‍ಗಳು ವಿಶ್ವದಲ್ಲಿಯೇ ಅತ್ಯದ್ಭುತ ಎಂದು ಹೇಳಬಹುದು.
ಎರಡನೆ ದಿನ ಕೇನ್ಸ್‌ನಲ್ಲಿ ಕಂಡು ಬಂದ ಪ್ರಮುಖ ನಟಿಮಟಿಯರಲ್ಲಿ, ನವೊಮಿ ವ್ಯಾಟ್ಸ್, ಸಲ್ಮಾ ಹಯೆಕ್, ಜೂಲಿಯನ್ ಮೂರ್, ಚಾರ್ಲೀಜ್ ಥೆರಾನ್ ಮತ್ತು ಭಾರತದಿಂದ ಕತ್ರಿನಾ ಕೈಫ್ ಮತ್ತು ಮಲ್ಲಿಕಾ ಶೆರಾವತ್ ಕೆಂಪು ಹಾಸಿನ ಮೇಲೆ ಕಿಚ್ಚು ಹಚ್ಚಿದರು. ಕೇನ್ಸ್ 2015: ಮೋಡಿ ಮಾಡುವರೇ ಸೋನಮ್ ಕಪೂರ್?
ಇಬ್ಬರು ಮಹಿಳೆಯರು ನೋಡುವವರ ಕಣ್ಮನವನ್ನು ಎರಡನೆ ದಿನ ಇಲ್ಲಿ ಸೂರೆಗೊಂಡರು. ಅವರಲ್ಲಿ ಒಬ್ಬರು ಕತ್ರಿನಾ ತನ್ನ ರೆಡ್ ಎಲಿ ಸಾಬ್ ಮೆರ್ಮೇಡ್ ಗೌನ್ ನಿಂದರೆ ಮನಸೂರೆಗೊಂಡರೆ, ಮತ್ತೊಬ್ಬರು ಮಲ್ಲಿಕಾ ಶೆರಾವತ್, ಈಕೆ ಅಲೆಕ್ಸಿಸ್ ಮ್ಯಾಬಿಲ್ಲೆಯ ಗುಲಾಬಿ ಬಣ್ಣದ ದಿರಿಸಿನಲ್ಲಿ ನೋಡುಗರ ಗಮನ ಸೆಳೆದರು. ಇವರಿಬ್ಬರು ಸರಳ ಮತ್ತು ಸುಂದರವಾದ ಲುಕ್‌ಗಳೊಂದಿಗೆ ಭಾರತವನ್ನು ಪ್ರತಿನಿಧಿಸಿದರು. ಬನ್ನಿ ಕೇನ್ಸ್ 2015 ರಲ್ಲಿ ಕಂಡು ಬಂದ ಮತ್ತಷ್ಟು ಸುಂದರವಾದ ಹೆಂಗಳೆಯರನ್ನು ನಾವು ನಿಮಗೆ ತೋರಿಸುತ್ತೇವೆ ನೋಡಿ:

ಚಾರ್ಲಿ ಥೆರಾನ್
ಕೇನ್ಸ್‌ನಲ್ಲಿ ನಮ್ಮ ಕಣ್ಣಿಗೆ ಮೊದಲು ಬಿದ್ದದ್ದು. ಸಪೂರ ಸುಂದರಿ ಚಾರ್ಲಿ ಥೆರಾನ್. ಈಕೆ ರೆಡ್ ಕಾರ್ಪೆಟ್ ಮೇಲೆ ಕ್ಯಾನರಿ ಯೆಲ್ಲೋ ಕೌಚರ್ ಗೌನ್ ಧರಿಸಿ ಮೋಡಿ ಮಾಡಿದಳು. ಥೆರಾನ್ ಧರಿಸಿದ್ದ ಹೊಳೆಯುವ ಉಡುಗೆಯು, ಅದಕ್ಕೆ ಒಪ್ಪುವಂತಹ ಚೊಪಾರ್ಡ್ ಆಭರಣಗಳ ಜೊತೆಗೆ ಮತ್ತಷ್ಟು ಸುಂದರವಾಗಿ ಕಾಣುತ್ತಿತ್ತು. ಈಕೆ ತನ್ನ ಲುಕ್‌ಗೆ ಸರಿಹೊಂದುವಂತಹ ಉಡುಗೆಯನ್ನು ಧರಿಸಿ ಎಲ್ಲರನ್ನು ಮೋಡಿ ಮಾಡಿದಳು.

ಜೂಲಿಯನ್ ಮೂರ್
ಕೇನ್ಸ್ 2015 ರಲ್ಲಿ ಎರಡನೆಯ ದಿನ ಮೂರ್ ಆಕ್ಸಿ ಬ್ಲಡ್ ಗಿವೆಂಚಿ ಕೌಚರ್ ಧರಿಸಿದ್ದಳು. ಈಕೆ ಇದಕ್ಕೆ ಒಪ್ಪುವಂತಹ ಚೊಪಾರ್ಡ್ ಜ್ಯೂವೆಲ್ ಮತ್ತು ವೆಲ್ವೆಟ್ ಪಂಪ್‌ಗಳು, ತೊಡೆ ಎತ್ತರದ ಸ್ಲಿಟ್ ಮತ್ತು ಲೇಟೆಕ್ಸ್ ಸ್ನೇಹ್ ಫ್ಯಾಬ್ರಿಕ್ ಬಾಡಿಸ್ ಧರಿಸಿ ಕೆಂಪು ಹಾಸಿನ ಮೇಲೆ ನಯನ ಮನೋಹರವಾಗಿ ನಡೆದು ಬಂದಳು.

ಕತ್ರಿನಾ ಕೈಫ್
ವಾವ್! ಭಾರತದ ಈ ಸುಂದರಿ ರಾಸ್ಪ್‌ಬೆರ್ರಿ-ಹ್ಯೂಡ್ ಎಲಿ ಸಾಬ್ ಗೌನ್ ಧರಿಸಿದ್ದಳು. ಇದು ಆಕೆಯ ದೇಹದ ಆಯಕಟ್ಟಿನ ಸ್ಥಳಗಳಲ್ಲಿ ಸರಿಯಾಗಿ ಅಪ್ಪಿಕೊಂಡಿತ್ತು. ನಿನ್ನೆ ಮತ್ತು ಇಂದು ಧರಿಸಿದ್ದ ಗೌನ್‍ಗಳಲ್ಲಿ ಕೆಂಪು ಬಣ್ಣದ ಲುಕ್ ಅನ್ನು ನಾವು ಸೂಪರ್ ಎಂದು ಹೇಳಬಹುದು.

ಲಿಯಾ ಕೆಬೆಡೆ
ಈ ನಟಿಯು ಎರಡನೆ ದಿನದಲ್ಲಿ ಆಕರ್ಷಣೆಯ ಕೇಂದ್ರಬಿಂದುವಾಗಿದ್ದಳು. ಈಕೆ ತಾಮ್ರದ ಟೆಕ್ಸ್‌ಚಯಲ್ ಸೆಕ್ವಿನ್-ಎಂಬ್ರಾಯಿಡರಿ ಟಾಪ್ ಧರಿಸಿದ್ದಳು. ಇದರ ವಿನ್ಯಾಸಕಾರ ಪ್ರೊನೆನ್ಜಾ ಸ್ಕೌಲ್ಡರ್, ಸ್ವಲ್ಪ ಮಟ್ಟಿಗೆ ಇನ್ನೂ ಏನೋ ಬಾಕಿ ಇದೆ ಎನ್ನುವಂತಿತ್ತು ಆಕೆಯ ಲುಕ್, ಆದರೂ ಆಕೆಗೆ ಸರಿಸಾಟಿ ಯಾರೂ ಇರಲಿಲ್ಲ.

ಮಲ್ಲಿಕಾ ಶೆರಾವತ್
ಮಲ್ಲಿಕಾ ಶೆರಾವತ್ ಗುಲಾಬಿ ಬಣ್ಣದ ಅಲೆಕ್ಸಿಸ್ ಮಾಬಿಲ್ಲೆ ಗೌನ್ ಧರಿಸಿದ್ದಳು. ಈ ಅದ್ಧೂರಿ ಗೌನಿನಲ್ಲಿ ಆಕೆ ನಯನ ಮನೋಹರವಾಗಿ ಮತ್ತಷ್ಟು ಸುಂದರಿಯಾಗಿ ಕಂಡುಬಂದಳು. ತನ್ನ ದೇಹವನ್ನು ಸಂಪೂರ್ಣವಾಗಿ ಸುತ್ತಿಕೊಂಡಿದ್ದ ಈ ಗೌನ್ ನೋಡುಗರಿಗೆ ಶಾಕ್ ನೀಡಿತ್ತು! ಏಕೆಂದರೆ ಜನ ಆಕೆಯನ್ನು ಹೀಗೆ ಊಹಿಸಿರಲಿಲ್ಲ.

ಮಿರಾಂಡ ಕೆರ್ರ್
ನೋಡುಗರ ಮೂಗಿನ ಮೇಲೆ ಬೆರಳಿಡುವಂತೆ ಮಾಡಿದ ಮತ್ತೊಬ್ಬ ಸುಂದರಿ ಮಿರಾಂಡ ಕೆರ್ರ್. ನೋಡುಗರನ್ನು ಮತ್ತು ಸರಿಸಾಟಿಗೆ ನಿಲುಕವ ಎಲ್ಲಾ ಸುಂದರಿಯರನ್ನು ಒಂದೇ ಏಟಿಗೆ ಮರಳು ಮಾಡಿದ್ದು, ಮಿರಾಂಡ ಕೆರ್ರ್. ತನ್ನ ಮೋಡಿ ಮಾಡುವ ಗುಲಾಬಿ ಬಣ್ಣ ಮತ್ತು ಬ್ಲಾಕ್ ಪಾರ್ಟಿಯೊಂದಿಗೆ ಕ್ಯಾನೆಸ್‌ಗೆ ಕಿಚ್ಚು ಹಚ್ಚಿದ್ದಳು ಈ ಮಾಡೆಲ್ ನಟಿ.



Click it and Unblock the Notifications