Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಅಪ್ಸರೆ ಐಶ್ವರ್ಯನ ಹೊಸ ಲುಕ್‌ಗೆ ಅಭಿಮಾನಿಗಳು ಕ್ಲೀನ್ ಬೌಲ್ಡ್!
ನೀವು ವಿಶ್ವದ ಅತ್ಯಂತ ಸುಂದರಿಯನ್ನು ಕೇವಲ ಸೂಟ್‌ಗಳಲ್ಲಿಯೇ ನೋಡಿ ನೋಡಿ ಬೇಸರಗೊಂಡಿದ್ದೀರಾ, ಹಾಗಾದರೆ ನೀವು ಒಂದು ಲುಕ್ ಅನ್ನು ಮಾತ್ರ ಮಿಸ್ ಮಾಡಿಕೊಂಡಿರುವಿರಿ! ಹೌದು ಐಶ್ವರ್ಯ ರೈ ಇತ್ತೀಚೆಗೆ ಚೆನ್ನೈನ ಅಭಿಮಾನಿಗಳಿಗೆ ಮತ್ತಷ್ಟು ಬೆವರಿಳಿಯುವಂತೆ ಮಾಡಿದ ಲುಕ್‌ನಲ್ಲಿ ಕಾಣಿಸಿಕೊಂಡರು. ಇದನ್ನು ನೋಡಿದರೆ ನಿಮಗೂ ಬೆವರಿಳಿಯಬಹುದು, ಜೊತೆಗೆ ಆಕೆಯ ಲುಕ್ ನಿಮ್ಮಲ್ಲಿ ಸಹ ಮೋಡಿ ಮಾಡಬಹುದು.
ಚೆನ್ನೈನಲ್ಲಿ ಇತ್ತೀಚೆಗೆ ಆರಂಭಗೊಂಡ ಕಲ್ಯಾಣ್ ಜ್ಯುವೆಲರ್ಸ್ ಉದ್ಘಾಟನೆಯಲ್ಲಿ ಐಶ್ವರ್ಯ ಬಿಳಿ ಬಣ್ಣದ ದಿರಿಸಿನಲ್ಲಿ ಎಲ್ಲರ ಗಮನವನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದ್ದರು. ಈ ಬಿಳಿಯುಡುಗೆ ಕಲ್ಯಾಣ್ ಜ್ಯುವೆಲ್ಲರ್ಸ್‌ನ ಕಟ್ಟಡದ ಬಣ್ಣವನ್ನೇ ಹೋಲುತ್ತಿದ್ದುದು ಮತ್ತಷ್ಟು ವಿಶೇಷ. ಹೊಸ ಅವತಾರಗಳಲ್ಲಿ ಐಶ್ವರ್ಯ ರೈ!
ಸುಪ್ರಸಿದ್ಧ ಡಿಸೈನರ್ ಒಬ್ಬರು ವಿನ್ಯಾಸಗೊಳಿಸಿದ, ಸ್ತರಗಳಿಂದ ಕೂಡಿದ ಉಡುಗೆಯಲ್ಲಿ ಐಶ್ವರ್ಯಾ ರೈ ಸೂಜಿಗಲ್ಲಿನಂತೆ ಎಲ್ಲರನ್ನು ಸೆಳೆಯುತ್ತಿದ್ದರು. ಈಕೆ ಮೊದಲು ರೋಹಿತ್ ಬಾಲ್ ಅನಾರ್ಕಲಿಯನ್ನು ಧರಿಸಿದ್ದರು, ನಂತರ ಆಕೆ ಮೀರಾ ಮತ್ತು ಮುಜಾಫರ್ ಅಲಿ ವಿನ್ಯಾಸಗೊಳಿಸಿದ ಸೀರೆಯಲ್ಲಿ ಕಂಡು ಬಂದರು.
ಈ ಎರಡು ಬಿಳಿಯ ಲುಕ್‌ನಲ್ಲಿ ಐಶ್ವರ್ಯ ರೈ ಚೆನ್ನೈನಲ್ಲಿ ಅಪ್ಸರೆಯಂತೆ ಕಂಡು ಬಂದರು. ಈಕೆಯನ್ನು ನೋಡಿದ ಅಭಿಮಾನಿ ಬಳಗ ತಾವು ಸ್ವರ್ಗದಲ್ಲಿದ್ದೇವೆನೋ ಎಂಬಂತೆ ಭಾಸವಾದರು. ಆಕೆ ಹೇಗೆ ಕಂಗೊಳಿಸುತ್ತಿದ್ದಳು ಎಂದು ನೋಡುವ ಆಸೆಯೇ? ಬನ್ನಿ ನೀವು ಸಹ ನೋಡಿ, ಮುಂದೆ ಓದಿ ಜಗತ್ತಿನ ಅತ್ಯಂತ ಸುಂದರಿಯ ಬಿಳಿಯ ಲುಕ್ ಹೇಗಿತ್ತು ಎಂಬುದನ್ನು...

ಚೆನ್ನೈನಲ್ಲಿ ಐಶ್ವರ್ಯ ರೈ
ಚೆನ್ನೈನಲ್ಲಿ ಇತ್ತೀಚೆಗೆ ಆರಂಭಗೊಂಡ ಕಲ್ಯಾಣ್ ಜ್ಯುವೆಲರ್ಸ್‌ನ ಉದ್ಘಾಟನಾ ಸಮಾರಂಭದಲ್ಲಿ ಕಂಡು ಬಂದರು, ಇವರ ಜೊತೆಗೆ ಆ ಸಮಾರಂಭದಲ್ಲಿ ಲವಲವಿಕೆಯಿಂದ ಕೂಡಿದ್ದ ಅಮಿತಾಬ್ ಬಚ್ಚನ್ ಸಹ ಜನಾಕರ್ಷಣೆಗೆ ಕಾರಣರಾಗಿದ್ದರು. ನಮ್ಮ ಶಿವರಾಜ್ ಕುಮಾರ್ ಸೇರಿದಂತೆ, ದಕ್ಷಿಣ ಭಾರತದ ದಿಗ್ಗಜ ನಟರು ಇಲ್ಲಿ ಸೇರಿದ್ದರು.

ಅನಾರ್ಕಲಿ ದಿರಿಸಿನಲ್ಲಿ ಐಶ್ವರ್ಯಾ ರೈ
ಐಶ್ವರ್ಯಾ ರೈ ಬಿಳಿಯ ರೋಹಿತ್ ಬಾಲ್ ಅನಾರ್ಕಲಿಯಲ್ಲಿ ಕಂಗೊಳಿಸುತ್ತಿದ್ದರು. ಈ ಅನಾರ್ಕಲಿಗೆ ಗೋಲ್ಡ್ ಡೀಟೇಲಿಂಗ್ ಮಾಡಿದ್ದು ವಿಶೇಷವಾಗಿತ್ತು. ಇದು ಬಿಳಿಯ ಉಡುಗೆಯಲ್ಲಿ ಐಶ್ವರ್ಯ ರೈಯ ಅದ್ಭುತವಾದ ಲುಕ್‍ಗಳಲ್ಲೊಂದಾಗಿತ್ತು.

ತನ್ನ ವಿನ್ಯಾಸಕಾರರನ್ನು ಬದಲಿಸಿದ ಐಶ್ವರ್ಯಾ ರೈ
ಐಶ್ವರ್ಯಾ ರೈ ಬಗೆ ಬಗೆಯ ವಿನ್ಯಾಸದ ಉಡುಗೆಗಳನ್ನು ಧರಿಸುವುದನ್ನು ನೋಡಲು ನಮಗೂ ಇಷ್ಟವಾಗುತ್ತದೆಯಲ್ಲವೇ, ಆಕೆ ಈ ಸಂದರ್ಭದಲ್ಲಿ ಮತ್ತೊಬ್ಬ ವಿನ್ಯಾಸಕಾರರು ವಿನ್ಯಾಸಗೊಳಿಸಿದ್ದ ಬಟ್ಟೆಯನ್ನು ಸಹ ಧರಿಸಿದ್ದರು. ಅದರಲ್ಲಿ ರೋಹಿತ್ ಬಾಲ್‌ರವರ ಅನಾರ್ಕಲಿ ಆಕೆಯ ಸೌಂದರ್ಯಕ್ಕೆ ಮತ್ತಷ್ಟು ಕಳೆಯನ್ನು ಒದಗಿಸಿತ್ತು.

ಆಕೆಯ ಹೊಸ ಸ್ಟೈಲ್
ಐಶ್ವರ್ಯ ರೈಯನ್ನು ಕಲ್ಯಾಣ್ ಸ್ಟೋರ್ ಉದ್ಘಾಟನೆಗೆ ಸ್ಟೈಲ್ ಮಾಡಿದವರು ಆಸ್ಥಾ ಶರ್ಮಾ. ವೈಟ್ ಅಂಡ್ ಗೋಲ್ಡ್ ಸೂಟ್‌ನಲ್ಲಿ ಆಕೆ ಅಪ್ಸರೆಯಂತೆ ಕಂಡು ಬರುತ್ತಿದ್ದಳು.

ಆಕೆಯ ಆಭರಣ
ಐಶ್ವರ್ಯಾ ರೈ ರೋಹಿತ್ ಬಾಲ್ ಅನಾರ್ಕಲಿಯನ್ನು ಧರಿಸಿದ್ದಳು, ಇದು ಚಿನ್ನದ ಸ್ಪರ್ಶವನ್ನು ಹೊಂದಿತ್ತು. ಇದಕ್ಕೆ ಒಪ್ಪುವಂತಹ ಕಲ್ಯಾಣ್ ಜ್ಯುವೆಲ್ಲರಿ ಆಭರಣಗಳನ್ನು ಆಕೆ ಧರಿಸಿದ್ದಳು.



Click it and Unblock the Notifications
