Latest Updates
-
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ! -
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ! -
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ!
ಮೋಡಿ ಮಾಡಿದ ರಾಹುಲ್ ಮಿಶ್ರಾರವರ ಟ್ರೀ ಆಫ್ ಲೈಫ್
ಅಮೆಜಾನ್ ಇಂಡಿಯಾ ಕೌಚರ್ ವೀಕ್ 2015 ಎರಡನೇಯ ದಿನವಾದ ಇಂದು ರಾಹುಲ್ ಮಿಶ್ರಾರವರು ಮೊಟ್ಟ ಮೊದಲ ಬಾರಿಗೆ ಇಂಡಿಯನ್ ರ‍್ಯಾಂಪ್ ಮೇಲೆ ತಮ್ಮ "ಟ್ರೀ ಆಫ್ ಲೈಫ್" ಎಂಬ ಹೆಮ್ಮೆಯ ಶೋವನ್ನು ಪ್ರಾಯೋಜಿಸಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಅಷ್ಟೇ ಅಲ್ಲದೆ ಇವರು ಪ್ರಸ್ತುತ ಪಡಿಸಿದ ಬಣ್ಣಗಳು ವರ್ಣಾತೀತ. ಹೊಂಬಣ್ಣ ಮತ್ತು ಕಪ್ಪು, ಬಿಳಿ ಮತ್ತು ಹೊಂಬಣ್ಣ, ಎಂಬ ವಿಭಿನ್ನ ಬಣ್ಣ ಮತ್ತು ಇನ್ನಿತರ ರಂಗುಗಳನ್ನು ತಮ್ಮ ಟ್ರೀ ಆಫ್ ಲೈಫ್‌ನಲ್ಲಿ ಬಳಸಿಕೊಂಡಿದ್ದರು.
ಈ ಟ್ರೀ ಆಫ್ ಲೈಫ್ ಎಂಬ ಸಂಗ್ರಹವು ತನ್ನದೇ ಆದ ಒಂದು ಅದ್ಭುತ ಸಂಗ್ರಹ. ವಿವಿಧ ಕೆಲಸಗಳನ್ನು ಮಾಡುವ ಆಧುನಿಕ ಹೆಣ್ಣು ಮಕ್ಕಳಿಂದ ಇದು ಸ್ಫೂರ್ತಿಯನ್ನು ಪಡೆದು ತಯಾರಾಗಿದ್ದು, ದೃಢತೆ ಮತ್ತು ಸೂಕ್ಷತೆಯನ್ನು ಒಳಗೊಂಡಿತ್ತು. ಗೌರವ್ ಗುಪ್ತಾರವರ ಕೈಚಳಕಕ್ಕೆ ನೋಡುಗರು ಕ್ಲೀನ್ ಬೋಲ್ಡ್!
ಝಗಮಗ ಎಂದು ಹೊಳೆಯುವ ಎಐಸಿಡಬ್ಲ್ಯೂ 2015 ರ‍್ಯಾಂಪ್ ಮೇಲೆ ರಾಹುಲ್ ಮಿಶ್ರಾರವರು ನವ ವಧುಗಳಿಗಾಗಿ ತಮ್ಮ ಆರ್ನೆಟ್ ಜಾಕೆಟ್‌ಗಳು, ಲೆಹೆಂಗಾ ವಿನ್ಯಾಸಗಳ ಮೂಲಕ ಗಮನ ಸೆಳೆಯುವ ಪ್ರಯತ್ನ ಮಾಡಿದರು. ಸೂಕ್ಷ್ಮವಾದ ಕೇಪ್‌ಗಳು ಮತ್ತು ಹೊಸ "ಐಟಿ" ಸೀರೆಗಳು ಸಹ ಈ ಸಂಗ್ರಹದಲ್ಲಿ ಇದ್ದದ್ದು ವಿಶೇಷ. ಬನ್ನಿ ಅಮೆಜಾನ್ ಇಂಡಿಯಾ ಕೌಚರ್ ವೀಕ್ 2015ನ ಎರಡನೆ ದಿನದ ವಿಶೇಷಗಳು ಏನಿದ್ದವು ಎಂದು ತಿಳಿದುಕೊಳ್ಳೋಣ...

ಚಾಕೋಲೇಟ್ ಬ್ರೌನ್ ಮತ್ತು ಗೋಲ್ಡ್
ಎಐಸಿಡಬ್ಲ್ಯೂ 2015 ರ‍್ಯಾಂಪ್ ಮೇಲೆ ಎರಡನೆ ದಿನ ರೇಷ್ಮೇಯ ಅದ್ಭುತ ಲೋಕ ಅನಾವರಣಗೊಂಡಿತ್ತು. ಬನಾರಸಿ ಗೋಲ್ಡ್ ಮತ್ತು ಚಾಕೋಲೆಟ್ ಬ್ರೌನ್‌ನ ಅತ್ಯುತಮ ಮಿಶ್ರಣವು ನೋಡುಗರನ್ನು ಮಂತ್ರ ಮುಗ್ಧಗೊಳಿಸಿತ್ತು.

ಲಾಂಗ್ ಜಾಕೆಟ್‌ಗಳು ಮತ್ತು ಇತ್ಯಾದಿ
ಈ ಬಗೆಯ ಉಡುಪು ಸರಳವಾಗಿದ್ದಷ್ಟು ಅತ್ಯಂತ ಸುಂದರವಾಗಿ ಕಾಣುತ್ತಿತ್ತು. ಮುಕ್ತವಾಗಿ ಹಾರಾಡುತ್ತಿದ್ದ ಕ್ರಿಮ್ಸನ್ ಜಾಕೆಟ್ ರೇಷ್ಮೆಯ ಉಡುಗೆಗೆ ತನ್ನದೇ ಆದ ಮೆರಗನ್ನು ನೀಡಿತ್ತು.

ಬ್ರೋಕೆಡ್ ಸ್ಕರ್ಟ್‌ಗಳು ಮತ್ತು ಇತ್ಯಾದಿ
ಬೀಗೆ ಎಂಬ ವಿಶಿಷ್ಟ ಬಣ್ಣ ಮತ್ತು ಬಿಳಿಯ ಅಪರೂಪದ ಮಿಶ್ರಣವು ನೋಡಲು ಅತ್ಯಂತ ಸುಂದರವಾಗಿತ್ತು. ಸರಳತೆಯಲ್ಲೂ ಇದರ ಸೌಂದರ್ಯ ಎದ್ದು ಕಾಣುತ್ತಿತ್ತು. ಮೊಣಕಾಲಷ್ಟು ಉದ್ದಕ್ಕಿದ್ದ ಇದರ ಸ್ಕರ್ಟ್ ತನ್ನ ಅಧಿಕ ಎಂಬ್ರಾಯಿಡರಿಯಿಂದ ಲಾಂಗ್ ಸ್ಲೀವ್ ಇದ್ದ ಐವರಿ ಬ್ರೋಕೆಡ್ ಜಾಕೆಟ್‌ನೊಂದಿಗೆ ಚೆನ್ನಾಗಿ ಹೊಂದಾಣಿಕೆಯಾಗಿತ್ತು.

ಪ್ರಿನ್ಸೆಸ್ ಗೌನ್‌ಗಳು
ಈ ಪ್ರಿನ್ಸೆಸ್ ಗೌನ್ ನೋಡಲು ಉದ್ದವಾಗಿ ಮತ್ತು ಸುಂದರವಾಗಿ ಇದ್ದವು. ಇದು ನಿಜಕ್ಕೂ ಸೆಲೆಬ್ರಿಟಿಗಳ ಮೊದಲ ಆಯ್ಕೆಯಾಗಿರುತ್ತದೆ. ಇದನ್ನು ಅತಿ ಶೀಘ್ರದಲ್ಲಿ ರೆಡ್ ಕಾರ್ಪೆಟ್ ಮೇಲೆ ನೋಡುತ್ತೇವೆ ಎಂದು ಭಾವಿಸಿದ್ದೇವೆ.

ಹೊಂಬಣ್ಣದಲ್ಲಿ ಬೂದು ಬಣ್ಣ
ಎಐಸಿಡಬ್ಲ್ಯೂ 2015 ರ‍್ಯಾಂಪ್ ಮೇಲೆ ಈ ಮಣ್ಣಿನ ಬಣ್ಣಗಳು ನೋಡುಗರನ್ನು ರೋಮಾಂಚನಗೊಳಿಸಿದವು. ಈ ಮಾಡೆಲ್ ಬಟನ್‌ಗಳಿರುವ ಹೊಂಬಣ್ಣದ ಅತ್ಯಧಿಕ ಡಿಟೇಲಿಂಗ್ ಇರುವ ಉಡುಗೆಯನ್ನು ಧರಿಸಿದ್ದಳು. ನೋಡುಗರಿಗೆ ಈಕೆ ಚಿನ್ನದ ರೇಷ್ಮೆಯ ಉಡುಗೆಯನ್ನು ಧರಿಸಿದ್ದಳೋ ಎಂಬಂತೆ ಭಾಸವಾಗುತ್ತಿತ್ತು.



Click it and Unblock the Notifications
