Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಗೌರವ್ ಗುಪ್ತಾರವರ ಕೈಚಳಕಕ್ಕೆ ನೋಡುಗರು ಕ್ಲೀನ್ ಬೋಲ್ಡ್!
ಅಮೆಜಾನ್ ಇಂಡಿಯಾ ಕೌಚರ್ ವೀಕ್ 2015 ಎರಡನೇಯ ದಿನವಾದ ಇಂದು ಖ್ಯಾತ ವಿನ್ಯಾಸಕಾರರಲ್ಲಿ ಒಬ್ಬರಾದ ಗೌರವ್ ಗುಪ್ತಾರವರ ಆಕರ್ಷಕ ಉಡುಗೆಗಳ ಸಂಗ್ರಹಕ್ಕೆ ಸಾಕ್ಷಿಯಾಯಿತು. ಅತ್ಯದ್ಭುತವಾದ ಸ್ಲಿಟ್ ಮತ್ತು ಸಿಫೆರ್‌ನ ಉಡುಗೆಗಳು, ವಿಭಿನ್ನ ಶೈಲಿಯ ವಿನ್ಯಾಸ, ಅದರ ಮೇಲೆ ಒಂದಿಷ್ಟು ಮೆರಗು, ಎಲ್ಲವೂ ಸೇರಿ ರೂಪದರ್ಶಿಯರನ್ನು ದೇವಲೋಕದ ಅಪ್ಸರೆಯ ಹಾಗೆ ಕಾಣುವಂತೆ ಮಾಡಿದವು.
ಅಷ್ಟೇ ಅಲ್ಲದೆ ನೋಡುವವರ ಕಣ್ಣಿಗೆ ಹಬ್ಬವನ್ನುಂಟು ಮಾಡುವಂತಿದ್ದ "ಟೊನಲ್" ಎಂಬ್ರಾಯಿಡರಿ ಮತ್ತು ಭಾರತೀಯ ಶೈಲಿಯ ಸೀರೆಯ ಗೌನ್‌ಗಳು ಮತ್ತು ಲೆಹೆಂಗಾಗಳು, ಹೀಗೆ ಇವುಗಳೆಲ್ಲವನ್ನೂ ನೋಡಿಯೇ ಆನಂದಿಸಬೇಕು ಎನ್ನುವಂತಿದ್ದವು. ಎಐಸಿಡಬ್ಲ್ಯೂ 2015: ಅದ್ಧೂರಿ ಸಮಾರ೦ಭಕ್ಕೆ ವಿದ್ಯುಕ್ತ ಚಾಲನೆ
ಅದರಲ್ಲೂ ಅದ್ಧೂರಿ ವಿನ್ಯಾಸಗಳಿಂದ ಕೂಡಿದ್ದ ಹೊಳೆಯುವ ಉಡುಪುಗಳನ್ನು ಧರಿಸಿದ್ದ ರೂಪದರ್ಶಿಗಳು ರ‍್ಯಾಂಪ್ ಮೇಲೆ ನಡೆದುಕೊಂಡು ಬರುವಾಗ ಅಂತೂ ದೇವಲೋಕದ ಅಪ್ಸರೆಯರು ಧರೆಗೆ ಇಳಿದುಬಂದಂತೆ ಭಾಸವಾಗುತ್ತಿತ್ತು. ಒಟ್ಟಾರೆ ಕ್ಷಣ ಕ್ಷಣಕ್ಕೂ ನೋಡುಗರನ್ನು ತುದಿಗಾಲಲ್ಲಿ ನಿಲ್ಲಿಸುವಂತೆ ಮಾಡಿದ ಗೌರವ್ ಗುಪ್ತಾರ ವಸ್ತ್ರ ವಿನ್ಯಾಸ ಅಂತೂ ರಸದೌತಣವನ್ನೇ ಉಣಬಡಿಸಿತು.
ಬನ್ನಿ ಗೌರವ್ ಗುಪ್ತಾರವರು ಎಐಸಿಡಬ್ಲ್ಯೂ 2015 ರಲ್ಲಿ ಸಾದರಪಡಿಸಿದ ಶ್ರೇಷ್ಠ ವಿನ್ಯಾಸಗಳನ್ನು ನಾವು ಒಮ್ಮೆ ನೋಡಿಕೊಂಡು ಬರೋಣ. ಅಂದವಾದ ಅಂಚುಗಳು ನೋಡಲು ಅದ್ಭುತವಾಗಿದ್ದ ಈ ಗೌನ್ ನ ಹಿಂದೆ ಸಿಕ್ಕಾಪಟ್ಟೆ ಶ್ರಮ ಪಡಲಾಗಿದೆ ಎಂದು ಎದ್ದು ಕಾಣುತ್ತಿತ್ತು, ಎಷ್ಟಾದರು ಇದು ಗೌರವ್ ಗುಪ್ತಾ ಶೈಲಿಯಲ್ಲವೇನೂ? ಇದರ ನೆಕ್‌ಲೈನ್ ಮತ್ತು ಒಟ್ಟಾರೆ ನೋಟಕ್ಕೆ ನಾವು ಮನಃ ಪೂರ್ವಕವಾಗಿ ಇಷ್ಟಪಟ್ಟಿದ್ದು ಸುಳ್ಳಲ್ಲ...

ನೆಟ್ ಗ್ರೆಸಿಯನ್ ಸೀರೆ
ಎಐಸಿಡಬ್ಲ್ಯೂ 2015 ನ ಎರಡನೆ ದಿನ ಸಂಪೂರ್ಣವಾಗಿ ಫ್ಯಾಬ್ರಿಕ್ ಮಯವಾಗಿದ್ದವು. ಗೌರವ್ ಗುಪ್ತಾ ಈ ದಿನ ಡುಪಿಯನ್ ಸಿಲ್ಕ್ ಮತ್ತು ಎಂಬ್ರಾಯಿಡರ್ ಸಿಲ್ಕ್‌ನಿಂದ ಮಾಡಿದ ಗ್ರೆಸಿಯನ್ ಸೀರೆಯ ವಿನ್ಯಾಸವನ್ನು ಪ್ರದರ್ಶಿಸಿದರು.

ಫೋಲಿಯೇಜ್ ಎಂಕ್ರು ಜಾಕೆಟ್‌ಗಳು
ಐವರಿ ಬಣ್ಣದಲ್ಲಿ ಮಾಡಿದ್ದ ಈ ಜಾಕೆಟ್‌ಗಳು ಈ ಷೋಗೆ ಕಳೆ ನೀಡಿದವು ಎಂಬುದರಲ್ಲಿ ಎರಡು ಮಾತಿಲ್ಲ. ಈ ಎಂಕ್ರು ಜಾಕೆಟ್‌ಗಳ ಮೇಲೆ ಡೀಟೆಲಿಂಗ್ ಇತ್ತು, ಸ್ಲೀಕ್ ಪ್ಯಾಂಟ್ ಮತ್ತು ಟ್ರೇನ್ ಜೊತೆಗೆ ಈ ಜಾಕೆಟ್ ಮತ್ತಷ್ಟು ಎದ್ದು ಕಾಣುತ್ತಿತ್ತು.

ಭಾರವಾದ ಲೆಹೆಂಗಾಗಳು
ಗೌರವ್ ಗುಪ್ತಾರವರು ಮೊದಲೆ 2015ರ ಎಐಸಿಡಬ್ಲ್ಯೂ ನಲ್ಲಿ ಕಣ್ಣಿಗೆ ಹಿತವಾದ ಬಣ್ಣಗಳ ವಿನ್ಯಾಸವನ್ನು ಪ್ರಸ್ತುತಪಡಿಸಲಾಗುವುದು ಎಂದು ಭರವಸೆ ನೀಡಿದ್ದರು. ಇವರ ಸಂಗ್ರಹ ಸಿಲ್ಟ್ ಮತ್ತು ಸಿಫೆರ್ ತಮ್ಮ ಹಿತ ಮಿತವಾದ ಶೇಡ್‌ಗಳಿಂದ ನೋಡುಗರ ಗಮನ ಸೆಳೆದವು

ಶೀರ್ ಬ್ಯಾಕ್‌ಗಳು
ಈ ಗೌನ್‌ಗಳ ಬ್ಯಾಕ್ ವಿನ್ಯಾಸಗಳು ಸಹ ನೋಡುಗರ ಮನಸೂರೆಗೊಂಡವು. ಇವುಗಳಲ್ಲಿ ಹಲವಾರು ಅಧಿಕವಾದ ಶೀರ್ ಮತ್ತು ಪ್ರಿಂಟ್‌ಗಳಿಂದ ಅಲಂಕಾರಗಳಿಂದ ಕೂಡಿದ್ದವು.

ತಾಜಾ ಬಣ್ಣಗಳು
ಗೌರವ್‌ರವ ಲೈನ್ ನೋಡುಗರ ಗಮನವನ್ನು ತನ್ನತ್ತ ಸೆಳೆಯುತ್ತಿತ್ತು. ಇವರ ರೂಪದರ್ಶಿಯರು ವೈನ್ ಮತ್ತು ಶಾಂಪೇನ್ ಶೇಡ್‌ಗಳನ್ನು ಧರಿಸಿದ್ದರು.



Click it and Unblock the Notifications