Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಚಿತ್ತಾಕಾರದ ಉಡುಗೆಯಲ್ಲಿ ಚಿನ್ನದಂತೆ ಕಂಗೊಳಿಸಿದ ಐಶ್ವರ್ಯಾ ರೈ
ಮಾಜಿ ವಿಶ್ವಸುಂದರಿ, ಬಾಲಿವುಡ್ ತಾರೆ ಐಶ್ವರ್ಯಾ ರೈಯವರು ತಮ್ಮ ಉಡುಗೆಗಳಿಂದ ಸದಾ ಆಕರ್ಷಣೆಯನ್ನು ಉಳಿಸಿಕೊಂಡು ಬಂದಿದ್ದಾರೆ. ತಮ್ಮ ಚಿತ್ರ ಮತ್ತು ಟೀವಿ ಜಾಹೀರಾತುಗಳ ಮೂಲಕ ಕಾಣಿಸಿಕೊಳ್ಳುತ್ತಿರುವ ಅವರು ಇತ್ತೀಚೆಗೆ ಮುದ್ರಣ ಮಾಧ್ಯಮವೊಂದರ ಕಾರ್ಯಕ್ರಮವೊಂದರಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಂಡರು. ಅವರ ಸೌಂದರ್ಯವಂತೂ ಅವರು ತೊಟ್ಟಿದ್ದ ಚಿನ್ನದ ಬಣ್ಣದ ಉಡುಗೆಯಿಂದ ಅದ್ಭುತವಾಗಿ ಕಾಣುತ್ತಿತ್ತು.
ಖ್ಯಾತ ವಸ್ತ್ರ ವಿನ್ಯಾಸಕಾರರಾದ ಗೌರಿ ಮತ್ತು ನೈನಿಕಾರವರ ಒಂದು ಉತ್ಕೃಷ್ಟ ವಿನ್ಯಾಸವಾದ ಈ ಭಾರೀ ಉಡುಗೆ ಹಿಂದಿನ ಯಾವುದೇ ಉಡುಗೆಗಳಲ್ಲಿ ಕಂಡದ್ದಕ್ಕಿಂತಲೂ ಮಿಗಿಲಾಗಿತ್ತು. ಇತ್ತೀಚೆಗೆ ಅವರು ಯಾವುದೇ ಸಮಾರಂಭಕ್ಕೆ ಆಗಮಿಸಿದರೂ ಹೆಚ್ಚಾಗಿ ಕಪ್ಪು ಬಣ್ಣದ ಉಡುಗೆಗಳನ್ನೇ ತೊಡುತ್ತಿದ್ದರು. ಈ ಕಾರ್ಯಕ್ರಮಕ್ಕೂ ಕಪ್ಪು ಅಥವಾ ಗಾಢ ಬಣ್ಣದ ಉಡುಗೆ ತೊಟ್ಟೇ ಬರುವರೆಂದು ಊಹಿಸಿದ್ದ ಅಷ್ಟೂ ಜನರ ಲೆಕ್ಕಾಚಾರ ತಲೆಕೆಳಗಾಗಿತ್ತು.

ಇತ್ತೀಚಿನ 2015 ಚಳಿಗಾಲ-ಸೆಖೆಗಾಲದ ವಸ್ತ್ರ ವಿನ್ಯಾಸದ ಪ್ರದರ್ಶನದಲ್ಲಿ ಪ್ರದರ್ಶಿತಗೊಂಡು ಮೆಚ್ಚುಗೆ ಪಡೆದಿದ್ದ ಈ ವಿನ್ಯಾಸವನ್ನು ಕೆಳಭಾಗದಲ್ಲಿ ಯಾವುದೇ ಬದಲಾವಣೆಯಿಲ್ಲದೇ, ಮೇಲ್ಭಾಗದಲ್ಲಿ ಮಾತ್ರ ಕೊಂಚ ಬದಲಾವಣೆ ಹೊಂದಿತ್ತು. ಆದರೆ ಈ ಬದಲಾವಣೆ ಐಶ್ವರ್ಯಾರಿಗೆ ಒಪ್ಪುತ್ತಿತ್ತು ಹಾಗೂ ಅವರ ಮೈಮಾಟವನ್ನು ಅಪ್ಪಟವಾಗಿ ತೋರುತ್ತಿತ್ತು. ಮೂಲವಿನ್ಯಾಸದಲ್ಲಿ ಬಹುತೇಕ ಭುಜ ಮತ್ತು ಎದೆಯಭಾಗ ತೆರೆದಿದ್ದರೆ ಇಲ್ಲಿ ಕೊಂಚ ಬದಲಾವಣೆ ಮಾಡಿ ಕೇವಲ ಎಡಭುಜವನ್ನು ಮಾತ್ರ ತೆರೆದಿತ್ತು. ಸವ್ಯಸಾಚಿ ಅನಾರ್ಕಲಿ ಗೌನ್‌ನಲ್ಲಿ ಐಶ್ವರ್ಯಾ ಮೋಡಿ!
ಈ ಉಡುಪಿನ ಪ್ರಮುಖ ಆಕರ್ಷಣೆಯೆಂದರೆ ಇಡಿಯ ಉಡುಪಿನ ಮುಂಭಾಗವನ್ನು ಆವರಿಸಿದ್ದ ಬೃಹತ್ ಗಾತ್ರದ ಒಂದೇ ಗುಲಾಬಿ ಹೂವಿನ ವಿನ್ಯಾಸ. ಸಾಮಾನ್ಯವಾಗಿ ಗುಲಾಬಿಯ ತೊಟ್ಟು ಕೆಳಭಾಗದಲ್ಲಿರುವಂತೆ ಎಲ್ಲರೂ ಕಲ್ಪಿಸಿಕೊಂಡಿದ್ದರೆ ಇಲ್ಲಿ ಆ ಕಲ್ಪನೆ ತಲೆಕೆಳಗಾಗುತ್ತದೆ. ಏಕೆಂದರೆ ಇಲ್ಲಿ ಗುಲಾಬಿಯನ್ನು ತೊಟ್ಟು ಮೇಲೆ ಬರುವಂತೆ ಬಹಳ ನಾಜೂಕಿನಿಂದ ಹೊಲಿಯಲಾಗಿದೆ.
ಅಪ್ಪಟ ಬಿಳಿಬಣ್ಣದ ಬಟ್ಟೆಯಿಂದ ಬಿಳಿಗುಲಾಬಿಯ ಪಕಳೆಗಳನ್ನು ತಯಾರಿಸಲಾಗಿದ್ದು ಮಧ್ಯೆ ಉಡುಪಿನ ಬಣ್ಣವನ್ನೇ ಹೋಲುವ ಪರಾಗರೇಣುಗಳ ವಿನ್ಯಾಸ ಮಾಡಿರುವುದು ವಿನ್ಯಾಸಕಾರರ ನೈಪುಣ್ಯತೆಗೆ ಸಾಕ್ಷಿಯಾಗಿದೆ. ಅವರು ತಮ್ಮ ತಲೆಗೂದಲನ್ನು ತುರುಬು ಕಟ್ಟಿಕೊಳ್ಳದೇ ಎರಡೂ ಭುಜಗಳಿಂದ ಮುಂದೆ ಬರುವಂತೆ ಮೇಲೆ ತೇಲಿಬಿಟ್ಟಿರುವುದು ವಸ್ತ್ರಕ್ಕೆ ಇನ್ನಷ್ಟು ಕಳೆ ನೀಡಿತ್ತು. ಎಂದಿನಂತೆ ಅವರು ತಮ್ಮ ಮುಖ, ಕೈ, ಭುಜಗಳಿಗೆ ಸೂಕ್ತವಾದ ಪ್ರಸಾದನಗಳನ್ನು ಬಳಸಿದ್ದರು. ಹಿನ್ನೆಲೆಯಲ್ಲಿದ್ದ ಹಸಿರು ತಾವರೆ ಎಲೆಗಳ ಮುಂದೆ ಅವರ ಉಡುಗೆ ಅದ್ಭುತವಾಗಿ ಶೋಭಿಸುತ್ತಿತ್ತು.



Click it and Unblock the Notifications

