Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಎಐಎಫ್‌ಡಬ್ಲ್ಯು: ನೋಡುಗರನ್ನು ರಂಜಿಸಿದ ಪಾಂಡೆಯವರ ವಸ್ತ್ರ ವಿನ್ಯಾಸ
ನಗರದಲ್ಲಿ ಆಗಾಗ ನೂತನ ವಸ್ತ್ರಗಳ ವಿನ್ಯಾಸ ಪ್ರದರ್ಶನ ನಡೆಯುತ್ತಲೇ ಇರುತ್ತದೆ. ಫ್ಯಾಷನ್ ಲೋಕದಲ್ಲಿ ಇದು ಅನಿವರ್ಯ ಕೂಡಾ. ಅಂತೆಯೇ ಈ ವರ್ಷದ AIFW 2015- ವಿನ್ಯಾಸ ಪ್ರದರ್ಶನದಲ್ಲಿ ಗಮನ ಸೆಳೆದ ವಸ್ತ್ರಗಳೆಂದರೆ ಪ್ರತಿಮಾ ಪಾಂಡೆಯವರು ವಿನ್ಯಾಸಗೊಳಿಸಿದ 'ಪ್ರಮಾ' ಎಂಬ ಗುರುತಿನ ವಸ್ತ್ರಗಳು.
ಈ ವಸ್ತ್ರಗಳು ಪಾಶ್ಚಾತ್ಯ ಲೋಕದ ಜನಪದ ಕಥೆಗಳಾದ ಚಾರ್ಲ್ಸ್ ಪೆರಾಲ್ಟ್ ರವರ 'ಸ್ಲೀಪಿಂಗ್ ಬ್ಯೂಟಿ' ಮತ್ತು ಜಪಾನಿನ ವಾಬಾ-ಸಿಬಿ ಎಂಬ ಜನಪದ ಕಥನಗಳಿಂದ ಪ್ರೇರಣೆ ಪಡೆದಿವೆ ಎಂದು ಪ್ರತಿಮಾರವರು ತಿಳಿಸುತ್ತಾರೆ.

ಜಪಾನಿನ ವಾಬಾ-ಸಿಬಿ ಕಥೆಗಳಲ್ಲಿ ಬರುವ ವಸ್ತ್ರಗಳ ಕುಸುರಿಗಳ ಕಲ್ಪನೆಯನ್ನು ಸಾಕಾರಗೊಳಿಸಲು ಉಣ್ಣೆ, ದಾಬ್ಕಾ, ಡೋರಿಯಿಂದ ನೇಯ್ದ ನೂಲು ಹಾಗೂ ಪಾರ್ಸಿ ಮತು ಫುಲ್ಕಾರಿಯಂತಹ ಬಟ್ಟೆಗಳನ್ನು ಉಪಯೋಗಿಸಿ ಅತಿಸೂಕ್ಷ್ಮ ಕುಸುರಿ ಕೆಲಸವನ್ನು ಮಾಡಲಾಗಿದೆ ಎಂದು ಅವರು ಹೆಮ್ಮೆಯಿಂದ ಹೇಳುತ್ತಾರೆ. ಅವರ ವಿನ್ಯಾಸಗಳ ಕೆಲವು ವಿಶೇಷತೆಗಳನ್ನು ಇಲ್ಲಿ ನೀಡಲಾಗಿದೆ.
ಇವರ ವಿನ್ಯಾಸದ ನೀಳ ವಸ್ತ್ರ ವಾಸ್ತವವಾಗಿ ಹಲವು ಪದರಗಳನ್ನು ಹೊಂದಿದೆ. ಮೇಲ್ಪದರಕ್ಕಾಗಿ ರೇಶ್ಮೆಯ ಬಟ್ಟೆಯನ್ನು ಉಪಯೋಗಿಸಿಲಾಗಿದೆ. ಈ ಬಟ್ಟೆಯಲ್ಲಿ ಹಳದಿ ಬಣ್ಣದ ಚಾಂದೇರಿ ಹೂವುಗಳ ಕುಸುರಿಯನ್ನು ಮಾಡಲಾಗಿದೆ.
ಒಳಪದರದ ಕೆಳಭಾಗದಲ್ಲಿಯೂ ಹಳದಿ ಬಣ್ಣದ ಕುಸುರಿ ಇದಕ್ಕಿಂತ ಕೊಂಚವೇ ಗಿಡ್ಡವಾಗಿರುವ ಹೊರಪದರದ ಕಾರಣ ಇಣುಕುತ್ತದೆ. ಇದೇ ಕಾರಣದಿಂದ ಸೌಂದರ್ಯವನ್ನು ಪ್ರಕಟಿಸುವ ಜೊತೆಗೇ ಕೆಲವು ಕುತೂಹಲವನ್ನೂ ಈ ವಸ್ತ್ರ ಉಳಿಸಿಕೊಳ್ಳುತ್ತದೆ.
ಬೇಸಿಗೆ ಅಡಿಯಿಟ್ಟಿದ್ದರೂ ಚಳಿಗಾಲದ ವುಲ್ಲನ್ ಶಾಲುಗಳೂ, ಮೇಲ್ವಸ್ತ್ರಗಳೂ ಜಾಕೆಟ್ಟುಗಳೂ ಪ್ರದರ್ಶನದಲ್ಲಿ ಕಾಣಿಸಿಕೊಂಡಿವೆ. ಕೊಂಚ ವಿಭಿನ್ನ ಎಂದೆನಿಸಿದರೂ ಸೌಂದರ್ಯವನ್ನು ಹೆಚ್ಚಿಸಲು ಪೂರ್ಣವಾಗಿ ಸಹಕರಿಸಿವೆ.
ಕೊಂಚ ದೊಗಲಾಗಿರುವ ಸಾಂಪ್ರಾದಾಯಿಕ ಕೆಳವಸ್ತ್ರ ಮತ್ತು ಬೋಗ್ರು ಹತ್ತಿಯ ಮೇಲ್ವಸ್ತ್ರದಲ್ಲಿ ಕೈಕೆಲಸದ ಮೂಲಕ ನೀಡಲಾದ ಹಳದಿ ಅಚ್ಚುಗಳ ವಿನ್ಯಾಸ ಇದನ್ನು ಜನಾಂಗೀಯ ವಸ್ತ್ರದಂತೆ ಕಾಣಲು ಪೂರ್ಣ ಸಹಕರಿಸುತ್ತವೆ.
ಕೆಳಭಾಗದಲ್ಲಿ ಅತಿಹೆಚ್ಚು ನೆರಿಗೆಗಳಿರುವ ಮತ್ತು ಮೇಲ್ಭಾಗದಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯ ಗುಂಡಿಗಳನ್ನು ಹೊಂದಿರುವ ಈ ವಸ್ತ್ರ ಹಿಂದಿನ ರಾಜಮಹಾರಾಜರ ವಸ್ತ್ರಗಳನ್ನು ನೆನಪಿಗೆ ತರುತ್ತದೆ.
'ಸ್ಲೀಪಿಂಗ್ ಬ್ಯೂಟಿ' ಗೆ ಅತ್ಯಂತ ಸೂಕ್ತವಾದ ನೀಳ ರೇಶ್ಮೆಯ ವಸ್ತ್ರ ಪ್ರಖರವಾಗಿದ್ದು ವಿಶೇಷವಾಗಿ ರಾತ್ರಿ ಹೊತ್ತಿನ ಬೆಳಕಿನಲ್ಲಿ ಅತಿಹೆಚ್ಚಿನ ಗಮನ ಸೆಳೆಯಲು ಯಶಸ್ವಿಯಾಗುತ್ತದೆ.



Click it and Unblock the Notifications



