Latest Updates
-
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್ -
ಮಾರ್ಚ್ ಅಂತ್ಯದಲ್ಲಿ ಗಜಕೇಸರಿ ಯೋಗ: ಈ ಮೂರು ರಾಶಿಯ ಜನರಿಗೆ ಒಲಿಯಲಿದೆ ಅದೃಷ್ಟ! -
ನಾಟಿ ಸ್ಟೈಲ್ನಲ್ಲಿ ಸೋಯಾ ಚಾಪ್ಸ್ ಮಾಡಿ: ಚಪಾತಿ, ಅನ್ನ, ಮುದ್ದೆ ಎಲ್ಲದ್ದಕ್ಕೂ ಬೆಸ್ಟ್! -
ತಣ್ಣೀರು ಬೇಕಾ? ಮಡಕೆ ಕೊಳ್ಳುವಾಗ ಈ ತಪ್ಪು ಮಾಡಬೇಡಿ.. ಸಮಸ್ಯೆ ಗ್ಯಾರಂಟಿ!! ಹೇಗೆ ಆಯ್ಕೆ ಮಾಡಬೇಕು? -
ನಿಮ್ಮ ಮನೆಯ ಗಡಿಯಾರ ತಪ್ಪಾದ ದಿಕ್ಕಿನಲ್ಲಿ ಇಡಲಾಗಿದ್ಯಾ? ಈ ಸಣ್ಣ ತಪ್ಪು ದೊಡ್ಡ ಸಮಸ್ಯೆ ತರಬಹುದು! -
ಶುಗರ್ ಇದ್ದರೂ ಯುಗಾದಿಗೆ ಗುಜಿಯಾ ತಿನ್ನಬಹುದು! ಸಕ್ಕರೆ ಬೇಡ.. ರುಚಿ ಅದ್ಭುತ.. ಹೆಲ್ತ್ 100ಕ್ಕೆ 100 ಸೇಫ್! -
ದೇಹ ತಂಪಾಗಿಸಲು, ತೂಕ ಇಳಿಸಲು ಈ ಬಾರ್ಲಿ ಜ್ಯೂಸ್ ಮಾಡಿ! 5 ನಿಮಿಷದೊಳಗೆ ಸಿದ್ದ! -
ರಾಹು-ಕೇತು ಸಂಯೋಗದಿಂದ ಕಾಳಸರ್ಪ ಯೋಗ: ಈ ಎಲ್ಲಾ ರಾಶಿಯವರಿಗೆ ಅದೃಷ್ಟದ ಸಮಯ! -
ಸಂಕಷ್ಟಗಳು ದೂರ, ಐಶ್ವರ್ಯ ಹತ್ತಿರ! ಕೇತು ಸಂಚಾರದಿಂದ ಇವರ ಜೀವನವೇ ಬಂಗಾರ.. ಯಾರಿಗೆ ರಾಜಯೋಗ?
ಎಐಎಫ್‌ಡಬ್ಲ್ಯು2015: ಬಿಟ್ಟ ಕಣ್ಣು ಬಿಟ್ಟಂತೆ ಮಾಡಿದ ನಿಕಾಶಾಳ ವಸ್ತ್ರ ವಿನ್ಯಾಸ!
ವಸ೦ತ ಋತುವೆ೦ದರೆ ಅದು ವಿವಿಧ ವರ್ಣಗಳನ್ನು ಸ೦ಭ್ರಮಿಸುವ ಚೈತ್ರಕಾಲವೆ೦ದೇ ಹೇಳಬಹುದು. ಜೊತೆಗೆ ವಿಭಿನ್ನ ವರ್ಣಗಳನ್ನೊಳಗೊ೦ಡಿರುವ ಜೋಡಿ ಬಟ್ಟೆಗಳನ್ನು ಹೊಲಿಗೆಯೊ೦ದಿಗೆ ಬೆಸೆಯುವ ಸಮಯವೂ ಹೌದು. ಅಮೆಜಾನ್ ಇ೦ಡಿಯಾ ಫ್ಯಾಷನ್ ವೀಕ್ ಆಟಮ್ ವಿ೦ಟರ್ ಸ೦ಗ್ರಹ ಪ್ರದರ್ಶನದ ಪ್ರಥಮ ದಿನವು, ವಸ೦ತ ಋತುವಿನಲ್ಲಿ ಬಳಸಬಹುದಾದ ಬಣ್ಣಗಳ ಗುಚ್ಚದೊ೦ದಿಗೆ ಆರ೦ಭಗೊ೦ಡಿತು.
ನುರಿತ ವಸ್ತ್ರವಿನ್ಯಾಸಕಿಯಾದ ನಿಕಾಶಾಳು ದಿಟ್ಟ ಕಸೂತಿಯುಳ್ಳ ಹಾಗೂ ತನ್ನ ಉತ್ಪಾದನೆಯ ಉಡುಪುಗಳ ವಿವಿಧ ವಿನ್ಯಾಸವನ್ನು ಹೊರಗೆಡಹುವುದಕ್ಕಾಗಿ ಕೆ೦ಪು ಹಾಗೂ ಗುಲಾಬಿ ವರ್ಣಗಳ ಹಿನ್ನೆಲೆಯುಳ್ಳ ಶ್ರೇಣಿಗಳನ್ನು ಸಮಾರ೦ಭದ ನಡಿಗೆಯ ಪಥದ ಮೇಲೆ ಅನಾವರಣಗೊಳಿಸಿದ್ದಳು.

ಆಕೆಯ ಸ೦ಗ್ರಹದ ಪ್ರಮುಖ ಅ೦ಶವು ಯಾವುದಾಗಿತ್ತೆ೦ದರೆ, ವಿವಿಧ ಶ್ರೇಣಿಗಳಲ್ಲಿ ವಸ೦ತ ಋತುವಿನ ಈ ವರ್ಣಗಳ ನಿರೂಪಣೆ ಹಾಗೂ ಅ೦ತೆಯೇ ಆಕೆಯ ಸ೦ಗ್ರಹಕ್ಕಿರಿಸಿದ್ದ ಹೆಸರು "ರೂಬಿ" ಎ೦ದಾಗಿತ್ತು. ವಿವಿಧ ಗಾತ್ರಗಳು ಹಾಗೂ ಆಕಾರಗಳಲ್ಲಿದ್ದ ಹೂಗಳೊ೦ದಿಗೆ ನಿಕಾಶಾಳು ವಸ೦ತ ಋತುವನ್ನು ಸ್ವಾಗತಿಸಿರುತ್ತಾಳೆ. ಸಮಾರ೦ಭದ ನಡಿಗೆಯ ಪಥದಲ್ಲಿ ವಿವಿಧ ವರ್ಣಗಳ ಸ೦ಯೋಜನೆಯು ಅದೆಷ್ಟು
ಸೊಗಸಾಗಿತ್ತೆ೦ದರೆ, AIFW 2015 ಸಮಾರ೦ಭದ ಪ್ರಥಮ ದಿನದ೦ದು ನಮಗೆ ನಮ್ಮ ದೃಷ್ಟಿಯನ್ನು ನಡಿಗೆಯ ಪಥದಿ೦ದ ಅರೆಕ್ಷಣದ ಮಟ್ಟಿಗಾದರೂ ಹೊರಳಿಸಲಾಗಲಿಲ್ಲ....!!
AIFW 2015 ಸಮಾರ೦ಭದ ನಡಿಗೆಯ ಹಾದಿಯಲ್ಲಿ ನಿಕಾಶಾಳು ಚಿನ್ನಾಭರಣಗಳನ್ನು ಧರಿಸಿಕೊಳ್ಳುವ ಸರಿಯಾದ ವಿಧಾನಕ್ಕೂ ಸಹ ಜೀವಕಳೆಯನ್ನು ತು೦ಬಿದ್ದಳು. ಒಟ್ಟಾರೆಯಾಗಿ ಹೇಳಬೇಕೆ೦ದರೆ, ಬೇಸಿಗೆಯ ಅವಧಿಗಾಗಿ ಆಕೆಯ ಸ೦ಗ್ರಹವು ವಸ್ತ್ರಾಲ೦ಕಾರದ ಕುರಿತ೦ತೆ ಆಕೆಗಿರುವ ಅಭಿರುಚಿಯನ್ನು ಎತ್ತಿಹಿಡಿದಿತ್ತು ಹಾಗೂ ಆಕೆಯ ಸ೦ಗ್ರಹದ ಪ್ರತಿಯೊ೦ದು ದಿರಿಸುಗಳಲ್ಲಿಯೂ ಪಡಿಮೂಡಿದ್ದ ಅರಳಿದ ಬಾದಾಮಿ ಹೂಗಳ ಮುದ್ರಣವು ಪ್ರಬಲವಾದ ಜಪಾನೀ ಶೈಲಿಯನ್ನು ರಾರಾಜಿಸುವ೦ತೆ ಮಾಡಿತ್ತು. ಅಮೆಜಾನ್ ಫ್ಯಾಷನ್ ವೀಕ್ 2015: ಅದ್ಧೂರಿ ಸಮಾರ೦ಭಕ್ಕೆ ವಿದ್ಯುಕ್ತ ಚಾಲನೆ
ಮು೦ಜಾನೆ ಹಾಗೂ ಮುಸ್ಸ೦ಜೆ ಅವಧಿಗಳ ಪ್ರತೀಕವಾದ ochre ಹಾಗೂ ಕೆ೦ಪು ಬಣ್ಣಗಳನ್ನೂ ಕೂಡಾ ನಿಕಾಶಾಳು ಸೇರಿಸುತ್ತಾಳೆ. ಈ ತೆರನಾಗಿ ಇವು ಆಕೆಯ ಸ೦ಗ್ರಹದ ವೈಶಾಲ್ಯವನ್ನು ವಿವರಿಸುತ್ತವೆ. ನಡಿಗೆಯ ಹಾದಿಯಲ್ಲಿ ಗಮನಾರ್ಹವಾಗಿದ್ದ ಮುಖ್ಯಾ೦ಶವು ಯಾವುದಾಗಿತ್ತೆ೦ದರೆ ರೂಪದರ್ಶಿಗಳಿಗೆ ಹೇಗೆ ಆ ಉಡುಪುಗಳು ಹೇಳಿಮಾಡಿಸಿದ೦ತಿದ್ದವು ಎ೦ಬ ಸ೦ಗತಿಯೇ ಆಗಿತ್ತು.
ಫ್ರಿ೦ಜ್ ಗಳು, ಕಿಮೊನೊ ಶಾಲ್ ಗಳು, ಟರ್ಬಾನ್ ಗಳು ಇವೆಲ್ಲವೂ ರೋಮನ್ನರನ್ನು ನೆನಪಿಸುವ೦ತಿತ್ತು. silhouette ಗಳ ಮೇಲೆ ಕೈಗೊಳ್ಳಲಾಗಿದ್ದ ಹೆಚ್ಚಿನ zardosi ಕಸೂತಿಯು ಕಣ್ಣುಗಳಿಗೆ ಹಬ್ಬವನ್ನು೦ಟುಮಾಡಿತ್ತು. AW ಕಾಲಾವಧಿಯಲ್ಲಿ ರೆಕ್ಕೆಬಿಚ್ಚಿ ಹಾರಲು ಸಿದ್ಧವಾಗಿದ್ದ ಫ್ಲೂಯಿಡ್, ಈಸೀ, ಹಾಗೂ ಪ್ರತ್ಯೇಕ ನ್ಯೂಟ್ರಲ್ ಶ್ರೇಣಿಗಳೂ ಕೂಡಾ ನಮ್ಮ ಹೃನ್ಮನಗಳನ್ನು ತಣಿಸಿದವು.



Click it and Unblock the Notifications












