Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ತೋಳಿಲ್ಲದ ಹಳದಿ ದಿರುಸಿನಲ್ಲಿ ಬೆಡಗಿ ಅದಿತಿ ರಾವ್
ಇತ್ತೀಚೆಗೆ ಮುಂಬೈನಲ್ಲಿ ಅತಿ ದೊಡ್ಡ ವಾಣಿಜ್ಯ ಉಡುಪುಗಳ ಮತ್ತು ಫ್ಯಾಷನ್ ಟ್ರೆಂಡ್ ಲೈನ್ ಆದ ನೈನ್ ವೆಸ್ಟ್ ತನ್ನ ಸಮ್ಮರ್ ಕಲೆಕ್ಷನ್ 2015ನ್ನು ಅನಾವರಣ ಮಾಡಲಾಯಿತು. ಅದಿತಿ ರಾವ್ ಹೈದರಿ ಈ ಸಂಗ್ರಹಗಳನ್ನು ಉದ್ಘಾಟಿಸಿದರು. ಆಕೆ ಹಳದಿ ಬಣ್ಣದ ಸನ್ ಡ್ರೆಸ್ ಧರಿಸಿದ್ದಳು. ಆಕೆ ಧರಿಸಿದ್ದ ಮಾಮೂಲಿ ಶೈಲಿಯ ಸ್ಲೀವ್‍ಲೆಸ್ ಡ್ರೆಸ್ ಸ್ಪ್ರಿಂಗ್ ಸನ್‍ಶೈನ್ ರೀತಿ ನಮ್ಮನ್ನು ಪುಳಕಿತಗೊಳಿಸುತ್ತಿತ್ತು.
ಆಕೆ ಧರಿಸಿದ್ದ ಸನ್ ಡ್ರೆಸ್ ಸೊಂಟದವರೆಗೆ ಫಿಟ್ ಆಗುತ್ತಿತ್ತು ಮತ್ತು ಅದು ಸ್ಕೇಟರ್ ಸ್ಕರ್ಟ್ ರೀತಿ ಓಲಾಡುತ್ತಿತ್ತು. ಸೊಂಟದವರೆಗೆ ಬಂದು ಕಟ್ ಆದ ರೀತಿಯಲ್ಲಿದ್ದ ಆ ಉಡುಗೆಯು ಆಕೆಯ ಅಂದಕ್ಕೆ ಮತ್ತಷ್ಟು ಮೆರಗನ್ನು ನೀಡುತ್ತಿತ್ತು. ಆಕೆ ಧರಿಸಿದ್ದ ಹಳದಿ ಬಣ್ಣವು, ಹಳದಿ ಉಡುಗೆಗಳಲ್ಲಿಯೇ ಅತ್ಯಂತ ತಿಳಿ ಹಳದಿ ಬಣ್ಣವಾಗಿತ್ತು. ಅದರ ಮೇಲೆ ಇದ್ದ ಬಿಳಿ ಬಣ್ಣದ ಸ್ಟ್ರೈಪ್‍ಗಳು ಆ ಉಡುಗೆಯನ್ನು ಮತ್ತಷ್ಟು ಅಂದಗೊಳಿಸಿದ್ದವು. ಆ ಬಟ್ಟೆಗೆ ಬಳಸಿದ್ದ ಫ್ಯಾಬ್ರಿಕ್ ಸುತ್ತ ಶೀರ್ ನೆಟ್ ಪದರ ಬಂದಿತ್ತು.

ಈ ಸ್ಕೇಟರ್ ಡ್ರೆಸ್ ಮೋಟಿಫ್ ಮತ್ತು ಫ್ಯಾಬ್ರಿಕ್‍ನಿಂದ ಕೂಡಿತ್ತು. ಇದಕ್ಕೆ ಸ್ವಲ್ಪ ರೇಷ್ಮೆಯನ್ನು ಸಹ ಸೇರಿಸಲಾಗಿತ್ತು. ಇದು ಸುಮ್ಮನೆ ಸುತ್ತಾಡಲು, ಸ್ನೇಹಿತರ ಮತ್ತು ಪ್ರೀತಿ ಪಾತ್ರರ ಜೊತೆಗೆ ಹೊರಗೆ ಓಡಾಡಲು ಹೇಳಿ ಮಾಡಿಸಿದ ಉಡುಗೆಯ ರೀತಿ ಕಾಣುತ್ತಿತ್ತು.
ಆಕೆ ಈ ಡ್ರೆಸ್ ಜೊತೆಗೆ ಧರಿಸಿದ್ದ ಶೂಗಳು ನ್ಯೂಡ್ ಸ್ಯಾಂಡಲ್ಸ್ ಆಗಿದ್ದವು. ಆಕೆ ಧರಿಸಿದ್ದ ಯಾಂಕಲ್ ಸ್ಟ್ರ್ಯಾಪ್ ಮೀಡಿಯಂ ಹೀಲ್ ಇರುವ ಸ್ಯಾಂಡಲ್‍ಗಳು ಆಕೆಯ ಪಾದವನ್ನು ಮತ್ತಷ್ಟು ಚಂದವಾಗಿ ಕಾಣಿಸುತ್ತಿದ್ದವು.
ಜೊತೆಗೆ ಆಕೆ ಪಕ್ಕದ ಮನೆಯ ಹುಡುಗಿ ಎಂಬ ರೀತಿಯಲ್ಲಿ ಸ್ವಲ್ಪ ಮಾತ್ರ ಮೇಕಪ್ ಮಾಡಿಕೊಂಡಿದ್ದಳು. ಐ ಲೈನರ್, ಅಕೆಯ ಕೆಂಪಾದ ಕೆನ್ನೆಗಳು ಮತ್ತು ನ್ಯೂಡ್ ಪಿಂಕ್ ಶೇಡ್ ಲಿಪ್‍ಸ್ಟಿಕ್ ಆಕೆಯ ಲುಕ್‍ಗೆ ಪರಿಪೂರ್ಣವಾಗಿ ಒಪ್ಪುತ್ತಿತ್ತು.
ನೈನ್ ವೆಸ್ಟ್ ಬಹಳಷ್ಟು ಯುವತಿಯರು ಮತ್ತು ಫ್ಯಾಷನೇಬಲ್ ಮಹಿಳೆಯರ ಜೊತೆಗೆ ಸಂಬಂಧ ಹೊಂದಿದೆ. ಜೊತೆಗೆ ಇದು ಸುಖಕರ ಮತ್ತು ಟ್ರೆಂಡ್ ಅನ್ನು ಸಹ ಹೊಂದಿದೆ. ಯಾರು ಇನ್ನೂ ನೈನ್ ವೆಸ್ಟ್ ಸ್ಟೋರ್‌ಗೆ ಇನ್ನೂ ಭೇಟಿ ನೀಡಿಲ್ಲವೋ, ಅವರು ಇಲ್ಲಿರುವ ಸ್ಪ್ರಿಂಗ್/ಸಮ್ಮರ್ ಸಂಗ್ರಹವನ್ನು ನೋಡಲು ತಪ್ಪದೆ ಭೇಟಿ ನೀಡಿ ಎಂದು ನಾವು ಸಲಹೆ ನೀಡುತ್ತೇವೆ. ಇಲ್ಲಿ ನಿಮ್ಮ ಹಣಕ್ಕೆ ಪರಿಪೂರ್ಣವಾಗಿ ನ್ಯಾಯ ಸಲ್ಲಿಸುವ
ಬ್ಯಾಗ್‌ಗಳನ್ನು ಕೂಡ ಕಂಡುಬಂದವು. ಆಶ್ಚರ್ಯ ಎಂಬಂತೆ ಅದಿತಿ ರಾವ್ ಹೈದರಿ ತನ್ನೊಂದಿಗೆ ಯಾವುದೇ ರೀತಿಯ ಆಕ್ಸೆಸರಿಗಳನ್ನು ತೆಗೆದುಕೊಂಡು ಬಂದಿರಲಿಲ್ಲ. ಆಕೆ ಕೇವಲ ಒಂದು ವಾಚ್ ಧರಿಸಿದ್ದಳು ಮತ್ತು ಅದಕ್ಕಿಂತ ಹೆಚ್ಚಿಗೆ ಏನೂ ಧರಿಸಿರಲಿಲ್ಲ. ಇದು ಈ ಬೇಸಿಗೆಯ ದಿನಗಳಿಗೆ ಅತ್ಯಂತ ಸುಖಕರವಾದ ಆಯ್ಕೆಯಾಗಿತ್ತು.
ಈ ಲಾಂಚ್‍ನ ಥೀಮ್ ಚಿತ್ರವು ಈ ಕಾರ್ಯಕ್ರಮದ ಉಪಮೆಯಾಗಿ ಕಂಗೊಳಿಸುತ್ತಿತ್ತು. ಸುಂದರವಾದ ಉದ್ಯಾನಗಳು ತಮ್ಮ ಕೈಗವಸಿನಲ್ಲಿ ಒಂದು ಸುಂದರವಾದ ವೆಡ್ಜ್‌ಗಳ ಜೋಡಿಯನ್ನು ನೀಡುವ ಚಿತ್ರವನ್ನು ಇಲ್ಲಿ ಅನಾವರಣ ಮಾಡಲಾಗಿತ್ತು. ಇದರರ್ಥ ಚಳಿಗಾಲ ಮುಗಿದು ವಸಂತವನ್ನು ನಮಗೆ ನೀಡುತ್ತಿರುವಂತೆ ಇದು ಭಾಸವಾಗುತ್ತಿತ್ತು. ಈ ಸಂದರ್ಭದಲ್ಲಿ ಅದಿತಿ ರಾವ್ ಹೈದರಿ ಮತ್ತಷ್ಟು ನಯನ ಮನೋಹರವಾಗಿ ಕಾಣುತ್ತಿದ್ದರು.



Click it and Unblock the Notifications


