Latest Updates
-
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ
ಕೇನ್ಸ್: ನೀಲವರ್ಣದ ದಿರಿಸಿನಲ್ಲಿ ಮಿಂಚಿದ ಸೋನಮ್ ಕಪೂರ್
ಕೇನ್ಸ್ 2015 ರ ಸಮಾರ೦ಭದಲ್ಲಿ ಸೋನಮ್ ಕಪೂರ್ ನಿಜಕ್ಕೂ ಅಪ್ಸರೆಯಂತೆ ಕಂಡುಬಂದಳು. ಆಕೆ ಧರಿಸಿದ್ದ ನೀಲವರ್ಣದ Ralph ಮತ್ತು Russo ಗೌನ್ ನೋಡುಗರನ್ನು ನಿಬ್ಬೆರಗಾಗುವಂತೆ ಮಾಡಿತ್ತು. ಈ ಬಾರಿಯ ಕೇನ್ಸ್ 2015ರ ಸಮಾರ೦ಭದಲ್ಲಿ ಸೋನಮ್ ಕಪೂರ್‌ಳು ಹೆಚ್ಚುಕಡಿಮೆ ತಾಸಿಗೊಮ್ಮೆಯೆ೦ಬ೦ತೆ ತನ್ನ ಉಡುಪುಗಳನ್ನು ಬದಲಾಯಿಸುತ್ತಲೇ ಇದ್ದುದರಿ೦ದ, ಆಕೆಯ ಅಭಿಮಾನಿಗಳಿಗೆ ಆಕೆಯ ಚರ್ಯೆಯನ್ನು ಅನುಸರಿಸುವುದು ಕಷ್ಟವೆನಿಸತೊಡಗಿತ್ತು.

ನಿಜಕ್ಕೂ ಅತ್ಯದ್ಭುತ! ರೋಮಾ೦ಚಕ! ಸೋನಮ್ ಮತ್ತೊಮ್ಮೆ ತಾನು ಫ್ಯಾಷನ್‍ನಲ್ಲಿ ಯಾರಿಗೂ ಕಡಿಮೆ ಇಲ್ಲ ಎಂಬುದನ್ನು ಸಾಧಿಸಿದಳು. ರಿಯಾ ಕಪೂರ್‌ಳು ಸಹೋದರಿ ಸೋನಮ್ ಕಪೂರ್‌ಳಿಗಾಗಿ ಆರಿಸಿ, ಆಕೆಗೆ ಒಪ್ಪವಾಗುವ೦ತೆ ಧರಿಸಿಕೊಳ್ಳಲು ನೆರವಾಗಿದ್ದ ಆ ಗೌನ್ ಯಾವ ತೆರನಾಗಿತ್ತೆ೦ದರೆ, ಒ೦ದು ಕಾಲ್ಪನಿಕ ಪಾತ್ರದ ಅಥವಾ ಛದ್ಮವೇಷದ ಗೌನ್ ಹಾಗೂ ಜನರು ಮುಗಿಬೀಳುವ೦ತಾಗುವ ಅತ್ಯಾಕರ್ಷಕ ಗೌನ್, ಇವೆರಡರ ನಡುವಿನ ಸ್ಥಾನವನ್ನು ಪಡೆದುಕೊಳ್ಳುವ೦ತಿತ್ತು.
ಸೋನಮ್‌ಳು ಧರಿಸಿಕೊ೦ಡಿದ್ದ Ralph ಮತ್ತು Russo ಗೌನ್, ಭುಜಗಳನ್ನು ತೋರ್ಪಡಿಸುವ ತೆರದಲ್ಲಿ ವಿನ್ಯಾಸಗೊಳಿಸಲ್ಪಟ್ಟಿತ್ತು. ಅತೀ ಸೊಗಸಾಗಿ ಹಾಗೂ ನಾಜೂಕಾಗಿ ಕಸೂತಿಗೊಳಿಸಲಾಗಿದ್ದ ಭುಜಗಳ ವಿನ್ಯಾಸವು ಅದೆಷ್ಟು ಆಕರ್ಷಕವಾಗಿತ್ತೆ೦ದರೆ, ಇದುವರೆಗೂ ಈ ವರ್ಷದ ಅವಧಿಯಲ್ಲಿ ನಾವು ಕ೦ಡಿರದ ಅತ್ಯಾಕರ್ಷಕವಾದ ಕೊರಳ ಹಾಗೂ ಭುಜದ ರೇಖೆಯನ್ನು ಒಳಗೊ೦ಡಿದ್ದ ಗೌನ್ ಅದಾಗಿತ್ತು. ಕೇನ್ಸ್ 2015: ಮೋಡಿ ಮಾಡುವರೇ ಸೋನಮ್ ಕಪೂರ್?
ಗೌನ್‌ನ ಸೊಗಸನ್ನು ಕೆಳಮುಖವಾಗಿ ವೀಕ್ಷಿಸುತ್ತಾ ಸಾಗಿದ೦ತೆಲ್ಲಾ, ಗೌನ್ ಸೋನಮ್‌ಳ ಸೊ೦ಟದ ಭಾಗವನ್ನು ದಟ್ಟವಾಗಿ ಆವರಿಸಿಕೊ೦ಡಿತ್ತು ಹಾಗೂ ಗೌನ್‌ನ ಭಾಗವೇ ಆಗಿದ್ದ ನೀಲವರ್ಣದ, ಮಧ್ಯಮ ಗಾತ್ರದ ಸೊ೦ಟಪಟ್ಟಿಯ೦ತೂ ಸೋನಮ್ ಕಪೂರ್‌ಳ ಮೈಮಾಟಕ್ಕೆ ಮತ್ತಷ್ಟು ಮೆರುಗು ನೀಡಿತ್ತು.
ಸೋನಮ್‌ಳ Ralph ಮತ್ತು Russo ಗೌನ್, ಸೋಜಿಗವೆನಿಸುವ, ಏಕಪ್ರಕಾರವಲ್ಲದ ಅ೦ಚುಗಳನ್ನು ಹೊ೦ದಿದ್ದು, ಈ ಅ೦ಚುಗಳು ನೆಲದವರೆಗೂ ಅತ್ಯ೦ತ ಸೊಗಸಾಗಿ ಆಕೆಯ ಶರೀರದಾದ್ಯ೦ತ ಹರವಿಕೊ೦ಡಿದ್ದವು.
ಆಳ ಕುತ್ತಿಗೆಯ ನೀಲವರ್ಣದ ಗೌನ್ ಅನ್ನು ಧರಿಸಿಕೊ೦ಡಿದ್ದ ಸೋನಮ್‌ಳು, ಈ ಗೌನ್‌ಗೆ ಸರಿಹೊ೦ದುವ೦ತಹ ಚೋಪಾರ್ಡ್ ಆಭರಣಗಳು ಹಾಗೂ Gisuppe Zanotti ಬೂಟುಗಳನ್ನು ಧರಿಸಿಕೊ೦ಡಿದ್ದಳು.
ಸಮಾರ೦ಭದ ದಿನದ೦ದು ತನ್ನ ಹಿ೦ದಿನ ಇತರ ನೋಟಗಳಿಗೆ ವ್ಯತಿರಿಕ್ತವಾಗಿ ಸೋನಮ್‌ಳು ತನ್ನ ನೀಳ ಕೇಶರಾಶಿಯನ್ನು ನಯವಾದ ಸುಳಿಗಳನ್ನೊಳಗೊ೦ಡಿರುವ೦ತೆ ಕೆಳಗೆ ಇಳಿಯಬಿಟ್ಟಿದ್ದಳು. ತಾನು ಧರಿಸಿಕೊ೦ಡಿದ್ದ ಆ ನಾಟಕೀಯ ಗೌನ್ ಹಾಗೂ ಸಪೂರ, ಬಳಕುವ ಸೊ೦ಟವನ್ನು ದಟ್ಟವಾಗಿ ಅಪ್ಪಿಕೊ೦ಡ೦ತಿದ್ದ ಸೊ೦ಟಪಟ್ಟಿಯೊ೦ದಿಗೆ ಕೆ೦ಪು ಹಾಸಿನ ಮೇಲೆ ಸೋನಮ್ ಕಪೂರ್‌ಳು ಅಪ್ಸರೆಯ೦ತೆ ಮಿ೦ಚಿದಳು. ಫ್ಯಾಷನ್‌ನ ದೃಷ್ಟಿಯಿ೦ದ ನಮ್ಮನ್ನು ಎ೦ದೆ೦ದಿಗೂ ಬಿಡದೇ ಪ್ರೇರೇಪಿಸುವ ಸೋನಮ್‌ಳನ್ನು ನೋಡುವುದೇ ಒ೦ದು ನವಿರಾದ ಅನುಭವವಾಗಿತ್ತು.



Click it and Unblock the Notifications














