Latest Updates
-
ಗೃಹಹಿಂಸೆಯ ಸುಳಿಯಲ್ಲಿ ಸಿಲುಕಿದ್ದೀರಾ? ಸುರಕ್ಷಿತವಾಗಿ ಪಾರಾಗಲು ಈ ಮಾರ್ಗದರ್ಶಿ ಮತ್ತು ತುರ್ತು ಸಹಾಯವಾಣಿಗಳು ನಿಮಗೆ ನೆರವಾಗಲಿವೆ -
ಗಣೇಶ ಹಬ್ಬ 2026: ಬೆಂಗಳೂರಿನಲ್ಲಿ PoP ಮೂರ್ತಿಗಳ ಮೇಲೆ ಕಠಿಣ ನಿಷೇಧ, ಪರಿಸರ ಸ್ನೇಹಿ ಗಣಪತಿಯನ್ನು ಪತ್ತೆ ಹಚ್ಚುವುದು ಹೇಗೆ? -
ವೈ-ವೈ ನೂಡಲ್ಸ್ ಕಂಪನಿಗೆ FSSAI ಬಿಗ್ ಶಾಕ್: ಉತ್ಪಾದನೆ ಸ್ಥಗಿತ, ಅಸಲಿ ಕಾರಣವೇನು? -
ಭಾರತ-ಪಾಕಿಸ್ತಾನ ಹೈ-ವೋಲ್ಟೇಜ್ ಕದನ: ನಾಳೆ ದುಬೈನಲ್ಲಿ ಗೆಲ್ಲೋರು ಯಾರು? -
ಜನ್ಮಾಷ್ಟಮಿ ಉಪವಾಸ: ಸುಸ್ತಾಗದೆ, ಆರೋಗ್ಯಕರವಾಗಿ ವ್ರತ ಆಚರಿಸಲು ಇಲ್ಲಿವೆ ಸರಳ ಟಿಪ್ಸ್! -
'ವೆಡ್ ಇನ್ ಇಂಡಿಯಾ': ಕಡಿಮೆ ಬಜೆಟ್ನಲ್ಲಿ ಅದ್ಧೂರಿ ಮದುವೆಗೆ ಇಲ್ಲಿದೆ 3 ದಿನಗಳ ಮಾಸ್ಟರ್ ಪ್ಲಾನ್! -
ನಿಮ್ಮ ಮನೆಯ ಫ್ಯಾನ್ ಸುರಕ್ಷಿತವೇ? ದೊಡ್ಡ ಅವಘಡ ತಪ್ಪಿಸಲು ಈ 5 ನಿಮಿಷದ ಚೆಕ್ ಮರೆಯದಿರಿ -
ಎಚ್ಚರ! ಬೆಂಗಳೂರಿನಲ್ಲಿ ಶಿಶು ಆಹಾರದ ಮೇಲೆ FSSAI ದಾಳಿ: ನಿಮ್ಮ ಮಗುವಿನ ಆಹಾರ ಸುರಕ್ಷಿತವೇ? -
ಇಂದಿನ ಪೆಟ್ರೋಲ್, ಡೀಸೆಲ್ ದರ ಸ್ಥಿರ: ನಿಮ್ಮ ನಗರದ ಬೆಲೆ ತಿಳಿಯಿರಿ ಮತ್ತು ಮಳೆಗಾಲದ ಮೈಲೇಜ್ ಟಿಪ್ಸ್ ಇಲ್ಲಿದೆ -
ಡೆಂಗ್ಯೂ ಭೀತಿ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಮತ್ತು ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ಕ್ರಮಗಳನ್ನು ಮರೆಯದಿರಿ!
ಝೀ ಸಿನಿ ಅವಾರ್ಡ್ಸ್ 2014: ಕಣ್ಮನ ಸೆಳೆದ ಬೆಡಗಿಯರು
ಝೀ ಸಿನಿ ಅವಾರ್ಡ್ಸ್ 2014 ರ ರೆಡ್ ಕಾರ್ಪೆಟ್ ಅತ್ಯಾಧುನಿಕ ಮತ್ತು ಮನಮೋಹಕವಾಗಿತ್ತು. ಹೆಚ್ಚಿನ ಸೆಲೆಬ್ರಿಟಿಗಳು ವಿಶೇಷ ಉಡುಗೆಗಳಲ್ಲಿ ಮನಮೋಹಕಗೊಳಿಸಿದರು. ವಿದ್ಯಾ ಬಾಲನ್, ಐಶ್ವರ್ಯಾ ರೈ ಬಚ್ಚನ್ ಹೀಗೆ ಕೆಲವು ತಾರೆಯರು ಅವಾರ್ಡ್ಸ್ ಫಂಕ್ಷನ್‌ನಲ್ಲಿ ಭಾಗವಹಿಸದಿದ್ದರೂ ಕಾರ್ಯಕ್ರಮ ಅದ್ಭುತವಾಗಿ ಕಳೆಗಟ್ಟಿತ್ತು.
ಇನ್ನಷ್ಟು ಮಾಹಿತಿಗಾಗಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಮಲ್ಹೋತ್ರಾ ವಿನ್ಯಾಸದ ಧಿರಿಸಿನಲ್ಲಿ ಸೆಲೆಬ್ರಿಟಿಗಳ ವಾಕ್
ದೇಶೀಯ ಹಾಗೂ ವಿದೇಶಿ ಉಡುಗೆ ತೊಡುಗೆಗಳಲ್ಲಿ ಸೆಲೆಬ್ರಿಟಿಗಳು ರೆಡ್ ಕಾರ್ಪೆಟ್‌ನ ಅಂದವನ್ನು ಹೆಚ್ಚಿಸಿದರು. ಎಲ್ಲಾ ಬಾಲಿವುಡ್ ತಾರಾಮಣಿಯರು ಪ್ರೇಕ್ಷಕರ ಮನ ಕದಿಯುವಲ್ಲಿ ಯಶಸ್ವಿಯಾಗಿದ್ದರು.ಸೀರೆ, ಅನಾರ್ಕಲಿ, ಗೌನ್, ಲೆಹೆಂಗಾ ಹೀಗೆ ತರೇಹವಾರಿ ಉಡುಗೆಗೆಳಲ್ಲಿ ಭಾಗವಹಿಸಿದ್ದ ನಟೀ ಮಣಿಯರು ಇನ್ನಷ್ಟು ಸುಂದರಿಗಳಾಗಿದ್ದರು. ಹೊಸ ಹೊಸ ವಿನ್ಯಾಸ, ಉಡುಗೆ ಹೀಗೆ ಪ್ರತಿಯೊಂದರಲ್ಲೂ ಹೊಸತನ ಎದ್ದುಕಾಣುತ್ತಿತ್ತು.
ಸೆಲೆಬ್ರಿಟಿಗಳ ಉಡುಗೆಯೊಂದಿಗೆ ಅವರು ಮಾಡಿಕೊಂಡ ಮೇಕಪ್ ಧರಿಸಿದ ಆಭರಣಗಳು ಪ್ರತಿಯೊಬ್ಬರಲ್ಲೂ ಮಿಂಚಿನ ಸಂಚಾರವನ್ನೇ ಉಂಟು ಮಾಡಿತ್ತು. ಬನ್ನಿ, ಝೀ ಅವಾರ್ಡ್ಸ್‌ನ ಇನ್ನಷ್ಟು ಮನಮೋಹಕ ತಾರಾಮಣಿಗಳ ಝಲಕ್ ನಿಮಗಾಗಿ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಅಹನಾ ಡಿಯೋಲ್ ರಿಸೆಪ್ಶನ್‌ನಲ್ಲಿ ತಾರಾಮಣಿಯರು

1.ದೀಪಿಕಾ ಪಡುಕೋಣೆ
ನಯೀಮ್ ಖಾನ್ ಗೌನ್‌ನಲ್ಲಿ ದೀಪಿಕಾ ಸಖತ್ತಾಗಿ ಕಾಣುತ್ತಿದ್ದರು. ಹಾಲ್ಟರ್ ನೆಕ್ ಗೌನ್ ಹಿಂಭಾಗದಲ್ಲಿ ಡೀಪ್ ನೆಕ್ ಹೊಂದಿದ್ದು ಗೌನ್‌ನಲ್ಲಿರುವ ಹೊಳೆಯುವ ಬೊಟ್ಟುಗಳು ನೆರೆದವರ ಕಣ್ಣು ಕೋರೈಸಿದ್ದಂತೂ ನಿಜ. ವಜ್ರ ಕೂರಿಸಿದ ತಲೆಯಾಭರಣಗಳನ್ನು ಗೌನ್‌ಗೆ ತಕ್ಕಂತೆ ದೀಪಿಕಾ ತೊಟ್ಟುಕೊಂಡಿದ್ದಾರೆ.

2.ಸೋನಾಕ್ಷಿ ಸಿನ್ಹಾ
ಬಿಳಿ ಮತ್ತು ಕಪ್ಪು ಫ್ರಿಲ್ ಉಳ್ಳ ಗೌರಿ ನೈನಿಕ ವಿನ್ಯಾಸದ ಗೌನ್‌ನಲ್ಲಿ ಸೋನಾಕ್ಷಿ ಕಡೆದಿಟ್ಟ ಶಿಲ್ಪದಂತೆ ಕಂಡುಬರುತ್ತಿದ್ದಾರೆ. ಗೋಲ್ಡನ್ ಹೇರ್‌ಬ್ಯಾಂಡ್ ಅನ್ನು ಧರಿಸಿರುವ ಸೋನಾಕ್ಷಿ ಬಬ್ಲಿಯಾಗಿ ಕಂಡುಬರುತ್ತಿದ್ದಾರೆ.

3.ಪ್ರಿಯಾಂಕ ಚೋಪ್ರಾ
ಬಿಳಿ ಮತ್ತು ಗೋಲ್ಡನ್ ಬಣ್ಣದ ಪೇಪರ್ ಸಿಲ್ಕ್ ಸೀರೆಯನ್ನು ಉಟ್ಟಿರುವ ಪ್ರಿಯಾಂಕ ದೇಸೀ ಲುಕ್‌ನಲ್ಲಿ ಮುದ್ದಾಗಿ ಕಂಡುಬರುತ್ತಿದ್ದಾರೆ. ಸೀರೆಯು ದಪ್ಪಗಿನ ಅಂಚನ್ನು ಹೊಂದಿದ್ದು ಗೋಲ್ಡನ್ ಚಿತ್ತಾರಗಳಲ್ಲಿ ಮಿಂಚಿದೆ.

4.ವಾಣಿ ಕಪೂರ್
ಝೀ ಸಿನಿ ಅವಾರ್ಡ್ 2014 ರ ಮತ್ತೊಂದು ದೇಸೀ ಉಡುಗೆಯಲ್ಲಿ ಮಿಂಚಿದ ಚೆಲುವೆ ವಾಣಿ ಕಫೂರ್. ಬಿಳಿ ಮತ್ತು ಕಪ್ಪು ಬಣ್ಣದ ವರುಣ್ ಬಾಲ್ ಸೀರೆಯಲ್ಲಿ ಕಣ್ಣು ಕೋರೈಸುವಂತೆ ವಾಣಿ ಕಂಡುಬಂದಿದ್ದು, ಕಾರ್ಯಕ್ರಮದ ಅಂದವನ್ನು ಸರಳ ಉಡುಗೆಯಲ್ಲೇ ಹೆಚ್ಚಿಸಿದ್ದಾರೆ.

5.ಯಾಮಿ ಗೌತಮ್
ಸ್ಟ್ರಾಪ್ ಇಲ್ಲದ ಹಳದಿ ಬಣ್ಣದ ಕೆಳಭಾಗದಲ್ಲಿ ಫ್ರಿಲ್ ಹೊಂದಿರುವ ಗೌನ್ ಅನ್ನು ಯಾಮಿ ಈ ಬಾರಿ ಆಯ್ಕೆಮಾಡಿಕೊಂಡಿದ್ದಾರೆ. ಎಮರಾಲ್ಡ್ ಕಿವಿಯಾಭರಣ ಅವರ ಅಂದವನ್ನು ಇನ್ನಷ್ಟು ಹೆಚ್ಚಿಸಿದೆ.

6.ಶ್ರೇಯಾ ಘೋಷಲ್
ಗೋಲ್ಡನ್ ಮತ್ತು ಸಿಲ್ವರ್ ಬಣ್ಣದ ಹೊಳೆಯುವ ಅನಾರ್ಕಲಿಯಲ್ಲಿ ಶ್ರೇಯಾರ ಸೌಂದರ್ಯ ಸಖತ್ತಾಗಿ ಮಿಂಚಿದೆ.

7.ಎಲಿ ಅವ್ರಮ್
ಪೀಚ್ ಬಣ್ಣದ ಫ್ರಿಲ್ ಉಳ್ಳ ಅನಾರ್ಕಲಿಯಲ್ಲಿ ಮನ ಮುಟ್ಟುವ ಸೊಬಗಿಯಾಗಿರುವ ಎಲಿ ಅದ್ಭುತವಾಗಿ ಕಾಣುತ್ತಿದ್ದಾರೆ.

8.ಜೆನಿಲಿಯಾ ಡಿಸೋಜ
ರೋಹಿತ್ ಬಾಲ ವಿನ್ಯಾಸದ ನೆಲ ತಾಗುವಂತಿರುವ ಅನಾರ್ಕಲಿಯಲ್ಲಿ ಗರ್ಭಿಣಿ ಜೆನಿಲಿಯಾ ಇನ್ನಷ್ಟು ಕಳೆ ಕಳೆಯಾಗಿದ್ದಾರೆ. ಅವರು ಹಿಡಿದುಕೊಂಡಿರುವ ಪರ್ಸ್ ಮತ್ತು ಕುಂದನ್ ನೆಕ್ಲೇಸ್ ಇನ್ನಷ್ಟು ಸೊಬಗಾಗಿದೆ.

9.ಸ್ವರಾ ಭಾಸ್ಕರ್
ಪಿಂಕ್ ಬಣ್ಣದ ಗೌರಿ ನೈನಿಕಾ ಗೌನ್‌ನಲ್ಲಿ ಸ್ವರಾ ಭಾಸ್ಕರ್ ರೂಪಸಿಯಾಗಿ ಕಂಡುಬರುತ್ತಿದ್ದಾರೆ. ಅವರು ಧರಿಸಿರುವ ಆಭರಣಗಳು ಸಹ ಒಂದಕ್ಕೊಂದು ಚೆನ್ನಾಗಿ ಹೊಂದಿಕೊಳ್ಳುತ್ತಿವೆ ಎಂಬುದರಲ್ಲಿ ಸಂಶಯವಿಲ್ಲ.

10.ಸೋನಾಲಿ ಬೇಂದ್ರೆ
ಮನೀಷ್ ಮಲ್ಹೋತ್ರಾ ವಿನ್ಯಾಸದ ನೆಲಮುಟ್ಟುವಂತಿರುವ ಅನಾರ್ಕಲಿ ಸೋನಾಲಿ ಬೇಂದ್ರೆಯ ಅಂದಕ್ಕೆ ಕನ್ನಡಿ ಹಿಡಿದಂತಿದೆ. ಅನಾರ್ಕಲಿಯಲ್ಲಿ ಮಾಡಿರುವ ವಿನ್ಯಾಸ ತುಂಬಾ ಸುಂದರವಾಗಿದ್ದು ಕಣ್ಣಿಗೆ ಕಟ್ಟಿದಂತಿದೆ.

11.ಸೊನಾಲ್ ಚವ್ಹಾಣ್
ಪ್ಲೇನ್ ಕಪ್ಪು ಬಣ್ಣದ ಶಿವಾನಂದ್ ನರೇಶ್ ವಿನ್ಯಾಸದ ಕಟ್ - ಔಟ್ ವಿನ್ಯಾಸವುಳ್ಳ ಗೌನ್ ಸೊನಾಲ್‌ಗೆ ಸುಂದರವಾಗಿ ಹೊಂದಿಕೆಯಾಗಿದೆ.



Click it and Unblock the Notifications