Latest Updates
-
ಜನ್ಮಾಷ್ಟಮಿ ಉಪವಾಸ: ಸುಸ್ತಾಗದೆ, ಆರೋಗ್ಯಕರವಾಗಿ ವ್ರತ ಆಚರಿಸಲು ಇಲ್ಲಿವೆ ಸರಳ ಟಿಪ್ಸ್! -
'ವೆಡ್ ಇನ್ ಇಂಡಿಯಾ': ಕಡಿಮೆ ಬಜೆಟ್ನಲ್ಲಿ ಅದ್ಧೂರಿ ಮದುವೆಗೆ ಇಲ್ಲಿದೆ 3 ದಿನಗಳ ಮಾಸ್ಟರ್ ಪ್ಲಾನ್! -
ನಿಮ್ಮ ಮನೆಯ ಫ್ಯಾನ್ ಸುರಕ್ಷಿತವೇ? ದೊಡ್ಡ ಅವಘಡ ತಪ್ಪಿಸಲು ಈ 5 ನಿಮಿಷದ ಚೆಕ್ ಮರೆಯದಿರಿ -
ಎಚ್ಚರ! ಬೆಂಗಳೂರಿನಲ್ಲಿ ಶಿಶು ಆಹಾರದ ಮೇಲೆ FSSAI ದಾಳಿ: ನಿಮ್ಮ ಮಗುವಿನ ಆಹಾರ ಸುರಕ್ಷಿತವೇ? -
ಇಂದಿನ ಪೆಟ್ರೋಲ್, ಡೀಸೆಲ್ ದರ ಸ್ಥಿರ: ನಿಮ್ಮ ನಗರದ ಬೆಲೆ ತಿಳಿಯಿರಿ ಮತ್ತು ಮಳೆಗಾಲದ ಮೈಲೇಜ್ ಟಿಪ್ಸ್ ಇಲ್ಲಿದೆ -
ಡೆಂಗ್ಯೂ ಭೀತಿ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಮತ್ತು ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ಕ್ರಮಗಳನ್ನು ಮರೆಯದಿರಿ! -
ರಾಜಸ್ಥಾನ UCC: ಲಿವ್-ಇನ್ ಮತ್ತು ಮದುವೆ ಜೋಡಿಗಳೇ ಎಚ್ಚರ, ಈ ದಾಖಲೆಗಳು ಸಿದ್ಧವಿರಲಿ! -
ಮಳೆಗಾಲದ ಎಚ್ಚರಿಕೆ: ಅಪಾರ್ಟ್ಮೆಂಟ್ ಸೋರಿಕೆ ತಡೆಯಲು ಮತ್ತು ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಸರಳ ಉಪಾಯಗಳು -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ₹350 ಕ್ಕಿಂತ ಕಡಿಮೆ ವೆಚ್ಚದಲ್ಲಿ 7 ಹೈ-ಪ್ರೋಟೀನ್ ಬ್ರೇಕ್ಫಾಸ್ಟ್ ಐಡಿಯಾಗಳು! -
ಬೆಂಗಳೂರಿನಲ್ಲಿ ಗಣೇಶೋತ್ಸವಕ್ಕೆ ಹೊಸ ರೂಲ್ಸ್: PoP ಮೂರ್ತಿ ನಿಷೇಧ, ಅನುಮತಿ ಪಡೆಯುವುದು ಹೇಗೆ?
ವಿಲ್ಸ್ ಫ್ಯಾಶನ್ ವೀಕ್ 2014 ಭರ್ಜರಿಯಾಗಿ ಆರಂಭ!
ಹೆಚ್ಚು ಕಾತರದಿಂದ ಕಾಯುತ್ತಿದ್ದ ವಿಲ್ಸ್ ಇಂಡಿಯನ್ ಫ್ಯಾಶನ್ ವೀಕ್ 2014 ಭರ್ಜರಿಯಾಗಿ ಆರಂಭಗೊಂಡಿದೆ. ಜನಪ್ರಿಯ ವಿನ್ಯಾಸಕಾರ ತರುಣ್ ತಹಿಲಾನಿ ಡಬ್ಲ್ಯುಐಎಫ್‌ಡಬ್ಲ್ಯೂ 2014 ಅನ್ನು ತಮ್ಮ ರಾಜವೈಭೋಗದ ಅದ್ಭುತ ಸಂಗ್ರಹದೊಂದಿಗೆ ತೆರೆದಿದ್ದಾರೆ.
ವಿವಿಧ ವಿನ್ಯಾಸದ ನೆಕ್ಲೇಸ್‌ಗಳು, ಏಳು ತಂತಿಯುಳ್ಳ ಹಾರ, ಮುಗಲ್ ಆಭರಣ, ದೇವಾಲಯದ ಆಭರಣ ಮುಂತಾದ ಸಂಗ್ರಹಗಳು ಕಣ್ಮನ ಸೆಳೆದಿವೆ. ಸೊಂಟದ ಪಟ್ಟಿಯುಳ್ಳ ಸೀರೆಗಳು, ಧೋತಿ ಪ್ಯಾಂಟ್‌ಗಳು, ಪ್ರಿಂಟೆಡ್ ಜಾಕೆಟ್‌ಗಳು, ಲುಂಗಿ ಸ್ಕರ್ಟ್‌ಗಳು ಹೀಗೆ ವಿವಿಧ ಸಂಗ್ರಹಗಳು ತಹಿಲಾನಿಯವರ ಚಳಿಗಾಲದ ಸಂಗ್ರಹಣೆಯಾದ ವಿಲ್ಸ್ ಇಂಡಿಯಾ ಫ್ಯಾಶನ್ ವೀಕ್ 2014 ರ ರಾಂಪ್‌ನಲ್ಲಿ ಕಂಡುಬಂದವು.
ಇನ್ನಷ್ಟು ಫೋಟೊ ಗ್ಯಾಲರಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಶಿಲ್ಪಾ ಶೆಟ್ಟಿ ಅವರ ಫೋಟೊ ಗ್ಯಾಲರಿ

ಕಪ್ಪು ಮತ್ತು ಬಿಳಿಯಲ್ಲದೆ, ಪಚ್ಚೆ, ಮಾಣಿಕ್ಯ, ನೀಲಮಣಿ ಮತ್ತು ತುಕ್ಕಿನ ಗಾಢವಾದ ಛಾಯೆಗಳನ್ನು ಅವರ ಸಂಗ್ರಹದಲ್ಲಿ ಬಳಸಲಾಗಿದೆ. ರಾಂಪ್‌ನಲ್ಲಿ ವಿವಿಧ ಬಣ್ಣಗಳ ಸಿಲ್ಕ್ ಡ್ರಾಪ್‌ಗಳ ವೈಭವವೇ ನಡೆಯಿತು ಎಂದೂ ಕೂಡ ಹೇಳಬಹುದು.
ಸೆಟ್ ಅಪ್ ಅಂತೂ ಅದಭುತವಾಗಿದ್ದು ಕ್ಲಾಸಿ ನೋಟದೊಂದಿಗೆ ಮೇಳೈಸಿತ್ತು. ಓಪನಿಂಗ್‌ಗಾಗಿ ಅದ್ಭುತವಾದ ವೇದಿಕೆಯನ್ನು ನಿರ್ಮಿಸಲಾಗಿತ್ತು. ಪಚ್ಚೆ, ಹಸಿರು, ಕೆಂಪು, ತುಕ್ಕು ಮತ್ತು ಗೋಲ್ಡನ್ ಬಣ್ಣಗಳಿಗೆ ಕಪ್ಪು ಬಣ್ಣವನ್ನು ಬದಲಾಯಿಸಲಾಯಿತು.
ಓಪನಿಂಗ್ ಶೋವನ್ನು ಸೆಲೆಬ್ರಿಟಿಗಳ ಮೂಲಕ ಅದ್ಭುತವಾಗಿ ಉದ್ಘಾಟಿಸಲಾಯಿತು. ಸುಂದರಿ ಶಿಲ್ಪಾ ಶೆಟ್ಟಿ ಸೆಕ್ಸಿ ಬ್ರೈಡ್ ಧಿರಿಸಿನಲ್ಲಿ ತರುಣ್ ತಿಹಲಾನಿಗಾಗಿ ಸುಂದರವಾಗಿ ಕಂಡುಬಂದಿದ್ದಾರೆ.
ಬಹು ಬಣ್ಣದ ಲೆಹೆಂಗಾ ಸ್ಕರ್ಟ್‌ನೊಂದಿಗೆ ಕ್ರಾಪ್ ಬ್ಲೌಸ್ ಅನ್ನು ಶಿಲ್ಪಾ ಧರಿಸಿದ್ದರು. ತನ್ನ ಮುಂಬರುವ ಚಿತ್ರವಾದ ಡಿಶ್ಕ್ಯೂನ ಸಹ ನಟರಾದ ಹರ್ಮನ್ ಬವೇಜಾ ಮತ್ತು ಆಯೆಶಾ ಖನ್ನಾನೊಂದಿಗೆ ರಾಂಪ್‌ನಲ್ಲಿ ಶಿಲ್ಪಾ ಹೆಜ್ಜೆಹಾಕಿದರು.



Click it and Unblock the Notifications