Latest Updates
-
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್ -
ಬೆಂಗಳೂರಿನಲ್ಲಿ ನೀರಿನ ಉಳಿತಾಯ ಕಡ್ಡಾಯ: ಜುಲೈ 31ರೊಳಗೆ ನಿಮ್ಮ ಮನೆಯ ನಲ್ಲಿಗಳಿಗೆ ಏರೇಟರ್ ಅಳವಡಿಸಿ! -
ಅಂತರಾಷ್ಟ್ರೀಯ ಸ್ನೇಹ ದಿನ: ಗೆಳೆಯರೊಂದಿಗೆ 'ಬಡ್ಡಿ ವರ್ಕೌಟ್' ಮಾಡಿ ಆರೋಗ್ಯ ಮತ್ತು ಬಾಂಧವ್ಯ ಹೆಚ್ಚಿಸಿಕೊಳ್ಳಿ! -
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ! -
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ!
ಡಬ್ಲ್ಯೂಐಎಫ್‌ಡಬ್ಲ್ಯೂನಲ್ಲಿ ರಿನಾ ಧಾಕಾ ಕಮಾಲ್
ವಿಲ್ಸ್ ಇಂಡಿಯಾ ಫ್ಯಾಶನ್ ವೀಕ್‌ನ ಮೊದಲ ದಿನ ರಿನಾ ಧಾಕಾರ ವಿನ್ಯಾಸ ಚಮತ್ಕಾರವನ್ನು ಉಂಟುಮಾಡಿತು. ಫ್ಯಾಶನ್ ಮತ್ತು ತಂತ್ರಜ್ಞಾನವನ್ನು ಮೇಳೈಸಿ ಆಕೆ ಪ್ರದರ್ಶಿಸಿದ ಕೆಲವೊಂದು ವಿನ್ಯಾಸಗಳು ಸುಂದರ ಮತ್ತು ಬೋಲ್ಡ್ ಆಗಿತ್ತು.ಕಪ್ಪು ಮತ್ತು ಬಿಳಿ ಬಣ್ಣಕ್ಕೆ ಆಕೆ ಹೆಚ್ಚು ಒತ್ತು ಕೊಟ್ಟಂತೆ ಇಲ್ಲಿ ಕಾಣುತ್ತಿತ್ತು. ಸಿಲ್ಕ್ ಸ್ಕರ್ಟ್ಸ್, ಕ್ರಾಪ್ ಟಾಪ್ಸ್, ಬಣ್ಣದ ಸ್ಟ್ರಿಪ್ಡ್ ಪ್ಯಾಂಟ್ಸ್, ಶೀರ್ ಬ್ಲೌಸಸ್ ಹೀಗೆ ವಿಧ ವಿಧ ವಿನ್ಯಾಸಗಳು ಧಿರಿಸುಗಳು ಕಣ್ತುಂಬಿದವು.
ಪ್ರಿಂಟ್ಸ್, ಶೀರ್, ಸ್ಕ್ವಿನ್ನ್‌ಡ್ ಎಂಬ್ರಾಯಿಡರಿ, ಗ್ಲಿಟ್ಟರ್ ಹೀಗೆ ಫ್ಯಾಶನ್ ಝಲಕ್ ರಿನಾರ ವಿನ್ಯಾಸಗಳಲ್ಲಿ ಹೆಚ್ಚು ಮೈದುಂಬಿತ್ತು. ಬಾಬ್ ಕಟ್, ಟೇಸೆಲ್ಸ್, ಸೆಕ್ಸಿ ಹೀಲ್ಸ್ ಗ್ಲಾಮರ್ ಹಾಗೂ ಸ್ಟೈಲ್ ರಿನಾ ಧಾಕಾರ ಪ್ರದರ್ಶನವನ್ನು ಅದ್ಭುತ ಮತ್ತು ಕಣ್ಣುಕೋರೈಸುವಂತೆ ಮಾಡಿತ್ತು. ಬನ್ನಿ ರಿನಾ ಧಾಕಾರ ಮತ್ತಷ್ಟು ಮೈನವಿರೇಳಿಸುವ ಕಲೆಕ್ಷನ್‌ಗಳು ನಿಮಗಾಗಿ
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ವಿಐಎಫ್‌ಡಬ್ಲ್ಯೂ 2014 ರಾಕೇಶ್ ಅಗರ್‌ವಾಲ್ ಚಮತ್ಕಾರ!

ಸಿಲ್ಕ್ ಸ್ಕರ್ಟ್ಸ್:
ಮೊಣಕಾಲುದ್ದದ ಸಿಲ್ಕ್ ಸ್ಕರ್ಟ್ಸ್‌ಗಳು ನೋಡಲು ಚಿಕ್ ಮತ್ತು ಗಿರ್ಲಿಯಾಗಿದ್ದವು.

ಶೀರ್:
ರಿನಾ ಧಾಕಾರ ಸಂಗ್ರಹಣೆಯಲ್ಲಿ ಶೀರ್ ಹೆಚ್ಚು ಗಮನಸೆಳೆಯಿತು.

ತುಸ್ಸಾರ್ ಸಿಲ್ಕ್:
ಸಿಲ್ಕ್ ಜಾಕೆಟ್ ಹಾಗೂ ಸಣ್ಣ ವರ್ಕ್‌ಗಳು ಹೈ ವೈಸ್ಟ್ ಪೆನ್ಸಿಲ್ ಸ್ಕರ್ಟ್‌ಗಳೊಂದಿಗೆ ಕಂಡುಬಂದಿತು.

ಹೈ ಲೋ ಹೆಮ್‌ಲೈನ್:
ಮೊಣಕಾಲು ತಾಗುವ ಫ್ಲಾರ್‌ಡ್ ಡ್ರೆಸ್ ನೋಡಲು ಕ್ಲಾಸಿಯಾಗಿತ್ತು.

ಪ್ಲಂಗಿಂಗ್ ನೆಕ್‌ಲೈನ್:
ಇದಂತೂ ಕಣ್ಣಿಗೆ ಹಬ್ಭವನ್ನುಂಟುಮಾಡಿತು. ಉಡುಪಿನಲ್ಲಿರುವ ಕಲಾತ್ಮಕತೆ ನಿಜಕ್ಕೂ ಕಟ್ಟಿ ಹಾಕಿತು.

ಬಾಬ್ ಕಟ್:
ರಿನಾ ಧಾಕಾರ ಕಲೆಕ್ಷನ್‌ನಲ್ಲಿ ಎಲ್ಲಾ ರೂಪದರ್ಶಿಗಳು ಬಾಬ್ ಕಟ್‌ನಲ್ಲಿ ರಾಂಪ್‌ನಲ್ಲಿ ಕಂಡುಬಂದರು.

ಗೌನ್ಸ್:
ಹೊಳಪುಳ್ಳ ಮೊಣಕಾಲವರೆಗಿನ ಸ್ಲಿಟ್‌ನ ಗೌನ್ಸ್ ಸೆಕ್ಸಿ ಹಾಗೂ ಬೋಲ್ಡ್ ನೋಟವನ್ನು ಉಂಟುಮಾಡಿದ್ದವು.

ರಿನಾ ಧಾಕಾ:
ಕೊನೆಯದಾಗಿ ವಿನ್ಯಾಸಕಿ ರಿನಾ ಧಾಕಾ ಡಬ್ಲ್ಯೂಐಎಫ್‌ಡಬ್ಲ್ಯೂನ ಮೊದಲ ದಿನ ಕಂಡುಬಂದರು.



Click it and Unblock the Notifications