Latest Updates
-
ವಿಶ್ವ ಕಾರ್-ಫ್ರೀ ಡೇ: ಟ್ರಾಫಿಕ್ ಬಿಟ್ಟು 20 ನಿಮಿಷದ ಈ ಸಿಂಪಲ್ ರೂಟೀನ್ ಫಾಲೋ ಮಾಡಿ! -
ಸೈಫ್-ಕರೀನಾ ಪ್ರೇಮಪತ್ರದ ರಹಸ್ಯ: ನಿಮ್ಮ ಸಂಬಂಧವನ್ನೂ ಗಟ್ಟಿಗೊಳಿಸಲು ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ! -
ಈರುಳ್ಳಿ ಬೆಲೆ ಏರಿಕೆ: ಬಜೆಟ್ ಉಳಿಸಲು ಮತ್ತು ಈರುಳ್ಳಿ ದೀರ್ಘಕಾಲ ಸಂಗ್ರಹಿಸಲು ಸರಳ ಟಿಪ್ಸ್ -
ಏಕಾದಶಿ ಉಪವಾಸ: ಆರೋಗ್ಯಕರವಾಗಿರಲು ₹300ರಲ್ಲಿ ಪೌಷ್ಟಿಕ ಆಹಾರದ ಪ್ಲಾನ್ ಇಲ್ಲಿದೆ! -
ಸ್ಯಾಮ್ಸಂಗ್ One UI 9 ಅಪ್ಡೇಟ್: ನಿಮ್ಮ ಫೋನ್ಗೆ ಬಂದಿದೆಯೇ? ಸುರಕ್ಷಿತವಾಗಿ ಇನ್ಸ್ಟಾಲ್ ಮಾಡುವುದು ಹೇಗೆ? -
ಮಳೆಗಾಲದಲ್ಲಿ ಫಿಟ್ ಆಗಿರಲು 12 ನಿಮಿಷಗಳ ಇಂಡೋರ್ ವರ್ಕೌಟ್: ಜಿಮ್ ಇಲ್ಲದೆ ಮನೆಯಲ್ಲೇ ಮಾಡಿ! -
ವೈಫ್ ಅಪ್ರಿಶಿಯೇಷನ್ ಡೇ: ನಿಮ್ಮ ಮಡದಿಗೆ ಈ ವಿಶೇಷ ದಿನದಂದು ನೀಡಬಹುದಾದ ಸರಳ ಮತ್ತು ಸುಂದರ ಸರ್ಪ್ರೈಸ್ಗಳು ಇಲ್ಲಿವೆ! -
ಮಳೆಗಾಲದ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸೋರಿಕೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮರೆವಿನ ಕಾಯಿಲೆಗೆ ವಿದಾಯ: ಮೆದುಳಿನ ಆರೋಗ್ಯಕ್ಕೆ ಭಾರತೀಯ ಶೈಲಿಯ 'ಮೈಂಡ್ ಡಯಟ್' ಹೀಗಿರಲಿ! -
2026ರ ಏಷ್ಯನ್ ಗೇಮ್ಸ್: ಮೊದಲ ದಿನವೇ ಭಾರತಕ್ಕೆ ಪದಕದ ಬೇಟೆ! ಪಂದ್ಯಗಳ ಸಂಪೂರ್ಣ ವೇಳಾಪಟ್ಟಿ ಮತ್ತು ಲೈವ್ ಅಪ್ಡೇಟ್ಸ್ ಇಲ್ಲಿದೆ
ಕಣ್ಮನ ಸೆಳೆಯುವ ವಿದ್ಯಾಬಾಲನ್ ಸೀರೆ ಕಲೆಕ್ಷನ್
ಹೊಸ ವಿನ್ಯಾಸದ ಧಿರಿಸುಗಳನ್ನು ಧರಿಸುವ ಆಕೆಯ ಪ್ರಯತ್ನ ಸೋಲನ್ನೇ ಕಂಡಿದೆ. ಆದರೆ ಸೀರೆಯಲ್ಲಿ ವಿದ್ಯಾರನ್ನು ಸೋಲಿಸುವವರು ಯಾರೂ ಇಲ್ಲ ಎಂದೇ ಹೇಳಬಹುದು. ಸೀರೆಯಲ್ಲಿ ಕಣ್ಮನ ಸೆಳೆಯುವ ವಿದ್ಯಾರ ಕೆಲವೊಂದು ಫೋಟೊಗಳು ನಿಮಗಾಗಿ:

ಹಳದಿ ಬಣ್ಣದಲ್ಲಿ:
ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ವಿದ್ಯಾ ಬಾಲನ್ ಹಳದಿ ಸೀರೆಯಲ್ಲಿ ಇನ್ನಷ್ಟು ಸುಂದರವಾಗಿ ಕಂಡುಬಂದಿದ್ದರು.

ಅನುಪಮಾ ಸ್ಯಾರಿ:
ಕೆಂಡ ಮತ್ತು ಮಸಿ ಕಾಂಬಿನೇಷನ್ ಇರುವ ಈ ಅನುಪಮಾ ಸ್ಯಾರಿ ಡಿಸೈನ್ ನಲ್ಲಿ ಆಕರ್ಷಕವಾಗಿದ್ದು, ಇದು ವಿದ್ಯಾಳ ಮೈ ಬಣ್ಣಕ್ಕೆ ಚೆನ್ನಾಗಿ ಕಾಣುತ್ತಿತ್ತು.

ಪಾಯಲ್ ಸಿಂಗಾಲ್ ಸೀರೆ:
ಪಾಯಲ್ ಸಿಂಗಾಲ್ ಅವರ ಈ ಸೀರೆಯು ವಿದ್ಯಾರ ಗೌನ್ ಧಿರಿಸಿಗೆ ಮಾರ್ಪಾಟನ್ನು ಮಾಡಿದೆ. ಈ ಸಿಲ್ಕ್ ಸೀರೆಯ ವಿನ್ಯಾಸ ತುಂಬಾ ಸರಳವಾಗಿದೆ. ಸೀರೆಯ ಮುಖ್ಯ ಬಣ್ಣ ತಿಳಿ ಗ್ರೇಯಾಗಿದ್ದು ಗಾಢ ಹಳದಿ ಅಂಚನ್ನು ಸೀರೆ ಹೊಂದಿದೆ. ಸೆರಗನ್ನು ಪ್ಲೇಟ್ಸ್‌ಗಳಲ್ಲಿ ಹಾಕಿಕೊಂಡಿರುವ ವಿದ್ಯಾ ಫಾರ್ಮಲ್ ಲುಕ್ ಅನ್ನು ಚೂಸ್ ಮಾಡಿಕೊಂಡಿದ್ದಾರೆ.

ವಾವ್! ನೀಲಿ ಬಣ್ಣದ ಸೀರೆಯಲ್ಲಿ ವಿದ್ಯಾ:
ಸ್ಟಾರ್ ಪ್ಲಸ್ ಮಹಿಳಾ ದಿನದಂದು ತನ್ನ ನೀಲಿ ಬಣ್ಣದ ಸೀರೆಯಲ್ಲಿ ವಿದ್ಯಾ ಫೋಟೊಗೆ ಈ ರೀತಿಯಾಗಿ ಫೋಸ್ ನೀಡಿದರು.

ಕಪ್ಪು ಬಿಳಿ ಬಣ್ಣದ ಚೆಕ್ಸ್ ಪ್ರಿಂಟ್‌ನ ಸೀರೆಯಲ್ಲಿ:
ಕಪ್ಪು ಬಿಳಿ ಬಣ್ಣದ ಚೆಕ್ಸ್ ಪ್ರಿಂಟ್‌ನ ಸೀರೆಯನ್ನು ಮಡಚಿ ತುಂಬಾ ಸ್ಟೈಲಿಶ್ ಆಗಿ ವಿದ್ಯಾ ಉಟ್ಟಿದ್ದರು. ಸಾಂಪ್ರದಾಯಿಕ ಬ್ಲೌಸ್ ಅನ್ನು ಬಿಟ್ಟು ಉದ್ದ ತೋಳಿನ ನಿಯೋನ್ ಆರೆಂಜ್ ಬಣ್ಣದ ಜಾಕೆಟ್ ಬ್ಲೌಸ್ ಅನ್ನು ವಿದ್ಯಾ ತಮ್ಮ ಈ ಸೀರೆಗೆ ಆಯ್ದುಕೊಂಡಿದ್ದಾರೆ.

ವೈಟ್ ಪ್ರಿಂಟೆಡ್ ಸೀರೆಯಲ್ಲಿ:
ಬಿಳಿ ಬಣ್ಣದ ದೆಬಾಶ್ರೀ ಸಮಂತ ಸೀರೆಯಲ್ಲಿ ವಿದ್ಯಾ ಈ ರೀತಿಯಾಗಿ ಕಂಡುಬಂದಿದ್ದರು.



Click it and Unblock the Notifications
