Latest Updates
-
ಈರುಳ್ಳಿ ಬೆಲೆ ಏರಿಕೆ: ಬಜೆಟ್ ಉಳಿಸಲು ಮತ್ತು ಈರುಳ್ಳಿ ದೀರ್ಘಕಾಲ ಸಂಗ್ರಹಿಸಲು ಸರಳ ಟಿಪ್ಸ್ -
ಏಕಾದಶಿ ಉಪವಾಸ: ಆರೋಗ್ಯಕರವಾಗಿರಲು ₹300ರಲ್ಲಿ ಪೌಷ್ಟಿಕ ಆಹಾರದ ಪ್ಲಾನ್ ಇಲ್ಲಿದೆ! -
ಸ್ಯಾಮ್ಸಂಗ್ One UI 9 ಅಪ್ಡೇಟ್: ನಿಮ್ಮ ಫೋನ್ಗೆ ಬಂದಿದೆಯೇ? ಸುರಕ್ಷಿತವಾಗಿ ಇನ್ಸ್ಟಾಲ್ ಮಾಡುವುದು ಹೇಗೆ? -
ಮಳೆಗಾಲದಲ್ಲಿ ಫಿಟ್ ಆಗಿರಲು 12 ನಿಮಿಷಗಳ ಇಂಡೋರ್ ವರ್ಕೌಟ್: ಜಿಮ್ ಇಲ್ಲದೆ ಮನೆಯಲ್ಲೇ ಮಾಡಿ! -
ವೈಫ್ ಅಪ್ರಿಶಿಯೇಷನ್ ಡೇ: ನಿಮ್ಮ ಮಡದಿಗೆ ಈ ವಿಶೇಷ ದಿನದಂದು ನೀಡಬಹುದಾದ ಸರಳ ಮತ್ತು ಸುಂದರ ಸರ್ಪ್ರೈಸ್ಗಳು ಇಲ್ಲಿವೆ! -
ಮಳೆಗಾಲದ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸೋರಿಕೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮರೆವಿನ ಕಾಯಿಲೆಗೆ ವಿದಾಯ: ಮೆದುಳಿನ ಆರೋಗ್ಯಕ್ಕೆ ಭಾರತೀಯ ಶೈಲಿಯ 'ಮೈಂಡ್ ಡಯಟ್' ಹೀಗಿರಲಿ! -
2026ರ ಏಷ್ಯನ್ ಗೇಮ್ಸ್: ಮೊದಲ ದಿನವೇ ಭಾರತಕ್ಕೆ ಪದಕದ ಬೇಟೆ! ಪಂದ್ಯಗಳ ಸಂಪೂರ್ಣ ವೇಳಾಪಟ್ಟಿ ಮತ್ತು ಲೈವ್ ಅಪ್ಡೇಟ್ಸ್ ಇಲ್ಲಿದೆ -
ದೆಹಲಿ-ಎನ್ಸಿಆರ್ನಲ್ಲಿ ಕಲುಷಿತ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಬಾಂದ್ರಾ ಫೇರ್ ರಶ್: ಕಪಲ್ಸ್ ಹುಷಾರ್! ಟ್ರಾಫಿಕ್ ಜಾಮ್ನಲ್ಲಿ ಸಿಲುಕದಂತೆ ಡೇಟಿಂಗ್ ಪ್ಲಾನ್ ಮಾಡುವುದು ಹೇಗೆ?
ಚಿತ್ತಾರದ ಉಡುಗೆಯಲ್ಲಿ ಕಣ್ಸೆಳೆದ ಸನ್ನಿಲಿಯೋನ್
ಸನ್ನಿ ಲಿಯೋನ್ ತನ್ನ ಮುಂಬರುವ ಚಿತ್ರ ರಾಗಿಣಿ ಎಮ್‌ಎಮ್‌ಎಸ್ ಪ್ರಚಾರಕ್ಕಾಗಿ ಭರ್ಜರಿ ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದಾರೆ. ತನ್ನ ಫ್ಯಾಶನ್ ಸೆನ್ಸ್‌ನಲ್ಲಿ ಅಷ್ಟೊಂದು ಹೆಸರುವಾಸಿಯಾಗಿಲ್ಲದ ಈ ತರುಣಿ ತನ್ನ ಬೋಲ್ಡ್ ಸ್ಟೈಲ್‌ನಿಂದ ಇತರ ಸೆಲೆಬ್ರಿಟಿಗಳನ್ನು ಬೆರಗಾಗಿಸಿದ್ದಾರೆ.
ಇತ್ತೀಚೆಗೆ ರಾಗಿಣಿ ಎಮ್‌ಎಮ್‌ಎಸ್ ಪ್ರಚಾರಕ್ಕಾಗಿ ಕಾಮಿಡಿ ನೈಟ್ಸ್ ವಿತ್ ಕಪಿಲ್ ಕಾರ್ಯಕ್ರಮಕ್ಕೆ ಬಂದಿದ್ದ ಸನ್ನಿ ನಮ್ಮ ಕಣ್ರೆಪ್ಪೆಗಳನ್ನು ಮುಚ್ಚದೇ ತದೇಕಚಿತ್ತರಾಗಿ ಆಕೆಯನ್ನು ನೋಡುವಂತೆ ಮಾಡಿದ್ದವು.

ಚಿತ್ತಾರದ ಲೇಸ್ ಉಡುಗೆಯಲ್ಲಿ ಮಿಂಚಿದ್ದ ಸನ್ನಿ ಕಪ್ಪು ಬಣ್ಣದ ಲೇಸ್ ಉಡುಗೆಯಲ್ಲಿ ಕಣ್ಣುಕುಕ್ಕುವಂತಿದ್ದರು. ತನ್ನ ನೀಳ ಬಳುಕುವ ದೇಹಕ್ಕೆ ತಕ್ಕಂತಿದ್ದ ಲೇಸ್ ಉಡುಗೆಯಲ್ಲಿ ಕಣ್ಮನಸೆಳೆದರು.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಗೀಮಾ 2014: ಸೀರೆಯಲ್ಲಿ ಕಣ್ಸೆಳೆದ ಸನ್ನಿ ಲಿಯೋನ್
ಕಪ್ಪು ಅಂಗಿಯು ನ್ಯೂಡ್ ಬಣ್ಣದ ಸ್ಲಿಪ್ ಅನ್ನು ಒಳಗೊಂಡಿದ್ದು ಚೆನ್ನಾಗಿದ್ದವು. ಕ್ಯಾಪ್ ಸ್ಲೀವ್‌ಗಳನ್ನು ಒಳಗೊಂಡಿದ್ದ ಲೇಸ್ ಡ್ರೆಸ್ ನೆಕ್‌ಲೈನ್ ಚೌಕಾಕಾರದಲ್ಲಿತ್ತು.
ಕಪ್ಪು ಏಂಕಲ್ ಹೀಲ್ಸ್‌ನಲ್ಲಿ ಕಾಣಿಸಿಕೊಂಡಿದ್ದ ಸನ್ನಿ ಕಪ್ಪು ಮುತ್ತಿನ ಸರವನ್ನು ಲೇಸ್ ಡ್ರೆಸ್‌ಗೆ ಸರಿಹೊಂದುವಂತೆ ತೊಟ್ಟುಕೊಂಡಿದ್ದರು. ಕೈಗಳನ್ನು ಕಪ್ಪು ವಾಚ್ ಮತ್ತು ಬ್ರೇಸ್‌ಲೆಟ್ ಅಲಂಕರಿಸಿತ್ತು.
ಸನ್ನಿ ಈ ಕಾರ್ಯಕ್ರಮಕ್ಕಾಗಿ ಲೈಟ್ ಮೇಕಪ್ ಅನ್ನು ಆಯ್ದುಕೊಂಡಿದ್ದರು. ಸರಳ ಕಣ್ಣಿನ ಮೇಕಪ್ ಮತ್ತು ನ್ಯೂಡ್ ಬಣ್ಣದ ತುಟಿಗಳು ಮತ್ತು ವೇವ್ ಮಾಡಿದ ಕೇಶವಿನ್ಯಾಸ ಒಟ್ಟಾರೆಯಾಗಿ ಸರಳತನವನ್ನು ಸನ್ನಿಗೆ ನೀಡಿತ್ತು.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಸೀರೆಯಲ್ಲಿ ಕಣ್ಮನ ಸೆಳೆದ ವಿದ್ಯಾ ಬಾಲನ್
ಕಪ್ಪು ಲೇಸ್ ಡ್ರೆಸ್‌ನಲ್ಲಿ ಸನ್ನಿ ನಮ್ಮನ್ನು ಮಂತ್ರಮುಗ್ಧಗೊಳಿಸಿದ್ದಾರೆ ಎಂಬುದು ನಮ್ಮ ಅಭಿಪ್ರಾಯವಾಗಿದೆ. ತನ್ನ ಚಿತ್ರ ಪ್ರಚಾರಕ್ಕಾಗಿ ಕ್ಯಾಶುವಲ್ ಅನ್ನು ಆಯ್ಕೆಮಾಡಿಕೊಂಡಿರುವ ಸನ್ನಿ ಸ್ಟೈಲ್ ಸೆನ್ಸ್ ಅನ್ನು ಚೆನ್ನಾಗಿ ಪ್ರದರ್ಶಿಸಿದ್ದಾರೆ.



Click it and Unblock the Notifications
