Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಸ್ಟಾರ್ ಗಿಲ್ಡ್ ಅವಾರ್ಡ್ಸ್ 2014: ಬಿಪಶಾ ಬಸು
ಸ್ಟಾರ್ ಗಿಲ್ಡ್ ಅವಾರ್ಡ್ಸ್ 2014 ನಲ್ಲಿ ಬಾಲಿವುಡ್ ತಾರೆಯರ ಸೆಲೆಬ್ರಿಟಿಗಳ ದಂಡೇ ಮೆರೆದಿದ್ದು ನಿಮಗಾಗಿ ದೊಡ್ಡ ಕುತೂಹಲ ಕಾದಿದೆ. ಹಲವಾರು ಸೆಲೆಬ್ರಿಟಿಗಳನ್ನು ಬೋಲ್ಡ್‌ಸ್ಕೈ ಸೆರೆಹಿಡಿದಿದ್ದು ಅದರಲ್ಲಿ ಸುಂದರಿ ಬಿಪಾಶಾ ಕೂಡ ಒಬ್ಬರು. ಬಂಗಾಲಿ ಚೆಲುವೆ, ಬಿಪಶಾ ಎಂದಿಗೂ ಅವರ ಅಭಿಮಾನಿಗಳನ್ನು ನಿರಾಸೆಗೊಳಿಸಿಲ್ಲ ತಮ್ಮ ಸ್ಟೈಲ್ ಹಾಗೂ ಸುಂದರತೆಯಿಂದ ಅವರು ಇಂದಿಗೂ ನಂಬರ್ ವನ್ ಆಗಿದ್ದಾರೆ.
ಈ ಬಾರಿ ಬಿಪಶಾ ಬೈನಲ್ ಶಾನ ಸಂಗ್ರಹಣೆಯ ದಿರಿಸನ್ನು ಸ್ಟಾರ್ ಗಿಲ್ಡ್ ಅವಾರ್ಡ್ಸ್ 2014 ಗಾಗಿ ಆಯ್ಕೆಮಾಡಿಕೊಂಡಿದ್ದಾರೆ. ಈ ಉಡುಗೆಯಲ್ಲಂತೂ ಅವರು ಅತ್ಯದ್ಭುತ ಸುಂದರಿಯಾಗಿದ್ದಾರೆ. ಆ ಉಡುಗೆ ಯಾವುದೆಂಬ ಕುತೂಹಲವೇ ಅದುವೇ ನಮ್ಮ ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ಸೀರೆ.

ಹೊಳಪುಳ್ಳ ಸುಂದರ ಸೀರೆಯನ್ನು ಉಟ್ಟಿರುವ ಬಿಪಶಾ ಸೀರೆಯ ಅದ್ಭುತ ಕಲರ್ ಕಾಂಬಿನೇಷನ್ ಅನ್ನು ಅರಿತವರಾಗಿದ್ದಾರೆ. ಸೀರೆಯ ಸೆರಗಿನಲ್ಲಿ ಸುಂದರವಾದ ಬಂಗಾರ ಬಣ್ಣದ ಅಲಂಕಾರಗಳಿದ್ದು ಹಸಿರು ನೀಲಿ ಮಿಶ್ರಿತ ಬಣ್ಣ ಸೀರೆಯಲ್ಲಿ ಹದವಾಗಿ ಮಿಳಿತವಾಗಿದೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಸ್ಟಾರ್ ಗೈಲ್ಡ್ ಅವಾರ್ಡ್ಸ್‌ನಲ್ಲಿ ಮಿಂಚಿದ ಸೆಲೆಬ್ರಿಟಿಗಳು
ಸೀರೆಯು ಕೆಳಭಾಗದಲ್ಲಿ ಬೂದು, ಕಪ್ಪು ಮತ್ತು ಗಾಢ ಪಿಂಕ್ ಬಣ್ಣಗಳನ್ನು ಹೊಂದಿದ್ದು ಸೀರೆಯ ಸುಂದರತೆಯನ್ನು ಎದ್ದುಗಾಣಿಸಿದೆ. ಬೈನಲ್ ಶಾ ವಿನ್ಯಾಸದ ಸೀರೆಯಲ್ಲಿ ಮಿಂಚಿರುವ ಬಿಪಶಾ ಸ್ಟಾರ್ ಗಿಲ್ಡ್ ಅವಾರ್ಡ್ಸ್ 2014 ರ ಸಂಜೆಗೆ ತಾರಾ ಮೆರುಗನ್ನು ನೀಡಿದ್ದಾರೆ.
ಮಿನುಗುವ ಬೊಟ್ಟುಗಳಿಂದ ಸೀರೆ ಸಾಲಾಂಕೃತಗೊಂಡಿದ್ದು ಕಾರ್ಯಕ್ರಮದ ಚಮಕ್ ಅನ್ನು ಎದ್ದುಗಾಣಿಸಿದೆ. ಬೋಲ್ಡ್‌ಸ್ಕೈಯ ಪ್ರಕಾರ ಸ್ಟಾರ್ ಗಿಲ್ಡ್ ಅವಾರ್ಡ್ಸ್ 2014 ರ ರೆಡ್ ಕಾರ್ಪೆಟ್‌ನಲ್ಲಿ ಸುಂದರವಾದ ಈ ಸೀರೆ ಎಲ್ಲರ ಕಣ್ಮನ ಸೆಳೆಯುತ್ತದೆ ಎಂಬುದಾಗಿದೆ.
ಸುಂದರವಾದ ಬೈನಲ್ ಶಾನ ಸೀರೆಯನ್ನು ಉಟ್ಟಿರುವ ಬಿಪಶಾ ಬಸು ಸೀರೆಯಲ್ಲಿ ನೆರಿಗೆಯ ಬದಲಿಗೆ ನೀಟಾಗಿ ಫ್ರಿಲ್‌ಗಳನ್ನು ಅಳವಡಿಸಿರುವುದು ನಿಮ್ಮ ಗಮನಕ್ಕೆ ಬಂದಿರಬಹುದು. ಸೀರೆಯಲ್ಲಿ ಈ ತರಹದ ಫ್ಯಾಶನ್ ಹೆಸರುವಾಸಿಯಾಗಿದ್ದು ಪ್ರತಿಯೊಬ್ಬ ವಿನ್ಯಾಸಕರೂ ಈ ವಿಧಾನವನ್ನು ಅನುಸರಿಸಲು ಬಯಸುತ್ತಿದ್ದಾರೆ.
ಬೈನಲ್ ಶಾ ನ ಸುಂದರ ಸೀರೆಗೆ ಇನ್ನಷ್ಟು ಹೊಳಪು ನೀಡುವ ವಜ್ರದ ಕಿವಿಯಾಭರಣಗಳನ್ನು ಬಿಪಶಾ ತೊಟ್ಟಿದ್ದಾರೆ. ನವಿಲು ಬಣ್ಣದ ಸೀರೆಗೆ ಚೆನ್ನಾಗಿ ಒಪ್ಪುವಂತಹ ಭಾರವಾದ ಕಿವಿಯಾಭರಣಗಳನ್ನು ಬಿಪಾಶಾ ತೊಟ್ಟಿದ್ದಾರೆ. ಅವರು ಹಣೆಗೆ ಇಟ್ಟಿರುವಂತಹ ಕೆಂಪು ಬೊಟ್ಟು ಆಕೆಯ ಬಂಗಾಲಿ ಸಂಪ್ರದಾಯ ಮತ್ತು ನಂಬಿಕೆಗಳ ಪ್ರತೀಕದಂತಿದೆ. ಬಿಪಶಾ ಮಾಡಿಕೊಂಡ ಮೇಕಪ್ ಸರಳ ಸುಂದರವಾಗಿದ್ದು ಆಕೆ ಇದನ್ನು ಸುಂದರವಾಗಿ ನಿಭಾಯಿಸಿದ್ದಾರೆ.
ಒಟ್ಟಾರೆ, ಸ್ಟಾರ್ ಗಿಲ್ಡ್ ಅವಾರ್ಡ್ಸ್ 2014 ರ ಬಿಪಾಶಾರ ಬೆಂಗಾಲಿ ಬೆಡಗು ನಿಜಕ್ಕೂ ಮೋಡಿ ಮಾಡುವಂಥದ್ದು. ನಿಮ್ಮ ಅಭಿಪ್ರಾಯವೂ ಇದೇ ಅಲ್ಲವೇ?



Click it and Unblock the Notifications
