Latest Updates
-
ವೈಫ್ ಅಪ್ರಿಶಿಯೇಷನ್ ಡೇ: ನಿಮ್ಮ ಮಡದಿಗೆ ಈ ವಿಶೇಷ ದಿನದಂದು ನೀಡಬಹುದಾದ ಸರಳ ಮತ್ತು ಸುಂದರ ಸರ್ಪ್ರೈಸ್ಗಳು ಇಲ್ಲಿವೆ! -
ಮಳೆಗಾಲದ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸೋರಿಕೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮರೆವಿನ ಕಾಯಿಲೆಗೆ ವಿದಾಯ: ಮೆದುಳಿನ ಆರೋಗ್ಯಕ್ಕೆ ಭಾರತೀಯ ಶೈಲಿಯ 'ಮೈಂಡ್ ಡಯಟ್' ಹೀಗಿರಲಿ! -
2026ರ ಏಷ್ಯನ್ ಗೇಮ್ಸ್: ಮೊದಲ ದಿನವೇ ಭಾರತಕ್ಕೆ ಪದಕದ ಬೇಟೆ! ಪಂದ್ಯಗಳ ಸಂಪೂರ್ಣ ವೇಳಾಪಟ್ಟಿ ಮತ್ತು ಲೈವ್ ಅಪ್ಡೇಟ್ಸ್ ಇಲ್ಲಿದೆ -
ದೆಹಲಿ-ಎನ್ಸಿಆರ್ನಲ್ಲಿ ಕಲುಷಿತ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಬಾಂದ್ರಾ ಫೇರ್ ರಶ್: ಕಪಲ್ಸ್ ಹುಷಾರ್! ಟ್ರಾಫಿಕ್ ಜಾಮ್ನಲ್ಲಿ ಸಿಲುಕದಂತೆ ಡೇಟಿಂಗ್ ಪ್ಲಾನ್ ಮಾಡುವುದು ಹೇಗೆ? -
ಅಪಾರ್ಟ್ಮೆಂಟ್ನಲ್ಲಿ ಗಣೇಶ ವಿಸರ್ಜನೆ: ಪರಿಸರ ಸ್ನೇಹಿಯಾಗಿ ಆಚರಿಸಲು ಇಲ್ಲಿವೆ 5 ಸಿಂಪಲ್ ಟಿಪ್ಸ್ -
ಹಬ್ಬದ ಸೀಸನ್ನಲ್ಲಿ ಎಚ್ಚರ! ಮಾರುಕಟ್ಟೆಯಲ್ಲಿ ನಕಲಿ 'ಅನಲಾಗ್ ಪನೀರ್' ಹಾವಳಿ: ಅಸಲಿ ಪನೀರ್ ಗುರುತಿಸುವುದು ಹೇಗೆ? -
iPhone 18 ಪ್ರೀ-ಆರ್ಡರ್ ಆರಂಭ: ನಿಮ್ಮ ಫೋನ್ ಬುಕ್ ಮಾಡುವ ಮುನ್ನ ಈ 5 ವಿಷಯಗಳನ್ನು ಮಿಸ್ ಮಾಡ್ಬೇಡಿ! -
ಬೀಚ್ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಳ್ಳುತ್ತಿದ್ದೀರಾ? ಗಾಯಗಳಾಗದಂತೆ ಕೆಲಸ ಮಾಡಲು ಈ ಸುರಕ್ಷತಾ ಟಿಪ್ಸ್ ಮಿಸ್ ಮಾಡಬೇಡಿ!
ಕೌನ್ ಬನೇಗಾ ಕರೋಡ್‌ಪತಿಯಲ್ಲಿ ಮಿಂಚಿದ ದಬಾಂಗ್ ಸುಂದರಿ!
ಹೆಚ್ಚು ಆಕರ್ಷಕ ಮತ್ತು ಮಾರ್ಪಡಿತ ರೂಪದ ಸೋನಾಕ್ಷಿ ಸಿನ್ಹಾ ಅರನ್ನು ನೋಡುವ ಸಮಯ ಇದೀಗ ಒದಗಿ ಬಂದಿದೆ. ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದಲ್ಲಿ ಅಜಯ್ ದೇವ್‌ಗನ್ ಜೊತೆ ಕಾಣಿಸಿಕೊಂಡ ಈ ಚೆಲುವೆ ನೋಡುಗರನ್ನು ನಿಬ್ಬೆರಗಾಗಿಸಿದ್ದು ಸುಳ್ಳಲ್ಲ. ಕಪ್ಪು ಕಾರ್ಪೊರೇಟ್ ಸೂಟ್‌ನಲ್ಲಿ ಮನಸೆಳೆದ ಸೋನಾಕ್ಷಿ ತಮ್ಮ ಮುಂಬರಲಿರುವ ಚಿತ್ರ ಆಕ್ಷನ್ ಜಾಕ್ಸನ್ ಪ್ರಚಾರ ಕಾರ್ಯಕ್ರಮದಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಂತಿದ್ದರು.
ಹೆಚ್ಚಿನ ತೂಕವನ್ನು ಕಳೆದುಕೊಂಡು ಸಪೂರ ಮೈಮಾಟದಲ್ಲಿ ಮಿಂಚಿರುವ ಸೋನಾಕ್ಷಿ ತಮ್ಮ ಹೊಸ ಚಿತ್ರಕ್ಕಾಗಿ ಕೂದಲಿನ ವಿನ್ಯಾಸವನ್ನು ಕೂಡ ಮಾರ್ಪಡಿಸಿಕೊಂಡಿದ್ದಾರೆ. ಕಪ್ಪು ಬಣ್ಣದ ಜಾರಾ ಸೂಟ್‌ನಲ್ಲಿ ಬೋಲ್ಡ್ ಮತ್ತು ಸೆಕ್ಸಿಯಾಗಿದ್ದ ಸೋನಾಕ್ಷಿ ತಮ್ಮ ಹೊಸ ಇಮೇಜಿನಿಂದ ನಿಜಕ್ಕೂ ಮೋಡಿ ಮಾಡುವಂತಿದ್ದರು. ತಾವು ಧರಿಸಿಕೊಂಡಿದ್ದ ಜಂಪ್ ಸೂಟ್ ಸರಳವಾಗಿದ್ದರೂ ಸೋನಾಕ್ಷಿಗೆ ಅದು ಆಧುನಿಕ ನೋಟವನ್ನು ನೀಡಿತ್ತು.

ಹೆಚ್ಚಿನ ಕಾರ್ಯಕ್ರಮಗಳಲ್ಲಿ ಜಂಪ್ ಸೂಟ್ ಧರಿಸಿಕೊಂಡಿರುವ ಸೋನಾಕ್ಷಿ ಇದೇ ಮೊದಲ ಬಾರಿಗೆ ಕಪ್ಪು ಬಣ್ಣದ ಸೂಟ್‌ನಲ್ಲಿ ಆಕರ್ಷಕರಾಗಿದ್ದಾರೆ. ಇನ್ನು ತಮ್ಮ ಹೊಸ ಕೇಶವಿನ್ಯಾಸದಲ್ಲಿ ವಿಭಿನ್ನವಾಗಿರುವ ಸೋನಾಕ್ಷಿ ಚಿತ್ರದಲ್ಲಿ ತಮ್ಮ ಪಾತ್ರಕ್ಕಾಗಿ ಈ ಸ್ಟೈಲ್ ಅನ್ನು ಆಯ್ದುಕೊಂಡಿದ್ದಾರೋ ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಏಕ್ ವಿಲನ್ ಯಶಸ್ಸಿನಲ್ಲಿ ಭಾಗಿಯಾದ ಸೋನಾಕ್ಷಿಯ ಮನಸೆಳೆಯುವ ನೋಟ
ಇನ್ನು ಸೋನಾಕ್ಷಿಯ ಮೇಕಪ್ ವಿಷಯಕ್ಕೆ ಬಂದಾಗ ಸರಳ ಮೇಕಪ್ ಅನ್ನು ಆಕೆ ಆಯ್ಕೆಮಾಡಿಕೊಂಡಿರುವುದು ಹೆಚ್ಚು ಗಮನ ಸೆಳೆದ ಅಂಶವಾಗಿದೆ. ಇನ್ನು ಸೋನಾಕ್ಷಿಯೊಂದಿಗೆ ಅಜಯ್ ದೇವಗನ್ ಕೂಡ ಬಂದಿದ್ದು ಕಾರ್ಯಕ್ರಮದ ಕಳೆಯನ್ನು ಹೆಚ್ಚಿಸಿತ್ತು. ನೇವಿ ಬ್ಲೂ ಬಣ್ಣದ ಸೂಟ್‌ನಲ್ಲಿ ಅಜಯ್ ಮೋಡಿ ಮಾಡುವ ನೋಟದಲ್ಲಿ ಮಿಂಚಿದ್ದರೆ ಸೋನಾಕ್ಷಿಗೆ ಸೂಕ್ತ ಜೋಡಿ ಎಂದೆನಿಸಿದ್ದರು.
ಇನ್ನು ಹೊಸ ಕೇಶ ವಿನ್ಯಾಸ ಮತ್ತು ಹೊಸ ಮಾದರಿಯ ದಿರಿಸಿನಲ್ಲಿ ಮನವನ್ನು ಕದಿಯುವಂತಿದ್ದ ಸೋನಾಕ್ಷಿಯ ನೋಟವಂತೂ ಮರೆಯದಂತೆ ಮಾಡಿತ್ತು. ಸರಳ ಮೇಕಪ್ ಮತ್ತು ಆಕರ್ಷಕ ನಗುವಿನಿಂದ ನೆರೆದವರ ಮನದಲ್ಲಿ ಕಿಚ್ಚನ್ನು ಹೊತ್ತಿಸುವಂತಿದ್ದ ದಬಾಂಗ್ ಸುಂದರಿ ನಿಜಕ್ಕೂ ದಂತದ ಬೊಂಬೆಯಂತೆ ಕಣ್ಮನ ಸೆಳೆಯುವಂತ್ತಿದ್ದರು. More pics click here



Click it and Unblock the Notifications




