Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ನೃತ್ಯ ರಿಯಾಲಿಟಿ ಶೋ ಮಿಂಚಿದ ಶಿಲ್ಪಾ
ನೃತ್ಯ ರಿಯಾಲಿಟಿ ಶೋ ನಚ್ ಬಲಿಯೇ 6, ಶಿಲ್ಪಾ ಒಂದರ ಹಿಂದೊಂದು ಸೀರೆಗಳನ್ನು ತೊಟ್ಟಿದ್ದಾರೆ. ಕೆಲವು ಸ್ವದೇಶಿ ಉಡುಗೆಯಲ್ಲೇ ಶಿಲ್ಪಾ ಈ ಕಾರ್ಯಕ್ರಮದಲ್ಲೇ ಕಾಣಿಸಿಕೊಂಡಿರುವುದು ವಿಶೇವಾಗಿದೆ. ಗೌರವ್ ಗುಪ್ತಾ ವಿನ್ಯಾಸದ ಈ ಪ್ಲೇನ್ ಕ್ರೇಪ್ ಸೀರೆಯ ಭುಜ ಮತ್ತು ಸೆರಗು ಗೋಲ್ಡನ್ ವರ್ಕ್‌ನಿಂದ ಕಂಗೊಳಿಸುತ್ತಿದೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ನಚ್ ಬಲಿಯೆದಲ್ಲಿ ಶಿಲ್ಪಾ ಶೆಟ್ಟಿ
ನಚ್ ಬಲಿಯೇ 6 ನಲ್ಲಿ ಶಿಲ್ಪಾ ಒಂದರ ಹಿಂದೆ ಒಂದರಂತೆ ಎರಡು ಸೀರೆಗಳನ್ನು ತೊಟ್ಟಿದ್ದಾರೆ. ಆರೆಂಜ್ ಬಣ್ಣದ ಕ್ರೇಪ್ ಸೀರೆಯಲ್ಲಿ ಮಿಂಚುತ್ತಿರುವ ನಟಿ ಹಾಗೂ ನಚ್ ಬಲಿಯೇ ಕಾರ್ಯಕ್ರಮದ ತೀರ್ಪುಗಾರ್ತಿ ಶಿಲ್ಪಾ ತಮ್ಮ ಸುಂದರ ನಗುವಿನಿಂದ ಕಣ್ಸೆಳೆಯುತ್ತಿದ್ದಾರೆ.

ಆರೆಂಜ್ ಬಣ್ಣದ ಸೀರೆಗೆ ಹೊಂದಿಕೆಯಾಗುವಂತಹ ತೋಳಿಲ್ಲದ ಭಾರೀ ವಿನ್ಯಾಸದ ರವಿಕೆಯನ್ನು ಶಿಲ್ಪಾ ಶೆಟ್ಟಿ ತೊಟ್ಟಿದ್ದು ಕ್ಯುರಿಯೊ ಕಾಟೇಜ್ ಚಿನ್ನದ ಆಭರಣಗಳನ್ನು ತೊಟ್ಟು ತಮ್ಮ ಅಲಂಕಾರವನ್ನು ಪೂರ್ಣಗೊಳಿಸಿದ್ದಾರೆ. ಅವರು ಎರಡನೆಯ ದೃಶ್ಯದಲ್ಲಿ ಕಂಡುಬರುವಂತದ್ದು ಸೀರೆಯಲ್ಲೇ. ನೀತಾ ಲುಲ್ಲಾ ವಿನ್ಯಾಸದ ಸೀರೆಯನ್ನು ಶಿಲ್ಪಾ ಆಯ್ಕೆ ಮಾಡಿಕೊಂಡಿದ್ದಾರೆ. ಎರಡನೆಯ ದೃಶ್ಯದಲ್ಲಿ ಅವರು ಲೈಟ್ ಕಲರ್ ಸೀರೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿದ್ದಾರೆ.
ಬಿಳಿ ಬಣ್ಣದ ನೆಟ್ ಸೀರೆಯಲ್ಲಿ ಶಿಲ್ಪಾ ಕಣ್ಣುಕೋರೈಸುವಂತೆ ಕಂಡುಬರುತ್ತಿದ್ದು ಇದು ಕೂಡ ನಚ್ ಬಲಿಯೇ 6 ಕಾರ್ಯಕ್ರಮದ ದಿರಿಸು ಎಂಬುದು ಗಮನಿಸಬೇಕಾದ ಅಂಶವಾಗಿದೆ. ಈ ನೆಟ್ ಸೀರೆಯು ಅಗಲವಾದ ಬಂಗಾರದ ವಿನ್ಯಾಸಗಳನ್ನು ಹೊಂದಿದ್ದು ಒಡಲೂ ಕೂಡ ಅದೇ ರೀತಿಯ ವಿನ್ಯಾಸವನ್ನು ಹೊಂದಿದೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಶ್ವೇತ ಸುಂದರಿ ಶಿಲ್ಪ ಶೆಟ್ಟಿ
ಅವರು ಸೀರೆಯನ್ನು ಮಡಚಿ ಹಿಡಿದುಕೊಂಡಿರುವ ರೀತಿ ಈ ಬಂಗಾರದ ವಿನ್ಯಾಸವನ್ನು ಎದ್ದು ತೋರಿಸುತ್ತಿದೆ. ಸೀರೆಗೆ ಹೋಲಿಕೆಯಾಗುವ ಅದೇ ಬಣ್ಣದ ರವಿಕೆಯನ್ನು ಅವರು ತೊಟ್ಟಿದ್ದಾರೆ. ಭಾರೀ ಗಾತ್ರದ ವಿನ್ಯಾಸವುಳ್ಳ ಜುಮುಕಿಯನ್ನು ಶಿಲ್ಪಾ ಧರಿಸಿದ್ದು ಕೂದಲನ್ನು ಬನ್ ರೀತಿಯಲ್ಲಿ ಮಡಚಿದ್ದಾರೆ.
ಇವೆರಡೂ ದೃಶ್ಯಗಳಲ್ಲಿ ಶಿಲ್ಪಾ ಅಪ್ಸರೆಯಂತೆ ಕಂಡುಬರುತ್ತಿದ್ದಾರೆ, ಸೀರೆ ಅವರ ನೀಳಕಾಯಕ್ಕೆ ಹೇಳಿ ಮಾಡಿಸಿದಂತಿದೆ. ಇವೆರಡನ್ನೂ ಹೋಲಿಸಿದಾಗ ಗೌರವ್ ಗುಪ್ತಾ ವಿನ್ಯಾಸದ ಸೀರೆಯಲ್ಲಿ ಶಿಲ್ಪಾ ಶೆಟ್ಟಿ ಅದ್ಭುತವಾಗಿ ಕಾಣುತ್ತಿದ್ದಾರೆ.



Click it and Unblock the Notifications
