Latest Updates
-
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ಹೊಳೆಯುವ ಮೇಲುಡುಗೆಯಲ್ಲಿ ಕಣ್ಮನ ಸೆಳೆದ ರೂಪವತಿ ಶಿಲ್ಪಾ
ಇತ್ತೀಚೆಗೆ ಬಾಲಿವುಡ್‌ನ ತಾರೆ ತಬುರವರು ತಮ್ಮ ಹುಟ್ಟುಹಬ್ಬದ ಸಮಾರಂಭಕ್ಕೆ ಹಲವು ಗಣ್ಯರನ್ನು ಆಹ್ವಾನಿಸಿದ್ದರು. ಆಹ್ವಾನಿತರಲ್ಲಿ ಅತಿ ಹೆಚ್ಚಾಗಿ ಗಮನ ಸೆಳೆದವರೆಂದರೆ ತಮ್ಮ ಹೊಳೆಯುವ ಮೇಲುಡುಪು ತೊಟ್ಟ ಶಿಲ್ಪಾ ಶೆಟ್ಟಿ. ಇತ್ತೀಚೆಗೆ ತಾಯಿಯಾಗಿರುವ ಅವರ ಮೈಮಾಟ ಹೆಚ್ಚೇನೂ ಬದಲಾಗಿಲ್ಲ. ಶಿಲ್ಪಾ ಶೆಟ್ಟಿಯವರು ಈ ಸಮಾರಂಭಕ್ಕೆ ತಮ್ಮ ಪತಿ ರಾಜ್ ಕುಂದ್ರಾರೊಂದಿಗೆ ಆಗಮಿಸಿದ್ದರು.
ದಂಪತಿಗಳು ಆಕರ್ಷಕ ಉಡಿಗೆ ತೊಟ್ಟಿದ್ದು ಪರಸ್ಪರರ ತೊಡಿಗೆಗಳನ್ನು ಶ್ಲಾಘಿಸುತ್ತಿದ್ದರು. ಶಿಲ್ಪಾ ಶೆಟ್ಟಿಯವರು ಮೈಯನ್ನಪ್ಪುವ ಬಿಗಿಯಾದ ಮತ್ತು ಸಾಮಾನ್ಯವಾದ ಕಪ್ಪು ಶರಾಯಿ ಧರಿಸಿದ್ದರು. ಆದರೆ ನೋಡುಗರ ಗಮನ ಸೆಳೆದದ್ದು ಈ ಬಿಗಿ ಶರಾಯಿಯಲ್ಲ, ಬದಲಿಗೆ ಹೊಳಪು ನೀಡುವ ಬಟ್ಟೆಯಿಂದ ಹೊಲಿಯಲಾಗಿದ್ದ ಅವರ ಮೇಲುಡುಪು.

ಬಿಳಿಯ ಸ್ಯಾಟಿನ್ ಬಟ್ಟೆಯಿಂದ ಹೊಲಿಯಲ್ಪಟ್ಟಿದ್ದ ಈ ಮೇಲುಡುಪು ವಿದ್ಯುತ್ ದೀಪಗಳ ಬೆಳಕಿನಲ್ಲಿ ಪ್ರಖರವಾಗಿ ಹೊಳೆಯುತ್ತಿತ್ತು. ಕೈಭಾಗದಲಿ ಕೆಲವು ನೆರಿಗೆಗಳು ಜೂಲು ಜೂಲಾಗಿರುವಂತೆ ವಿನ್ಯಾಸಗೊಳಿಸಲಾಗಿದ್ದರೂ ಅವರ ಮೈಮಾಟಕ್ಕೆ ಒಪ್ಪುವಂತಿತ್ತು. ವಿಶೇಷವೆಂದರೆ ಈ ಬಟ್ಟೆಯ ಮೇಲೆ ಯಾವುದೋ ವಸ್ತುವನ್ನು ಲೇಪಿಸಲಾಗಿದ್ದು ಕತ್ತಲಲ್ಲಿಯೂ ಪ್ರಖರವಾಗಿ ಹೊಳೆಯುತ್ತಿತ್ತು. ಇದಕ್ಕೆ ಒಪ್ಪುವಂತಿದ್ದ ಕಪ್ಪು ಶರಾಯಿ ಅವರ ದೇಹಸೌಂದರ್ಯವನ್ನು ಹೆಚ್ಚಿಸಿತ್ತು. ನಚ್ ಬಲಿಯೇ 6 ನಲ್ಲಿ ಶಿಲ್ಪಾ ಶೆಟ್ಟಿ
ಹೊಳೆಹೊಳೆಯುವ ಈ ಉಡುಪಿನ ಜೊತೆ ಅವರು ತೊಟ್ಟಿದ್ದ ಒಂದೇ ಒಂದು ಕುತ್ತಿಗೆಯ ಹಾರ ಹೆಚ್ಚಿನ ಶೋಭೆ ನೀಡಿತ್ತು. ಕುತ್ತಿಗೆಯ ಬಳಿ ಬಟನ್ ಹಾಕಲಾಗಿದ್ದು ಉಡುಪಿನ ಮೇಲಿನ ಈ ಹಾರ ಹೊಳೆಯುವ ಬಟ್ಟೆಯ ಹಿನ್ನೆಲೆಯಲ್ಲಿ ಅಪ್ರತಿಮ ಸೌಂದರ್ಯ ಪಡೆದಿತ್ತು.
ತಮ್ಮ ಉಡುಪಿಗೆ ಪೂರಕವಾಗಿ ಅವರು ತಲೆಗೂದಲನ್ನು ಬಿಗಿಯಾಗಿ ಕಟ್ಟಿಕೊಳ್ಳದೇ ಭುಜದ ಮೇಲೆ ಸಡಿಲವಾಗಿ ಹರಡಿದ್ದರು. ತುಟಿಗಳಿಗೆ ನಸುಕೆಂಪಿನ ಲೇಪನ ಹಾಗೂ ಕೆನ್ನೆಗಳಿಗೆ ನಸುಗಂದು ಬಣ್ಣದ ಮೇಕಪ್ ಅವರ ಸೌಂದರ್ಯವನ್ನು ಹೆಚ್ಚಿಸಿತ್ತು. ಅತಿ ಸರಳವಾದ ಈ ಉಡುಪು ಮತ್ತು ಸೌಂದರ್ಯಪ್ರಸಾದನಗಳ ಮೂಲಕ ಅವರು ತಮ್ಮ ಹಿಂದಿನ ವರ್ಷಗಳ ಮೈಮಾಟದಲ್ಲಿ ಮತ್ತೊಮ್ಮೆ ಅತಿ ರೂಪವತಿಯಾಗಿ ಕಾಣಿಸಿಕೊಂಡರು.



Click it and Unblock the Notifications


