Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ನಚ್ ಬಲಿಯೇ 6 ನಲ್ಲಿ ಶಿಲ್ಪಾ ಶೆಟ್ಟಿ
ಹಲವಾರು ಸಮಾರಂಭಗಳಲ್ಲಿ ಶಿಲ್ಪಾ ಶೆಟ್ಟಿ ಬೇರೆ ಬೇರೆ ನೋಟಗಳಲ್ಲಿ ಉಡುಗೆ ತೊಡುಗೆಗಳಲ್ಲಿ ಗಮನ ಸೆಳೆಯುತ್ತಾರೆ. ಬಿಪಾಶಾ ಬಸುವಿನ ಬರ್ತ್‌ಡೇ ಪಾರ್ಟಿಯಲ್ಲಿ ಪಿಂಟೆಡ್ ಪ್ಯಾಂಟ್ ಮತ್ತು ತೋಳಿಲ್ಲದ ಕಪ್ಪು ಟಾಪ್ ಧರಿಸಿ ಶಿಲ್ಪಾ ಮಿಂಚಿದ್ದರು. ಇದೀಗ ಈ ಸೆಕ್ಸಿ ನಟಿ ಎರಡು ವಿಶೇಷ ಸ್ಟೈಲ್‌ಗಳಲ್ಲಿ ನಮ್ಮ ಮುಂದಿದ್ದಾರೆ.
ಅದರಲ್ಲೊಂದು ನೃತ್ಯ ರಿಯಾಲಿಟಿ ಶೋ ನಚ್ ಬಲಿಯೇ 6, ಶಿಲ್ಪಾ ಒಂದರ ಹಿಂದೊಂದು ಸೀರೆಗಳನ್ನು ತೊಟ್ಟಿದ್ದಾರೆ. ಕೆಲವು ಸ್ವದೇಶಿ ಉಡುಗೆಯಲ್ಲೇ ಶಿಲ್ಪಾ ಈ ಕಾರ್ಯಕ್ರಮದಲ್ಲೇ ಕಾಣಿಸಿಕೊಂಡಿದ್ದಾರೆ.

ನಚ್ ಬಲಿಯೇ 6 ನಲ್ಲಿ ಶಿಲ್ಪಾ ಒಂದರ ಹಿಂದೆ ಒಂದರಂತೆ ಎರಡು ಸೀರೆಗಳನ್ನು ತೊಟ್ಟಿದ್ದಾರೆ. ಆರೆಂಜ್ ಬಣ್ಣದ ಕ್ರೇಪ್ ಸೀರೆಯಲ್ಲಿ ಮಿಂಚುತ್ತಿರುವ ನಟಿ ಹಾಗೂ ನಚ್ ಬಲಿಯೇ ಕಾರ್ಯಕ್ರಮದ ತೀರ್ಪುಗಾರ್ತಿ ಶಿಲ್ಪಾ ತಮ್ಮ ಸುಂದರ ನಗುವಿನಿಂದ ಕಣ್ಸೆಳೆಯುತ್ತಿದ್ದಾರೆ.
ನಿಮಗೆ ಇದು ಕೂಡ ಇಷ್ಟವಾಗಬಹುದು : ನಾಚ್ ಬಲಿಯೆದಲ್ಲಿ ಶಿಲ್ಪಾ ಶೆಟ್ಟಿ
ಗೌರವ್ ಗುಪ್ತಾ ವಿನ್ಯಾಸದ ಈ ಪ್ಲೇನ್ ಕ್ರೇಪ್ ಸೀರೆಯ ಭುಜ ಮತ್ತು ಸೆರಗು ಗೋಲ್ಡನ್ ವರ್ಕ್‌ನಿಂದ ಕಂಗೊಳಿಸುತ್ತಿದೆ. ಆರೆಂಜ್ ಬಣ್ಣದ ಸೀರೆಗೆ ಹೊಂದಿಕೆಯಾಗುವಂತಹ ತೋಳಿಲ್ಲದ ಭಾರೀ ವಿನ್ಯಾಸದ ರವಿಕೆಯನ್ನು ಶಿಲ್ಪಾ ಶೆಟ್ಟಿ ತೊಟ್ಟಿದ್ದು ಕ್ಯುರಿಯೊ ಕಾಟೇಜ್ ಚಿನ್ನದ ಆಭರಣಗಳನ್ನು ತೊಟ್ಟು ತಮ್ಮ ಅಲಂಕಾರವನ್ನು ಪೂರ್ಣಗೊಳಿಸಿದ್ದಾರೆ.
ಅವರು ಎರಡನೆಯ ದೃಶ್ಯದಲ್ಲಿ ಕಂಡುಬರುವಂತದ್ದು ಸೀರೆಯಲ್ಲೇ. ನೀತಾ ಲುಲ್ಲಾ ವಿನ್ಯಾಸದ ಸೀರೆಯನ್ನು ಶಿಲ್ಪಾ ಆಯ್ಕೆ ಮಾಡಿಕೊಂಡಿದ್ದಾರೆ. ಎರಡನೆಯ ದೃಶ್ಯದಲ್ಲಿ ಅವರು ಲೈಟ್ ಕಲರ್ ಸೀರೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿದ್ದಾರೆ. ಬಿಳಿ ಬಣ್ಣದ ನೆಟ್ ಸೀರೆಯಲ್ಲಿ ಶಿಲ್ಪಾ ಕಣ್ಣುಕೋರೈಸುವಂತೆ ಕಂಡುಬರುತ್ತಿದ್ದು ಇದು ಕೂಡ ನಚ್ ಬಲಿಯೇ 6 ಕಾರ್ಯಕ್ರಮದ ದಿರಿಸು ಎಂಬುದು ಗಮನಿಸಬೇಕಾದ ಅಂಶವಾಗಿದೆ. ಈ ನೆಟ್ ಸೀರೆಯು ಅಗಲವಾದ ಬಂಗಾರದ ವಿನ್ಯಾಸಗಳನ್ನು ಹೊಂದಿದ್ದು ಒಡಲೂ ಕೂಡ ಅದೇ ರೀತಿಯ ವಿನ್ಯಾಸವನ್ನು ಹೊಂದಿದೆ.
ನಿಮಗೆ ಇದು ಕೂಡ ಇಷ್ಟವಾಗಬಹುದು : ಶ್ವೇತ ಸುಂದರಿ ಶಿಲ್ಪಾ ಶೆಟ್ಟಿ
ಅವರು ಸೀರೆಯನ್ನು ಮಡಚಿ ಹಿಡಿದುಕೊಂಡಿರುವ ರೀತಿ ಈ ಬಂಗಾರದ ವಿನ್ಯಾಸವನ್ನು ಎದ್ದು ತೋರಿಸುತ್ತಿದೆ. ಸೀರೆಗೆ ಹೋಲಿಕೆಯಾಗುವ ಅದೇ ಬಣ್ಣದ ರವಿಕೆಯನ್ನು ಅವರು ತೊಟ್ಟಿದ್ದಾರೆ. ಭಾರೀ ಗಾತ್ರದ ವಿನ್ಯಾಸವುಳ್ಳ ಜುಮುಕಿಯನ್ನು ಶಿಲ್ಪಾ ಧರಿಸಿದ್ದು ಕೂದಲನ್ನು ಬನ್ ರೀತಿಯಲ್ಲಿ ಮಡಚಿದ್ದಾರೆ.
ಇವೆರಡೂ ದೃಶ್ಯಗಳಲ್ಲಿ ಶಿಲ್ಪಾ ಅಪ್ಸರೆಯಂತೆ ಕಂಡುಬರುತ್ತಿದ್ದಾರೆ, ಸೀರೆ ಅವರ ನೀಳಕಾಯಕ್ಕೆ ಹೇಳಿ ಮಾಡಿಸಿದಂತಿದೆ. ಇವೆರಡನ್ನೂ ಹೋಲಿಸಿದಾಗ ಗೌರವ್ ಗುಪ್ತಾ ವಿನ್ಯಾಸದ ಸೀರೆಯಲ್ಲಿ ಶಿಲ್ಪಾ ಶೆಟ್ಟಿ ಅದ್ಭುತವಾಗಿ ಕಾಣುತ್ತಿದ್ದಾರೆ.



Click it and Unblock the Notifications
