Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ನೀವು ಪ್ರೇಮ ದಿನವನ್ನು ಈ ರೀತಿಯಾಗಿ ಆಚರಿಸಿ!
ಪ್ರೇಮದ ಸೀಸನ್ ಇದೀಗ ತಾನೆ ಆರಂಭಗೊಂಡಿದೆ. ಫೆಬ್ರವರಿಯನ್ನು ವರ್ಷದ ಪ್ರೇಮ ತಿಂಗಳೆಂದೇ ಕರೆಯುತ್ತಾರೆ. ಜೋಡಿ ಹಕ್ಕಿಗಳಾಗಿ ಪ್ರೇಮಿಗಳು ಜಗವೇ ತಮ್ಮದು ಎಂಬಂತೆ ಈ ದಿನಗಳಲ್ಲಿ ತನ್ಮಯರಾಗುತ್ತಾರೆ. ಪ್ರೇಮವು ತನ್ನ ಸೊಬಗನ್ನು ಎಲ್ಲೆಡೆಯೂ ಪಸರಿಸುವ ಕಾಲ ಫೆಬ್ರವರಿ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಲವ್ ಇಲ್ಲದವರಾ ನೀವು? ಚಿಂತೆ ಬಿಡಿ...
ಪ್ರೇಮಕ್ಕೆ ಸಾವಿಲ್ಲ ಶಾಶ್ವತ ಎಂಬಂತೆ ಪ್ರೇಮಿಗಳ ದಿನವೂ ಅಮರ. ಈ ದಿನದಂದಂತೂ ಪ್ರೇಮಿಗಳು ಮಾತ್ರ ಬ್ಯುಸಿಯಾಗಿರದೇ ಗಿಫ್ಟ್ ಅಂಗಡಿಗಳು, ಕಾರ್ಡ್ ಅಂಗಡಿಗಳು ಗಿಜಿಗುಟ್ಟಿತ್ತಿರುತ್ತವೆ. ಶುಭಾಶಯ ಪತ್ರಗಳು ಕೊಡುಗೆಗಳು ಹೀಗೆ ಒಂದಿಲ್ಲೊಂದು ವಿನಿಮಯ ಪ್ರೇಮಿಗಳ ನಡುವೆ ಉಂಟಾಗುತ್ತಿರುತ್ತದೆ. ಈ ದಿನಗಳನ್ನು ಕಳೆಯುವುದೂ ಕೂಡ ಒಂದು ಹೊಸ ಪರಿಯಾಗಿದ್ದರೆ ಎಷ್ಟು ಚೆನ್ನಾಗಿರುತ್ತದೆ ಅಲ್ಲವೇ?
ಪ್ರೇಮಿಗಳ ದಿನ ಅಥವಾ ವ್ಯಾಲಂಟೇನ್ಸ್ ದಿನವನ್ನು ರೊಮ್ಯಾಂಟಿಕ್ ಆಗಿ ಸೊಗಸಾಗಿ ಹೇಗೆ ಕಳೆಯಬೇಕೆಂಬುದನ್ನು ಕುರಿತು ತುಂಬಾ ಯೋಚಿಸದಿರಿ. ಅದಕ್ಕಾಗಿಯೇ ಬೋಲ್ಡ್ ಸ್ಕೈ ಇಂದು ನಿಮ್ಮ ಸಾಥ್ ನೀಡುತ್ತಿದೆ. ಇಲ್ಲಿ ನಾವು ನಿಮಗಾಗಿ ನೀಡುತ್ತಿರುವ ಕೆಲವು ಸಲಹೆಗಳು ನಿಮ್ಮ ಈ ಚಿಂತೆಯನ್ನು ದೂರೀಕರಿಸಿ ಪರಿಹಾರ ನೀಡುತ್ತದೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಪ್ರೇಮಿಗಳಿಗಾಗಿ 7 ವಿಶೇಷ ದಿನಗಳ ವಿಶೇಷತೆ

ರಜಾದಿನವನ್ನಾಗಿಸಿ:
ವರ್ಷ ಪೂರ್ತಿ ನೀವು ಎಷ್ಟು ಬ್ಯುಸಿಯಾಗಿದ್ದರೂ ಪ್ರೇಮಿಗಳ ದಿನ ಮಾತ್ರ ನೀವು ಬ್ಯುಸಿಯಾಗಿದ್ದರೆ ನಿಮ್ಮ ಸಂಗಾತಿ ಮೆಚ್ಚಳು. ಈ ದಿನ ನಿಮ್ಮ ಸಂಗಾತಿಯೊಂದಿಗೆ ಕಳೆಯಲು ಆಲೋಚನೆ ಮಾಡಿಕೊಳ್ಳಿ. ಸುಂದರ ಬೀಚ್, ಹಿಲ್ ಸ್ಟೇಶನ್ ಅಥವಾ ಹೃದಯಂಗಮ ಸ್ಥಳಕ್ಕೆ ನಿಮ್ಮ ಪ್ರಯಾಣ ಸಾಗಲಿ. ರಜಾದಿನವೂ ನಿಮಗಿಬ್ಬರಿಗೂ ವಿಶ್ರಾಂತಿಯನ್ನು ನೀಡಿ ಖಾಸಗಿಯಾಗಿರಲು ಅನುವು ಮಾಡಿಕೊಡುತ್ತದೆ.

ಅನಿರೀಕ್ಷಿತ ಪ್ರಪೋಸಲ್:
ನಿಮ್ಮ ಸಂಗಾತಿಯೊಂದಿಗೆ ವಿವಾಹವಾಗುವ ಬಗ್ಗೆ ನೀವು ಆಲೋಚಿಸುತ್ತಿದ್ದರೆ ಈ ದಿನ ಸಮರ್ಪಕ ದಿನವೆಂದು ಭಾವಿಸಿಕೊಳ್ಳಿ. ಆತ ಅಥವಾ ಆಕೆಗೆ ಉಂಗುರವನ್ನು ತೊಡಿಸುವ ಮೂಲಕ ಈ ವಿಷಯವನ್ನು ನಿಮ್ಮ ಮನದನ್ನೆಗೆ ತಿಳಿಸಿ. ನಿಮ್ಮ ವ್ಯಾಲಂಟೇನ್ ದಿನವನ್ನು ಇನ್ನಷ್ಟು ನೆನೆಪಿನಲ್ಲುಳಿಯುಂತೆ ಈ ಪ್ರಸಂಗ ಮಾಡುತ್ತದೆ.

ಜೊತೆಗೆ ವಿಶ್ರಮಿಸಿ:
ಸ್ಪಾ ಅಥವಾ ಮಸಾಜ್ ಕೇಂದ್ರದಲ್ಲಿ ಈರ್ವರೂ ಜೊತೆಗೆ ಸಮಯ ಕಳೆಯುವುದು ನಿಮ್ಮ ಪ್ರೇಮ ದಿನಕ್ಕೆ ಸ್ವಲ್ಪ ಮಸಾಲೆ ಸೇರಿಸಿದಂತೆ. ಬಿಸಿ ನೀರಿನ ಹಿತವಾದ ಕೊಳದಲ್ಲಿ ಸುಗಂಧ ದ್ರವ್ಯಗಳನ್ನು ಲೇಪಿಸಿಕೊಂಡು ಜೊತೆಯಾಗಿ ಈಜುತ್ತಾ ನಿಮ್ಮನ್ನು ವಿಶ್ರಮಿಸಿಕೊಳ್ಳಿ.

ಕೊಡುಗೆ ಖರೀದಿಸಿ:
ನಿಮ್ಮ ಪ್ರೀತಿ ಪಾತ್ರರಿಗಾಗಿ ನೀವು ಕೊಡುಗೆಗಳನ್ನು ಖರೀದಿಸುವುದು ವ್ಯಾಲಂಟೇನ್ ದಿನದ ವಿಶೇಷ ಸಂದರ್ಭದಲ್ಲಿ ಮಾತ್ರ. ಜೊತೆಗೆ ನಿಲ್ಲಿಸಿ ತೆಗೆದ ಪೋಟೋವನ್ನು ಫ್ರೇಮ್ ಹಾಕಿ ಗಿಫ್ಟ್ ಕೊಡುವುದಾಗಿರಬಹುದು, ಅವರ ಹೆಸರನ್ನೊಳಗೊಂಡ ಟೀಶರ್ಟ್ ಖರೀದಿಸುವುದು, ಶುಭಾಶಯ ಪತ್ರ ರಚನೆ ಹೀಗೆ ಅವರನ್ನು ವಿಶೇಷವನ್ನಾಗಿ ಮಾಡುವ ಪ್ರತಿಯೊಂದು ಸಂದರ್ಭ ನಿಮ್ಮ ಕೊಡುಗೆಯಲ್ಲಿರಲಿ.

ಆಶ್ವರ್ಯಕರ ಡೇಟ್:
ಈ ವ್ಯಾಲಂಟೇನ್ ದಿನವನ್ನು ಇನ್ನಷ್ಟು ವಿಶೇಷವಾಗಿಸಲು ನೀವು ಆಶ್ಚರ್ಯಕರ ಡೇಟ್ ಅನ್ನು ನಿಶ್ಚಯಿಸಬಹುದು. ಬಾಟಲ್ ವೈನ್ ಮತ್ತು ಪೇಸ್ಟ್ರಿಯೊಂದಿಗೆ ನಿಮ್ಮ ಮನೆಯಲ್ಲೇ ಈ ದಿನವನ್ನು ಆಯೋಜಿಸಿ. ಹೂವುಗಳು, ಬಲೂನ್‌ಗಳು, ಕೊಡುಗೆಗಳು ಇವುಗಳನ್ನು ನಿಮ್ಮ ಡೇಟ್ ಒಳಗೊಂಡಿರಲಿ.

ಸೂರ್ಯಾಸ್ತಮಾನ:
ಸೂರ್ಯಾಸ್ತಮಾನವನ್ನು ಜೊತೆಯಾಗಿ ವೀಕ್ಷಿಸುವುದಕ್ಕಿಂತಲೂ ಹೆಚ್ಚು ವಿಶೇಷ ದಿನ ಬೇರೊಂದು ಇರಲಿಕ್ಕಿಲ್ಲ. ನಿಮ್ಮ ನಗರದಲ್ಲೇ ಸೂರ್ಯಾಸ್ತಮಾನವನ್ನು ಚೆನ್ನಾಗಿ ವೀಕ್ಷಿಸುವಂತಹ ಸ್ಥಳವನ್ನು ಇದಕ್ಕಾಗಿ ಆರಿಸಿಕೊಳ್ಳಿ.

ಚಲನಚಿತ್ರಗಳು ಮತ್ತು ಇನ್ನಷ್ಟು:
ನಿಮ್ಮ ಸಂಗಾತಿಗಾಗಿ ನಿಮ್ಮ ಮನೆಯಲ್ಲಿ ಚಲನಚಿತ್ರವನ್ನು ಆಯೋಜಿಸಿ. ನಿಮ್ಮ ಸಂಗಾತಿ ನೋಡಲಿಚ್ಛಿಸುವ ಚಲನಚಿತ್ರಗಳನ್ನು ಖರೀದಿಸಿ. ಇಷ್ಟವಾಗುವ ಮನೆಯಡುಗೆ, ಪಾಪ್‌ಕಾರ್ನ್, ಪಾನೀಯಗಳನ್ನು ಸಿದ್ಧಪಡಿಸಿಕೊಳ್ಳಿ.

ಪಾರ್ಟಿಯಲ್ಲಿ ತೊಡಗಿಸಿಕೊಳ್ಳಿ:
ನಿಮಗೆ ಖಾಸಗಿತನಕ್ಕಿಂತ ಮೋಜು ಮಸ್ತಿ ಇಷ್ಟವಾಗಿದ್ದರೆ ಪಾರ್ಟಿಯಲ್ಲಿ ಸಂಗಾತಿಗಳು ತೊಡಗಿಕೊಳ್ಳಿ. ಪ್ರೇಮದಲ್ಲಿರುವ ಇತರ ಜೋಡಿಗಳೊಂದಿಗೆ ನಿಮ್ಮ ಪ್ರೇಮವನ್ನು ಆನಂದಿಸಿ ಈ ದಿನವನ್ನು ನೆನಪಿನಲ್ಲಿರಿಸಿಕೊಳ್ಳಿ. ನಿಮ್ಮ ಪ್ರೀತಿಯನ್ನು ನಿಮ್ಮ ಸಂಗಾತಿಯೊಂದಿಗೆ ನಿವೇದಿಸಿಕೊಳ್ಳಿ.



Click it and Unblock the Notifications
